ಭಾರತದ 82 ಸ್ಟಾರ್ಟ್‌ಅಪ್‌ಗಳಲ್ಲಿ ಉದ್ಯೋಗ ಕಳೆದುಕೊಂಡ 23 ಸಾವಿರ ಟೆಕ್ಕಿಗಳು

Date:

  • ಶೇ.20ರಷ್ಟು ಉದ್ಯೋಗ ಕಡಿತಗೊಳಿಸಿದ ಸಾಮಾಜಿಕ ಮಾಧ್ಯಮ ಕಂಪನಿ ಶೇರ್‌ಚಾಟ್‌
  • ಜಾಗತಿಕ ಮಟ್ಟದಲ್ಲಿ ಕಳೆದ ಒಂದು ತಿಂಗಳಲ್ಲಿ 1.50 ಲಕ್ಷ ಮಂದಿ ಉದ್ಯೋಗಿಗಳು ವಜಾ   

ಆರ್ಥಿಕ ಹಿಂಜರಿತ ಭೀತಿಯಿಂದಾಗಿ ಭಾರತದ ಕನಿಷ್ಠ 82 ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 23 ಸಾವಿರ ಟೆಕ್ಕಿಗಳು ಉದ್ಯೋಗ ವಂಚಿತರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇಂಕ್‌42 ಎಂಬ ಸಂಸ್ಥೆಯ ವರದಿಯ ಪ್ರಕಾರ, 19 ಎಡ್‌ಟೆಕ್‌ ಒಳಗೊಂಡ ಪ್ರಮುಖ ಸ್ಟಾರ್ಟ್‌ಅಪ್‌ಗಳು ಕಳೆದ ಆರು ತಿಂಗಳಲ್ಲಿ 8460 ಟೆಕ್ಕಿಗಳನ್ನು ಮನೆಗೆ ಕಳಿಸಿವೆ. ಉದ್ಯೋಗಿಗಳನ್ನು ವಜಾ ಮಾಡಿದ ಸ್ಟಾರ್ಟ್‌ಅಪ್‌ಗಳಲ್ಲಿ ಬೈಜೂಸ್, ಓಲಾ, ಓಯೋ, ಮೀಶೋ, ಎಂಪಿಎಲ್, ಲೀವ್‌ಸ್ಪೇಸ್ ಹಾಗೂ ವೇದಾಂತೂ ಕಂಪನಿಗಳು ಸೇರಿವೆ.

ಈ ವಾರದಲ್ಲಿ ಮನೆಯ ಒಳಾಂಗಣ ನವೀಕರಿಸುವ ಮತ್ತು ವಿನ್ಯಾಸಗೊಳಿಸುವ ಪ್ರಮುಖ ಕಂಪನಿಯಾದ ಲಿವ್‌ಸ್ಪೇಸ್, ವೆಚ್ಚ ಕಡಿತದ ಮಾನದಂಡದೊಂದಿಗೆ 100 ಉದ್ಯೋಗಿಗಳನ್ನು ತೆಗೆದು ಹಾಕಿದೆ. ಕಳೆದ ವಾರ ಆನ್‌ಲೈನ್‌ ಸ್ಟೋರ್‌ ಕಂಪನಿ ದುಕಾನ್‌ ಶೇ.30 ಟೆಕ್ಕಿಗಳನ್ನು ವಜಾಗೊಳಿಸಿದೆ.

ಆರೋಗ್ಯ ಸೇವಾ ಸಂಸ್ಥೆ ‘ಪ್ರಿಸ್ಟಿನ್’ ಸಂಸ್ಥೆಯು ಮಾರಾಟ, ಸಾಫ್ಟ್‌ವೇರ್‌ ಹಾಗೂ ಪ್ರಾಡಕ್ಟ್ ವಿಭಾಗಗಳಿಂದ 350 ಉದ್ಯೋಗಿಗಳನ್ನು ಮನೆಗೆ ಕಳಿಸಿದೆ. ಆನ್‌ಲೈನ್‌ ಉನ್ನತ ಶಿಕ್ಷಣದ ಸಂಸ್ಥೆ ‘ಅಪ್‌ಗ್ರಾಡ್’, ಕಳೆದ ತಿಂಗಳು ಫೆಬ್ರವರಿಯಲ್ಲಿ ಶೇ.30 ರಷ್ಟು ಟೆಕ್ಕಿಗಳನ್ನು ಕಡಿತಗೊಳಿಸಿತ್ತು. ಹಾಗೆಯೇ ಜಾಗತಿಕ ವಿತರಣಾ ನಿರ್ವಹಣಾ ವೇದಿಕೆ ‘ಫಾರ್‌ಐ’ ಕೂಡ 90 ಟೆಕ್ಕಿಗಳನ್ನು ವಜಾಗೊಳಿಸಿತ್ತು. ಸಾಮಾಜಿಕ ಮಾಧ್ಯಮ ಕಂಪನಿ ಶೇರ್‌ಚಾಟ್‌ನಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಶೇ.20 ರಷ್ಟು ಮಂದಿ ಉದ್ಯೋಗ ವಂಚಿತರಾಗಿದ್ದರು.

ಜಾಗತಿಕ ಮಟ್ಟದಲ್ಲಿ ಕಳೆದ ಮೂರು ತಿಂಗಳುಗಳಲ್ಲಿ ಪ್ರಮುಖ ಕಂಪನಿಗಳಿಂದ 1.50 ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ವರ್ಷದ ಜನವರಿ ಒಂದೇ ತಿಂಗಳಲ್ಲಿ ಸುಮಾರು 288 ಟೆಕ್‌ಕಂಪನಿಗಳು ಬರೋಬ್ಬರಿ 1 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂದೇಶಗಳನ್ನು ಎಡಿಟ್‌ ಮಾಡುವ ಆಯ್ಕೆ ಪರಿಚಯಿಸಿದ ವಾಟ್ಸ್‌ಆ್ಯಪ್‌

ವಾಟ್ಸ್‌ಆ್ಯಪ್‌ ಸಂದೇಶ ಸೆಂಡ್‌ ಮಾಡಿದ ಬಳಿಕವೂ ಎಡಿಟ್‌ ಆಂಡ್ರಾಯ್ಡ್ ಹಾಗೂ ಐಒಎಸ್ ಆವೃತ್ತಿಯಲ್ಲಿ...

ಟ್ವಿಟರ್‌ಗೆ ಹೊಸ ಸಿಇಒ ನೇಮಿಸಿದ ಇಲಾನ್ ಮಸ್ಕ್

ಕೆಲವು ದಿನಗಳ ಹಿಂದೆ ಹೊಸ ಸಿಇಒ ನೇಮಿಸುವುದಾಗಿ ಘೋಷಿಸಿದ್ದ ಮಸ್ಕ್ ಕಳೆದ ವರ್ಷ...

ಟ್ವಿಟರ್‌ನಿಂದ ಮೊಬೈಲ್‌ ನಂಬರ್‌ ಇಲ್ಲದೆ ವಿಡಿಯೋ ಕಾಲಿಂಗ್ ಸೌಲಭ್ಯ

ವಿಶ್ವದ ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ ಶೀಘ್ರದಲ್ಲೇ ಹೊಸ ಫೀಚರ್‌ಗಳನ್ನು ಪರಿಚಯಿಸಲಿದ್ದು,...

ವಾಟ್ಸ್‌ಆ್ಯಪ್‌ ಖಾಸಗಿ ಹಕ್ಕು ಉಲ್ಲಂಘನೆ ಬಗ್ಗೆ ತನಿಖೆಯ ಭರವಸೆ ನೀಡಿದ ಸಚಿವರು

ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ಟ್ವೀಟ್‌ನಲ್ಲಿ ಟ್ವಿಟರ್ ಎಂಜಿನಿಯರ್ ದಾಬಿರಿ ವಾಟ್ಸ್‌ಆ್ಯಪ್‌...