ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಜಾಗತಿಕ ಬಹಿಷ್ಕಾರ: ಖುರ್ಚಿಗೆ ಅಂಟಿಕೊಂಡ ಭಾರತದ ಧೋರಣೆಗೆ ಖಂಡನೆ

Date:

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ ಮಾಡಲು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ಗಾಜಾದಲ್ಲಿ ಪ್ಯಾಲೆಸ್ತೀನಿಯರ ಮೇಲಿನ ಇಸ್ರೇಲ್ ಕ್ರೌರ್ಯವನ್ನು ವಿರೋಧಿಸಿ ಸುಮಾರು 70ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ನೆತನ್ಯಾಹು ಭಾಷಣವನ್ನು ಬಹಿಷ್ಕರಿಸಿ, ಸಭೆಯಿಂದ ಹೊರನಡಿದ್ದಾರೆ. ಮುಸ್ಲಿಂ ಮತ್ತು ಅರಬ್ ದೇಶಗಳಷ್ಟೇ ಅಲ್ಲದೆ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಗೌರವಿಸುವ ಏಷ್ಯಾ, ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾದ ಹಲವು ರಾಷ್ಟ್ರಗಳು ನೆತನ್ಯಾಹು ಭಾಷಣವನ್ನು ಬಹಿಷ್ಕರಿಸಿವೆ. ಸೇನಾ ಆಡಳಿತದಲ್ಲಿರುವ ಬರ್ಮಾ (ಮ್ಯಾನ್ಮಾರ್) ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗಿ, ಪ್ಯಾಲೆಸ್ತೀನ್ ಪರ ನಿಲುವನ್ನು ಸ್ಪಷ್ಟಪಡಿಸಿದೆ. ಆದರೆ, ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ, ಸಭೆಯಲ್ಲಿ ಕುಳಿತು ನೆತನ್ಯಾಹು ಭಾಷಣವನ್ನು ಆಲಿಸಿದೆ. ತಮ್ಮದು ತಟಸ್ಥ ನಿಲುವು ಎಂದು ಹೇಳಿಕೊಂಡಿದೆ.

- Advertisement -

ಇಡೀ ಪ್ರಪಂಚವೇ ಮಾನವೀಯತೆಯ ಪರವಾಗಿ ಧ್ವನಿ ಎತ್ತಿ ಸಭೆಯಿಂದ ಹೊರನಡೆಯುತ್ತಿದ್ದಾಗ, ‘ವಿಶ್ವಗುರು’ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳುವ ಭಾರತವು ನೆತನ್ಯಾಹು ಅವರ ಭಾಷಣವನ್ನು ಆಲಿಸಿದ್ದು ಜಾಗತಿಕ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ. ಭಾರತದ ಈ ನಡೆಯು ದೇಶದ ದೀರ್ಘಕಾಲದ ವಿದೇಶಾಂಗ ನೀತಿಯ ತತ್ವಗಳಿಗೆ ಎಸಗಿದ ಅಪಚಾರ ಮತ್ತು ಮಾನವೀಯ ಮೌಲ್ಯಗಳ ಮೇಲಿನ ರಾಜತಾಂತ್ರಿಕ ನಿರ್ಲಕ್ಷ್ಯ ಎಂದು ಹಲವರು ಟೀಕಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...

ಐತಿಹಾಸಿಕವಾಗಿ ಭಾರತವು ಯಾವಾಗಲೂ ಸಾಮ್ರಾಜ್ಯಶಾಹಿ, ಆಕ್ರಮಣಕಾರಿ ಧೋರಣೆಗಳು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧವಾಗಿ ನಿಂತಿದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕಾಲದಿಂದಲೂ ಪ್ಯಾಲೆಸ್ತೀನ್ ಜನರ ಸ್ವತಂತ್ರ ಮತ್ತು ಸಾರ್ವಭೌಮ ಹಕ್ಕುಗಳನ್ನು ಭಾರತ ಬೆಂಬಲಿಸಿದೆ. ಆದರೆ, ವಿಶ್ವಸಂಸ್ಥೆಯ ಈ ನಿರ್ಣಾಯಕ ಸಂದರ್ಭದಲ್ಲಿ ಭಾರತ ತಳೆದ ತಟಸ್ಥ ನಿಲುವು, ಇಸ್ರೇಲ್‌ನ ಸೇನಾ ಕಾರ್ಯಾಚರಣೆಯನ್ನು ಪರೋಕ್ಷವಾಗಿ ಬೆಂಬಲಿಸಿದಂತೆ ಕಾಣುತ್ತಿದೆ ಎಂಬ ಬಲವಾದ ವಿಮರ್ಶೆ ವ್ಯಕ್ತವಾಗಿದೆ.

ಜಾಗತಿಕ ಮಟ್ಟದಲ್ಲಿ ಸರಿ-ತಪ್ಪುಗಳ ನಡುವಿನ ಹೋರಾಟ ನಡೆದಾಗ ‘ನಿಷ್ಪಕ್ಷಪಾತ’ ಅಥವಾ ‘ತಟಸ್ಥತೆ’ ಎಂಬ ಹೆಸರಿನಲ್ಲಿ ಮೌನವಹಿಸುವುದು ಆಕ್ರಮಣಕಾರರಿಗೆ ನೀಡುವ ಪರೋಕ್ಷ ಸಹಕಾರವೇ ಆಗಿದೆ ಎಂದು ವಿಶ್ಲೇಷಕರು ಟೀಕಿಸಿದ್ದಾರೆ.

ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?

ಸೇನಾ ಆಡಳಿತವಿರುವ ಮ್ಯಾನ್ಮಾರ್‌ನಂತಹ ದೇಶವೂ ಸಹ ಮಾನವೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿಯ ಭಾಷಣವನ್ನು ಬಹಿಷ್ಕರಿಸುವ ರಾಜಕೀಯ ನೈತಿಕತೆ ತೋರಿದೆ. ಆದರೆ, ಪ್ರಜಾಪ್ರಭುತ್ವ ಮೌಲ್ಯವನ್ನು ಸಾರುವ, ಸಾಮ್ರಾಜ್ಯಶಾಹಿ ಧೋರಣೆಯನ್ನು ವಿರೋಧಿಸುವ ತತ್ವವನ್ನು ಅಳವಡಿಸಿಕೊಂಡಿರುವ ಭಾರತವು ಮೋದಿ ಆಡಳಿತದಲ್ಲಿ ಮಾನವೀಯತೆಯನ್ನು ಮರೆತಿದೆ ಎಂಬ ಆಸಮಾಧಾನ ವ್ಯಕ್ತವಾಗಿದೆ.

WhatsApp Image 2026 09 26 at 9.05.02 AM

2023ರಿಂದ ಗಾಜಾ ಮೇಲೆ ನಿರಂತರ ದಾಳಿ, ಕ್ರೌರ್ಯ ಎಸಗುತ್ತಿರುವ ಇಸ್ರೇಲ್ 16,500 ಮಕ್ಕಳು ಸೇರಿದಂತೆ 41,000 ಪ್ಯಾಲೆಸ್ತೀನಿಯರನ್ನು ಕೊಂದಿದೆ. 95,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 19 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ನಿರಾಶ್ರಿತರಾಗಿದ್ದಾರೆ. ಆಹಾರದ ಅಭಾವ, ಹಸಿವು, ಕಲುಷಿತ ನೀರು, ಸಾಂಕ್ರಾಮಿಕ ರೋಗಗಳು ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಮಾನವೀಯ ಬಿಕ್ಕಟ್ಟು ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತವು ಕೇವಲ ತನ್ನ ಭೌಗೋಳಿಕ-ರಾಜಕೀಯ ಲಾಭ ಮತ್ತು ಇಸ್ರೇಲ್‌ನೊಂದಿಗಿನ ಶಸ್ತ್ರಾಸ್ತ್ರ ವ್ಯಾಪಾರ ಸಂಬಂಧಗಳಿಗಾಗಿ ಮಾನವೀಯತೆಯನ್ನು ಬಲಿಕೊಟ್ಟಿದೆ.

ದಕ್ಷಿಣ ಗೋಳಾರ್ಧದ ಬಹುತೇಕ ರಾಷ್ಟ್ರಗಳು ಇಸ್ರೇಲ್ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿರುವಾಗ, ಭಾರತದ ಈ ಮೌನ ಮತ್ತು ನೆತನ್ಯಾಹು ಭಾಷಣ ಆಲಿಸಿದ ಧೋರಣೆಯು ಕೇವಲ ಜಾಗತಿಕ ಮಟ್ಟದಲ್ಲಿ ದೇಶದ ಇಮೇಜ್‌ಗೆ ಧಕ್ಕೆ ತಂದಿಲ್ಲ. ಬದಲಾಗಿ, ಜಾಗತಿಕ ವೇದಿಕೆಯಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಭಾರತದ ಐತಿಹಾಸಿಕ ಮತ್ತು ನೈತಿಕ ಬದ್ಧತೆಗೆ ಹೊಡೆತ ನೀಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ | ಭಾಲ್ಕಿ ಕ್ಷೇತ್ರದಲ್ಲಿ ಮುಸ್ಲಿಮರ ಮತ ಅಳಿಸುವ ಯತ್ನ, ನೂರಾರು ಅರ್ಜಿ ಪತ್ತೆ?

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಇನ್ನೂ...

ಪ್ರಧಾನಿ ಮೋದಿ ವಿರುದ್ಧ ನಿಂದನೆ ಆರೋಪ: ಸಾಕ್ಷ್ಯವಿಲ್ಲವೆಂದು ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ ಎಂಬ...