ಉಡುಪಿ | ಶ್ರೀಕೃಷ್ಣ ಮಠದ ವಸತಿಗೃಹದಲ್ಲಿ ಮುಸ್ಲಿಂ ಯುವತಿಗೆ ವಸತಿ ನಿರಾಕರಣೆ: ಸಿಪಿಐ(ಎಂ) ಖಂಡನೆ

Date:

ಹಿಂದೂ ಕುಟುಂಬದ ಸ್ನೇಹಿತೆಯೊಂದಿಗೆ ಪ್ರವಾಸಕ್ಕಾಗಿ ಉಡುಪಿಗೆ ಬಂದಿದ್ದ ಬಳ್ಳಾರಿಯ ಯುವತಿಯೊಬ್ಬರಿಗೆ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕೆ ರಾತ್ರಿ ಉಳಿದುಕೊಳ್ಳಲು ಅನುಮತಿ ನಿರಾಕರಿಸಿದ ಮಠದ ವಸತಿ ಗೃಹದ ಅಧಿಕಾರಿಗಳ ಕೃತ್ಯವನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಧರ್ಮದ ಆಧಾರದ ಮೇಲೆ ಇಂತಹ ವಸತಿ ನಿರಾಕರಣೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮಠದ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಘಟನೆಯ ವಿವರ: ಬಳ್ಳಾರಿ ಜಿಲ್ಲೆಯ ಮಸ್ಲಿಂ ಯುವತಿ ತನ್ನ ಸ್ನೇಹಿತೆ ಶಕುಂತಲಾ ಮತ್ತು ಅವರ ಕುಟುಂಬದೊಂದಿಗೆ ಪ್ರವಾಸಕ್ಕಾಗಿ ಉಡುಪಿ ಜಿಲ್ಲೆಗೆ ಆಗಮಿಸಿದ್ದು ಕೃಷ್ಣ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅಕ್ಟೋಬರ್ 3ನೇ ತಾರೀಕಿನ ರಾತ್ರಿ ಉಳಿದುಕೊಳ್ಳಲು ಕೃಷ್ಣ ಮಠದ ವಸತಿ ಗೃಹಕ್ಕೆ ಆಗಮಿಸಿದ್ದರು.‌ ಅಷ್ಟು ಹೊತ್ತಿಗೆ ರಾತ್ರಿ 8 ಗಂಟೆ ಕಳೆದಿತ್ತು. ಎಲ್ಲರ ಆಧಾರ್ ಕಾರ್ಡ್ ಪರಿಶೀಲಿಸಿದ ವಸತಿಗ್ರಹದ ಅಧಿಕಾರಿಗಳು ಮುಸ್ಲಿಂ ಯುವತಿಗೆ ರಾತ್ರಿ ಉಳಿದುಕೊಳ್ಳಲು ಅವಕಾಶ ನೀಡಲಿಲ್ಲ. ಸ್ನೇಹಿತೆ ಶಕುಂತಲಾ ಅವರ ಕುಟುಂಬದ ಹಿರಿಯರು, ಆಕೆ ನಮ್ಮ ಮೊಮ್ಮಗಳು ಇದ್ದಂತೆ, ಅಲ್ಲದೆ ರಾತ್ರಿ ಹೊತ್ತಿನಲ್ಲಿ ಅಪರಿಚಿತ ನಗರದಲ್ಲಿ ಒಬ್ಬಳೇ ಎಲ್ಲಿಗೆ ಹೋಗುವುದು ಎಂದು ಅಂಗಲಾಚಿದರೂ ಕೇಳಲಿಲ್ಲ.

ಹಿಂದೆ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ತನ್ನ ಕಾರಿನ ಚಾಲಕ ಮುಸ್ಲಿಂ ಧರ್ಮವನ್ನು ಅನುಸರಿಸುವವನಾಗಿದ್ದರೂ, ಅವರನ್ನು ಆದರದಿಂದ ನೋಡುತ್ತಿದ್ದುದು ಮಾತ್ರವಲ್ಲದೆ ಇಫ್ತಾರ್ ಕೂಟವನ್ನೂ ಆಯೋಜಿಸಿದ್ದರು.

ಉಡುಪಿಯ ಕೊಡುಗೈ ದಾನಿಯೆಂದೇ ಹೆಸರು ಹೊಂದಿದ್ದ ಶ್ರೀ ಹಾಜಿ ಅಬ್ದುಲ್ಲಾ ಸಾಹೇಬ್ ಅವರು ಮಠದ ಭಕ್ತರಾಗಿದ್ದು ಮಾತ್ರವಲ್ಲ ದೀಪೋತ್ಸವ ಸಂದರ್ಭದಲ್ಲಿ ತೊಂದರೆಗೆ ಒಳಗಾದ ಮಠಕ್ಕೆ ದೀಪದ ಎಣ್ಣೆ ಒದಗಿಸಿರುವುದನ್ನು ಉಡುಪಿಯ ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಇಂತಹ ಸೌಹಾರ್ದ ಪರಂಪರೆ ಇರುವ ಉಡುಪಿಯಲ್ಲಿ ಮತ್ತು ಮಠದಲ್ಲಿ ರಾತ್ರಿ ಹೊತ್ತಿನಲ್ಲಿ ಮುಸ್ಲಿಂ ಯುವತಿಯೊಬ್ಬರಿಗೆ ಉಳಿದುಕೊಳ್ಳಲು ಅವಕಾಶ ನೀಡದೆ ಇರುವುದು ಅಕ್ಷಮ್ಯ ಅಪರಾಧ.

ಇಂತಹ ಘಟನೆಗಳು ಮರುಕಳಿಸಬಾರದೆಂದು ಮಠದ ಅಧಿಕಾರಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

ಗದಗ ಜಿಲ್ಲೆಯ ಮುಳಗುಂದದ ಶ್ರೀ ಆರ್. ಎನ್. ದೇಶಪಾಂಡೆ ಸರ್ಕಾರಿ ಪ್ರಥಮ...

ಶಿವಮೊಗ್ಗ | ಸಿಇಒ ಹೇಮಂತ್‌ಗೆ ಬೀಳ್ಕೊಡುಗೆ; ನೂತನ ಸಿಇಒ ರಿಷಿ ಆನಂದ್‌ ಸ್ವಾಗತಿಸಿದ ಜಿ.ಪಂ

ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ನಿಕಟಪೂರ್ವ...

ಅಭಿಮಾನಿಗಳ ಆಸೆಯಂತೆ ದಸರೆಗೆ ಮರಳಿದ ಅಭಿಮನ್ಯು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಕೊಡಗಿನ ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು...

ದೆಹಲಿಯಲ್ಲಿ ಪತ್ರಕರ್ತೆಯರ ಮೇಲೆ ಪೊಲೀಸ್ ದೌರ್ಜನ್ಯ: ಕ್ರಮಕ್ಕೆ ಶಿವಮೊಗ್ಗ ಕಾನಿಪಸ ಆಗ್ರಹ

ದೆಹಲಿಯ ಜಂತರ್‌ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜಿನಾಮೆಗೆ ಆಗ್ರಹಿಸಿ ನಡೆಯುತ್ತಿರುವ...