ಕುತೂಹಲ ಘಟ್ಟದಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌!

Date:

  • ಆಸ್ಟ್ರೇಲಿಯಾ; 469 ಮತ್ತು270/8 ಡಿಕ್ಲೇರ್‌
  • ಅಂತಿಮ ದಿನ ರೋಹಿತ್‌ ಪಡೆ ಗೆಲುವಿಗೆ 280 ರನ್‌ ಗುರಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ʼ ಫೈನಲ್‌ ಪಂದ್ಯವು ಕುತೂಹಲಕಾರಿ ಘಟ್ಟ ತಲುಪಿದೆ. ಫೈನಲ್‌ ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಭಾರತ, 3 ವಿಕೆಟ್‌ ನಷ್ಟದಲ್ಲಿ 164 ರನ್‌ಗಳಿಸಿದೆ.

ಲಂಡನ್‌ನ ಓವಲ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಗೆಲ್ಲಲು ಅಂತಿಮ ದಿನವಾದ ನಾಳೆ (ಭಾನುವಾರ) ರೋಹಿತ್‌ ಪಡೆ, 7 ವಿಕೆಟ್‌ಗಳ ನೆರವಿನಿಂದ 280 ರನ್‌ ಗಳಿಸಬೇಕಾಗಿದೆ. 44 ರನ್‌ಗಳಿಸಿರುವ ವಿರಾಟ್‌ ಕೊಹ್ಲಿ ಮತ್ತು 20 ರನ್‌ಗಳೊಂದಿಗೆ ಅಜಿಂಕ್ಯಾ ರಹಾನೆ ಕ್ರೀಸ್‌ನಲ್ಲಿದ್ದಾರೆ.

444 ರನ್‌ಗಳ ಕಠಿಣ ಗುರಿಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ್ದ ಭಾರತ ಉತ್ತಮ ಆರಂಭ ಪಡೆದಿತ್ತು. ʻಐಪಿಎಲ್‌ ಹೀರೋʼ ಶುಭಮನ್‌ ಗಿಲ್‌ (18) ನಿರಾಸೆ ಮೂಡಿಸಿದರೂ ಸಹ, ನಾಯಕ ರೋಹಿತ್‌ ಶರ್ಮಾ 43 ರನ್‌ಗಳಿಸುವ ಮೂಲಕ ಬ್ಯಾಟಿಂಗ್‌ ಲಯ ಕಂಡುಕೊಂಡರು. ಅನುಭವಿ ಚೆತೇಶ್ವರ ಪುಜಾರ 27 ರನ್‌ಗಳಿಸಿ ಕ್ಯಾಪ್ಟನ್‌ ಕಮ್ಮಿನ್ಸ್‌ಗೆ ವಿಕೆಟ್‌ ಒಪ್ಪಿಸಿದರು.

ನಾಲ್ಕನೇ ವಿಕೆಟ್‌ಗೆ ಈಗಾಗಲೇ 71 ರನ್‌ಗಳ ಜೊತಯಾಟದಲ್ಲಿ ಭಾಗಿಯಾಗಿರುವ ಕೊಹ್ಲಿ-ರಹಾನೆ ಜೋಡಿ, ಪಂದ್ಯದ ಅಂತಿಮ ದಿನ ಕ್ರೀಸ್‌ನಲ್ಲಿ ನೆಲೆಯೂರಿ ನಿಂತರೆ ಭಾರತ ಚಾಂಪಿಯನ್‌ಶಿಪ್‌ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಆಸ್ಟ್ರೇಲಿಯಾ; ದ್ವಿತೀಯ ಇನ್ನಿಂಗ್ಸ್‌ 270/8 ಡಿಕ್ಲೇರ್‌

ಇದಕ್ಕೂ ಮೊದಲು 4 ವಿಕೆಟ್ ನಷ್ಟದಲ್ಲಿ 123 ರನ್ ಗಳಿಂದ ಮೂರನೇ ದಿನದಾಟ ಆರಂಭಿಸಿದ್ದ ಆಸ್ಟ್ರೇಲಿಯಾ, ದ್ವಿತೀಯ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ ನಷ್ಟದಲ್ಲಿ 270 ರನ್‌ಗಳಿಸಿದ್ದ ವೇಳೆ ಇನ್ನಿಂಗ್ಸ್‌ ಡಿಕ್ಲೇರ್‌ ಘೋಷಿಸಿತ್ತು. ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಅರ್ಧ ಶತಕ (66*) ಗಳಿಸಿದರೆ, 57 ಎಸೆತಗಳನ್ನು ಎದುರಿಸಿದ ವೇಗಿ ಮಿಚೆಲ್‌ ಸ್ಟಾರ್ಕ್‌ 41 ರನ್‌ಗಳಿಸುವ ಮೂಲಕ ತಂಡದ ಲೀಡ್‌ ಹೆಚ್ಚಿಸಲು ನೆರವಾದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮ್ಯಾಕ್ಸ್‌ವೆಲ್‌ ಬೌಲಿಂಗ್‌ ಮೋಡಿಗೆ ಶರಣಾದ ಭಾರತ; 2-1 ಗೆಲುವಿನೊಂದಿಗೆ ಟೀಂ ಇಂಡಿಯಾಗೆ ಸರಣಿ ಕೈವಶ

ಭಾರತದ ವಿರುದ್ಧದ ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ...

ಹಸುಗಳನ್ನು ಇಸ್ಕಾನ್ ಮಾರಿದಷ್ಟು ಬೇರಾರು ಮಾರಿಲ್ಲ; ಬಿಜೆಪಿ ಸಂಸದೆ ಆರೋಪಕ್ಕೆ ಇಸ್ಕಾನ್ ಪ್ರತಿಕ್ರಿಯೆ

ಮಾಂಸ ಮಾರುವವರಿಗೆ ಇಸ್ಕಾನ್ ಮಾರಿರುವಷ್ಟು ಹಸುಗಳನ್ನು ಯಾರೂ ಮಾರಿಲ್ಲ ಎಂದಿರುವ ಬಿಜೆಪಿ...

ಪಶ್ಚಿಮ ಬಂಗಾಳ | ರೈಲು ದುರಂತ ತಪ್ಪಿಸಿದ 12ರ ಹರೆಯದ ಮುರ್ಸಲೀನ್ ಶೇಖ್; ರೈಲ್ವೆ ಇಲಾಖೆಯಿಂದ ಸನ್ಮಾನ

12 ವರ್ಷದ ಬಾಲಕನೊಬ್ಬ ರೈಲು ದುರಂತವನ್ನು ತಪ್ಪಿಸಿರುವ ಘಟನೆ ಇತ್ತೀಚೆಗೆ ಪಶ್ಚಿಮ...