ಚಿಕ್ಕಮಗಳೂರು | ಫೆ. 26ಕ್ಕೆ ರೈತ, ಕಾರ್ಮಿಕರಿಂದ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ; ಕರ್ನಾಟಕ ಜನಶಕ್ತಿ 

Date:

ಮಲೆನಾಡಿನ ರೈತ ಕಾರ್ಮಿಕರಿಗೆ ಹಕ್ಕು ಪತ್ರ ನೀಡದೆ ಸರ್ವೆ, ಮೀಸಲು ಅರಣ್ಯ ಮಾಡಲು ಹುನ್ನಾರ ನಡೆಸುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಕರ್ನಾಟಕ ಜನಶಕ್ತಿ ವತಿಯಿಂದ ಕೊಪ್ಪ ತಾಲೂಕು ಗಡಿಕಲ್ ಬಳಿ ಗುರುವಾರ ಪ್ರತಿಭಟನೆ ಜೊತೆಗೆ ಕಾಲ್ನಡಿಗೆ ಜಾಥಾ ಕೈಗೊಂಡಿದ್ದಾರೆ.

- Advertisement -

ಕಾಡು ಪ್ರಾಣಿಗಳು ದಾಳಿ ನಡೆಸಿ. ಆನೆ ತುಳಿದು ಹತ್ತಾರು ಜನ ರೈತ, ಕಾರ್ಮಿಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು, ಯಾವ ಸೂಚನೆ ನೀಡದೆ ನಾನಾ ಕಡೆಗಳಲ್ಲಿ ಸರ್ವೆ ಕಾರ್ಯ ಕೈಗೊಂಡಿರುವುದು. ಖಂಡನೀಯ. ರೈತ, ಕಾರ್ಮಿಕರು, ತಮ್ಮ ಭೂಮಿ. ವಸತಿಗಳನ್ನು ಕಳೆದುಕೊಳ್ಳುವ, ಹಾಗೂ ಎಲ್ಲಿ ತಮ್ಮನ್ನೆಲ್ಲಾ ಒಕ್ಕಲೆಬ್ಬಿಸುತ್ತಾರೋ ಎಂಬ ಆತಂಕದಲ್ಲಿ ದಿನ ದೂಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನಲ್ಲಿ ರೈತರು ಬೆಳೆದಿರುವ ಅತೀ ವೃಷ್ಟಿ ಮಳೆಯಿಂದ ಬೆಳೆದ ಅಡಿಕೆ, ಕಾಫಿ, ಕಾಳು ಮೆಣಸಿನ ಉತ್ಪತ್ತಿ ಅರ್ಧ ಭಾಗ ಕಡಿಮೆಯಾಗಿದೆ. ಈ ವಿಚಾರವಾಗಿ ರೈತರು ಕಂಗಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ  ಅರಣ್ಯ ಇಲಾಖೆ ಜನ ವಿರೋಧಿ, ರೈತ ವಿರೋಧಿ ಕಾಯ್ದೆ, ಕಾನೂನುಗಳು ಜನರನ್ನು ದಿಕ್ಕೇ ತೋಚದಂತೆ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಸೆಕ್ಷನ್ 4(1), ಸೆಕ್ಷನ್ 17 ಮೂಲಕ ಮೀಸಲು ಅರಣ್ಯ ಮಾಡುವ ಅರಣ್ಯ ಇಲಾಖೆಯಿಂದ ಡೀಮ್ಸ್ ಫಾರೆಸ್ಟ್ ಸಮಸ್ಯೆ ಇತ್ಯರ್ಥವಾಗಿಲ್ಲ. ಇಲಾಖೆಯವರು ಕಾಡಿನ ನಡುವೆ ಗಿಡ ನೆಡುವ ಕೆಲಸ, ಸರ್ವೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಎಷ್ಟರ ಮಟ್ಟಿಗೆಂದರೆ, ಕಳೆದ 8-10 ತಿಂಗಳಲ್ಲಿ ಆನೆ ತುಳಿತಕ್ಕೆ ಬಲಿಯಾಗಿ 8 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೊನ್ನೆಯಷ್ಟೆ ಹುಣಸೇಹಳ್ಳಿ ಸಮೀಪದ ಹ್ಯಾರಂಬಿ ವ್ಯಾಪ್ತಿಯ ಪುರ ಎಂಬ ಗ್ರಾಮದಲ್ಲಿ ಒಂದು ಎಸ್ಟೇಟ್ ಕೆಲಸಕ್ಕೆ ಬಂದಿದ್ದ, ಹಾವೇರಿ ಮೂಲದ ಒಬ್ಬ ಕಾರ್ಮಿಕ ಆನೆ ತುಳಿತಕ್ಕೆ ಒಳಗಾಗಿ, ಜೀವ ಕಳೆದುಕೊಂಡಿದ್ದಾರೆ. ಕಾಡಾನೆ ಮಾನವ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿರುವ ಜೀವಗಳಿಗೆ ಬೇಲೇನೆ ಇಲ್ಲದ ರೀತಿಯಲ್ಲಿ ಅರಣ್ಯ ಇಲಾಖೆಯವರು, ಸರ್ಕಾರಗಳು ನಡೆದುಕೊಳ್ಳುತ್ತಿವೆ ಎಂದು ಕರ್ನಾಟಕ ಜನಶಕ್ತಿ ಮುಖಂಡರು ಈದಿನ. ಕಾಂ ಜೊತೆ ಮಾತಾಡಿದರು. ಅರಣ್ಯ ಇಲಾಖೆಯಿಂದ ಇತ್ತೀಚೆಗಷ್ಟೇ, ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ತಾಳು, ಬಂಗಾಡಿ, ನಕ್ತುಗೋಳಿ, ಹಂಚಿನ, ಕೊಡಿಗೆ ಹಳ್ಳಿಗಳ ಸಹಜ ಕಾಡಿನ ಗುಡ್ಡದ ತುಂಬೆಲ್ಲಾ ಗುಂಡಿ ಹೊಡೆದು. ಸಹಜ ಅರಣ್ಯದ ನಡುವೆ ಕೃತಕ ಕಾಡನ್ನು ಬೆಳೆಸುತ್ತೇವೆ ಎಂದು ಹೋಗಿ, ಅಲ್ಲಿನ ಜನರ ಪ್ರತಿಭಟನೆಯನ್ನು ಎದುರಿಸಿದ್ದಾರೆ.

Screenshot 2026 02 24 22 00 43 20 7352322957d4404136654ef4adb64504

ಕಳೆದ ನೂರಾರು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿರುವ ಆದಿವಾಸಿ ರೈತ ಸಮುದಾಯ, ನಾಗರ ಬನ, ದೇವರ ಬನ, ಹುಲ್ಲು ಬನ್ನೇ, ಸೊಪ್ಪಿನ ಗುಡ್ಡ. ಹೀಗೆ ಹಲವು ಹೆಸರುಗಳಲ್ಲಿ. ತಮ್ಮ ಸುತ್ತ ಮುತ್ತಲು ಇರುವ ಕಾಡನ್ನು ಉಳಿಸಿಕೊಂಡು, ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಇಂತಹ ಜನ ವಿರೋಧಿ ಯೋಜನೆಯಿಂದ ಮಲೆನಾಡಿಗರನ್ನೇ ನಿದ್ದೆಯನ್ನು ಕೆಡಿಸಿದೆ. ಈ ಕುರಿತು ಮಲೆನಾಡಿನ ಎಲ್ಲಾ ರೈತ ಕಾರ್ಮಿಕರ ಸಮಸ್ಯೆಯಾಗಿದೆ. ಗಂಭೀರತೆಯನ್ನು ಅರಿತು ಇದೇ ತಿಂಗಳು 26ಕ್ಕೆ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿದೆ.ಎಂದು ಕರ್ನಾಟಕ ಜನಶಕ್ತಿ ಮುಖಂಡರು ತಿಳಿಸಿದರು.

ಹಕ್ಕೊತ್ತಾಯಗಳು :

1) ಬದುಕಾಗಿ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತ, ಕಾರ್ಮಿಕರ ಜಮೀನು ಹಾಗೂ ವಸತಿಗಳಿಗೆ ಈ ಕೂಡಲೇ ಹಕ್ಕು ಪತ್ರ ನೀಡಬೇಕು. 2) ಎಲ್ಲಾ ಗ್ರಾಮಗಳಲ್ಲಿ 1980 ರಿಂದ ಈಚೆಗೆ ದಲಿತ,ಆದಿವಾಸಿಗಳಿಗೆ ಮೀಸಲಾಗಿಟ್ಟಿದ್ದ .(sc/st) ಗೆ ಸರ್ಕಾರವೇ ಮಂಜೂರು ಮಾಡಿರುವ ಭೂಮಿಗೆ ಹಲವರಿಗೆ ಪಹಣಿ, ಪಟ್ಟ ಕೆಲವರಿಗೆ ಇದ್ದು, ಇನ್ನೂ ಮಂಜೂರಾಗಿದ್ದು, ಪಹಣಿಯಲ್ಲಿ ದಾಖಲಾಗಿಲ್ಲದ,ಭೂಮಿಯನ್ನು, ಸೆಕ್ಷನ್ 4, ಮತ್ತು ಸೆಕ್ಷನ್ 17 ಎಂದು ಘೋಷಣೆ ಮಾಡುವ ತಯಾರಿ ನಡೆದಿದ್ದು, ಯಾವುದೇ ಕಾರಣಕ್ಕೂ ಮೀಸಲು ಅರಣ್ಯ ಎಂದು ಘೋ ಷಣೆ ಮಾಡಬಾರದು. 3) ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದೆ, ಯಾವುದೇ ಸರ್ವೆ ಕಾರ್ಯ ಮುಂದುವರಿಸಬಾರದು. 4) ಜನ ಪರಿಸರದ ಉಳಿವಿಗಾಗಿ ಮಲೆನಾಡಿನ ಜನಪರ ಹೋರಾಟಗಾರರು ಸಾಹಿತಿಗಳು, ಜನ ಪರಿಸರವಾದಿಗಳು, ಹಾಗು ಪರಿಸರ ತಜ್ಞರನ್ನೊಳಗೊಂಡ ಒಂದು ಅಧ್ಯಯನ ಸಮಿತಿಯನ್ನು ಈ ಕೂಡಲೇ ರಚಿಸಬೇಕು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಭೂಮಿಯ ರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ; ಸಿ.ಟಿ ರವಿ 

ಚಿಕ್ಕಮಗಳೂರು ನಗರ ಘಟಕದ ವತಿಯಿಂದ ಬಾಳೇಹಳ್ಳಿಯ ಶ್ರೀ ಸಿದ್ದೇಶ್ವರ ಮತ್ತು ಶ್ರೀ...

ಬೀದರ್‌ | ʼಕರೇಜ್‌ʼ ದೇಶದ ಜಲಸಂರಕ್ಷಣೆಗೆ ಮಾದರಿ : ಕೇಂದ್ರದ ಅಧಿಕಾರಿಗಳ ಮೆಚ್ಚುಗೆ

ಬೀದರ್‌ನ ಐತಿಹಾಸಿಕ ʼಕರೇಜ್‌ʼ ಜಲವ್ಯವಸ್ಥೆ ದೇಶದ ಜಲಸಂರಕ್ಷಣೆಗೆ ಮಾದರಿಯಾಗಬಲ್ಲದು ಎಂದು ಕೇಂದ್ರ...

ಅ.17ರಿಂದ ಮೂರು ದಿನಗಳ ಕಾಲ ಅದ್ದೂರಿ ಚಾಮರಾಜನಗರ ದಸರಾ

ಚಾಮರಾಜನಗರದಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ಮೂರು ದಿನಗಳ ಕಾಲ...

ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ ಕಣದಲ್ಲಿ 14 ಅಭ್ಯರ್ಥಿಗಳು; ಅ.23ರಂದು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...