ಮೇಕೆಗೂ ರೈಲು ಪ್ರಯಾಣದ ಟಿಕೆಟ್ ತೆಗೆದುಕೊಂಡಿದ್ದ ಬಡ ವೃದ್ಧೆ: ಮೆಚ್ಚಿದ ನೆಟ್ಟಿಗರು, ವಿಡಿಯೋ ವೈರಲ್

Date:

  • ವೃದ್ಧ ದಂಪತಿಯ ಪ್ರಾಮಾಣಿಕತೆಯನ್ನು ಮೆಚ್ಚಿದ ನೆಟ್ಟಿಗರು
  • ಮೇಕೆ ಕೇವಲ ಪ್ರಾಣಿಯಲ್ಲ, ಅವಳ ಕುಟುಂಬದ ಭಾಗ’ ಎಂದ ನೆಟ್ಟಿಗ

ರೈಲಿನಲ್ಲಿ ತನ್ನ ಮೇಕೆಯೊಂದಿಗೆ ಪ್ರಯಾಣಿಸುತ್ತಿದ್ದ ಬಡ ವೃದ್ಧ ಮಹಿಳೆಯೊಬ್ಬರು ತಮಗೆ ಮಾತ್ರವಲ್ಲದೇ, ಮೇಕೆಗೂ ಟಿಕೆಟ್ ಪಡೆದುಕೊಂಡು ಸುದ್ದಿಯಾಗಿದ್ದಾರೆ.

- Advertisement -

ರೈಲಿನಲ್ಲಿ ಟಿಟಿಇ ರೈಲ್ವೆ ಟಿಕೆಟ್ ಪರಿಶೀಲನೆಯ ವೇಳೆ ಈ ಬೆಳವಣಿಗೆ ನಡೆದಿದ್ದು, ಟಿಟಿಇಯ ‘ಬಾಡಿ ವೋರ್ನ್’ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಬಡ ವೃದ್ಧ ಮಹಿಳೆ ತನ್ನ ಪತಿ ಹಾಗೂ ಮೇಕೆಯೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಟಿಕೆಟ್ ಪರಿಶೀಲನೆಗೆಂದು ಬಂದ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (TTE) ಅಧಿಕಾರಿ, ಟಿಕೆಟ್ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಹೌದು ಇದೆ ಎಂದು ಉತ್ತರಿಸಿದ ವೃದ್ಧ ಮಹಿಳೆ ತನ್ನ ಪತಿಯ ಬಳಿಯಲ್ಲಿ ಅಧಿಕಾರಿಗೆ ಟಿಕೆಟ್ ತೋರಿಸುವಂತೆ ತಿಳಿಸಿದ್ದಾರೆ.

ಪರಿಶೀಲನೆಯ ಸಂದರ್ಭ, “ನಮಗಿಬ್ಬರಿಗೆ ಮಾತ್ರವಲ್ಲ. ನನ್ನ ಮೇಕೆಗೂ ಸೇರಿ ಮೂರು ಟಿಕೆಟ್ ತೆಗೆದುಕೊಂಡಿದ್ದೇನೆ” ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಆಕೆಯ ಈ ಹೇಳಿಕೆಯ ವಿಡಿಯೋ ಟಿಟಿಇಯ ‘ಬಾಡಿ ವೋರ್ನ್’ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಯಾವಾಗಿನದ್ದು, ಯಾವ ರೈಲಿನಲ್ಲಿ ಪ್ರಯಾಣಿಸಿದ್ದು ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ವೈರಲ್ ಆಗಿದ್ದು, ಬಡ ಮಹಿಳೆಯ ಪ್ರಾಮಾಣಿಕತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

viral

“ಆಕೆಯ ಬಳಿಯಲ್ಲಿರುವ ಮೇಕೆ ಆಕೆಗೆ ಕೇವಲ ಪ್ರಾಣಿಯಲ್ಲ. ಅದು ಅವಳ ಕುಟುಂಬದ ಭಾಗ. ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸುವಾಗ ಟಿಕೆಟ್ ಪಡೆಯದಿರಲು ಸಾಧ್ಯವೇ? ಸಮಾನತೆಯ ಪಾಠವನ್ನು ನಾವು ಇಂಥವರಿಂದ ಕಲಿಯಬೇಕು. ಹಲವರಿಗೆ ಇವರು ಮಾದರಿ. ಎಂತಹ ದೊಡ್ಡ ಮನಸ್ಸು. ಆಕೆಯ ಆತ್ಮವಿಶ್ವಾಸದ ನಗುವೇ ಎಲ್ಲವನ್ನೂ ಹೇಳುತ್ತದೆ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

“ಇಂತಹವರು ನಮ್ಮ ದೇಶದ ಹೆಮ್ಮೆ. ಪ್ರಾಮಾಣಿಕ ಭಾರತೀಯ ಪ್ರಜೆ ಈಕೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಂತಾಮಣಿ | ರೇಷ್ಮೆ ಕೃಷಿ ಕಾಲೇಜು ವಿದ್ಯಾರ್ಥಿಗಳಿಂದ ಉಚಿತ ಜಾನುವಾರು ತಪಾಸಣಾ ಶಿಬಿರ ಆಯೋಜನೆ

ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಗ್ರಾಮದಲ್ಲಿ ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ...

ಚಿಕ್ಕಮಗಳೂರು | ಮೂಗ್ತಿಹಳ್ಳಿ-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಶೀಘ್ರದಲ್ಲಿ ಆರಂಭ; ಕೋಟ ಶ್ರೀನಿವಾಸ್ ಪೂಜಾರಿ 

ಮೂಗ್ತಿಹಳ್ಳಿ-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆಯ ಮೊದಲ ಹಂತದ ಕಾಮಗಾರಿ ಇನ್ನೊಂದು...

ಉತ್ತರ ಕನ್ನಡ | ಸೆ. 5ರಂದು ಪ್ರಜಾಸೇವೆ ಆಂದೋಲನ: ಜನರ ಬಳಿಗೆ ಆಡಳಿತ, ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ

ಉತ್ತರ ಕನ್ನಡ: ರಾಜ್ಯದ ಜನತೆಯ ಅಹವಾಲುಗಳನ್ನು ಆಲಿಸಿ, ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ...

ಹಾಸನ | ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸಿದ ಅಧಿಕಾರಿಗಳು 

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ತೇಜಸ್ವಿ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದ...