ಕದನ ವಿರಾಮ ಉಲ್ಲಂಘನೆ: ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆ ಮೇಲೆ ಅಮೆರಿಕ ದಾಳಿ; ಸ್ವರಕ್ಷಣೆ ನೆಪ

Date:

ಶಾಂತಿ ಮಾತುಕತೆಗಳು ಬಹಳ ಸುಸೂತ್ರವಾಗಿ ಸಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುತ್ತಿರುವ ಹೊತ್ತಿನಲ್ಲೇ, ಅಮೆರಿಕ ಮಿಲಿಟರಿಯು ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆಗಳು ಮತ್ತು ಮೈನ್‌ಗಳನ್ನು (ಬಾಂಬ್‌ಗಳನ್ನು) ಅಳವಡಿಸುತ್ತಿದ್ದ ಬೋಟ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ‘ಸ್ವರಕ್ಷಣೆ’ಗಾಗಿ ದಾಳಿ ನಡೆಸಿರುವುದಾಗಿ ನೆಪ ಹೇಳಿಕೊಂಡಿದೆ.

- Advertisement -

ಹಡಗು ಸಂಚಾರದ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಸಮೀಪದಲ್ಲಿರುವ ಬಂದರ್ ಅಬ್ಬಾಸ್ ಬಳಿ ಈ ದಾಳಿಗಳು ನಡೆದಿವೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

“ಇರಾನಿನ ಸೈನಿಕರಿಂದ ಎದುರಾಗಬಹುದಾದ ಭೀತಿಯಿಂದ ಅಮೆರಿಕದ ಪಡೆಗಳನ್ನು ರಕ್ಷಿಸುವ ಉದ್ದೇಶದಿಂದಲೇ ದಾಳಿಗಳನ್ನು ನಡೆಸಲಾಗಿದೆ” ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಹೇಳಿದ್ದಾರೆ.

“ಪ್ರಸ್ತುತ ಜಾರಿಯಲ್ಲಿರುವ ಕದನ ವಿರಾಮದ ಸಮಯದಲ್ಲಿ ಮಿಲಿಟರಿಯು ಅತ್ಯಂತ ಸಂಯಮದಿಂದ ವರ್ತಿಸುತ್ತಿದೆ. ಆದರೆ, ನಮ್ಮ ಪಡೆಗಳ ರಕ್ಷಣೆಗಾಗಿ ಮಾತ್ರ ಈ ದಾಳಿಗಳನ್ನು ಕೈಗೊಳ್ಳಬೇಕಾಯಿತು” ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಆದಾಗ್ಯೂ, ದಕ್ಷಿಣ ಇರಾನ್‌ನಲ್ಲಿ ಅಮೆರಿಕ ಪಡೆಗಳಿಗೆ ಎದುರಾಗಿದ್ದ ನಿರ್ದಿಷ್ಟ ಭೀತಿ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಮಿಲಿಟರಿ ದಾಳಿಯು ಕಳೆದ ಏಪ್ರಿಲ್ ತಿಂಗಳಿನಿಂದ ಜಾರಿಯಲ್ಲಿರುವ ಕದನ ವಿರಾಮವನ್ನು ಉಲ್ಲಂಘಿಸಿದೆ. ಆದಾಗ್ಯೂ, ಸದ್ಯಕ್ಕೆ ಇರಾನ್ ಯಾವುದೇ ತ್ವರಿತ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಇರಾನ್ ಅಧಿಕಾರಿಗಳು ಈ ದಾಳಿಯಿಂದಾಗಿರುವ ಹಾನಿಯ ಕುರಿತು ತನಿಖೆ ನಡೆಸುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: ಭಾರತದಲ್ಲೂ GEN-Z ಕ್ರಾಂತಿ? ನೆರೆಹೊರೆಯ ತಲ್ಲಣಗಳೂ, ‌ʼಕಾಕ್ರೋಚ್ʼ ನೀಡುತ್ತಿರುವ ಎಚ್ಚರಿಕೆಯೂ!

ಇದೇ ವರ್ಷದ ಫೆಬ್ರವರಿಯಲ್ಲಿ, ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಭುಗಿಲೆದ್ದಿತ್ತು. ದಾಳಿ-ಪ್ರತಿದಾಳಿಗಳು ನಡೆದಿದ್ದವು. ಇರಾನ್‌ ಪ್ರತಿದಾಳಿಯಿಂದ ತತ್ತರಿಸಿದ್ದ ಅಮೆರಿಕ, ಕದನ ವಿರಾಮಕ್ಕೆ ತಾನೇ ಮುಂದಾಗಿತ್ತು. ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕಳೆದ ಏಪ್ರಿಲ್‌ನಿಂದ ಕದನ ವಿರಾಮ ಜಾರಿಗೊಳಿಸಲಾಗಿದೆ. ಸಂಘರ್ಷವನ್ನು ಸಂಪೂರ್ಣವಾಗಿ ಕೊನೆಗಾಳಿಸಲು ಅಮೆರಿಕ ಮತ್ತು ಇರಾನ್‌ ನಡುವೆ ನಿರಂತರ ಮಾತುಕತೆಗಳು ಮುಂದುವರೆದಿವೆ. ಕಳೆದ ಮೂರು ದಿನಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ಇದೇ ಸಮಯದಲ್ಲಿ ಈ ದಾಳಿ ನಡೆದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ‌ ಪ್ರಸ್ತಾಪಗಳನ್ನು ರಾಷ್ಟ್ರಪತಿ ನಿರಾಕರಿಸಿದ್ದು ಅಚ್ಚರಿ ಮೂಡಿಸಿದೆ, ಸಾಕ್ಷ್ಯ ಕೇಳಿದ್ದಾರೆ – ಕೊಡುತ್ತೇವೆ: ರಾಹುಲ್ ಗಾಂಧಿ

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿರುವ ಕುರಿತು ನಾವು ಎತ್ತಿರುವ ವಿಷಯವನ್ನು...

ರಾಷ್ಟ್ರಪತಿ ಭವನದತ್ತ ‘ಇಂಡಿಯಾ’ ಒಕ್ಕೂಟದ ಮೆರವಣಿಗೆ, ವಿಜಯ್ ಚೌಕ್‌ನಲ್ಲಿ ದಿಢೀರ್ ಧರಣಿ

​ಎಸ್.ಐ.ಆರ್. ನಲ್ಲಿ (SIR) ಭಾರಿ ಅಕ್ರಮಗಳು ನಡೆದಿವೆ ಎಂದು ಗಂಭೀರವಾಗಿ ಆರೋಪಿಸಿರುವ...

ಜಿಎಸ್‌ಟಿ ಕರಾಳ ಶಾಸನಕ್ಕೆ ತೇಪೆ ಹಾಕುವ ಯತ್ನ: ತಮ್ಮದೇ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ಹೊಸ ನಾಟಕ!

ಜಿಎಸ್‌ಟಿಗೆ ಸಂಬಂಧಿಸಿದ "ಶೇಕಡಾ 99ರಷ್ಟು ಸಮಸ್ಯೆಗಳು" ಬಗೆಹರಿದಿವೆ ಮತ್ತು ಮುಂದಿನ ಬದಲಾವಣೆಗಳಿಗೆ...

ಬೀದರ್‌ | ʼಕರೇಜ್‌ʼ ದೇಶದ ಜಲಸಂರಕ್ಷಣೆಗೆ ಮಾದರಿ : ಕೇಂದ್ರದ ಅಧಿಕಾರಿಗಳ ಮೆಚ್ಚುಗೆ

ಬೀದರ್‌ನ ಐತಿಹಾಸಿಕ ʼಕರೇಜ್‌ʼ ಜಲವ್ಯವಸ್ಥೆ ದೇಶದ ಜಲಸಂರಕ್ಷಣೆಗೆ ಮಾದರಿಯಾಗಬಲ್ಲದು ಎಂದು ಕೇಂದ್ರ...