ಕರಾವಳಿಯಿಂದ ಮಸ್ಕತ್‌ಗೆ ತಲುಪಿದ ʻಪೆಪೆರೆ ಪೆಪೆ ಢುಂʼ ತಂಡ

Date:

ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್‌ ನ ಪ್ರಚಾರ ಹಾಗೂ ಉತ್ತೇಜನಕ್ಕಾಗಿ ‘ಆಮಿ ಆನಿ ಆಮ್ಚಿಂ’ ಸಂಘಟನೆಯ ಮೂಲಕ ಹುಟ್ಟಿಕೊಂಡ ʻಪೆಪೆರೆ ಪೆಪೆ ಢುಂʼ ಕಾರ್ಯಕ್ರಮವು ಇದೇ ಮೊದಲ ಬಾರಿಗೆ ಗಲ್ಫ್‌ ರಾಷ್ಟ್ರ ಒಂದರಲ್ಲಿ ಪ್ರದರ್ಶನ ನೀಡಲಿದೆ.

- Advertisement -

ಅಕ್ಟೋಬರ್‌ 10(ಇಂದು)ರಂದು ಒಮನ್‌ ದೇಶದ ರಾಜಧಾನಿ ಮಸ್ಕತ್‌ ನ ರುವಿಯ ಅಲ್‌ ಫಲಾಜ್‌ ಹೋಟೆಲ್‌ ನಲ್ಲಿ ಈ ಕಾರ್ಯಕ್ರಮದ ಎರಡನೇ ಆವೃತ್ತಿಯು ನಡೆಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...
1002626811

ಈಗಾಗಲೇ ಮಂಗಳೂರಿನಿಂದ 10 ಜನರ ಬ್ಲೂ ಬ್ರಾಸ್ ಬ್ಯಾಂಡ್ ವಾದಕರ ತಂಡ ಮತ್ತು 10 ಜನ ಆಮಿ ಆನಿ ಆಮ್ಚಿಂ ಸಂಘಟನೆಯ ಸದಸ್ಯರು ಮಸ್ಕತ್ ತಲುಪಿದ್ದು MCCP ಸಂಘಟನೆಯ ಪದಾಧಿಕಾರಿಗಳು ಅವರನ್ನು ರೂವಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

1002626816

ಇಂದು ನಡೆಯಲಿರುವ ಈ ಸಂಗೀತ ಸ್ಪರ್ಧೆಯಲ್ಲಿ ‘ಮಸ್ಕತ್‌ ಚಿಂ ನಕ್ತಿರಾಂ’, ‘ದಬಕ್‌ ದಬಾ ಕಲಾಕಾರ್‌’, ‘ಗಾಂವ್ಚಿಂ ಮೊತಿಯಾಂ’ ಮತ್ತು ‘ತೆನ್ಕಾಂತ್ಲಿಂ ತಾಲೆಂತಾಂ’ ಎಂಬ ನಾಲ್ಕು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು ವಿಜೇತ ತಂಡಕ್ಕೆ 1,000 ಒಮಾನಿ ರಿಯಲ್‌ (ಸುಮಾರು ರೂ. 2,30,000) ಮೊತ್ತದ ಪ್ರಶಸ್ತಿ ದೊರೆಯಲಿದ್ದು, ಉಳಿದ ಮೂರು ತಂಡಗಳಿಗೆ ತಲಾ 500 ಒಮಾನಿ ರಿಯಲ್‌ ( ಸುಮಾರು ರೂ. 1,15000) ಮೊತ್ತದ ಪ್ರಶಸ್ತಿಯನ್ನು ನೀಡಲಾಗುವುದು.

ಸಂತೋಷ್‌ ಡಿಕೋಸ್ತಾ, ರೀನ ಕ್ಯಾಸ್ಟಲಿನೊ ಮತ್ತು ಅರುಣ್‌ ಡಿಸೋಜಾ ಈ ಕಾರ್ಯಕ್ರಮದ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

1002626813

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ ಸಹಿತ ಸ್ಥಳೀಯ ಧರ್ಮಗುರು ವಂ. ಸ್ಟೀಫನ್ ಲುವಿಸ್, ಕೆಲರಾಯ್ ಚರ್ಚ್ ಧರ್ಮಗುರು ವಂ. ಸಿಲ್ವೆಸ್ಟರ್ ಡಿಕೊಸ್ಟಾ, ಯುಟಿ ಇಫ್ತಿಕಾರ್ ಫರೀದ್, ವಾಲ್ಟರ್ ನಂದಳಿಕೆ, ಅಲೆಕ್ಸಿಸ್ ಕ್ಯಾಸ್ಟಲಿನೊ ಮುಂತಾದವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮ ಹೌಸ್ ಫುಲ್ ಪ್ರದರ್ಶನ ಕಾಣುವ ಎಲ್ಲಾ ಸಾಧ್ಯತೆಗಳಿವೆ. ‘ಆಮಿ ಆನಿ ಆಮ್ಚಿಂ’ ತಂಡದ ಕಲ್ಪನೆಯ ʻಪೆಪೆರೆ ಪೆಪೆ ಢುಂʼ ಮೊದಲ ಆವೃತ್ತಿ ಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 20 ತಂಡಗಳು ಪಾಲ್ಗೊಂಡಿದ್ದು, ಬ್ರಾಸ್ ಬ್ಯಾಂಡ್ ಕಹಳೆ ಮನೆಮನೆಗೆ ತಲುಪಿಸುವ ಪ್ರಯತ್ನವು ಅತ್ಯಂತ ಯಶಸ್ವಿಯಾಗಿತ್ತು.

1002626810
1002626812
1002626814
eedina 6
ಈದಿನ NRI ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಎಇಯಾದ್ಯಂತ ಮುಂದುವರಿದ ಗುಡುಗು ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ; ಕೇರಳದ ಯುವಕ ಮೃತ್ಯು

ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಪ್ರಮುಖ ನಗರಗಳಾದ ದುಬೈ, ಶಾರ್ಜಾ ಸೇರಿದಂತೆ ಯುಎಇಯಾದ್ಯಂತ...

ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ ಅವರಿಗೆ ಮಾತೃ ವಿಯೋಗ

ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಅವರ ತಾಯಿ ಆಲಿಸ್ ಕೊಲಾಸೊ...

ಸೌದಿ ಅರೇಬಿಯಾ | ನ.27ರಂದು ಜುಬೈಲ್‌ನಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಮೆಂಟ್

ಸಮಾಜ ಸೇವೆಯ ಉದ್ದೇಶಕ್ಕಾಗಿ ನಝಾಫಾ ಸಂಸ್ಥೆಯ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್...

‘ದುಬೈ ರನ್’ನಲ್ಲಿ ಮಿಂಚಿದ ಬ್ಯಾರಿಗಳು: ಅತಿ ಉದ್ದನೆಯ ಯುಎಇ ಧ್ವಜದ ದೃಶ್ಯ ಹಂಚಿಕೊಂಡ ರಾಜಕುಮಾರ ಶೇಖ್ ಹಮ್ದಾನ್

ಆರೋಗ್ಯ, ಫಿಟ್‌ನೆಸ್ ಮತ್ತು ಮನರಂಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾನುವಾರ ದುಬೈನ...