ಗದಗ ತಾಲೂಕ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ 1633ನೇ ವಾರದ ಶಿವಾನುಭವದಲ್ಲಿ ಮಕ್ಕಳಿಂದ ವಚನಗೋಷ್ಠಿ ಹಾಗೂ ವಚನ ಅನುಭಾವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ದೇಶಿಸಿ ಸಮಾಜ ಸೇವಕ ಮಲ್ಲಿಕಾರ್ಜುನ ಗ. ಖಂಡಮ್ಮನವರ ಮಾತನಾಡಿ, “ದೇಹವನ್ನು ದಣಿಸಿ ಮಾಡುವ ಕೃಷಿ, ನೇಯ್ಗೆ, ಕಮ್ಮಾರಿಕೆ, ಕುಂಬಾರಿಕೆ ಹೀಗೆ ಅನಂತ ಶ್ರಮಿಕ ವರ್ಗ ಮಾಡುವ ಕಾಯಕ. ಬುದ್ದಿಯನ್ನು ದುಡಿಸಿ ಜ್ಞಾನದ ಬಲದಿಂದ ಮಾಡುವ ಕೆಲಸಗಳೂ ಪವಿತ್ರ ಕಾರ್ಯಗಳೇ. ವೈದ್ಯ ವೃತ್ತ ಸಾಮಾಜಿಕ ರಂಗದಲ್ಲಿ ಯೋಜನೆ ರೂಪಿಸುವ ಅಭಿಯಂತರರ ಶಿಕ್ಷಕರು, ಸಾಹಿತಿಗಳು, ನ್ಯಾಯಾಧೀಶರು ಸರಕಾರಿ ಯಂತ್ರದಲ್ಲಿ ದುಡಿಯುವಂಥ ನೌಕರೆಲ್ಲರ ಪ್ರಾಮಾಣಿಕ ದುಡಿಮೆಯೂ ಕಾರ್ಯವೆನಿಸುವದು” ಎಂದರು.
“ಕಾಯಕದ ಎರಡು ಪ್ರಕಾರಗಳಾದರೆ ಮೂರನೆಯದು ತಮ್ಮಲ್ಲಿರುವ ಸಂಪತ್ತನ್ನು ತೊಡಗಿಸಿ ಮಾಡುವ ವ್ಯಾಪಾರ- ವ್ಯವಹಾರ ಉದ್ದಿಮೆಗಳು. ಹೀಗೆ ದೇಹ-ಬುದ್ದಿ-ಧನ ಯಾವುದನ್ನು ಬಳಸಿ ದುಡಿದರೂ ಸತ್ಯ ಶುದ್ಧವಾಗಿರಬೇಕೆ ಹೊರತು ದುರಾಶೆಯಿಂದ ಮೋಸದಿಂದ ಸಂಗ್ರಹಿಸಲು ಪ್ರಯತ್ನಿಸಬಾರದು” ಎಂದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಗ್ರಾಮದ ರೈತ ಸಂಘದ ಅಧ್ಯಕ್ಷರು ಮಂಜನಗೌಡ ರಾಮನಗೌಡರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಲ್ಲಿಕಾರ್ಜುನ ಖಂಡಮ್ಮನವರ, ಶ್ರೀಮತಿ ಶಿಲ್ಪಾ ಖಂಡಮ್ಮನವರ, ಶ್ರೀಮತಿ ಜಯಶ್ರೀ ಖಂಡಮ್ಮನವರ, ಮದನ ಹುಯಿಲಗೋಳ, ಶ್ರೀಮತಿ ರಾಧಾ ರ. ದುಂದೂರ ಉಪಸ್ಥಿತರಿದ್ದರು. ಸ್ವಾಗತ ನಿರೂಪಣೆ ಅಚ್ಚುಕಟ್ಟಾಗಿ ಶಿವಾನಂದ ವಾಲಿಕಾರ ನಡೆಸಿಕೊಟ್ಟರು. ಕೊನೆಗೆ ವಚನ ಮಂಗಲಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತೆಂದು ಪ್ರಶಾಂತ ರಣತೂರ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
This video cannot be played in your browser. Open the video directly





