ಶಿಕ್ಷಕಿ ಮಾತು ಕೇಳಿ ಕೆನ್ನೆಗೆ ಏಟು; ಮುಸ್ಲಿಂ ವಿದ್ಯಾರ್ಥಿಯನ್ನು ಅಪ್ಪಿಕೊಂಡ ಹಿಂದು ವಿದ್ಯಾರ್ಥಿ

0
10850
  • ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾದ ವಿದ್ಯಾರ್ಥಿಗಳಿಬ್ಬರು ಅಪ್ಪಿಕೊಂಡ ವಿಡಿಯೋ
  • ‘ದ್ವೇಷದ ಗಾಯಕ್ಕೆ ಪ್ರೀತಿಯ ಮುಲಾಮು ಹಚ್ಚಿದರೈತ ಮುಖಂಡರು : ನೆಟ್ಟಿಗರಿಂದ ಶ್ಲಾಘನೆ

ಶಿಕ್ಷಕಿಯ ಮಾತು ಕೇಳಿ ಮುಸ್ಲಿಂ ವಿದ್ಯಾರ್ಥಿಯೋರ್ವನ ಕೆನ್ನೆಗೆ ಇತರೆ ವಿದ್ಯಾರ್ಥಿಗಳು ಬಾರಿಸಿದ್ದ ಘಟನೆಯು ದೇಶಾದ್ಯಂತ ಚರ್ಚೆಗೊಳಗಾಗಿರುವ ನಡುವೆಯೇ ರೈತ ಮುಖಂಡರ ನಡೆಯು ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.

ಸದ್ಯ ದೇಶಾದ್ಯಂತ ಚರ್ಚೆಗೊಳಗಾಗಿರುವ ಮುಝಾಫರ್ ನಗರದ ಘಟನೆಯ ವಿಡಿಯೋ ವೈರಲಾದ ವಿಷಯ ಅರಿತ ಭಾರತೀಯ ಕಿಸಾನ್ ಯೂನಿಯನ್‌ ಮುಖಂಡ ನರೇಶ್ ಟಿಕಾಯತ್ ನೇತೃತ್ವದ ರೈತ ಮುಖಂಡರ ತಂಡ, ಮುಝಾಫರ್ ನಗರದ ಖುಬ್ಬಾಪುರ ಗ್ರಾಮಕ್ಕೆ ಭೇಟಿ ನೀಡಿತು. ಬಳಿಕ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬದೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ನರೇಶ್ ಟಿಕಾಯತ್, “ಈ ಘಟನೆ ನಾಚಿಕೆಗೇಡಿನ ಸಂಗತಿ. ಧರ್ಮದ ಕಾರಣಕ್ಕೆ ಪರಸ್ಪರ ಪ್ರೀತಿಯ ವಾತಾವರಣವನ್ನು ಕೆಡಲು ನಾವು ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆ ಬಳಿಕ ಕೆನ್ನೆಗೆ ಹೊಡೆದಿದ್ದ ಹಿಂದು ವಿದ್ಯಾರ್ಥಿ ಮತ್ತು ಹೊಡೆತ ತಿಂದಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ಹತ್ತಿರಕ್ಕೆ ಕರೆದು ಪರಸ್ಪರ ಅಪ್ಪಿಕೊಳ್ಳುವಂತೆ ಸೂಚಿಸಿದರು.

ಆಲಿಂಗಿಸಿಕೊಂಡ ವಿದ್ಯಾರ್ಥಿಗಳಿಬ್ಬರ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ರೈತ ಮುಖಂಡರ ನಡೆಯು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

“ಯಾವ ಟೀಚರ್ ಮಾತು ಕೇಳಿ ಒಂದು ಮಗು ಮತ್ತೊಂದು ಮಗುವಿನ ಕೆನ್ನೆಗೆ ಬಾರಿಸಿತ್ತೋ, ಇವತ್ತು ರೈತ ಮುಖಂಡರುಗಳು ಮುಂದೆ ಬಂದು ಆ ಎರಡು ಮಕ್ಕಳಿಗೆ ಬುದ್ಧಿ ಹೇಳಿ, ಇಬ್ಬರು ಆತ್ಮೀಯವಾಗಿ ತಬ್ಬಿಕೊಳ್ಳುವ ಹಾಗೆ ಮಾಡಿದರು. ಇದೆ ನಮ್ಮ ನಿಜವಾದ ಭಾರತ ದೇಶದ ಸಂಸ್ಕೃತಿ. ದ್ವೇಷದ ಗಾಯಕ್ಕೆ ಪ್ರೀತಿಯ ಮುಲಾಮು ಹಚ್ಚಿದ್ದಾರೆ’ ಎಂದು ಹಲವರು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here