ಹವಾಮಾನ | ರಾಜ್ಯದಲ್ಲಿ ಅತೀವ ಬಿಸಿಲು; ಮಧ್ಯಾಹ್ನ 12ರಿಂದ 3ರವರೆಗೆ ಹೊರ ಹೋಗದಂತೆ ಆರೋಗ್ಯ ಇಲಾಖೆ ಸೂಚನೆ

Date:

ದೇಶದಾದ್ಯಂತ ಮಾರ್ಚ್‌ ತಿಂಗಳಿನಿಂದ ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ಇರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆಬ್ರವರಿ ಕೊನೆಯಿಂದಲೇ ರಾಜ್ಯದಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈ ನಡುವೆ ರಾಜ್ಯ ಆರೋಗ್ಯ ಇಲಾಖೆಯು ಜನರಿಗೆ ಮಾರ್ಗಸೂಚಿಯನ್ನು ಹೊರಡಿಸಿದೆ.

- Advertisement -

“ಮಧ್ಯಾಹ್ನ ಸುಮಾರು 12 ಗಂಟೆಯಿಂದ 3 ಗಂಟೆಯವರೆಗೂ ತೀರಾ ಅಗತ್ಯ ಇಲ್ಲದ ಹೊರತಾಗಿ ಹೊರ ಹೋಗಬೇಡಿ. ಈ ಸಂದರ್ಭದಲ್ಲಿ ತಾಪಮಾನ ಏರಿಕೆಯಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಅಧಿಕವಾಗಿದೆ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ” ಎಂದು ಆರೋಗ್ಯ ಇಲಾಖೆಯು ಬಿಸಿ ಗಾಳಿ ಸಂಬಂಧಿತ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇದನ್ನು ಓದಿದ್ದೀರಾ? ಮಾರ್ಚ್‌ನಿಂದ ಸಾಮಾನ್ಯಕ್ಕಿಂತ ಅಧಿಕ ತಾಪಮಾನ; ಬಿಸಿ ಗಾಳಿಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಜನರು ಹೆಚ್ಚು ನೀರು ಕುಡಿಯಿರಿ, ನೀರಿನ ಅಂಶಗಳಿರುವ ಆಹಾರವನ್ನು ಸೇವಿಸಿ. ಬಾಯಾರಿಕೆಯಾಗದಿದ್ದರೂ ಪದೇ ಪದೇ ನೀರು ಕುಡಿಯುತ್ತಿರಿ. ನಿರ್ಜಲೀಕರಣ ಆಗುವವರೆಗೂ ಕಾಯಬೇಡಿ. ಸಾಧ್ಯವಾದಷ್ಟು ಒಳ ಆವರಣದಲ್ಲಿಯೇ ಇರಲು ಪ್ರಯತ್ನಿಸಿ ಎಂದು ತಿಳಿಸಿದೆ.

ಏನೆಲ್ಲಾ ಆಹಾರ ಸೇವಿಸಬೇಕು?

ನೀರು ಕುಡಿಯುವುದಕ್ಕೆ ಅಧಿಕ ಒತ್ತು ನೀಡಿರುವ ಆರೋಗ್ಯ ಇಲಾಖೆಯು ಮನೆಯಿಂದ ಹೊರ ಹೋಗುವಾಗ, ಬಸ್‌ಗಳಲ್ಲಿ ಇತರ ಸಾರಿಗೆ ವ್ಯವಸ್ಥೆಯಲ್ಲಿ ಸಂಚಾರ ಮಾಡುವಾಗಲೂ ಬಾಟಲಿಯಲ್ಲಿ ನೀರು ಇಟ್ಟುಕೊಳ್ಳಿ ಎಂದು ಹೇಳಿದೆ.
ಒಆರ್‌ಎಸ್ ಅಥವಾ ಮನೆಯಲ್ಲಿಯೇ ತಯಾರಿಸಿದ ನಿಂಬೆ ಹಣ್ಣಿನ ಪಾನಕ, ಮಜ್ಜಿಗೆ ಅಥವಾ ಹಣ್ಣಿನ ರಸವನ್ನು ಕುಡಿಯುವಂತೆ ತಿಳಿಸಿದೆ. ಹಾಗೆಯೇ ಕಲ್ಲಂಗಡಿ, ಖರ್ಬೂಜ, ಕಿತ್ತಳೆ, ದ್ರಾಕ್ಷಿ, ಸೌತೆಕಾಯಿ ಮತ್ತು ಲೆಟಿಸ್‌ನಂತಹ ಹೆಚ್ಚು ನೀರಿನಾಂಶವಿರುವ ತರಕಾರಿ, ಹಣ್ಣುಗಳನ್ನು ಸೇವಿಸಿ ಎಂದು ಸಲಹೆ ನೀಡಿದೆ.

ಇನ್ನು ಬಿಸಿಲಿನಲ್ಲಿ ಹೋಗುವಾಗ ಛತ್ರಿ, ಟೋಪಿ, ದುಪ್ಪಟ್ಟ ಯಾವುದಾದರನ್ನು ಬಳಸಿ. ಬಿಸಿಲಿನಲ್ಲಿ ನಡೆಯುವಾಗ ಪಾದರಕ್ಷೆ ಅಥವಾ ಶೂಗಳನ್ನು ಧರಿಸಿ. ಬರೀ ಕಾಲಿನಲ್ಲಿ ನಡೆಯದಿರಿ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಸಿ ಗಾಳಿ ಬೀಸುತ್ತಿದೆ – ತಾಪಮಾನ ಏರುತ್ತಿದೆ; ಪ್ರಕೃತಿ ತಿರುಗಿ ಬೀಳಲಿದೆ!

ಹೀಟ್‌ ಸ್ಟ್ರೋಕ್ (ತಾಪಾಘಾತ) ಆದಾಗ ಮಾಡುವುದೇನು?

ಹೀಟ್‌ ಸ್ಟ್ರೋಕ್ (ತಾಪಾಘಾತ) ಆದ ಸಂದರ್ಭದಲ್ಲಿ ಏನೆಲ್ಲಾ ಅನುಭವವಾಗುತ್ತದೆ ಮತ್ತು ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಸಲಹೆಯನ್ನು ಕೂಡಾ ಆರೋಗ್ಯ ಇಲಾಖೆ ನೀಡಿದೆ. ಬಿಸಿಲು ಅಧಿಕವಾಗಿರುವ ಕಾರಣದಿಂದಾಗಿ ಅಧಿಕ ಬಾಯಾರಿಕೆ, ವಾಕರಿಗೆ ಅಥವಾ ವಾಂತಿಯಾಗಬಹುದು. ಮೂತ್ರ ವಿಸರ್ಜನೆ ಸಮಸ್ಯೆ ಉಂಟಾಗಬಹುದು, ಉಸಿರಾಟ ಏರಿಳಿತವಾಗಬಹುದು. ಇಂತಹ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಿಳಿಸಿದೆ.

ತೀವ್ರವಾಗಿ ನಿರ್ಜಲೀಕರಣವಾದಾಗ, ಹೀಟ್‌ ಸ್ಟ್ರೋಕ್ ಉಂಟಾದಾಗ ವೈದ್ಯಕೀಯ ತುರ್ತು ಸಂದರ್ಭವೆಂದೇ ಪರಿಗಣಿಸಬೇಕು. ಉಷ್ಣಾಂಶ ಅಧಿಕವಾಗುವುದು, ಪ್ರಜ್ಞೆ ತಪ್ಪುವುದು, ಅತಿಯಾಗಿ ಬೆವರುವ ಸಮಸ್ಯೆ ಕಂಡುಬಂದರೆ ಕೂಡಲೇ ಸಹಾಯವಾಣಿ 108 ಅಥವಾ 102ಕ್ಕೆ ಕರೆ ಮಾಡಬಹುದು ಎಂದು ಸೂಚಿಸಿದೆ.

ಈಶಾನ್ಯ ಭಾರತ, ಉತ್ತರ ಭಾರತ, ಪರ್ಯಾಯ ದ್ವೀಪದ ನೈಋತ್ಯ ಮತ್ತು ದಕ್ಷಿಣ ಭಾಗಗಳನ್ನು ಹೊರತುಪಡಿಸಿ ದೇಶದ ಅಧಿಕ ಭಾಗಗಳಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಅಧಿಕ ಶಾಖದ ಅಲೆಗಳು ಇರಬಹುದೆಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅತೀವ ತಾಪಮಾನಕ್ಕೆ ಬೇಕಾದ ಅಗತ್ಯ ಕ್ರಮವನ್ನು ಮಧ್ಯಮ ವರ್ಗಗಳು ಕೈಗೊಳ್ಳಬಹುದಾದರೂ, ಬಡ ವರ್ಗ ತಾಪಮಾನದ ಬಿಸಿಯಲ್ಲಿ ಬೆಂದು ಹೋಗುವ ಜನರಾಗುವ ಸಾಧ್ಯತೆಯಿದೆ. ದುಡಿಮೆಯೇ ಒಂದು ಹೊತ್ತಿನ ಆಹಾರವಾಗಿರುವ ಬಿಸಿಲು ಲೆಕ್ಕಿಸಿದೆ ಕೃಷಿ ಕೂಲಿ, ಕಟ್ಟಡ ನಿರ್ಮಾಣ ಮಾಡುವ ಕಾರ್ಯವನ್ನು ಬಡ ಜನರು ಮಾಡಲೇಬೇಕಾಗುತ್ತದೆ. ಈ ವರ್ಗದ ಸುರಕ್ಷತೆ ಯಾರ ಹೊಣೆ? ಮಾರ್ಗಸೂಚಿ ಹೊರಡಿಸಿದ ಸರ್ಕಾರ ಬಹುತೇಕ ಎಲ್ಲಾ ಸಮಸ್ಯೆಗೆ ಮೊದಲು ತುತ್ತಾಗುವ ಬಡ ಜನರನ್ನು ಈ ಹೀಟ್‌ ಸ್ಟ್ರೋಕ್‌ನಿಂದ ಕಾಪಾಡುವ ಕ್ರಮಕೈಗೊಳ್ಳುವುದು ಅನಿವಾರ್ಯ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...

ರಾಜ್ಯಕ್ಕೆ ₹3,705.30 ಕೋಟಿ ಬರ ಪರಿಹಾರ ನೀಡಿ: ಕೇಂದ್ರ ತಂಡಕ್ಕೆ ಸಿಎಂ ಡಿಕೆಶಿ ಮನವಿ

ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ...

ಹವಾಮಾನ ವರದಿ: ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ 10 ದಿನ ಭಾರೀ ಮಳೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ...