ಸಿಜೆಪಿ ಪ್ರತಿಭಟನೆಗೆ ಹೆದರಿದ ಮೋದಿ ಸರ್ಕಾರ: ಜಂತರ್‌ ಮಂತರ್‌ನಲ್ಲಿ ಮೊಳೆ-ಕಬ್ಬಿಣದ ಕೋಟೆ ಕಟ್ಟಿದ ದೆಹಲಿ ಪೊಲೀಸರು

Date:

ಸಿಜೆಪಿ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿಯ ಜಂತರ್ ಮಂತರ್ ಮತ್ತು ಸುತ್ತಲಿನ ಪ್ರದೇಶವನ್ನು ದೆಹಲಿ ಪೊಲೀಸರು ಸುತ್ತುವರೆದಿದ್ದಾರೆ. ಎತ್ತರದ ಬ್ಯಾರಿಕೇಡ್‌ಗಳು, ಕಬ್ಬಿಣದ ಮೊಳೆಗಳ ಹಾಸುಗಳು, ಡ್ರೋನ್‌ಗಳು, ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. 30,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಸೇನಾ ತುಕಡಿಗಳನ್ನು ನಿಯೋಜಿಸಿದ್ದಾರೆ. ಮಾತ್ರವಲ್ಲದೆ, ಹಿಂದಿನ ತಪ್ಪನ್ನು ಮಾಡುವುದಿಲ್ಲ ಎಂದಿರುವ ದೆಹಲಿ ಪೊಲೀಸರ ಹೇಳಿಕೆಯು ದೆಹಲಿಯನ್ನು ಭದ್ರಕೋಟೆಯಾಗಿ ನಿರ್ಬಂಧಿಸಿಕೊಂಡು, ಪ್ರತಿಭಟನಾಕಾರರು ಒಂದೆಡೆ ಸೇರಲು ಬಿಡುವುದಿಲ್ಲ ಎಂಬ ಧೋರಣೆಯನ್ನು ಪ್ರತಿಧ್ವನಿಸಿದೆ.

- Advertisement -

ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಜಂತರ್‌ ಮಂತರ್‌ಗೆ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ಪ್ರಮುಖ ರಸ್ತೆಗಳ ಮೇಲೆ ಲೋಹದ ಮೊಳೆಯ ಹಾಸುಗಳನ್ನು ಅಳವಡಿಸಿದ್ದಾರೆ. ಇದರ ಜೊತೆಗೆ ಒಂದರ ಮೇಲೊಂದರಂತೆ ಬಹುಹಂತದ ಎತ್ತರೆತ್ತರದ ಕಾಂಕ್ರೀಟ್ ಮತ್ತು ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಸಾಲಾಗಿ ಜೋಡಿಸಿದ್ದಾರೆ. ಪ್ರತಿಭಟನಾಕಾರರು ಇವುಗಳನ್ನು ಸರಿಸದಂತೆ ಬ್ಯಾರಿಕೇಡ್‌ಗಳನ್ನು ಒಂದಕ್ಕೊಂದು ವೆಲ್ಡಿಂಗ್ ಮಾಡಿ ಮತ್ತು ಬಲವಾದ ಕಬ್ಬಿಣದ ಸರಪಳಿಗಳಿಂದ ಬಂಧಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿಯಲ್ಲಿ ಜನಸಂದಣಿ ಸೇರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಸ್ಥಳದಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಒಟ್ಟುಗೂಡದಂತೆ ನಿಗಾ ವಹಿಸಲಾಗಿದೆ. ಸಾವಿರಾರು ಯುವಜನರನ್ನು ವಶಕ್ಕೆ ಪಡೆಯಲಾಗಿದೆ.

ಪ್ರತಿಭಟನಾಕಾರರ ಪ್ರತಿಯೊಂದು ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಈ ಡ್ರೋನ್‌ಗಳು ಪ್ರತಿಭಟನಾ ಸ್ಥಳ ಮಾತ್ರವಲ್ಲದೆ ಸುತ್ತಮುತ್ತಲಿನ ರಸ್ತೆಗಳು, ಕಟ್ಟಡಗಳ ಮೇಲ್ಛಾವಣಿಗಳು ಹಾಗೂ ಕಣಿವೆಯಂತಹ ಗಲ್ಲಿಗಳನ್ನು ನಿರಂತರವಾಗಿ ಕಣ್ಗಾವಲು ಇರಿಸಲಾಗಿದೆ.

ಪ್ರತಿಭಟನಾಕಾರರು ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಜಂತರ್ ಮಂತರ್‌ಗೆ ಆಗಮಿಸುವುದನ್ನು ತಡೆಯಲು ದೆಹಲಿ ಮೆಟ್ರೋ ಮತ್ತು ರೈಲ್ವೆಗಳನ್ನೂ ಮೋದಿ ಸರ್ಕಾರ ನಿರ್ಬಂಧಿಸಿದೆ. ಪ್ರಮುಖ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ.

ದೆಹಲಿಯ ಎಲ್ಲ ಹೋಟೆಲ್‌ಗಳ ಮೇಲೂ ದಾಳಿ ಮಾಡುತ್ತಿರುವ ಪೊಲೀಸರು, ವಿದ್ಯಾರ್ಥಿ-ಯುವಜನರನ್ನು ಬಲವಂತವಾಗಿ ಎಳೆದೊಯ್ದು, ಬಂಧನ ಕೇಂದ್ರಗಳಲ್ಲಿ ತುಂಬಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ; ಮೋದಿ ಸರ್ಕಾರಕ್ಕೆ ಕೇರಳದ ಪೆಟ್ಟು

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ...

ಎಸ್‌ಐಆರ್ ವಿರೋಧಿ ಹೋರಾಟ: ಯುವ ಪೀಳಿಗೆಗೆ ಕರ್ನಾಟಕ ನಾಗರಿಕ ಸಮಾಜ ಬೆಂಬಲ, ಕೇಂದ್ರ ಸರ್ಕಾರಕ್ಕೆ ನೂರ್ ಶ್ರೀಧರ್ ಎಚ್ಚರಿಕೆ

ದೆಹಲಿಯಲ್ಲಿ ನಡೆಯಲಿರುವ ಎಸ್‌ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ಯುವ ಹೋರಾಟಗಾರರ ಮೇಲೆ...

ಮೋಶಾ ಜೋಡಿ ಪ್ರಜಾಪ್ರಭುತ್ವದ ಹತ್ಯೆಗೆ ಸಂಚು ರೂಪಿಸಿದೆ; ಅಭಿಜೀತ್ ದೀಪ್ಕೆ

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗವು ಸೇರಿ ದೇಶದಲ್ಲಿ...

ಎಸ್‌ಐಆರ್ ವಿರುದ್ಧದ ಹೋರಾಟ ಜನರ ಹಕ್ಕಿನ ಹೋರಾಟ: ಪ್ರಕಾಶ್ ರಾಜ್

“ಕಳೆದ ಒಂದು ವರ್ಷದಿಂದ ಕರ್ನಾಟಕದ ನಾಗರಿಕ ಸಂಘಟನೆಗಳು ಎಸ್‌ಐಆರ್ ವಿರುದ್ಧ ನಡೆಸುತ್ತಿರುವ...