ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ದೆಹಲಿಯಲ್ಲಿ ಮೂವರು ಮಾಜಿ ಸಿಎಂ – ಮಮತಾ, ಪಿಣರಾಯಿ, ಕೇಜ್ರಿವಾಲ್ – ಬಂಧನ

Date:

ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್‌ ರದ್ದತಿಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಸುತ್ತಿರುವ ಸಿಜೆಪಿ ಪ್ರತಿಭಟನೆಯನ್ನು ಬೆಂಬಲಿಸಿ ಬೀದಿಗಿಳಿದಿದ್ದ ಮೂವರು ಮಾಜಿ ಮುಖ್ಯಮಂತ್ರಿಗಾಳದ ಬಂಗಾಳದ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್ ಹಾಗೂ ದೆಹಲಿಯ ಅರವಿಂದ ಕೇಜ್ರಿವಾಲ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

- Advertisement -

ದೆಹಲಿಯ ಸೌತ್ ಅವೆನ್ಯೂಯಿಂದ ಜಂತರ್‌ ಮಂತರ್‌ ಎಡೆಗೆ ಹೊರಟಿದ್ದ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಟಿಎಂಸಿಯ ಡೆರೆಕ್ ಓಬ್ರಿಯಾನ್, ಡೋಲಾ ಸೇನ್ ಹಾಗೂ ಪಕ್ಷದ ಇತರ ಸದಸ್ಯರನ್ನು ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ಅಂತೆಯೇ, ದೆಹಲಿಯಲ್ಲಿರುವ ಕೇರಳ ಭವನದ ಬಳಿಯಿಂದ ಜಂತರ್‌ ಮಂತರ್‌ಗೆ ಹೊರಟಿದ್ದ ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂನ ಹಲವು ನಾಯಕರನ್ನೂ ಪೊಲೀಸರು ಬಂಧಿಸಿ, ಬಂಧನ ಕೇಂದ್ರಕ್ಕೆ ಹೊತ್ತೋಯ್ದಿದ್ದಾರೆ.

ಪೊಲೀಸರ ಈ ದೌರ್ಜನ್ಯನವನ್ನು ಸಿಪಿಎಂ ನಾಯಕರು ತೀವ್ರವಾಗಿ ಖಂಡಿಸಿದ್ದು, “ಕೇಂದ್ರದ ಎನ್‌ಡಿಎ ಸರ್ಕಾರವು ರಾಷ್ಟ್ರ ರಾಜಧಾನಿಯನ್ನು ‘ಮುಕ್ತ ಬಂದೀಖಾನೆ’ಯನ್ನಾಗಿ ಪರಿವರ್ತಿಸಿದೆ. ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಯನ್ನು ನಿಯೋಜಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ದೆಹಲಿಯ ಲೊಧಿ ಎಸ್ಟೇಟ್‌ನಲ್ಲಿರುವ ತಮ್ಮ ನಿವಾಸದಿಂದ ಜಂತರ್‌ ಮಂತರ್‌ಗೆ ಮೆರವಣಿಗೆ ಹೊರಟಿದ್ದ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ, ಎಎಪಿ ಕಾರ್ಯಕರ್ತರು ಮತ್ತು ನಾಯಕರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯುಕ್ತರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಕೇಜ್ರಿವಾಲ್ ಮಾತ್ರವಲ್ಲದೆ, ಎಎಪಿ ನಾಯಕರಾದ ಸಂಜಯ್ ಸಿಂಗ್, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಹಾಗೂ ಚಂಡೀಘಢದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಕಾರ್ಯಕರ್ತರನ್ನು ದೆಹಲಿ ಹಾಗೂ ಇತರೆಡೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | SIR ರದ್ದತಿಗೆ ಆಗ್ರಹ: ಚುನಾವಣಾ ಆಯೋಗ ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಾಕಾರರ ಬಂಧನ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು...

ಗ್ಯಾನೇಶ್ ಕುಮಾರ್, ಮೋದಿ ಇಬ್ಬರೂ ಮನೆಗೆ ಹೋದ ಬಳಿಕ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಹುದ್ದೆಯಿಂದ ನಿರ್ಗಮಿಸಲಿದ್ದಾರೆ, ಪ್ರಧಾನಿ...

ಪ್ರಧಾನಮಂತ್ರಿ ಅಂಬಾನಿ ಕ್ಷಮಿಸಿ: ಭಾರತದಲ್ಲಿ ಸ್ಟಾರ್‌ಲಿಂಕ್ ವಿಳಂಬಕ್ಕೆ ಮುಕೇಶ್ ಅಂಬಾನಿ ವಿರುದ್ಧ ಎಲಾನ್ ಮಸ್ಕ್ ವ್ಯಂಗ್ಯ

ಭಾರತದಲ್ಲಿ ತಮ್ಮ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ‘ಸ್ಟಾರ್‌ಲಿಂಕ್’ ಮಾರುಕಟ್ಟೆಗೆ ಪ್ರವೇಶಿಸುವುದನ್ನು...