ಐದನೇ ದಿನಕ್ಕೆ ಕಾಲಿಟ್ಟ ಇಸ್ರೇಲ್- ಹಮಸ್ ಸಂಘರ್ಷ: 3600ಕ್ಕೂ ಹೆಚ್ಚು ಸಾವು

Date:

ಐದನೇ ದಿನಕ್ಕೆ ಕಾಲಿಟ್ಟ ಇಸ್ರೇಲ್- ಹಮಸ್ ಹೋರಾಟಗಾರರ ಸಂಘರ್ಷದಲ್ಲಿ ಎರಡೂ ಕಡೆಯ ಸೇನೆಯಿಂದ ಅಂದಾಜು 3,600 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಗಾಜಾಪಟ್ಟಿಯ ಹಮಸ್ ಹೋರಾಟಗಾರರು ನಡೆಸುತ್ತಿರುವ ನಿರಂತರ ದಾಳಿಯಿಂದಾಗಿ ಇದುವರೆಗೆ ಇಸ್ರೇಲ್‌ನಲ್ಲಿ 1,200ಕ್ಕೂ ಅಧಿಕ ಮಂದಿ ಮೃತಪಟ್ಟು, ಸಾವಿರಾರು ಜನ ಗಾಯಗೊಂಡಿದ್ದಾರೆ ಎಂಬುದಾಗಿ ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ.

ಇಸ್ರೇಲ್‌ ದಾಳಿಯಿಂದ ಗಾಜಾದಲ್ಲಿ 900 ಮಂದಿ ಮೃತಪಟ್ಟರೆ, 4,600 ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಆದರೆ, ಮೂಲಗಳ ಪ್ರಕಾರ, ಎರಡೂ ದೇಶದಲ್ಲಿ ಇದಕ್ಕಿಂತ ಹೆಚ್ಚಿನ ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲೂ ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ?  ಈ ದಿನ ಸಂಪಾದಕೀಯ | ಅಪಹರಿಸಿರುವ ಪ್ಯಾಲೆಸ್ತೀನ್‌ನನ್ನು ಮರಳಿಸಲಿ ಇಸ್ರೇಲ್

ಗಾಜಾ ಪಟ್ಟಿಯಲ್ಲಿ ವಿದ್ಯುತ್, ಅನಿಲ, ಆಹಾರ ಹಾಗೂ ನೀರಿನ ಸಂಪರ್ಕವನ್ನು ಇಸ್ರೇಲ್ ಕಡಿತಗೊಳಿಸಿದೆ. ಇದರಿಂದಾಗಿ 2 ಲಕ್ಷಕ್ಕೂ ಹೆಚ್ಚು ನಾಗರಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಯುದ್ಧದ ಸಮಯದಲ್ಲಿ ಇಸ್ರೇಲ್‌ ಅಸಹಾಯಕ ಸ್ಥಿತಿಗೆ ತಲುಪುವ ಲಕ್ಷಣಗಳು ಗೋಚರಿಸುತ್ತಿವೆ. ಹಮಸ್‌ ದಾಳಿಗೆ ತತ್ತರಿಸಿರುವ ಯಹೂದಿ ರಾಷ್ಟ್ರವು ಈಗ ಲೆಬನಾನ್‌ ಹಾಗೂ ಸಿರಿಯಾ ದೇಶಗಳನ್ನು ಎದುರಿಸಬೇಕಿದೆ. ಈ ಎರಡೂ ದೇಶಗಳು ಉತ್ತರ ಇಸ್ರೇಲ್‌ನಲ್ಲಿ ಮಂಗಳವಾರ ಕ್ಷಿಪಣಿ ದಾಳಿ ನಡೆಸಿವೆ. ಇದು ಇಸ್ರೇಲ್‌ಅನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

ಇಸ್ರೇಲ್ ರಕ್ಷಣಾ ಪಡೆಗಳನ್ನು ಗುರಿಯಾಗಿಸಿ ಲೆಬನಾನ್‌ನ ಪಶ್ಚಿಮ ಗಲಿಲಿಯಲ್ಲಿ 15 ರಾಕೆಟ್‌ಗಳನ್ನು ಹಾರಿಸಲಾಗಿದೆ.

ಗೋಲನ್ ಹೈಟ್ಸ್‌ ಪ್ರದೇಶದಲ್ಲಿ ಸಿರಿಯಾದಿಂದ ಕೆಲ ರಾಕೆಟ್‌ಗಳನ್ನು ಹಾರಿಸಲಾಗಿದೆ. ಹಲವಾರು ಸ್ಪೋಟಕಗಳು ಇಸ್ರೇಲ್ ಭೂಪ್ರದೇಶವನ್ನು ದಾಟಿ ಬಯಲು ಪ್ರದೇಶಗಳಲ್ಲಿ ಬಿದ್ದಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್​ನಲ್ಲಿ 18 ಮಂದಿ ಸಾವು

ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ದುಬೈ...

ಇರಾನ್ ವಶದಲ್ಲಿ ಇಸ್ರೇಲ್ ಹಡಗು: 17 ಸಿಬ್ಬಂದಿಗಳ ಭೇಟಿ ಮಾಡಲು ಭಾರತೀಯ ಅಧಿಕಾರಿಗಳಿಗೆ ಅನುಮತಿ

ಇರಾನ್‌ನ ಕಮಾಂಡೋಗಳು 17 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಸ್ರೇಲ್ ಮೂಲದ ಸರಕು...

ಪಾಕಿಸ್ತಾನ | ಸರಬ್ಜಿತ್ ಸಿಂಗ್ ಕೊಲೆಯ ಆರೋಪಿ ಅಮೀರ್ ಸರ್ಫರಾಜ್ ಗುಂಡಿಕ್ಕಿ ಹತ್ಯೆ

ಭಾರತದ ಸರಬ್ಜಿತ್ ಸಿಂಗ್‌ ಹತ್ಯೆಯ ಆರೋಪಿ ಪಾಕಿಸ್ತಾನದ ಭೂಗತ ಪಾತಕಿ ಅಮೀರ್‌...

ಇಸ್ರೇಲ್ ಮೇಲೆ ಇರಾನ್ ಡ್ರೋನ್ ಹಾರಾಟ: ಮುಚ್ಚಿದ್ದ ಜೋರ್ಡಾನ್, ಲೆಬನಾನ್, ಇರಾಕ್ ವಾಯು ಮಾರ್ಗ ಮತ್ತೆ ಆರಂಭ

ಇಸ್ರೇಲ್ ಮೇಲೆ ಇರಾನ್‌ ಡ್ರೋನ್‌ಗಳನ್ನು ಹಾರಿಸುತ್ತಿದ್ದಂತೆ ಜೋರ್ಡಾನ್, ಇರಾಕ್ ಮತ್ತು ಲೆಬನಾನ್...