ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-2: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ

Date:

ಕರ್ನಾಟಕ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ ಅತೀ ದೊಡ್ಡ ಸಮೀಕ್ಷೆಯನ್ನು ಈದಿನ.ಕಾಮ್ ಮಾಡಿದೆ. ರಾಜ್ಯದ ವಿವಿಧ ಭಾಗಗಳ ನಾನಾ ಸಮುದಾಯಗಳ ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ಚುನಾವಣಾ ಸಮಯದಲ್ಲಿ ರಾಜ್ಯದಲ್ಲಿ ಅಡಳಿತ ವಿರೋಧಿ ಅಲೆ ಇದೆಯೇ ಎಂಬುದನ್ನು ಅರಿಯಲು ಜನರು ನೀಡಿರುವ ಉತ್ತರಗಳು ಸ್ಪಷ್ಟ ಚಿತ್ರಣ ನೀಡಿವೆ.

ಮೊದಲಿಗೆ ಈ ಸಮೀಕ್ಷೆ ಏನೆಂದು ಅರಿಯಲು ಓದಿ: ಚುನಾವಣೆ 2023: ‘ಈ ದಿನ.ಕಾಮ್‌’ನ ಕರ್ನಾಟಕ ವಿಧಾನಸಭಾ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ

ಮೇಲಿನ ಲಿಂಕಿನ ಮೂಲಕ ನೀವು ಈದಿನ.ಕಾಮ್‌ನ ಸಮೀಕ್ಷೆಯ ಸ್ವರೂಪ, ವಿಧಾನ, ಗಾತ್ರದ ಕುರಿತ ವಿವರಗಳನ್ನು ತಿಳಿಯಬಹುದು. ಈಗ ಸಮೀಕ್ಷೆಯ ಮೊಟ್ಟಮೊದಲ ಅಂಶವನ್ನು ಗಮನಿಸೋಣ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸಂಬಂಧ ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆ ಹೀಗಿತ್ತು: ಬಸವರಾಜ ಬೊಮ್ಮಾಯಿ ನೇತೃತ್ವದ ಈಗಿನ ಸರ್ಕಾರಕ್ಕೆ ಆಡಳಿತ ನಡೆಸಲು ಮತ್ತೊಂದು ಅವಕಾಶ ಸಿಗಬೇಕು ಎಂದು ನೀವು ಭಾವಿಸುತ್ತೀರಾ? 

  • 2/3ರಷ್ಟು ಮತದಾರರು ಬಿಜೆಪಿ ಸರ್ಕಾರ ಹೋಗಬೇಕೆಂದು ಬಯಸುತ್ತಿದ್ದಾರೆ.
  • ಬಿಜೆಪಿಯ 1/4ರಷ್ಟು ಬೆಂಬಲಿಗರು ಈ ಸರ್ಕಾರದ ಬಗ್ಗೆ ಸಂತುಷ್ಟರಾಗಿಲ್ಲ.
  • ಸರ್ಕಾರದ ವಿರುದ್ಧದ ಅಸಂತುಷ್ಟಿಯು ವಿರೋಧಿ ಮತವಾಗಿಯೂ ಪರಿವರ್ತನೆಯಾಗಿದೆಯೇ ಎಂಬುದು ಈ ಸರಣಿಯ ಕಡೆಯಲ್ಲಿ ತಿಳಿಯುತ್ತದೆ.

ಕರ್ನಾಟಕದಾದ್ಯಂತ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಬೀಸುತ್ತಿರುವುದು ಸಮೀಕ್ಷೆಯಲ್ಲಿ ಸ್ಪಷ್ಟವಾಗಿದೆ. ನಮ್ಮ ಸಮೀಕ್ಷೆಯಲ್ಲಿ ‘ಬಸವರಾಜ ಬೊಮ್ಮಾಯಿಯವರ ನೇತೃತ್ವದ ಈ ಸರ್ಕಾರಕ್ಕೆ ಇನ್ನೊಂದು ಅವಕಾಶ ನೀಡಬೇಕೆಂದು ನೀವು ಭಾವಿಸುತ್ತೀರಾ?ʼ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಹೌದು ಅಥವಾ ಇಲ್ಲ ಎಂದು ಉತ್ತರಿಸಿದವರಲ್ಲಿ ಶೇ.67ರಷ್ಟು ಮತದಾರರು ಬಸವರಾಜ ಬೊಮ್ಮಾಯಿಯವರ ಸರ್ಕಾರಕ್ಕೆ ಇನ್ನೊಂದು ಅವಕಾಶ ಕೊಡಬಾರದು ಎಂದು ಉತ್ತರಿಸಿದ್ದಾರೆ. ಶೇ.33ರಷ್ಟು ಮತದಾರರು ಈ ಸರ್ಕಾರಕ್ಕೆ ಇನ್ನೊಂದು ಅವಕಾಶ ಸಿಗಬೇಕು ಎಂದು ಉತ್ತರಿಸಿದ್ದಾರೆ. (ಯಾವ ಅಭಿಪ್ರಾಯವನ್ನೂ ಹೊಂದಿಲ್ಲ ಅಥವಾ ಹೇಳಬಯಸುವುದಿಲ್ಲ ಎಂದು ಹೇಳಿದ ಶೇ.32ರಷ್ಟು ಮತದಾರರು ಹೇಳಿದ್ದಾರೆ).

ಉತ್ತರ ನೀಡುವ ಪ್ರತಿಯೊಬ್ಬ ಮತದಾರರ ವೈಯಕ್ತಿಕ ವಿವರಗಳನ್ನು – ಅಂದರೆ ಅವರ ವಯಸ್ಸು, ಜಾತಿ, ಆರ್ಥಿಕ ಸ್ಥಿತಿಗತಿ ಇತ್ಯಾದಿ – ಸಹಾ ಸಂಗ್ರಹಿಸಲಾಗುತ್ತದೆ. ಹಾಗೆ ಕೇಳುವಾಗ ಒಂದಷ್ಟು ಜನರು ಆ ವಿವರಗಳನ್ನು ನೀಡಲು ನಿರಾಕರಿಸುವ ಸಾಧ್ಯತೆಯೂ ಇದೆ. ಅವೆಲ್ಲವನ್ನೂ ಮೊದಲ ಭಾಗದಲ್ಲಿ ವಿವರಿಸಿರುವುದನ್ನು ನೀವು ಗಮನಿಸಿರಬಹುದು. ಅದೇ ರೀತಿ ಅವರು ಯಾವ ಪಕ್ಷಕ್ಕೆ ಅಂತಿಮವಾಗಿ ಮತ ನೀಡುತ್ತಾರೆ ಎಂಬುದನ್ನೂ ಕೇಳಲಾಗುತ್ತದೆ. ಅದರ ಆಧಾರದಲ್ಲಿ ಯಾವ ಪಕ್ಷದ ಬೆಂಬಲಿಗರು ಎಂಬುದನ್ನು ಗುರುತಿಸಲಾಗುತ್ತದೆ.

ವಿಶೇಷವೆಂದರೆ,

ಬಿಜೆಪಿಯ ಬೆಂಬಲಿಗರಲ್ಲಿ ನಾಲ್ಕನೇ ಒಂದು ಭಾಗದಷ್ಟು (27%) ಮತದಾರರೂ ಸಹಾ ಬೊಮ್ಮಾಯಿಯವರಿಗೆ ಇನ್ನೊಂದು ಅವಕಾಶ ನೀಡಬೇಕೇ ಎಂದಾಗ, ಇಲ್ಲ ಎಂದಿದ್ದಾರೆ. ನಿರೀಕ್ಷೆಯಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಬಲಿಗರಲ್ಲಿ ಹೆಚ್ಚಿನವರು ಈ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಕಾಂಗ್ರೆಸ್‌ ಬೆಂಬಲಿಗರ ಪೈಕಿ ಶೇ.87ರಷ್ಟು ಮತ್ತು ಜೆಡಿಎಸ್‌ ಬೆಂಬಲಿಗರಲ್ಲಿ ಶೇ.88ರಷ್ಟು ಮತದಾರರು ಈ ಸರ್ಕಾರಕ್ಕೆ ಇನ್ನೊಂದು ಅವಕಾಶ ನೀಡಬಾರದು ಎಂದಿದ್ದಾರೆ. (ಜನರ ಅಭಿಪ್ರಾಯ ಮತ್ತು ಅಂತಿಮವಾಗಿ ಮತ ಯಾರಿಗೆ ಹಾಕುತ್ತಾರೆ ಎಂಬುದು ಭಿನ್ನ ಭಿನ್ನವಾಗಿರಲು ಸಾಧ್ಯ – Public opinion & Voting Behaviour can be different – ಅಂದರೆ ಅಂತಿಮವಾಗಿ ಅದೇ ಪಕ್ಷಕ್ಕೆ ಮತ ಹಾಕಿದರೂ, ಈ ಸರ್ಕಾರ ಸರಿಯಿಲ್ಲ ಎಂಬ ಅಭಿಪ್ರಾಯ ಹೊಂದಿರಲು ಸಾಧ್ಯ ಎಂಬುದನ್ನು ಗಮನಿಸಬೇಕು).

ಜಾತಿ-ಸಮುದಾಯಗಳ ಲೆಕ್ಕ ನೋಡಿದರೆ, ಈ ಸರ್ಕಾರವೇ ಬರಲಿ ಎಂದು ಮೇಲ್ಜಾತಿ (ಬ್ರಾಹ್ಮಣರು, ವೈಶ್ಯರು ಇತ್ಯಾದಿ)ಯ ಜನರು ಹೆಚ್ಚಿನ ಒಲವು ತೋರಿದ್ದಾರೆ (ಸರ್ಕಾರದ ಪರ ಶೇ.57, ಸರ್ಕಾರದ ವಿರುದ್ಧ ಶೇ.43). ಮಿಕ್ಕೆಲ್ಲಾ ಸಮುದಾಯಗಳು ಸರ್ಕಾರದ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವಾರಸ್ಯಕರ ಸಂಗತಿಯೆಂದರೆ, ಈ ವಿಚಾರದಲ್ಲಿ ಲಿಂಗಾಯಿತರು ಎರಡೂ ಕಡೆಗೆ ಹೆಚ್ಚು ಕಡಿಮೆ ಸಮಾನವಾಗಿ ಹಂಚಿಹೋಗಿದ್ದಾರೆ (ಸರ್ಕಾರದ ಪರ ಶೇ.53, ಸರ್ಕಾರದ ವಿರುದ್ಧ ಶೇ.47). ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಮರು, ಒಕ್ಕಲಿಗರು ಮತ್ತು ಕುರುಬರು ಈ ಸರ್ಕಾರ ಮುಂದುವರೆಯುವುದರ ವಿರುದ್ಧ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಸಮಾಜದ ಶ್ರೇಣೀಕರಣದಲ್ಲಿ ತಳಸಮುದಾಯಗಳು ಹೆಚ್ಚೆಚ್ಚು ಪ್ರಮಾಣದಲ್ಲಿ ಈ ಸರ್ಕಾರದ ವಿರುದ್ಧ ಅಭಿಪ್ರಾಯವನ್ನು ಹೊಂದಿರುವುದು, ಜಾತಿ ಶ್ರೇಣೀಕರಣದಲ್ಲಿ ಮೇಲೆ ಇರುವವರು ಸಾಪೇಕ್ಷವಾಗಿ ಸರ್ಕಾರದ ಪರ ನಿಲುವನ್ನು ಹೊಂದಿರುವುದು ಎದ್ದು ಕಾಣುತ್ತದೆ. ಆದರೆ, ಮುಸ್ಲಿಮರನ್ನು ಹೊರತುಪಡಿಸಿದರೆ ಒಕ್ಕಲಿಗ ಸಮುದಾಯವು ಅತ್ಯಂತ ಹೆಚ್ಚು ಈ ಸರ್ಕಾರದ ವಿರುದ್ಧ ಇದ್ದಾರೆ.

ಚುನಾವಣೆ ಸಮೀಕ್ಷೆಯ ಮುಂದಿನ ಭಾಗ ಓದಿ: ಚುನಾವಣೆ 2023 | ಈದಿನ.ಕಾಮ್‌ ಸಮೀಕ್ಷೆ-3: ಭ್ರಷ್ಟಾಚಾರ, ಅಸಮರ್ಥತೆಯೇ ತಿರಸ್ಕಾರಕ್ಕೆ ಪ್ರಧಾನ ಕಾರಣ

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಲಿತರಿಗೆ ಮೀಸಲಿರುವ ಹಣ ಗ್ಯಾರಂಟಿಗಳಿಗೆ ಬಳಕೆಯಾದರೆ ಸರ್ಕಾರದ ವಿರುದ್ಧ ಹೋರಾಟ: ದಲಿತ ಸಂಘರ್ಷ ಸಮಿತಿ ಎಚ್ಚರಿಕೆ

ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು...

ಹರಿಯಾಣ ಚುನಾವಣೆ | ಉಚಿತ ವಿದ್ಯುತ್, ವೈದ್ಯಕೀಯ ಚಿಕಿತ್ಸೆ ಸೇರಿ 5 ಗ್ಯಾರಂಟಿ ಘೋಷಿಸಿದ ಎಎಪಿ

ಈ ವರ್ಷದ ಅಕ್ಟೋಬರ್‌ನಲ್ಲಿ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲ...

ಶಿರೂರು ಗುಡ್ಡ ಕುಸಿತ | ನೊಂದ ಕುಟುಂಬಗಳ ಜತೆ ಸರಕಾರ ನಿಲ್ಲಬೇಕು: ಎಚ್‌ ಡಿ ಕುಮಾರಸ್ವಾಮಿ

ರಾಜ್ಯ ಸರಕಾರವು ಗುಡ್ಡ ಕುಸಿತದಲ್ಲಿ ಜೀವ ಕಳೆದುಕೊಂಡಿರುವ ಕುಟುಂಬಗಳ ಜತೆ ನಿಲ್ಲಬೇಕು...

ಕಾವಡ್ ಯಾತ್ರೆ ವೇಳೆ ಅಂಗಡಿ ಮಾಲೀಕರ ಹೆಸರುಳ್ಳ ಫಲಕ ಹಾಕಲು ಆದೇಶ; ‘ಸಂವಿಧಾನದ ಮೇಲಿನ ದಾಳಿ’ ಎಂದ ಪ್ರಿಯಾಂಕಾ

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಜುಲೈ 22ರಿಂದ ನಡೆಯುವ ಕಾವಡ್ ಯಾತ್ರೆ ನಡೆಯಲಿದೆ....