ವಿಜಯಪುರ | ಸದೃಢ ಸಮಾಜ ನಿರ್ಮಾಣಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ: ಅರವಿಂದ ಹಾಗರಗಿ

Date:

ವಯಸ್ಸು ಬದುಕಿನ ಅಂತ್ಯವಲ್ಲ; ಅದು ಅನುಭವ, ಜ್ಞಾನ ಮತ್ತು ಬದುಕಿನ ಪಾಠಗಳ ಸಂಗ್ರಹ. ಹಿರಿಯ ನಾಗರಿಕರು ಕುಟುಂಬಕ್ಕೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಅಮೂಲ್ಯ ಸಂಪತ್ತು. ಅವರ ಜೀವನಾನುಭವ ಹಾಗೂ ಮಾರ್ಗದರ್ಶನ ಯುವ ಪೀಳಿಗೆ ಬಳಸಿಕೊಂಡಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ ಹೇಳಿದರು.

- Advertisement -

ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬದುಕಿನ ಹಲವು ಏಳು-ಬೀಳುಗಳನ್ನು ಕಂಡಿರುವ ಹಿರಿಯರ ಅನುಭವದ ಮಾತುಗಳು ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತವೆ. ಹಿರಿಯರನ್ನು ಕೇವಲ ಆರೈಕೆಯ ಅಗತ್ಯವಿರುವ ವ್ಯಕ್ತಿಗಳಂತೆ ನೋಡುವ ಬದಲು, ಅವರಲ್ಲಿರುವ ಜ್ಞಾನ ಮತ್ತು ಅನುಭವವನ್ನು ಸಮಾಜದ ಸಂಪನ್ಮೂಲವಾಗಿ ಪರಿಗಣಿಸಬೇಕಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಬಿ ಕುಂಬಾರ ಮಾತನಾಡಿ, “ಹಿರಿಯರ ಮಾತುಗಳನ್ನು ಆಲಿಸುವ ಮೂಲಕ ಜೀವನದ ಅನೇಕ ಅಮೂಲ್ಯ ಪಾಠಗಳನ್ನು ಕಲಿಯಬಹುದು. ಕುಟುಂಬದ ನಿರ್ಧಾರಗಳಿಂದ ಹಿಡಿದು ಸಾಮಾಜಿಕ ಬದುಕಿನವರೆಗೆ ಹಿರಿಯರ ಸಲಹೆ-ಮಾರ್ಗದರ್ಶನ ಮಹತ್ವದ ಪಾತ್ರ ವಹಿಸುತ್ತದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ...

ಸರ್ವಜನರ ಹಿತ, ಎಲ್ಲ ಕೆಲಸಗಳಿಗೂ ಸಮಾನ ಗೌರವ ಮತ್ತು ಶಾರೀರಿಕ ಶ್ರಮದ ಘನತೆ-ಗಾಂಧೀಜಿ ಪ್ರತಿಪಾದಿಸಿದ ಈ ಮೂರು ಮೌಲ್ಯಗಳು ಇಂದಿನ ಅಸಮಾನತೆಯ ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಆದರೆ ಅವುಗಳನ್ನು ವೈಯಕ್ತಿಕ ಬದುಕು, ಸಾಮಾಜಿಕ...

ಜಿಡಿಪಿ ಅಂಕಿಅಂಶಗಳ ಆಚೆಗಿನ ವಾಸ್ತವ: ಭಾರತದ ಆರ್ಥಿಕ ಸವಾಲುಗಳ...

ಜಾಗತಿಕ ಆರ್ಥಿಕತೆಯು ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ತಂತ್ರಜ್ಞಾನದ ಕ್ಷಿಪ್ರ ಬದಲಾವಣೆಗಳ ನಡುವೆ ತೊಳಲಾಡುತ್ತಿರುವ ಹೊತ್ತಿನಲ್ಲಿ, ಭಾರತದ ಆರ್ಥಿಕತೆಯ ನಿಜವಾದ ಸ್ಥಿತಿಗತಿ ಏನು? ನಾವು ಸಾಗುತ್ತಿರುವ ಹಾದಿ ನಮ್ಮನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಬಲ್ಲದೇ? ಈ...

ಇಸ್ರೇಲ್ ಪ್ರಧಾನಿ ಪಟ್ಟಕ್ಕೇರಲು ಗಾಡಿ ಐಸೆನ್ಕೋಟ್ ಮಾಡಿಕೊಳ್ಳಬೇಕಾದ ಪ್ರಮುಖ...

ಇಸ್ರೇಲ್‌ನ ಚುನಾವಣೆ ಮುಗಿದ್ದು, ಅತಂತ್ರ ಪರಿಸ್ಥಿತಿ ಇದೆ. ಹೊಸ ಸರ್ಕಾರ ರಚನೆಗೆ ಮಾಜಿ ಸೇನಾ ಮುಖ್ಯಸ್ಥ, ನ್ಯಾಷನಲ್ ಯೂನಿಟಿ ಪಕ್ಷದ ನಾಯಕ ಗಾಡಿ ಐಸೆನ್ಕೋಟ್ ಅವರನ್ನು ಅಧ್ಯಕ್ಷರು ಆಹ್ವಾನಿಸಿದ್ದಾರೆ. ಆದರೆ, ಅವರ ಪಕ್ಷವು...

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಂತೋಷ ಎಚ್., ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಪಿ. ಬಿರಾದಾರ ಕಡೇವಾಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಬಿ.ಎಲ್.ಡಿ.ಇ. ಸಂಸ್ಥೆಯ ಹಿರಿಯ ನಾಗರಿಕರ ಸೇವಾ ವಿಭಾಗದ ವೈದ್ಯ ಡಾ. ಅಂಬ್ಲಿಗಿ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಎಸ್.ಎಲ್. ಇಂಗಳೇಶ್ವರ, ಡಿವೈಎಸ್ಪಿ ಮುರಿಗೆಪ್ಪ ಉಪಾಸೆ, ವಿಶ್ರಾಂತ ಪ್ರಾಚಾರ್ಯ ಎಸ್.ಎಸ್. ಬಸವರೆಡ್ಡಿ ಹಾಗೂ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಗದೀಶ ಕೆ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಮಿಂಚಿದ ಹಿರಿಯರು

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆರೋಗ್ಯ ತಪಾಸಣೆಗೆ ಆದ್ಯತೆ

ಹಿರಿಯರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ವಿಶೇಷ ಆರೋಗ್ಯ ತಪಾಸಣಾ ವ್ಯವಸ್ಥೆ ಮಾಡಿದ್ದರು. ಹಿರಿಯ ನಾಗರಿಕರಿಗೆ ಮಧುಮೇಹ ಹಾಗೂ ರಕ್ತದೊತ್ತಡದ ಉಚಿತ ತಪಾಸಣೆ ನಡೆಸಲಾಯಿತು.

ಹಿರಿಯರ ಗೌರವ, ಆರೋಗ್ಯ, ಸುರಕ್ಷತೆ ಹಾಗೂ ಸಾಮಾಜಿಕ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡುವ ಮೂಲಕ ಅವರ ಅನುಭವವನ್ನು ಸಮಾಜದ ಪ್ರಗತಿಗೆ ಬಳಸಿಕೊಳ್ಳಬೇಕೆಂಬ ಸಂದೇಶ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ‘ನವೋನ್ಮೇಶ್ 2026’: ಕೆನರಾ ವಿಕಾಸ್ ಪಿಯು ಕಾಲೇಜಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿ

ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ರಾಜ್ಯಮಟ್ಟದ...

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ; 99.32 ಲಕ್ಷ ಹೆಸರುಗಳು ಔಟ್‌!

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಳಿಕ ಕರ್ನಾಟಕದ ಅಂತಿಮ ಮತದಾರರ...