ಬೆಂಗಳೂರು | ಬಿಡಬ್ಲೂಎಸ್‌ಎಸ್‌ಬಿ ಪೈಪ್‌ಲೈನ್ ಕಾಮಗಾರಿ; ಎಲ್ಲೆಲ್ಲಿ ಸಂಚಾರ ನಿರ್ಬಂಧ?

ಚರಂಡಿ
ಚರಂಡಿ

ಬೆಂಗಳೂರಿನ ಸುಬ್ಬಯ್ಯ ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗೆ ಭಾರೀ ವಾಹನಗಳ ಸಂಚಾರವನ್ನು ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.

ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸುಬ್ಬಯ್ಯ ವೃತ್ತದಿಂದ ಮನಪಸಂದ್ ಜ್ಯುವೆಲರ್ಸ್ ವರೆಗೆ ಮಿಷನ್ ರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ, ಸುಬ್ಬಯ್ಯ ಸರ್ಕಲ್‌ನಿಂದ ಶಾಂತಿನಗರ ಜಂಕ್ಷನ್‌ಗೆ ಹೋಗುವ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಆದರೂ, ಸುಬ್ಬಯ್ಯ ಸರ್ಕಲ್‌ನಿಂದ ಮಿಷನ್ ರಸ್ತೆ ಫೈಓವರ್‌ಗೆ ಹೋಗಲು ಕಾರುಗಳು ಮತ್ತು ದ್ವಿಚಕ್ರವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಎನ್.ಆರ್.ಚೌಕ ಮತ್ತು ಹಡ್ಸನ್ ವೃತ್ತದಿಂದ ಸುಬ್ಬಯ್ಯ ವೃತ್ತದ ಕಡೆಗೆ ಬರುವ ಇತರೆ ವಾಹನಗಳು ವೃತ್ತದಲ್ಲಿ ಬಲ ತಿರುವು ಪಡೆದು ಲಾಲ್‌ಬಾಗ್ ರಸ್ತೆಯಲ್ಲಿ ಎಡ ತಿರುವು ಪಡೆದು ನಾಲಾ ರಸ್ತೆಯ ಕಡೆಗೆ ಕೆ.ಎಚ್.ರಸ್ತೆ ಸೇರಿ ಶಾಂತಿನಗರ ಜಂಕ್ಷನ್‌ಗೆ ತೆರಳಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಿಷನ್ ರಸ್ತೆ, ನಾಲಾ ರಸ್ತೆ, ಡಬಲ್ ರಸ್ತೆ ಹಾಗೂ ಲಾಲ್‌ಬಾಗ್ ರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಡಬ್ಲೂಎಸ್‌ಎಸ್‌ಬಿ ಪೈಪ್‌ಲೈನ್ ಕಾಮಗಾರಿ; ಎಲ್ಲೆಲ್ಲಿ ಸಂಚಾರ ನಿರ್ಬಂಧ?

ವಿಬ್‌ಗಯಾರ್ ರಸ್ತೆ ಮೇ 23ರಂದು ಉದ್ಘಾಟನೆಯಾಗಲಿದೆ. ಮೇ 3ರಂದು ಬಿಡಬ್ಲ್ಯುಎಸ್‌ಎಸ್‌ಬಿ ಪೈಪ್‌ಲೈನ್ ಕಾಮಗಾರಿ ಹಿನ್ನೆಲೆ, ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಪೂರ್ವ ಬೆಂಗಳೂರಿನ ವಿಬ್‌ಗಯಾರ್ ರಸ್ತೆ ಗುರುವಾರ ಬೆಳಿಗ್ಗೆ 6 ರಿಂದ ಸಂಚಾರಕ್ಕೆ ಮುಕ್ತವಾಗಿದೆ.

ಮೇ 3ರಿಂದ ಮೇ 18ರವರೆಗೆ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿಬ್‌ಗಯಾರ್ ಕ್ರಾಸ್ ರಸ್ತೆಯಿಂದ ಬ್ಯಾಕ್ ಅಂಡ್ ವೈಟ್ ರಸ್ತೆವರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಪೈಪ್‌ಲೈನ್ ಕಾಮಗಾರಿಯನ್ನು ಕೈಗೊಂಡಿತ್ತು. ಈ ಹಿನ್ನೆಲೆ, ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸದರಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು.

LEAVE A REPLY

Please enter your comment!
Please enter your name here