‘ನೀವು ನಮಗೆ ತೆರಿಗೆ ವಿಧಿಸಿದರೆ, ನಾವು ನಿಮಗೂ ಟ್ಯಾಕ್ಸ್‌ ಹಾಕುತ್ತೇವೆ’; ಭಾರತದ ವಿರುದ್ಧ ಟ್ರಂಪ್‌ ಕಿಡಿ

Date:

ಅಮೆರಿಕದ ಕೆಲವು ಸರಕುಗಳ ಮೇಲೆ ಭಾರತವು 100% ತೆರಿಗೆ ಮತ್ತು ಹಲವು ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲು ನಿರ್ಧರಿಸಿದೆ. ಈ ಬೆನ್ನಲ್ಲೇ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ನೀವು ನಮಗೆ ಟ್ಯಾಕ್ಸ್‌ ಹಾಕಿದರೆ, ನಾವು ನಿಮಗೂ ತೆರಿಗೆ ಹಾಕುತ್ತೇವೆ’ ಎಂದು ಹೇಳಿದ್ದಾರೆ.

- Advertisement -

ಅಮೆರಿಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಇತರ ರಾಷ್ಟ್ರಗಳು ಅಮೆರಿಕ ಉತ್ಪನ್ನಗಳಿಗೆ ತೆರಿಗೆ ವಿಧಿಸಿದರೆ, ಅಮೆರಿಕ ಕೂಡ ಅದೇ ರೀತಿ ಪ್ರತಿಕ್ರಿಯಿಸುತ್ತದೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

”ಅವರು (ಭಾರತ ಮತ್ತು ಬ್ರೆಜಿಲ್) ನಮಗೆ ತೆರಿಗೆ ವಿಧಿಸಿದರೆ, ನಾವು ಅವರಿಗೆ ಅದೇ ಮೊತ್ತದ ತೆರಿಗೆ ವಿಧಿಸುತ್ತೇವೆ. ಬಹುತೇಕ ಎಲ್ಲ ಸಂದರ್ಭಗಳಲ್ಲಿ, ಅವರು ನಮಗೆ ತೆರಿಗೆ ವಿಧಿಸುತ್ತಿದ್ದಾರೆ. ಆದರೆ, ನಾವು ಅವರಿಗೆ ತೆರಿಗೆ ವಿಧಿಸುತ್ತಿಲ್ಲ. ಇನ್ನು ಮುಂದೆ ಹಾಗೆ ಇರುವುದಿಲ್ಲ” ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.

“ಭಾರತವು ಅಮೆರಿಕ ಸರಕುಗಳ ಮೇಲೆ 100% ಸುಂಕವನ್ನು ವಿಧಿಸಿದರೆ, ಪ್ರತಿಯಾಗಿ ಅಮೆರಿಕ ಕೂಡ ಅದೇ ರೀತಿ ಮಾಡುತ್ತದೆ. ಪರಸ್ಪರತೆ ಎಲ್ಲ ಕಡೆಯಿಂದಲೂ ಒತ್ತು ಇರಬೇಕು. ಭಾರತವು ನಮಗೆ 100% ಶುಲ್ಕ ವಿಧಿಸಿದರೆ, ನಾವು ಅವರಿಗೆ ಏನನ್ನೂ ವಿಧಿಸದೇ ಇರಲು ಸಾಧ್ಯವೇ?” ಎಂದಿದ್ದಾರೆ.

“ಭಾರತವು ನಮಗೆ 100 ಮತ್ತು 200 ಶುಲ್ಕ ವಿಧಿಸುತ್ತದೆ. ಬ್ರೆಜಿಲ್ ಕೂಡ ಸಾಕಷ್ಟು ತೆರಿಗೆ ವಿಧಿಸುತ್ತದೆ. ಅವರು ನಮಗೆ ತೆರಿಗೆ ವಿಧಿಸಲು ಬಯಸಿದರೆ, ನಾವು ಅವರಿಗೆ ಅದೇ ರೀತಿಯಲ್ಲಿ ವಿಧಿಸಲಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ.

ಆದಾಗ್ಯೂ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ಬೈಡೆನ್ ಅವರು ಭಾರತ-ಅಮೆರಿಕ ಸಂಬಂಧವನ್ನು ಶ್ಲಾಘಿಸಿದ್ದಾರೆ. “ನಾವು ಅಮೆರಿಕ-ಭಾರತ ಸಂಬಂಧದ ಬಗ್ಗೆ ಬಹಳ ಮಹತ್ವಾಕಾಂಕ್ಷೆಯನ್ನು ಮುಂದುವರಿಸುತ್ತೇವೆ. ಇತ್ತೀಚೆಗೆ ನಡೆದ ಕ್ವಾಡ್ ಶೃಂಗಸಭೆಯ ನಂತರ ನಾವು ಹಲವು ಉನ್ನತ ಮಟ್ಟದ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2026ರ ನೊಬೆಲ್ ಸಾಹಿತ್ಯ ಪ್ರಶಸ್ತಿ: ಕೆನಡಾದ ಖ್ಯಾತ ಕವಯಿತ್ರಿ ‘ಆನ್ ಕಾರ್ಸನ್’ ಮುಡಿಗೇರಿದ ಗರಿ

ಸಾಹಿತ್ಯ ಲೋಕದ ಅತ್ಯಂತ ಪ್ರತಿಷ್ಠಿತ ಗೌರವವಾದ 2026ನೇ ಸಾಲಿನ 'ನೊಬೆಲ್ ಸಾಹಿತ್ಯ...

ಅಮೆರಿಕದಲ್ಲಿ ಓದಿದರೂ ಭಾರತೀಯರಿಗೆ ಉದ್ಯೋಗ ಅಸಾಧ್ಯ; ಒಪಿಟಿ ಶುಲ್ಕ 60 ಲಕ್ಷ ರೂ. ಏರಿಸಲು ಟ್ರಂಪ್ ಸರ್ಕಾರ ಚಿಂತನೆ

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾರೀ...

‘8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನನಗೇ ನೊಬೆಲ್ ಕೊಡಿ’: ಟ್ರಂಪ್ ಮತ್ತೆ ಪಟ್ಟು

ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಸಾಲಿನ ಪ್ರತಿಷ್ಠಿತ ‘ನೊಬೆಲ್ ಶಾಂತಿ ಪ್ರಶಸ್ತಿ’ಯನ್ನು...

ಗಾಜಾ ನರಮೇಧ : ಪ್ಯಾಲೆಸ್ತೀನಿಯನ್ ಪಟ್ಟಣಗಳ ನಾಶವನ್ನು ತೋರಿಸುವ ಉಪಗ್ರಹಚಿತ್ರಗಳು

ಜೆರುಸಲೇಮ್: ಕಳೆದ ವರ್ಷ ಇಸ್ರೇಲ್–ಹಮಾಸ್ ಕದನ ವಿರಾಮ ಒಪ್ಪಂದ ಜಾರಿಯಾದ ಬಳಿಕವೂ...