‘ಡ್ರೋನ್ ವ್ಯೂಹ’ಕ್ಕೆ ದೊಡ್ಡಣ್ಣನ ಪ್ರತಿಷ್ಠೆ ಧೂಳೀಪಟ: ಅಮೆರಿಕದ ಕೊಬ್ಬು ಇಳಿಸಿದ ಇರಾನ್

Date:

ಯಾವ ಇರಾನ್ ಸರ್ಕಾರವನ್ನು ಪತನಗೊಳಿಸಲು ಅಮೆರಿಕ ಯುದ್ಧ ಆರಂಭಿಸಿತ್ತೋ, ಅದೇ ಇರಾನ್ ಸರ್ಕಾರವು ಮತ್ತಷ್ಟು ಗಟ್ಟಿಯಾಗಿ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ನಿಯಂತ್ರಣವನ್ನು ತನ್ನ ಕೈಯಲ್ಲಿಟ್ಟುಕೊಂಡು ಬೀಗುವಂತಾಯಿತು. ಬಾಂಬ್ ದಾಳಿಗಳ ಮೂಲಕ ಇರಾನ್ ಅನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಅಮೆರಿಕ ಕೊನೆಗೂ ರಾಜತಾಂತ್ರಿಕ ಮಾತುಕತೆಗೆ ಇಳಿಯಬೇಕಾಯಿತು.

ವಿಶ್ವದ ಅತ್ಯಂತ ಬಲಿಷ್ಠ ಸೇನಾಬಲವನ್ನು ಹೊಂದಿದ್ದೇವೆ ಎಂದು ಬೀಗಿಕೊಳ್ಳುವ ಅಮೆರಿಕ ಇತರೆ ದೇಶಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಾ ಬಂದಿದೆ. ಇರಾನ್ ಅನ್ನು ಪದೇ ಪದೇ ಕೆಣಕಿ ಯುದ್ಧಕ್ಕೆ ಎಳೆದಿದೆ. ಇರಾನ್ ಮೇಲೆ ಅಮೆರಿಕ ದಶಕಗಳಿಂದ ಕಠಿಣ ನಿರ್ಬಂಧಗಳನ್ನು ಹೇರುತ್ತಾ ಬಂದಿದೆ. ಅವೆಲ್ಲವನ್ನೂ ಇರಾನ್ ಸತತವಾಗಿ ಎದುರಿಸುತ್ತಾ ಬಂದಿದೆ. ಆರ್ಥಿಕ ದಿಗ್ಬಂಧನಗಳಿಂದ ತತ್ತರಿಸಿದ್ದ ಇರಾನ್ ಭೀಕರ ತಿರುಗೇಟು ನೀಡಿದೆ. ಇರಾನ್ ಅಮೆರಿಕದ ಕೊಬ್ಬು ಇಳಿಸಿದ್ದು ಇರಾನ್ ಮುಂದೆ ಅಮೆರಿಕ ಮಂಡಿಯೂರುವಂತಾಗಿದೆ.

- Advertisement -

ಅಷ್ಟಕ್ಕೂ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. 1979ರ ಇಸ್ಲಾಮಿಕ್ ಕ್ರಾಂತಿಯ ಸಂದರ್ಭದಲ್ಲೇ ಆರಂಭವಾಗಿದೆ. ಇಸ್ಲಾಮಿಕ್ ಕ್ರಾಂತಿಯ ನಂತರ ಅಮೆರಿಕವು ಇರಾನ್‌ನಲ್ಲಿ ತನ್ನ ಪರವಾಗಿದ್ದ ಶಾ ಆಡಳಿತವನ್ನು ಕಳೆದುಕೊಂಡಿತು. ಅದಾದ ಬಳಿಕ ಇರಾನ್‌ನ ಹೊಸ ಸರ್ಕಾರವನ್ನು ಹತ್ತಿಕ್ಕಲು ಅಮೆರಿಕ ಮತ್ತು ಬ್ರಿಟನ್ ಪ್ರಯತ್ನಿಸಿತು. ಇರಾಕ್‌ನ ಸದ್ದಾಂ ಹುಸೇನ್ ಇರಾನ್ ಮೇಲೆ ದಾಳಿ ಮಾಡಿದಾಗ, ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಇರಾಕ್‌ಗೆ ಗುಪ್ತಚರ ಮಾಹಿತಿ, ಹಣಕಾಸು ಮತ್ತು ಶಸ್ತ್ರಾಸ್ತ್ರಗಳ ಸಹಾಯವನ್ನು ನೀಡಿತು. ಇರಾನ್‌ಗೆ ಆರ್ಥಿಕ ದಿಗ್ಬಂಧನ ವಿಧಿಸಿತು. 1980-88ರ ಇರಾನ್-ಇರಾಕ್‌ ಯುದ್ಧವು ಇರಾನ್‌ನ ಆರ್ಥಿಕತೆ ಕುಸಿತಕ್ಕೆ ಮತ್ತು ಲಕ್ಷಾಂತರ ಜನರ ಮಾರಣಹೋಮಕ್ಕೆ ಕಾರಣವಾಯಿತು. ಅಂದಿನಿಂದಲೇ ಇರಾನ್ ಅನ್ನು ತನ್ನ ಹಿಡಿತಕ್ಕೆ ಪಡೆಯಲು ಅಮೆರಿಕ ಯತ್ನಿಸುತ್ತಲೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಇದನ್ನೂ ಓದಿ: ಇಸ್ರೇಲ್-ಅಮೆರಿಕಕ್ಕೆ ಪ್ರತಿರೋಧವೊಡ್ಡಿ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆಯೇ?

Advertisements

2025ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಇರಾನ್ ಮೇಲೆ ಆರ್ಥಿಕ ಮತ್ತು ಮಿಲಿಟರಿ ಒತ್ತಡವನ್ನು ತೀವ್ರಗೊಳಿಸಿದರು. ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಕಠಿಣ ಗಡುವು ವಿಧಿಸಿದರು. ಇವೆಲ್ಲವುದರ ಹಿಂದೆ ಇದ್ದಿದ್ದು ಇರಾನ್ ಅನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆಯುವ ಅಮೆರಿಕದ ದುರಾಸೆ. ಆದರೆ ಈ ಮಾತುಕತೆ ಫಲಿಸಲಿಲ್ಲ. 2026ರ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಪ್ರಮಾಣದ ವೈಮಾನಿಕ ದಾಳಿಗಳನ್ನು ಆರಂಭಿಸಿತು. ಇರಾನ್‌ನ ಪರಮಾಣು ನೆಲೆಗಳನ್ನು ಧ್ವಂಸಗೊಳಿಸುವುದು ಮತ್ತು ಅಲ್ಲಿನ ಇಸ್ಲಾಮಿಕ್ ಆಡಳಿತವನ್ನು ಪತನಗೊಳಿಸುವುದು ಅಮೆರಿಕದ ಪ್ರಮುಖ ಉದ್ದೇಶವಾಗಿತ್ತು.

ಇರಾನ್‌ನಲ್ಲಿ ಆಡಳಿತ ಬದಲಾವಣೆ ಮಾಡಲೆಂದೇ ಈ ದಾಳಿ ಎಂಬುದನ್ನು ಟ್ರಂಪ್ ಬಹಿರಂಗವಾಗಿಯೇ ಹೇಳಿದ್ದರು. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತರಾದ ಸುದ್ದಿ ತಿಳಿಸುತ್ತಾ ಇಡೀ ಇರಾನ್ ಆಡಳಿತ ಕುಸಿದು ಬೀಳುತ್ತದೆ ಎಂದು ಹೇಳಿದ್ದರು. ಆದರೆ ವಾಸ್ತವದಲ್ಲಿ ನಡೆದಿದ್ದೇ ಬೇರೆ. ಇರಾನ್ ಸರ್ಕಾರ ಪತನವೇ ಆಗಿಲ್ಲ. ಅಲ್ಲಿ ಹೊಸ ಸರ್ಕಾರ ರಚನೆಯಾಯಿತು. ಇನ್ನಷ್ಟೂ ಗಟ್ಟಿಯಾಯಿತು. ಈಗ ಅಮೆರಿಕಕ್ಕೆ ಸವಾಲೊಡ್ಡಿ ದೃಢವಾಗಿ ನಿಂತು ವಿಶ್ವದ ದೊಡ್ಡಣ್ಣ ಮಂಡಿಯೂರುವಂತೆ ಮಾಡಿದೆ.

‘ಹಾರ್ಮುಜ್ ಜಲಸಂಧಿ’ ಎಂಬ ಇರಾನ್ ಪ್ರಬಲ ಅಸ್ತ್ರ

ತನ್ನ ಸರ್ವೋಚ್ಚ ನಾಯಕನನ್ನೇ ಕಳೆದುಕೊಂಡರೂ ಇರಾನ್ ಧೃತಿಗೆಡಲಿಲ್ಲ. ಕೂಡಲೇ ಕಾರ್ಯಪ್ರವೃತ್ತರಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ನೂತನ ನಾಯಕನನ್ನಾಗಿ ಘೋಷಿಸಿ ಭೀಕರ ಪ್ರತಿತಾಳಿಗಳನ್ನು ಆರಂಭಿಸಿತು.

ಯುದ್ಧ ಆರಂಭವಾಗುತ್ತಿದ್ದಂತೆ ಇರಾನ್ ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಸಂಪೂರ್ಣವಾಗಿ ಬಂದ್ ಮಾಡಿತು. ಇರಾನ್‌ನ ಈ ನಿರ್ಧಾರದಿಂದಾಗಿ ಜಾಗತಿಕವಾಗಿ ಭೀಕರ ಇಂಧನ ಕ್ಷಾಮ ತಲೆದೋರಿತು. ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಹಣದುಬ್ಬರ ಗಗನಕ್ಕೇರಿತು. ಇರಾನ್‌ನ ಹಡಗು ದಿಗ್ಬಂಧನವನ್ನು ಮುರಿಯಲು ಅಮೆರಿಕ ನೌಕಾಪಡೆ ಯತ್ನಿಸಿತು. ಆದರೆ ಇರಾನ್‌ನ ಸಣ್ಣ ಸಣ್ಣ ಕ್ಷಿಪಣಿ ಹಡಗುಗಳು ಮತ್ತು ಅತ್ಯಾಧುನಿಕ ಡ್ರೋನ್‌ಗಳು ಅಮೆರಿಕದ ಬೃಹತ್ ವಾರ್‌ಶಿಪ್‌ಗಳಿಗೆ ಸಿಗದಂತೆ ಕಾಡಿದವು.

ಇದನ್ನೂ ಓದಿ: ಇರಾನ್‌ನ ಮಿತ್ರರು ಯಾರು? ರಷ್ಯಾ-ಚೀನಾ ನಿಲುವೇನು?

ಇರಾನ್ ಕೇವಲ ರಕ್ಷಣಾತ್ಮಕವಾಗಿ ಉಳಿಯಲಿಲ್ಲ. ಮಧ್ಯಪ್ರಾಚ್ಯದಾದ್ಯಂತ (ಇರಾಕ್, ಸಿರಿಯಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ) ಹರಡಿಕೊಂಡಿದ್ದ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ‘ಶಾಹೆದ್’ ಆತ್ಮಹತ್ಯಾ ಡ್ರೋನ್‌ಗಳ ಮೂಲಕ ಪ್ರಬಲ ದಾಳಿ ನಡೆಸಿತು. ಅಮೆರಿಕದ ರಕ್ಷಣಾ ವ್ಯವಸ್ಥೆಗಳಾದ ಪೇಟ್ರಿಯಾಟ್ ಮತ್ತು ಥಾಡ್ ರೇಡಾರ್‌ಗಳನ್ನು ಇರಾನ್‌ನ ಕ್ಷಿಪಣಿಗಳು ಯಶಸ್ವಿಯಾಗಿ ಭೇದಿಸಿದವು. 12ಕ್ಕೂ ಹೆಚ್ಚು ಅಮೆರಿಕನ್ ರೇಡಾರ್ ಮತ್ತು ಸ್ಯಾಟಲೈಟ್ ವ್ಯವಸ್ಥೆಗಳು ಈ ದಾಳಿಯಲ್ಲಿ ಹಾನಿಗೊಳಗಾದವು.

ಶಸ್ತ್ರಾಸ್ತ್ರ ಬಲಕ್ಕಿಂತ ವ್ಯೂಹ ಬಲವೇ ದೊಡ್ಡದು!

ಅಮೆರಿಕ ಮತ್ತು ಇಸ್ರೇಲ್ ವಿಶ್ವದ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿದೆ. ಆದರೂ ಇರಾನ್‌ನ “ಅಸಿಮ್ಮೆಟ್ರಿಕ್ ವಾರ್‌ಫೇರ್” (ಅಸಮಪಾರ್ಶ್ವದ ಯುದ್ಧತಂತ್ರ) ಎದುರು ಉಭಯ ದೇಶಗಳು ತತ್ತರಿಸಿದವು. ಸಾವಿರಾರು ಕೋಟಿ ಡಾಲರ್ ವೆಚ್ಚದ ಅಮೆರಿಕದ ಕ್ಷಿಪಣಿಗಳನ್ನು ಇರಾನ್ ಕೇವಲ ಕೆಲವು ಸಾವಿರ ಡಾಲರ್ ವೆಚ್ಚದ ಡ್ರೋನ್‌ಗಳ ಮೂಲಕ ಎದುರಿಸಿತು. 2026ರ ಮೇ ಹೊತ್ತಿಗೆ ಅಮೆರಿಕದ ರಕ್ಷಣಾ ಇಲಾಖೆ ಈ ಯುದ್ಧಕ್ಕಾಗಿ ಬರೋಬ್ಬರಿ 29 ಬಿಲಿಯನ್ ಡಾಲರ್ ಹಣವನ್ನು ಕಳೆದುಕೊಂಡಿತ್ತು. ಮತ್ತಷ್ಟು ಹಣ ಬೇಕಾಯಿತು. ಈ ಆರ್ಥಿಕ ನಷ್ಟ ಮತ್ತು ಜಾಗತಿಕ ತೈಲ ಬಿಕ್ಕಟ್ಟು ಅಮೆರಿಕವನ್ನು ಕಂಗಾಲುಗೊಳಿಸಿತು.

ಯುದ್ಧದ ಮೂಲಕ ಇರಾನ್ ಅನ್ನು ಸಂಪೂರ್ಣ ಶರಣಾಗತಿಯಾಗಿಸಲು ಸಾಧ್ಯವಾಗದೆ ಕೊನೆಗೂ ಅಮೆರಿಕದ ಹಠ ಮುರಿಯಿತು. ಪಾಕಿಸ್ತಾನ ಮತ್ತು ಒಮಾನ್ ದೇಶಗಳ ಮಧ್ಯಸ್ಥಿಕೆಯಲ್ಲಿ ನಡೆದ ಸರಣಿ ಮಾತುಕತೆಗಳ ನಂತರ ಜೂನ್ 17ರಂದು ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದ (Islamabad Memorandum) ನಡೆದಿದೆ. ಒಪ್ಪಂದದ ಪ್ರಕಾರ ಅಮೆರಿಕವು ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ತಕ್ಷಣವೇ ಹಿಂತೆಗೆದುಕೊಂಡಿದೆ. ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿದೆ. ಅದರ ಭಾಗವಾಗಿ ನೀರಿನೊಳಗಿನ ಸ್ಫೋಟಕಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಅತ್ಯಂತ ಪ್ರಮುಖವಾಗಿ, ಅಮೆರಿಕವು ಈ ಹಿಂದೆ ಮುಟ್ಟುಗೋಲು ಹಾಕಿಕೊಂಡಿದ್ದ ಇರಾನ್‌ನ 25 ಬಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಆಸ್ತಿಯನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ.

ಹೀಗೆ ಯಾವ ಇರಾನ್ ಸರ್ಕಾರವನ್ನು ಪತನಗೊಳಿಸಲು ಅಮೆರಿಕ ಯುದ್ಧ ಆರಂಭಿಸಿತ್ತೋ, ಅದೇ ಇರಾನ್ ಸರ್ಕಾರವು ಮತ್ತಷ್ಟು ಗಟ್ಟಿಯಾಗಿ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ನಿಯಂತ್ರಣವನ್ನು ತನ್ನ ಕೈಯಲ್ಲಿಟ್ಟುಕೊಂಡು ಬೀಗುವಂತಾಯಿತು. ಬಾಂಬ್ ದಾಳಿಗಳ ಮೂಲಕ ಇರಾನ್ ಅನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಅಮೆರಿಕ ಕೊನೆಗೂ ರಾಜತಾಂತ್ರಿಕ ಮಾತುಕತೆಗೆ ಇಳಿಯಬೇಕಾಯಿತು. ಈ ಕಾರಣದಿಂದಾಗಿಯೇ ಜಾಗತಿಕ ರಕ್ಷಣಾ ವಿಶ್ಲೇಷಕರು, ಬಲಾಢ್ಯ ಅಮೆರಿಕದ ಹಠ ಹಾಗೂ ‘ಕೊಬ್ಬನ್ನು’ ಇರಾನ್ ಯಶಸ್ವಿಯಾಗಿ ಇಳಿಸಿದೆ ಎಂದು ಬಣ್ಣಿಸುತ್ತಾರೆ, ಇದು ದಿಟವೂ ಹೌದು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | DHO, THO ಅಮಾನತು ಆದೇಶ ಹಿಂಪಡೆಯಲು ಸರ್ಕಾರಿ ನೌಕರರ ಸಂಘ ಆಗ್ರಹ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (DHO) ಡಾ.ಧ್ಯಾನೇಶ್ವರ ನಿರಗುಡೆ ಹಾಗೂ...

ಬಂಟ್ವಾಳದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಜಾಮೀನು ಬೆನ್ನಲ್ಲೇ ಆರೋಪಿಗಳ ಮೇಲೆ ‘ಗೂಂಡಾ ಕಾಯ್ದೆ’ ಅಸ್ತ್ರ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ – ಯುಪಿಯಲ್ಲಿ ಸಿನಿಮಾ ಆಗುವುದೇ?

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ...

ನೋಯ್ಡಾ ಬಳಿ ವಿದ್ಯಾರ್ಥಿಗಳಿಗೆ ಗುದ್ದಿ ಪರಾರಿಯಾದ ಕಾರು ಚಾಲಕ

​ನೋಯ್ಡಾದ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಜಿಎನ್‌ಐಓಟಿ (GNIOT) ಕಾಲೇಜಿನ ಮುಂಭಾಗದಲ್ಲಿ...