‘8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನನಗೇ ನೊಬೆಲ್ ಕೊಡಿ’: ಟ್ರಂಪ್ ಮತ್ತೆ ಪಟ್ಟು

Date:

ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಸಾಲಿನ ಪ್ರತಿಷ್ಠಿತ ‘ನೊಬೆಲ್ ಶಾಂತಿ ಪ್ರಶಸ್ತಿ’ಯನ್ನು ಶುಕ್ರವಾರ ಪ್ರಕಟಿಸಲಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಶಸ್ತಿಯ ಮೇಲೆ ಮತ್ತೆ ಕಣ್ಣಿಟ್ಟಿದ್ದಾರೆ. “ನಾನು ಜಗತ್ತಿನ ಎಂಟು ಯುದ್ಧಗಳನ್ನು ಅಂತ್ಯಗೊಳಿಸಿದ್ದು, ಬೇರೆ ಯಾರಿಗಿಂತಲೂ ನಾನೇ ಈ ಪ್ರಶಸ್ತಿಗೆ ಹೆಚ್ಚು ಅರ್ಹ,” ಎಂದು ಅವರು ಪ್ರತಿಪಾದಿಸಿದ್ದಾರೆ.

- Advertisement -

​ಬುಧವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಸಾಧನೆಗಳನ್ನು ಕೊಂಡಾಡಿಕೊಂಡರು. “ಇದುವರೆಗೆ ಯಾರೂ ಮಾಡದಂತಹ ಕೆಲಸಗಳನ್ನು ನಾನು ಮಾಡಿದ್ದೇನೆ. ನಾನು ಕೊಚ್ಚಿಕೊಳ್ಳುತ್ತಿಲ್ಲ, ಕೇವಲ ವಾಸ್ತವವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಬಹುಶಃ ಬೇರೆ ಯಾವುದೇ ಅಧ್ಯಕ್ಷರು ಯುದ್ಧಗಳನ್ನು ಬಗೆಹರಿಸಿಲ್ಲ. ಆದರೆ, ನಾನು ಎಂಟು ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ,” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

​ತಮಗೆ ಪ್ರಶಸ್ತಿ ನೀಡದಿದ್ದರೆ ಅದು ನೊಬೆಲ್ ಸಮಿತಿಗೆ ಮಾಡುವ ದೊಡ್ಡ ಅಪಮಾನವಾಗಲಿದೆ ಎಂದಿರುವ ಟ್ರಂಪ್, “ನನ್ನಂತಹವರಿಗೆ ಪ್ರಶಸ್ತಿ ನೀಡದಿರುವ ಇತಿಹಾಸ ಆ ಸಮಿತಿಗಿರಬಹುದು. ಆದರೆ, ನನಗೆ ಪ್ರಶಸ್ತಿ ಸಿಗಲಿ ಅಥವಾ ಬಿಡಲಿ, ನಾನು ಅವರಿಗಿಂತ (ಇತರರಿಗಿಂತ) ಹೆಚ್ಚಿನದನ್ನು ಸಾಧಿಸಿದ್ದೇನೆ. ಎಂಟು ಯುದ್ಧಗಳನ್ನು ಬಗೆಹರಿಸಿರುವಾಗಲೂ ಪ್ರಶಸ್ತಿ ನೀಡದಿರುವುದು ಸಮಿತಿಯ ವಿಶ್ವಾಸಾರ್ಹತೆಗೆ ಧಕ್ಕೆ ತರಲಿದೆ,” ಎಂದರು. ಅಲ್ಲದೆ, ತಮ್ಮ ಶಾಂತಿ ಸ್ಥಾಪನೆಯ ಪ್ರಯತ್ನಗಳು ಮುಂದುವರಿದಿದ್ದು, ಕಳೆದ ಎಂಟು ತಿಂಗಳಿಂದ ನಡೆಯುತ್ತಿರುವ ಅಮೆರಿಕ-ಇರಾನ್ ಯುದ್ಧವನ್ನು ಶೀಘ್ರದಲ್ಲೇ ಬಗೆಹರಿಸುವ ಸುಳಿವು ನೀಡಿದರು.

​ಇದೇ ವೇಳೆ, 2009ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಟ್ರಂಪ್ ತೀವ್ರವಾಗಿ ಟೀಕಿಸಿದರು. “ಒಬಾಮಾ ಅವರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿತು, ಆದರೆ ಅವರು ಯಾವುದೇ ಸಾಧನೆ ಮಾಡಿರಲಿಲ್ಲ. ಅಧ್ಯಕ್ಷರಾಗಿ ಆಯ್ಕೆಯಾದ ಆರಂಭದಲ್ಲೇ ಅವರಿಗೆ ಆ ಪ್ರಶಸ್ತಿ ನೀಡಲಾಯಿತು. ಆ ಪ್ರಶಸ್ತಿ ತಮಗೆ ಏಕೆ ಸಿಕ್ಕಿತು ಎಂಬುದು ಅವರಿಗೇ ಇಂದಿಗೂ ತಿಳಿದಿಲ್ಲ,” ಎಂದು ಲೇವಡಿ ಮಾಡಿದರು.

​ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆಯಾದ ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊ ಅವರು ತಮ್ಮ ಪ್ರಶಸ್ತಿಯನ್ನು ತಮಗೆ (ಟ್ರಂಪ್‌ಗೆ) ಹಸ್ತಾಂತರಿಸಿದ್ದರು ಎಂದು ಇದೇ ವೇಳೆ ಟ್ರಂಪ್ ನೆನಪಿಸಿಕೊಂಡರು. “ಆ ಅದ್ಭುತ ಮಹಿಳೆ ತಮಗಿಂತ ನಾನೇ ಈ ಪ್ರಶಸ್ತಿಗೆ ಹೆಚ್ಚು ಅರ್ಹ ಎಂದು ಹೇಳಿದ್ದರು. ಇತಿಹಾಸದಲ್ಲಿ ಅಧ್ಯಕ್ಷ ಟ್ರಂಪ್ ಅವರಿಗಿಂತ ಬೇರೆ ಯಾರೂ ಈ ಪ್ರಶಸ್ತಿಗೆ ಅರ್ಹರಲ್ಲ ಎಂಬುದು ಅವರ ಮಾತಾಗಿತ್ತು,” ಎಂದರು.

​ಅಲ್ಲದೆ, ಕಳೆದ ಒಂದು ವರ್ಷದಲ್ಲಿ ತಾವು ಎಂಟು ಯುದ್ಧಗಳನ್ನು ಬಗೆಹರಿಸಿರುವುದರ ಜೊತೆಗೆ, ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆತಂದಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಆಮದು ಸುಂಕಗಳನ್ನು (Tariffs) ಒಂದು ಅಸ್ತ್ರವಾಗಿ ಬಳಸುವ ಮೂಲಕ ಹಲವು ದೇಶಗಳು ಯುದ್ಧಕ್ಕೆ ಇಳಿಯುವುದನ್ನು ತಪ್ಪಿಸಿ, ಸಾವು-ನೋವುಗಳನ್ನು ತಡೆದಿದ್ದೇನೆ ಎಂದು ಅವರು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕೃಷಿ ಮೌಲ್ಯವರ್ಧನೆ, ಮಾರುಕಟ್ಟೆ ಜಾಲ ವಿಸ್ತರಣೆ ಇಂದಿನ ಅಗತ್ಯ: ಈಶ್ವರ ಖಂಡ್ರೆ

ಕೃಷಿ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಲಕ್ಷಾಂತರ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ದೇಶದ...

ವೋಟ್ ಇಲ್ಲದಿದ್ದರೆ ಲೈಟೂ ಇಲ್ಲ; ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ಬೆನ್ನಲ್ಲೇ ಗ್ರಾಮದ ಬೀದಿ ದೀಪಗಳು ಆಫ್!

ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡ ಬೆನ್ನಲ್ಲೇ, ಚುನಾವಣೆಗೂ ಮುನ್ನ...

ಬರ ಹಿನ್ನೆಲೆ; ವಿಬಿ-ಜಿ ರಾಮ್‌ಜಿ ಯೋಜನೆಯಡಿ 175 ದಿನಗಳ ಕೆಲಸಕ್ಕೆ ಪತ್ರ: ಈಶ್ವರ ಖಂಡ್ರೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ಆವರಿಸಿದ್ದು, "ವಿಕಸಿತ ಭಾರತ - ಗ್ಯಾರಂಟಿ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ; ಫಲಿಸಿತು ದಶಕಗಳ ಬೇಡಿಕೆ

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ...