ಇರಾನ್‌ ಯುದ್ಧವನ್ನು ಟ್ರಂಪ್ ಸುಲಭವಾಗಿ ನಿಲ್ಲಿಸಲು ಸಾಧ್ಯವಿಲ್ಲ; ಯಾಕೆ ಗೊತ್ತೇ?

Date:

ಮಾರ್ಚ್ 23 ರಂದು, ಅಮೆರಿಕದ ಮಾರುಕಟ್ಟೆಗಳು ತೆರೆಯುವ ಹೊತ್ತಿಗೆ ಇರಾನ್‌ಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ನೀಡಿದ್ದ 48 ಗಂಟೆಗಳ ಗಡುವು ಮುಗಿಯುವ ಹಂತದಲ್ಲಿತ್ತು. ಅದೇ ಸಮದಯಲ್ಲಿ ಟ್ರಂಪ್ ಮತ್ತೊಂದು ಅಚ್ಚರಿಯ ಹೇಳಿಕೆ ಘೋಷಿಸಿದರು. ಮುಂದಿನ ಐದು ದಿನಗಳ ಕಾಲ ಇರಾನ್‌ನ ಇಂಧನ ಮತ್ತು ಪರಮಾಣು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸದಂತೆ ತಮ್ಮ ಮಿಲಿಟರಿ ಅಧಿಕಾರಿಗಳಿಗೆ ಸೂಚಿಸಿದರು.

- Advertisement -

ಈ ಘೋಷಣೆಗೆ ಮಾರುಕಟ್ಟೆಗಳು ಸಕಾರಾತ್ಮಕವಾಗಿ ಸ್ಪಂದಿಸಿದರೂ ಟ್ರಂಪ್ ಉದ್ದೇಶವನ್ನು , ಇರಾನ್ ಮಾತ್ರ ಒಪ್ಪುವಂತೆ ಕಾಣುತ್ತಿಲ್ಲ. ಅಮೆರಿಕದೊಂದಿಗೆ ನಾವು ಯಾವುದೇ ನೇರ ಅಥವಾ ಪರೋಕ್ಷ ಮಾತುಕತೆ ನಡೆಸುತ್ತಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇಸ್ರೇಲ್ ಕೂಡ ಟ್ರಂಪ್ ಅವರ ಈ ನಿರ್ಧಾರಕ್ಕೆ ಸಾಥ್ ನೀಡಿಲ್ಲ. ತನ್ನ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಗಳನ್ನೇ ಇಸ್ರೇಲ್ ಮುಂದುವರಿಸಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇರಾನ್ ಮತ್ತು ಇಸ್ರೇಲ್ ರಾತ್ರಿಯಿಡೀ ಪರಸ್ಪರ ಕ್ಷಿಪಣಿ ದಾಳಿಗಳನ್ನು ಮುಂದುವರಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಈ ಬೆಳವಣಿಗೆಯ ಬೆನ್ನಲ್ಲೇ, ಯುದ್ಧದಿಂದ ಹೊರಬರಲು ಯಾವುದಾದರೂ ದಾರಿ ಇರಬಹುದೇ ಎಂಬ ಚರ್ಚೆ ಅಮೆರಿಕದಲ್ಲಿ ಶುರುವಾಗಿದೆ. ಇರಾನ್ ಮೇಲಿನ ಯುದ್ಧ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಅಮೆರಿಕ ಏಕಪಕ್ಷೀಯವಾಗಿ ವಿರಾಮ ಘೋಷಿಸಿದ್ದರೂ, ಯುದ್ಧ ನಿಲ್ಲುವ ಅಥವಾ ಕದನ ವಿರಾಮದ ಯಾವುದೇ ಲಕ್ಷಣಗಳಿಲ್ಲ.

ಯುದ್ಧದ ಗುರಿಗಳನ್ನು ಸಂಪೂರ್ಣವಾಗಿ ಸಾಧಿಸಲಾಗಿದೆ, ಇರಾನ್ ಧ್ವಂಸವಾಗಿದೆ ಹಾಗೂ ಇರಾನಿನ ಸಶಸ್ತ್ರ ಪಡೆಗಳನ್ನು 100% ನಾಶಪಡಿಸಲಾಗಿದೆ ಎಂದು ಅಧ್ಯಕ್ಷ ಟ್ರಂಪ್ ಪದೇ ಪದೇ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕ ಈ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ‘ಮುಕ್ತಾಯಗೊಳಿಸುವ’ ಬಗ್ಗೆ ಚಿಂತಿಸುತ್ತಿದೆ ಎಂದೂ ಹೇಳಿದ್ದಾರೆ. ಆದರೂ, ಯುದ್ಧ ಮಾತ್ರ ನಿರಂತರವಾಗಿ ಸಾಗುತ್ತಿದೆ. ವಾಸ್ತವವಾಗಿ, ಪ್ರತಿ ದಿನವೂ ಸಂಘರ್ಷದ ವ್ಯಾಪ್ತಿ ವಿಸ್ತರಿಸುತ್ತಿದೆ. ಈ ಸಂಘರ್ಷವು ಕೇವಲ ಈ ಪ್ರದೇಶಕ್ಕೆ ಮಾತ್ರವಲ್ಲದೆ ಇಡೀ ಜಾಗತಿಕ ಸಮುದಾಯಕ್ಕೆ ನೀಡುತ್ತಿರುವ ಬೆದರಿಕೆ ಹೆಚ್ಚು ಗಂಭೀರವಾಗುತ್ತಿದೆ.

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಪ್ರಾರಂಭಿಸಿದಾಗ, ಮೂಲಭೂತವಾಗಿ ಮೂರು ಘೋಷಿತ ಉದ್ದೇಶಗಳಿದ್ದವು:

  1. ಇರಾನ್ ನಾಯಕತ್ವ, ಅದರ ಮಿಲಿಟರಿ, ಮೂಲಸೌಕರ್ಯ ಹಾಗೂ ಆರ್ಥಿಕತೆಯ ಮೇಲೆ ಇರಾನ್ ಮರಳಿ ಹೋರಾಡಲು ಸಾಧ್ಯವಾಗದ ಮಟ್ಟಿಗೆ ಭೀಕರ ದಾಳಿ ನಡೆಸುವುದು. ಇದರ ಪರಿಣಾಮವಾಗಿ, ಅಲ್ಲಿನ ಆಡಳಿತವು ಮಂಡಿಯೂರಬೇಕು ಅಥವಾ ಅಲ್ಲಿನ ಜನರೇ ಬೀದಿಗೆ ಬಂದು ಆಡಳಿತವನ್ನು ಕಿತ್ತೊಗೆಯಬೇಕು ಎಂಬುದು ಮೊದಲ ಗುರಿ.
  2. ಇಸ್ರೇಲ್‌ನ ಅಸ್ತಿತ್ವಕ್ಕೆ ಬೆದರಿಕೆಯೆಂದು ಪರಿಗಣಿಸಲಾದ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮವನ್ನು ಧ್ವಂಸಗೊಳಿಸುವುದು.
  3. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ತಯಾರಿಸಲು ಸಾಧ್ಯವಾಗದಂತೆ ಅದರ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಾಶಪಡಿಸುವುದು.

ಈ ಉದ್ದೇಶಗಳೊಂದಿಗೆ ಇರಾನ್‌ ಮೇಲೆ ಇಸ್ರೇಲ್- ಅಮೆರಿಕ ಮಾರಕ ದಾಳಿ ನಡೆಸಿದವು. ಮೊದಲ ದಿನವೇ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರನ್ನು ಹತ್ಯೆಗೈದವು. ನಂತರ, ನಡೆದ ಸರಣಿ ಹತ್ಯೆಗಳಲ್ಲಿ ಮಿಲಿಟರಿ ಕಮಾಂಡರ್‌ಗಳು ಸೇರಿದಂತೆ 40ಕ್ಕೂ ಹೆಚ್ಚು ಉನ್ನತ ಅಧಿಕಾರಿಗಳನ್ನು ಅಮೆರಿಕ-ಇಸ್ರೇಲ್‌ ಕೊಂದವು. ಇರಾನ್‌ನ ಕ್ಷಿಪಣಿ ಸಾಮರ್ಥ್ಯವನ್ನು ಕುಂದಿಸಲು ಶಸ್ತ್ರಾಸ್ತ್ರ ಡಿಪೋಗಳು ಮತ್ತು ಕ್ಷಿಪಣಿ ಲಾಂಚರ್‌ಗಳನ್ನು ನಾಶಪಡಿಸಲಾಯಿತು. ಬಳಿಕ, ಇರಾನ್ ಅನ್ನು ಆರ್ಥಿಕವಾಗಿ ಕುಂದಿಸಲು ಗ್ಯಾಸ್ ಫೀಲ್ಡ್ ಮತ್ತು ತೈಲ ಡಿಪೋಗಳ ಮೇಲೆ ದಾಳಿ ಮಾಡಲಾಯಿತು.

ಅಮೆರಕದ ಲೆಕ್ಕಾಚಾರದ ಪ್ರಕಾರ, ಕಾರ್ಯಾಚರಣೆಯು ಒಂದೆರಡು ದಿನಗಳಲ್ಲಿ ಮುಗಿಯಬೇಕಿತ್ತು. ಆದರೆ, ಅಮೆರಿಕದ ಅಂದಾಜುಗಳು ಸಂಪೂರ್ಣವಾಗಿ ತಪ್ಪಾಯಿತು. ಯಾಕೆಂದರೆ, ಇರಾನ್ ಪ್ರಬಲವಾಗಿ ಪ್ರತಿಕ್ರಿಯಿಸಿತು. ಇರಾನ್ ಇಂದಿಗೂ ಗಟ್ಟಿಯಾಗಿ ನಿಂತು ಕಠಿಣ ಹೋರಾಟ ನೀಡುತ್ತಿದೆ. ಪ್ರತಿ ಹೊಸ ಸಂಘರ್ಷದ ನಂತರವೂ ಇರಾನ್ ಹೆಚ್ಚು ಬಲವಾಗಿ ಪ್ರತಿದಾಳಿ ಮಾಡುತ್ತಿದೆ. ಇದು ಅಮೆರಿಕವು ಯುದ್ಧದಿಂದ ಬೇಗನೆ ಹೊರಬರುವುದನ್ನು ಕಷ್ಟಕರವಾಗಿಸಿದೆ.

ಇನ್ನು, ಜಾಗತಿಕ ಇಂಧನ ಪೂರೈಕೆಯ ಜೀವಾಳವಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿರುವುದು ಈ ಯುದ್ಧದ ಅತಿದೊಡ್ಡ ತಿರುವು. ಜಲಸಂಧಿ ಮುಚ್ಚುವ ಇರಾನ್ ಘೋಷಣೆ ಮತ್ತು ಕೆಲವು ತೈಲ ಟ್ಯಾಂಕರ್‌ಗಳ ಮೇಲೆ ನಡೆಸಿದ ದಾಳಿಗಳು ಹಡಗು ಕಂಪನಿಗಳು ಮತ್ತು ಇನ್ಶೂರೆನ್ಸ್ ಸಂಸ್ಥೆಗಳನ್ನು ಬೆಚ್ಚಿಬೀಳಿಸಿವೆ. ಯಾರೂ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿಲ್ಲದ ಕಾರಣ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ಭಾರತ ಮತ್ತು ಚೀನಾದಂತಹ ದೇಶಗಳು ತಮ್ಮ ಟ್ಯಾಂಕರ್‌ಗಳಿಗೆ ಷರತ್ತುಬದ್ಧ ಹಾದಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೂ, ಜಾಗತಿಕ ಸಂಚಾರಕ್ಕೆ ಈ ಮಾರ್ಗ ಇನ್ನೂ ಮುಚ್ಚಲ್ಪಟ್ಟಿದೆ. ಈ ಸಮಸ್ಯೆ ಬಗೆಹರಿಯದೆ ಅಮೆರಿಕಕ್ಕೆ ತನ್ನ ಕಾರ್ಯಾಚರಣೆಯನ್ನು ಹಿಂತೆಗೆದುಕೊಳ್ಳುವುದು ಮಿಲಿಟರಿ ಮತ್ತು ರಾಜತಾಂತ್ರಿಕವಾಗಿ ಅಸಾಧ್ಯ.

ಹಾರ್ಮುಜ್ ಜಲಸಂಧಿಯನ್ನು ತೆರೆಯುವುದು ಯುದ್ಧ ಅಂತ್ಯಗೊಳಿಸಲು ಅನಿವಾರ್ಯ ಎಂಬುದನ್ನು ಅರಿತ ಟ್ರಂಪ್, ಮಾರ್ಚ್ 21 ರಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದರು: “ಮಾರ್ಚ್ 23 ರೊಳಗೆ ಜಲಸಂಧಿ ಮುಕ್ತವಾಗದಿದ್ದರೆ, ಇರಾನ್‌ನ ಇಂಧನ ಮತ್ತು ವಿದ್ಯುತ್ ಗ್ರಿಡ್‌ಗಳನ್ನು ಅಮೆರಿಕ-ಇಸ್ರೇಲ್ ಮೈತ್ರಿಕೂಟ ನಾಶಪಡಿಸುತ್ತದೆ” ಎಂದು ಬೆದರಿಕೆ ಹಾಕಿದರು.

ಇದಕ್ಕೆ ಇರಾನ್ ಅಷ್ಟೇ ಕಠಿಣವಾಗಿ ಪ್ರತಿಕ್ರಿಯಿಸಿದೆ; ನಮ್ಮ ವಿದ್ಯುತ್ ಗ್ರಿಡ್‌ ಮೇಲೆ ದಾಳಿಯಾದರೆ, ಇಡೀ ಪ್ರದೇಶದ ವಿದ್ಯುತ್ ಮತ್ತು ಸಮುದ್ರದ ನೀರನ್ನು ಶುದ್ಧೀಕರಿಸುವ ಘಟಕಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ. ಗಲ್ಫ್ ರಾಷ್ಟ್ರಗಳು ಕುಡಿಯುವ ನೀರಿಗಾಗಿ ಸಂಪೂರ್ಣವಾಗಿ ಈ ಘಟಕಗಳ ಮೇಲೆ ಅವಲಂಬಿತವಾಗಿರುವುದರಿಂದ, ಇರಾನ್‌ನ ಈ ಬೆದರಿಕೆಯಿಂದ ಕೊಲ್ಲಿ ರಾಷ್ಟ್ರಗಳಿಗೆ ದೊಡ್ಡ ಮಾನವೀಯ ಬಿಕ್ಕಟ್ಟು ಉಂಟಾಗಬಹುದು. ಬಹುಶಃ ಇದೇ ಕಾರಣಕ್ಕೆ ಟ್ರಂಪ್ ಈ ಬೆದರಿಕೆಯ ಸಾಧಕ-ಬಾಧಕಗಳನ್ನು ಮರುಪರಿಶೀಲಿಸಲು ಐದು ದಿನಗಳ ‘ವಿರಾಮ’ ಘೋಷಿಸಿದ್ದಾರೆ.

ಗಮನಾರ್ಹವಾಗಿ, ಯುದ್ಧದ ಆರಂಭಿಕ ಹಂತದಲ್ಲಿ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದರೂ, ಈಗ ಇರಾನ್ ತನ್ನ ಪರಮಾಣು ಸ್ಥಾವರಗಳ ಮೇಲೆ ಯಾವುದೇ ಏಕಪಕ್ಷೀಯ ದಾಳಿಯನ್ನು ಸಹಿಸುವ ಸ್ಥಿತಿಯಲ್ಲಿಲ್ಲ. ಮಾರ್ಚ್ 20ರಂದು ಅಮೆರಿಕವು ನಟಾಂಜ್ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಿದ ಬಳಿಕ, ಇರಾನ್ ಅಸಾಧ್ಯವಾದುದನ್ನು ಮಾಡಿ ತೋರಿಸಿತು. ಅದು ದಕ್ಷಿಣ ಇಸ್ರೇಲ್‌ನ ಡಿಮೋನಾ ನಗರದ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿತು. ಅತ್ಯಂತ ರಹಸ್ಯವಾದ ಮತ್ತು ಭದ್ರತೆ ಹೊಂದಿರುವ ಇಸ್ರೇಲ್‌ನ ಪರಮಾಣು ಸಂಶೋಧನಾ ಕೇಂದ್ರದ ಮೇಲೆಯೇ ಇರಾನ್ ದಾಳಿ ನಡೆಸಿದ್ದು, ಅಮೆರಿಕವನ್ನು ಮತ್ತಷ್ಟು ಅಲುಗಾಡಿಸಿದೆ. ಇರಾನ್ ಕ್ಷಿಪಣಿಗಳು ಇಸ್ರೇಲ್‌ನ ಹಲವು ಪದರಗಳ ರಕ್ಷಣಾ ಕವಚವನ್ನು ಭೇದಿಸಿ ಡಿಮೋನಾವನ್ನು ತಲುಪಿರುವುದು ಸಂಘರ್ಷದ ತೀವ್ರತೆಯನ್ನು ಹೆಚ್ಚಿಸಿದೆ. ಇಸ್ರೇಲ್‌ನ ಪರಮಾಣು ಕೇಂದ್ರಕ್ಕೆ ಇರಾನ್ ನೇರವಾಗಿ ಹಾನಿ ಮಾಡದಿದ್ದರೂ, ಮುಂದಿನ ಹಂತದಲ್ಲಿ ಅದು ಸಂಭವಿಸಿದರೆ ವಿಕಿರಣ ಸೋರಿಕೆಯ ಅಪಾಯವಿದೆ.

ಅಮೆರಿಕದಿಂದ ಸಿಗುತ್ತಿರುವ ಮಾಹಿತಿ ಪ್ರಕಾರ, ಟ್ರಂಪ್ ಆದಷ್ಟು ಬೇಗ ಈ ಯುದ್ಧದಿಂದ ಹೊರಬರಲು ದಾರಿ ಹುಡುಕುತ್ತಿದ್ದಾರೆ. ಇಸ್ರೇಲ್‌ನ ಒತ್ತಾಯಕ್ಕೆ ಮಣಿದು ಯುದ್ಧಕ್ಕೆ ಇಳಿದ ಟ್ರಂಪ್‌, ಇಷ್ಟು ದೀರ್ಘಕಾಲದ ಸಂಘರ್ಷ ಮತ್ತು ಇರಾನ್‌ನಿಂದ ಇಂತಹ ಪ್ರಬಲ ಪ್ರತಿರೋಧವನ್ನು ನಿರೀಕ್ಷಿಸಿರಲಿಲ್ಲ. ಆದರೆ, 2025ರ ಜೂನ್‌ನಲ್ಲಿ ಬಿ-2 ಬಾಂಬರ್‌ಗಳ ಮೂಲಕ ಇರಾನ್ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿ ಯುದ್ಧ ನಿಲ್ಲಿಸಿದಷ್ಟು ಸುಲಭ ಈ ಬಾರಿ ಇಲ್ಲ. ಇರಾನ್‌ನ ತೈಲ ಮತ್ತು ಅನಿಲ ರಫ್ತು ಸಾಮರ್ಥ್ಯವನ್ನು ನಿಯಂತ್ರಿಸಲು ಅದರ ಖಾರ್ಗ್ ದ್ವೀಪದಲ್ಲಿ ವಿಶೇಷ ಪಡೆಗಳನ್ನು ಇಳಿಸುವ ಯೋಜನೆಯನ್ನು ಅಮೆರಿಕ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಇನ್ನು ಕೆಲವು ವರದಿಗಳ ಪ್ರಕಾರ, ಇರಾನ್ ಬಳಿ ಇರುವ 440 ಕೆಜಿ ಸಮೃದ್ಧ ಯುರೇನಿಯಂ ಅನ್ನು ವಶಪಡಿಸಿಕೊಳ್ಳಲು 3,000 ದಿಂದ 5,000 ಮರೀನ್ ಸೈನಿಕರನ್ನು ಭೂಸೇನಾ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗುತ್ತಿದೆ.

ಈ ಲೇಖನ ಓದಿದ್ದೀರಾ?: ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಯುದ್ಧದ ಅಂತ್ಯಕ್ಕೆ ಇನ್ನೊಂದು ದೊಡ್ಡ ಅಡ್ಡಿಯೆಂದರೆ ಇಸ್ರೇಲ್. ಇಸ್ರೇಲ್ ಪಾಲಿಗೆ ಇರಾನ್‌ನಲ್ಲಿ ಆಡಳಿತ ಬದಲಾವಣೆಯಾಗದ ಹೊರತು ಯುದ್ಧ ಮುಗಿಯುವುದಿಲ್ಲ. ಈಗ ಮೊಜ್ತಬಾ ಖಮೇನಿ ಸರ್ವೋಚ್ಚ ನಾಯಕರಾಗಿರುವುದು ಇಸ್ರೇಲ್‌ಗೆ ಹಳೆಯ ನಾಯಕನಿಗಿಂತಲೂ ದೊಡ್ಡ ತಲೆನೋವಾಗಿದೆ.

ಇರಾನ್ ಪಾಲಿಗೆ ಇದು ಕೇವಲ ಸಾವು-ನೋವಿನ ಯುದ್ಧವಲ್ಲ. ತನ್ನ ಸರ್ವೋಚ್ಚ ನಾಯಕ ಮತ್ತು ಉನ್ನತ ನಾಯಕತ್ವವನ್ನು ಕಳೆದುಕೊಂಡಿರುವ ಇರಾನ್ ಈಗ ‘ಅಂತಿಮ ಹೋರಾಟ’ಕ್ಕೆ ನಿಂತಿದೆ. ಅಮೆರಿಕದ ಟೋಮಹಾಕ್ ಕ್ಷಿಪಣಿ ದಾಳಿಯಿಂದ ಟೆಹ್ರಾನ್‌ನ ಶಾಲೆಯೊಂದರಲ್ಲಿ 160ಕ್ಕೂ ಹೆಚ್ಚು ಬಾಲಕಿಯರು ಸಾವನ್ನಪ್ಪಿರುವುದು ಇರಾನ್‌ನ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಇರಾನ್ ತನ್ನ ಘನತೆಯನ್ನು ಮರಳಿ ಪಡೆಯಲು ಬಯಸುತ್ತಿದೆ. ಪರಮಾಣು ಶಕ್ತಿ ಪಡೆಯುವ ತನ್ನ ಹಕ್ಕನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು, ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಬೇಕು ಹಾಗೂ ಅಮೆರಿಕ-ಇಸ್ರೇಲ್ ಇನ್ನು ಮುಂದೆ ತಮ್ಮ ಮೇಲೆ ದಾಳಿ ಮಾಡುವುದಿಲ್ಲ ಎಂಬ ಬಲವಾದ ಭರವಸೆ ನೀಡಬೇಕೆಂದು ಇರಾನ್ ನಿರೀಕ್ಷಿಸುತ್ತಿದೆ.

ಅದಕ್ಕಾಗಿ, ಯುದ್ಧವನ್ನು ಮುಂದುವರೆಸಿದೆ. ಯುದ್ಧದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕುಡಿಯುವ ನೀರಿನ ಘಟಕಗಳ ಮೇಲಿನ ಬೆದರಿಕೆ, ಹಾರ್ಮುಜ್ ಜಲಸಂಧಿ ಮುಚ್ಚಿರುವುದು ಇಡೀ ಜಗತ್ತಿನ ಮೇಲೆ ಆರ್ಥಿಕ ಹೊರೆ ಹೇರುತ್ತಿದೆ. ಟ್ರಂಪ್ ತನಗೊಂದು ಸಣ್ಣ ಮಟ್ಟದ ಜಯ ಸಿಕ್ಕಿದೆ ಎಂದು ಬಿಂಬಿಸಿಕೊಂಡು ಯುದ್ಧದಿಂದ ಹೊರಬರಲು ಯತ್ನಿಸುತ್ತಿದ್ದಾರೆ. ಒಂದು ವೇಳೆ ಅಮೆರಿಕ ಹಿಂದೆ ಸರಿದರೆ, ಈಗಿನ ಪರಿಸ್ಥಿತಿಯಲ್ಲಿ ಇಸ್ರೇಲ್ ಒಬ್ಬಂಟಿಯಾಗಿ ಯುದ್ಧ ಮುಂದುವರಿಸಲು ಸಾಧ್ಯವಿಲ್ಲ. ಇತರ ರಾಷ್ಟ್ರಗಳು ತಮ್ಮೊಂದಿಗೆ ಸೇರಬೇಕೆಂದು ಇಸ್ರೇಲ್ ಬಯಸುತ್ತಿದೆ. ಇನ್ನೊಂದೆಡೆ ಇರಾನ್ ಅತ್ಯಂತ ಎಚ್ಚರಿಕೆಯಿಂದಿದ್ದು, ಯಾವುದೇ ಹೊಸ ಬೆದರಿಕೆಗೆ ಉತ್ತರಿಸಲು ಸಿದ್ಧವಾಗಿದೆ. ತಮ್ಮ ಬೇಡಿಕೆಗಳಿಗೆ ಅಮೆರಿಕ ಮಣಿಯುವವರೆಗೂ ಯುದ್ಧ ಮುಗಿಯುವುದಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...

ಮುಳುಗುತ್ತಿರುವ ಬ್ಯಾಂಕಾಕ್: 50 ಜಿಲ್ಲೆಗಳಲ್ಲಿ ‘ವಿಪತ್ತು’ ಘೋಷಣೆ, ಸ್ತಬ್ಧಗೊಂಡ ಜನಜೀವನ

ಸತತ ಮಳೆಯಿಂದಾಗಿ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ಅಕ್ಷರಶಃ ಜಲಾವೃತಗೊಂಡಿದ್ದು, ನಗರದ ಎಲ್ಲಾ...

ಬದ್ಧವೈರಿಗಳನ್ನು ಬೆಸೆದ ಚುನಾವಣಾ ಆಯೋಗದ ವಿವಾದ: ಒಡಕು ಮರೆತು ಮತ್ತೆ ಒಂದಾಗುತ್ತಿದೆಯೇ ‘ಇಂಡಿಯಾ’ ಒಕ್ಕೂಟ?

ಚುನಾವಣಾ ಆಯೋಗದೊಳಗಿನ ಆಂತರಿಕ ಒಡಕು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...