ಇರಾನ್-ಅಮೆರಿಕ ‘ಕದನ ವಿರಾಮ’ ಒಪ್ಪಂದವಲ್ಲ, ಟ್ರಂಪ್ ಶರಣಾಗತಿ: ಅಮೆರಿಕ ಸಂಸದರ ಟೀಕೆ

Date:

ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಇರಾನ್ ಭಾನುವಾರವೇ ಸಹಿ ಹಾಕಬಹುದು. ಒಪ್ಪಂದ ಜಾರಿಗೆ ಬಂದ ತಕ್ಷಣ ಹಾರ್ಮುಜ್ ಜಲಸಂಧಿಯು ಎಲ್ಲ ಹಡಗುಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಆದಾಗ್ಯೂ, ಈ ಸಮಯದ ಗಡವನ್ನು ಇರಾನ್ ವಿದೇಶಾಂಗ ಸಚಿವಾಲಯ ತಿರಸ್ಕರಿಸಿದೆ. ಆದರೂ, ಮುಂಬರುವ ದಿನಗಳಲ್ಲಿ ಒಪ್ಪಂದ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಿದೆ. ಇನ್ನು, ಈ ಒಪ್ಪಂದವನ್ನು ‘ಟ್ರಂಪ್‌ ಅವರ ಸಂಪೂರ್ಣ ಶರಣಾಗತಿ’ ಎಂದು ಅಮೆರಿಕದ ಡೆಮಾಕ್ರಾಟ್ ಸಂಸದರು ಟೀಕಿಸಿದ್ದಾರೆ.

- Advertisement -

‘ಕದನ ವಿರಾಮ ಒಪ್ಪಂದವು ಲೆಬನಾನ್‌ಗೂ ವಿಸ್ತರಿಸಬೇಕು. ಲೆಬನಾನ್ ಮೇಲಿನ ಇಸ್ರೇಲ್ ಕ್ರೌರ್ಯವು ಕೊನೆಗೊಳ್ಳುವವರೆಗೂ ಅಮೆರಿಕದೊಂದಿಗೆ ಕದನ ವಿರಾಮದ ಒಪ್ಪಂದ ಮಾಡಿಕೊಳ್ಳುವ ಮಾತೇ ಇಲ್ಲ’ವೆಂದು ಇರಾನ್ ಸ್ಪಷ್ಟವಾಗಿ ಹೇಳಿದೆ. ಅಮೆರಿಕದ ಮಾತಿಗೂ ಬಗ್ಗದ ಇಸ್ರೇಲ್, ಲೆಬನಾನ್ ಮೇಲೆ ದಾಳಿ ನಡೆಸುತ್ತಿದೆ. ಇದರ ನಡುವೆಯೂ ಅಮೆರಿಕ-ಇರಾನ್ ನಡುವೆ ಮಾತುಕತಗಳು ನಡೆಯುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಈ ನಿರೀಕ್ಷಿತ ಒಪ್ಪಂದವನ್ನು ಟ್ರಂಪ್ ಅವರು ದೊಡ್ಡ ಮಟ್ಟದಲ್ಲಿ ಬಿಂಬಿಸುತ್ತಿದ್ದಾರೆ. ಜಗತ್ತಿನ ಬಹುಪಾಲು ತೈಲ ಮತ್ತು ಅನಿಲ ಸಾಗಣೆಯ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯು ಒಪ್ಪಂದಕ್ಕೆ ಸಹಿ ಬಿದ್ದ ತಕ್ಷಣ ಮುಕ್ತವಾಗಲಿದೆ. ಅಮೆರಿಕವು ಅಂತಿಮವಾಗಿ ಇರಾನ್‌ನ ಸಮೃದ್ಧ ಯುರೇನಿಯಂ ದಾಸ್ತಾನನ್ನು ತನ್ನ ವಶಕ್ಕೆ ಪಡೆಯಲಿದೆ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ

ಆದರೆ, ಇರಾನ್ ವಿದೇಶಾಂಗ ಸಚಿವಾಲಯವು ಟ್ರಂಪ್ ಹೇಳಿಕೆಗಳನ್ನು ಸಾರಾಸಗಟಾಗಿ ತಿಸ್ಕರಿಸಿದೆ. ಒಪ್ಪಂದವು ಶೀಘ್ರವೇ ನಡೆಯಬಹುದು ಎಂಬುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದರೂ, ಭಾನುವಾರವೇ ಸಹಿ ಹಾಕಬೇಕೆಂಬ ಟ್ರಂಪ್ ಅವರ ಒತ್ತಾಯವನ್ನು ತಳ್ಳಿಹಾಕಿದ್ದಾರೆ. ಬದಲಿಗೆ, ಮುಂಬರುವ ದಿನಗಳಲ್ಲಿ ಸಹಿ ಪ್ರಕ್ರಿಯೆ ನಡೆಯಬಹುದು ಎಂದಿದ್ದಾರೆ.

ಈ ಒಪ್ಪಂದದ ಬಗ್ಗೆ ಅಮೆರಿಕದ ಡೆಮಾಕ್ರಾಟ್ ಸಂಸದರು ಸಂಶಯ ವ್ಯಕ್ತಪಡಿಸಿದ್ದಾರೆ. “ಇದು ಅತ್ಯಂತ ಕೆಟ್ಟ ಒಪ್ಪಂದ. ಇದು ಮೂಲತಃ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಸರ್ವೋಚ್ಚ ನಾಯಕನಿಗೆ ಬರೆದುಕೊಟ್ಟಿರುವ ಶರಣಾಗತಿಯ ಪತ್ರವಾಗಿದೆ” ಎಂದು ಡೆಮಾಕ್ರಾಟ್ ಸಂಸದ ಸೆತ್ ಮೌಲ್ಟನ್ ಟೀಕಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...