ಹಳೆಯ ‘mAadhaar’ ಆ್ಯಪ್ ಸ್ಥಗಿತ: ಸುರಕ್ಷಿತವಾದ ಹೊಸ ‘Aadhaar App’ ಬಿಡುಗಡೆ

Date:

ಕೇಂದ್ರ ಸರ್ಕಾರದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಸ್ತುತ ಸಾಕಷ್ಟು ಜನರು ಬಳಸುವ ಹಳೆಯ ‘mAadhaar’ ಆ್ಯಪ್ ಅನ್ನು ಶೀಘ್ರದಲ್ಲಿಯೇ ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಇದರ ಬದಲಿಗೆ, ಹೆಚ್ಚಿನ ಭದ್ರತೆ, ಆಧುನಿಕ ತಂತ್ರಜ್ಞಾನ ಮತ್ತು ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವ ನೂತನ ‘Aadhaar’ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಜನರು ಶೀಘ್ರವೇ ಹೊಸ ಆ್ಯಪ್ ಅನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾಧಿಕಾರ ಸೂಚಿಸಿದೆ.

- Advertisement -

ಹಳೆಯ mAadhaar ಆ್ಯಪ್‌ ನಲ್ಲಿ ಒಂದು ಬಾರಿ ಲಾಗಿನ್ ಆದರೆ ಸಂಪೂರ್ಣ ಆಧಾರ್ ಮಾಹಿತಿಯನ್ನು ಪರದೆಯ ಮೇಲೆ ತೋರಿಸಲಾಗುತ್ತಿತ್ತು. ಆದರೆ ಹೊಸ ಆಧಾರ್ ಆ್ಯಪ್‌ ನಲ್ಲಿ ‘ಸೆಲೆಕ್ಟಿವ್ ಡೇಟಾ ಶೇರಿಂಗ್’ ವ್ಯವಸ್ಥೆಯನ್ನು ತರಲಾಗಿದೆ. ಇದರಿಂದಾಗಿ ಹೋಟೆಲ್, ಆಸ್ಪತ್ರೆ ಅಥವಾ ಸರ್ಕಾರಿ ಕಚೇರಿಗಳಲ್ಲಿ ವ್ಯಕ್ತಿಗತ ಪರಿಶೀಲನೆಗಾಗಿ ಸಂಪೂರ್ಣ ಮಾಹಿತಿ ನೀಡುವ ಬದಲು, ಕೇವಲ ಅಗತ್ಯವಿರುವ ಮಾಹಿತಿಯನ್ನು ಮಾತ್ರ ಸುರಕ್ಷಿತ ಕ್ಯೂಆರ್ ಕೋಡ್ ಮೂಲಕ ಹಂಚಿಕೊಳ್ಳಬಹುದಾಗಿದೆ. ಇದು ಗ್ರಾಹಕರ ಖಾಸಗಿ ಮಾಹಿತಿಗೆ ಹೆಚ್ಚಿನ ಭದ್ರತೆ ಒದಗಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ...

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ... ಆಗು ಅನಿಕೇತನ" ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು....

ಇದನ್ನು ಓದಿದ್ದೀರಾ? ‘ಸ್ಮಾರ್ಟ್ ಬಾರ್ಡರ್’ಯೋಜನೆ : ಕೇಂದ್ರದ ಸರಣಿ ಯೋಜನೆಗಳ ನಡುವೆಯೂ ನಿಲ್ಲದ ನುಸುಳುವಿಕೆ

ಮೊದಲು ಆಧಾರ್ ಲಾಗಿನ್ ಕೇವಲ ಎಸ್ಎಂಎಸ್ ಒಟಿಪಿ ಮೇಲೆ ಅವಲಂಬಿತವಾಗಿತ್ತು. ಆದರೆ, ಹೊಸ ವ್ಯವಸ್ಥೆಯಲ್ಲಿ ಒಟಿಪಿ ಮಾತ್ರವಲ್ಲದೆ, ಮುಖದ ದೃಢೀಕರಣ (Face-based authentication) ಮತ್ತು ಕ್ಯೂಆರ್ ಕೋಡ್ ಪರಿಶೀಲನೆಯ ಹಂತಗಳನ್ನು ಅಳವಡಿಸಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಇದರ ಜೊತೆಗೆ, ಗ್ರಾಹಕರು ತಮ್ಮ ಬೆರಳಚ್ಚು, ಮುಖ ಮತ್ತು ಕಣ್ಣಿನ ಐರಿಸ್ ದೃಢೀಕರಣದ ಡೇಟಾವನ್ನು ಆ್ಯಪ್ ಮೂಲಕವೇ ಲಾಕ್ ಅಥವಾ ಅನ್‌ಲಾಕ್ ಮಾಡಲು ಸಂಪೂರ್ಣ ನಿಯಂತ್ರಣವನ್ನು ನೀಡಲಾಗಿದೆ. ಇದು ಅನಧಿಕೃತ ಬಳಕೆ ಮತ್ತು ಮೋಸಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಹಾಯ ಮಾಡುತ್ತದೆ.

ಈ ಹೊಸ ಬದಲಾವಣೆಯ ಜೊತೆಗೆ, ಮೈಆಧಾರ್ (myAadhaar) ಪೋರ್ಟಲ್‌ನಲ್ಲಿ ಉಚಿತವಾಗಿ ದಾಖಲೆಗಳನ್ನು ಅಪ್‌ಡೇಟ್ ಮಾಡುವ ಅವಧಿಯನ್ನು ಜೂನ್ 14, 2027 ರ ವರೆಗೆ ವಿಸ್ತರಿಸಿ ಯುಐಡಿಎಐ (UIDAI) ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಈ ಮೊದಲು ಈ ಉಚಿತ ಸೇವೆಯು ಜೂನ್ 15, 2026 ಕ್ಕೆ ಮುಗಿಯಲಿತ್ತು. ಗ್ರಾಹಕರು ಈ ಹೊಸ ‘Aadhaar’ ಆ್ಯಪ್ ಅನ್ನು ಕೇವಲ ಅಧಿಕೃತ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆ್ಯಪ್ ಸ್ಟೋರ್‌ನಿಂದ ಮಾತ್ರವೇ ಡೌನ್‌ಲೋಡ್ ಮಾಡಿಕೊಂಡು ಬಳಸುವಂತೆ ಪ್ರಾಧಿಕಾರವು ವಿಶೇಷವಾಗಿ ಮನವಿ ಮಾಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ವಾತಂತ್ರ್ಯ ಹೋರಾಟದ ಇತಿಹಾಸ ಸಾರುವ ಪ್ರವಾಸಿ ತಾಣವಾಗಿ ಶಿವಪುರ ಸೌಧ ಅಭಿವೃದ್ಧಿ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮದ ಇತಿಹಾಸವನ್ನು ಮುಂದಿನ ಪೀಳಿಗೆಗೆ...

ವಾಟ್ಸ್‌ಆ್ಯಪ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ!

ಕಂಪ್ಯೂಟರ್‌ಗಳಲ್ಲಿ ವಾಟ್ಸ್‌ಆ್ಯಪ್ ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ಸೈಬರ್...

ದೆಹಲಿ ರಸ್ತೆಗಳಲ್ಲಿ ಕೇವಲ BS-VI ವಾಹನಗಳಷ್ಟೇ ಓಡಾಡಲಿ: ವಾಯುಮಾಲಿನ್ಯ ತಡೆಗೆ ಸುಪ್ರೀಂ ಮಹತ್ವದ ಇಂಗಿತ!

ರಾಷ್ಟ್ರ ರಾಜಧಾನಿ ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ...

ಶಿವಮೊಗ್ಗ | 67 ಕ್ವಿಂಟಾಲ್ ಪಡಿತರ ಅಕ್ಕಿ ಕೊರತೆ: ಪರಿಶೀಲನೆಗೆ ಆಗ್ರಹ

ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸಂಬಂಧಪಟ್ಟ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ...