ಅತಿಥಿ ಉಪನ್ಯಾಸಕರ ವೇತನ | ಐದು ಸಾವಿರ ರೂ. ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ: ಎಂ ಸಿ ಸುಧಾಕರ್

Date:

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನವನ್ನು ಐದು ಸಾವಿರ ರೂ. ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಜ.1ರಿಂದಲೇ ವೇತನ ಹೆಚ್ಚಳದ ಪ್ರಯೋಜನ ಉಪನ್ಯಾಸಕರಿಗೆ ಸಿಗಲಿದೆ.

- Advertisement -

ಶುಕ್ರವಾರ ಅತಿಥಿ ಉಪನ್ಯಾಸಕರ ಪ್ರತಿಭಟನೆ ಸಂಬಂಧ ಸಂಘಟನೆಗಳ ಮುಖಂಡರ ಜೊತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಬಳಿಕ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

“ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಗೌರವಧನ ಪ್ರಸ್ತುತ ₹26,000ದಿಂದ ₹ 32,000 ಇದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 10,600 ಅತಿಥಿ ಉಪನ್ಯಾಸಕರಿಗೂ ವೇತನ ಹೆಚ್ಚಳದ ಲಾಭ ಸಮಾನವಾಗಿ ದೊರಕಲಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ₹55 ಕೋಟಿ ಹೆಚ್ಚುವರಿ ಹೊರೆಯಾಗಲಿದೆ” ಎಂದು ಮಾಹಿತಿ ನೀಡಿದರು.

“ನಾವು ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿದ್ದೇವೆ. ಕೆಲವು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದರು. ಸೇವೆ ಕಾಯಂ ಅವರ ಪ್ರಮುಖ ಬೇಡಿಕೆ ಆಗಿದೆ. ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗುವುದು. ಅತಿಥಿ ಉಪನ್ಯಾಸಕರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ” ಎಂದು ಹೇಳಿದರು.

ನಿವೃತ್ತರಿಗೆ ₹5ಲಕ್ಷ ಧನ ಸಹಾಯ

“ಅತಿಥಿ ಉಪನ್ಯಾಸಕರಾಗಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ, 60 ವರ್ಷಕ್ಕೆ ನಿವೃತ್ತರಾಗುವ ವೇಳೆ ವರ್ಷಕ್ಕೆ ₹50 ಸಾವಿರದಂತೆ ಲೆಕ್ಕಹಾಕಿ ₹5 ಲಕ್ಷ ಧನಸಹಾಯ ನೀಡಲಾಗುವುದು. ಅದಕ್ಕಾಗಿ ₹72 ಕೋಟಿ ನಿಗದಿ ಮಾಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ ನೀಡಲಾಗುವುದು. ಸಹಾಯಕ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಪರಿಗಣಿಸುತ್ತೇವೆ. ಹೊಸದಾಗಿ ನೇಮಕಾತಿ ಸಂದರ್ಭದಲ್ಲಿ ಇವರಿಗೆ ಕೃಪಾಂಕ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ” ಎಂದರು.

“ಒಮ್ಮೆ ಕೌನ್ಸೆಲಿಂಗ್‌ನಲ್ಲಿ ಆಯ್ಕೆಯಾದವರಿಗೆ ಕೆಲಸದ ಅವಧಿ ಕಡಿಮೆಯ ಕಾರಣ ನೀಡಿ ತೆಗೆದುಹಾಕುವಂತಿಲ್ಲ. 10 ತಿಂಗಳು ಗೌರವಧನ ನೀಡುವುದು ಕಡ್ಡಾಯ. ಪ್ರತಿ ತಿಂಗಳು ಒಂದು ವೇತನ ಸಹಿತ ರಜೆ ನೀಡಲು ಸಮ್ಮತಿಸಲಾಗಿದೆ. ಪ್ರತಿ ವರ್ಷ ಕೌನ್ಸೆಲಿಂಗ್‌ಗೆ ಹಾಜರಾಗುವುದು ಕಡ್ಡಾಯವಿದ್ದರೂ, ಒಮ್ಮೆ ದಾಖಲೆ ಸಲ್ಲಿಸಿದವರು ಮತ್ತೆ ಸಲ್ಲಿಸುವ ಅಗತ್ಯವಿಲ್ಲ. ಅದಕ್ಕಾಗಿ ಹೊಸ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಜಾಬ್ ಹಿಂಜರಿಕೆ; ರಣತಂತ್ರವೋ, ಇಲ್ಲವೇ ಪಲಾಯನ ಮಂತ್ರವೇ?

₹5 ಲಕ್ಷದವರೆಗೆ ಉಚಿತ ಚಿಕಿತ್ಸೆ

ಅತಿಥಿ ಉಪನ್ಯಾಸಕರಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುವಂತಹ ಆರೋಗ್ಯವಿಮೆ ಕಲ್ಪಿಸಲಾಗುತ್ತಿದೆ. ಅತಿಥಿ ಉಪನ್ಯಾಸಕರು ಮಾಸಿಕ ₹400 ಭರಿಸಬೇಕು. ಉಳಿದ ಹಣವನ್ನು ಸರ್ಕಾರ ತುಂಬಲಿದೆ. ಅದಕ್ಕಾಗಿ ₹5 ಕೋಟಿ ವ್ಯಯಿಸಲಾಗುತ್ತಿದೆ. ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ ಈ ಎಲ್ಲ ಸೌಲಭ್ಯಗಳೂ ಅನ್ವಯವಾಗಲಿವೆ” ಎಂದು ತಿಳಿಸಿದರು.

ನೇಮಕಾತಿಗೆ 15 ಕೃಪಾಂಕ

“ಕಾಯಂ ಮಾಡುವ ಕುರಿತು ಕಾನೂನು ತಜ್ಞರು, ಆರ್ಥಿಕ ಇಲಾಖೆ ಜತೆ ಚರ್ಚಿಸಲಾಗಿದೆ. ಕಾಯಂ ಮಾಡಲು ಕಾನೂನು ತೊಡಕುಗಳಿವೆ. ಹಾಗಾಗಿ, ಪದವಿ ಕಾಲೇಜುಗಳ 6 ಸಾವಿರ ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಿಕೊಳ್ಳುವಾಗ 5ವರ್ಷದಿಂದ 10 ವರ್ಷಗಳು ಕೆಲಸ ಮಾಡಿದವರಿಗೆ ವರ್ಷಕ್ಕೆ ಶೇ 3 ಅಂಕಗಳಂತೆ ಗರಿಷ್ಠ 15 ಕೃಪಾಂಕ ನೀಡಲಾಗುವುದು. ವಯೋಮಿತಿ ಸಡಿಲಿಕೆ ಕುರಿತು ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2017ರಲ್ಲಿ ಚುನಾವಣಾ ಆಯೋಗವನ್ನು ನಂಬಿದ್ದೆವು, ಆದರೆ 2022ರಲ್ಲಿ ಎಸ್‌ಪಿ ಮತಗಳನ್ನು ಇಸಿ ಅಳಿಸಿದೆ: ಅಖಿಲೇಶ್ ಆರೋಪ

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಬೆಂಬಲಿಗರ...

ಪಶ್ಚಿಮ ಬಂಗಾಳ | ಸುವೇಂದು ಅಧಿಕಾರಿಗೆ ‘ಅಲ್ಲಾಹ್ ಮೇಲಕ್ಕೆ ಟಿಕೆಟ್ ಕಾಯ್ದಿರಿಸಲಿ’ – ಹುಮಾಯೂನ್ ವಿವಾದಾತ್ಮಕ ಹೇಳಿಕೆ

ಪಶ್ಚಿಮ ಬಂಗಾಳದ ರೇಜಿನಗರ ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಾಗ್ದಾಳಿಗಳು ತೀವ್ರ ಸ್ವರೂಪ...

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಇಸಿಐ ವಿವರಣೆ ತಿರಸ್ಕರಿಸಿದ ಸಿಪಿಐಎಂ; ಸಿಇಸಿ ಪದಚ್ಯುತಿಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...