ಬಿಜೆಪಿಯ ಕುತಂತ್ರಕ್ಕೆ ನಾವು ಹೆದರುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

Date:

  • ‘ಕಾಯಕ ನಮ್ಮದು ಕೈಲಾಸ ಮೋದಿಯದು’
  • ‘ಉಸಿರು ಇರೋವರಗೆ ದೇಶಕ್ಕಾಗಿ ಹೋರಾಡುವೆ’

ಬಿಜೆಪಿಯ ಕುತಂತ್ರಕ್ಕೆ ನಾವು ಹೆದರಲ್ಲ, ಹೋರಾಟ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.

ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆ ಉಲ್ಲೇಖಿಸಿ, ಕೇಂದ್ರ ಸರ್ಕಾರದ ಕುತಂತ್ರದಿಂದ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ನಾವು ಬಿಜೆಪಿಯ ಕುತಂತ್ರಕ್ಕೆ ಹೆದರಲ್ಲ, ಹೋರಾಟ ಮಾಡುತ್ತೇವೆ. ಬಿಜೆಪಿ ನಡೆ ವಿರುದ್ಧ ಹೋರಾಟ ಮಾಡಲು ನಾವು ತಯಾರಾಗಿದ್ದೇವೆ. ಬಿಜೆಪಿ ವಿರೋಧ ಪಕ್ಷಗಳನ್ನು ದುರ್ಬಲ ಮಾಡುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, “ಹಣದಿಂದ ವಸ್ತು ಖರೀದಿಸಬಹುದು. ಆದರೆ, ಧೈರ್ಯ ಖರೀದಿಸಲು ಸಾಧ್ಯವಿಲ್ಲ” ಎಂದಿದ್ದಾರೆ.

ಮೋದಿ ಅವರು ಕಾಯಕವೇ ಕೈಲಾಸ ಎನ್ನುತ್ತಾರೆ. ಆದರೆ, ಕಾಯಕ ಮಾಡುವವರು ನಾವು, ಕೈಲಾಸದಲ್ಲಿ ಇರುವುದು ಮೋದಿ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯ ಷಡ್ಯಂತ್ರದಿಂದ ನಾನು ಕಳೆದ ಬಾರಿಯ ಚುನಾವಣೆಯಲ್ಲಿ ಸೋತಿದ್ದೇನೆ ಹೊರತು ನನ್ನ ಜನರಿಂದಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನನ್ನ ಮೇಲೆ ಗಾಂಧಿ ಟೋಪಿ ಇರುತ್ತದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷನ ತಲೆ ಮೇಲೆ ಗಾಂಧಿ ಟೋಪಿ ಇರುತ್ತೆ. ನೀವು ಕರಿ ಟೋಪಿ ಹಾಕುತ್ತೀರಿ ನಾವು ಬಿಳಿ ಟೋಪಿ ಹಾಕುತ್ತೇವೆ. ಮೋದಿ ಅವರ ತಲೆ ಮೇಲೆ ಕರಿ ಛತ್ರಿ ಇತ್ತು. ನಮ್ಮ ತಲಿ ಮೇಲೆ ಬಿಳಿ ಛತ್ರಿ ಇದೆ. ಮೋದಿ ಅವರು ಕಪ್ಪು ಹಣ ಇರೋರ ಮೇಲೆ ಕಪ್ಪು ಟೋಪಿ, ಛತ್ರಿ ಇಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ನನಗೆ ಈಗ 81 ವರ್ಷ, ಹಾಗಂತ ನಾನು ಮೆತ್ತಗಾಗುವುದಿಲ್ಲ. ಉಸಿರು ಇರೋವರೆಗೆ ದೇಶದ ಸಲುವಾಗಿ ಹೋರಾಡುತ್ತೇನೆ ಎಂದಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶದಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ನಂಬರ್ ಒನ್ ಆಗಿಸಬೇಕಿದೆ: ಸಿದ್ದರಾಮಯ್ಯ

'ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಸುಸ್ಥಿರ ಬೆಳವಣಿಗೆ ಕಾಣಬೇಕು' 'ರಾಜ್ಯದ...

‘ಫ್ರೀಡಂ ಪಾರ್ಕ್’ನಿಂದ ನಮಗೆ ‘ಫ್ರೀಡಂ’ ಕೊಡಿ: ಸಿಎಂ ಸಿದ್ದರಾಮಯ್ಯಗೆ ‘ಮಹಾಧರಣಿ’ ಆಗ್ರಹ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಕೇವಲ 'ಫ್ರೀಡಂ ಪಾರ್ಕ್‌'ಗೆ ಸೀಮಿತವಾಗಿದ್ದು,...

ಬೆಂಗಳೂರು | 20 ದಿನದ ಹಸುಗೂಸು ಮಾರಾಟ; ಸಿಸಿಬಿ ಪೊಲೀಸರ ಕಾರ್ಯಾಚರಣೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹಸುಗೂಸು ಮಾರಾಟ ದಂಧೆ ಮತ್ತೆ ಬೆಳಕಿಗೆ...

ತೆಲಂಗಾಣ ಪತ್ರಿಕೆಗಳಲ್ಲಿ ಜಾಹೀರಾತು; ರಾಜ್ಯದ ಬೊಕ್ಕಸ ದುರ್ಬಳಕೆ: ಆರ್‌ ಅಶೋಕ ಕಿಡಿ

'ರಾಜ್ಯದ ಬೊಕ್ಕಸ ಬರಿದು ಮಾಡಿ, ಹೆಮ್ಮಾರಿಯಾದ ಕಾಂಗ್ರೆಸ್ ಸರ್ಕಾರ' 'ಅಭಿವೃದ್ಧಿಗೆ...