ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

Date:

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ?

‘ಸ್ಪೋಟಕ ಹೇಳಿಕೆ’, ‘ಹೊಸ ಬಾಂಬ್’- ಇತ್ಯಾದಿ ಪದಪುಂಜಗಳನ್ನು ಮಾಧ್ಯಮಗಳು ಕೆಲವೇ ಕೆಲವು ರಾಜಕಾರಣಿಗಳಿಗಾಗಿ ಎಚ್ಚೆತ್ತವಾಗಿ ಬಳಸುವಂತೆ ಕಾಣುತ್ತವೆ. ಬಹುಶಃ ಮೀಡಿಯಾಗಳ ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿಯವರು ಮೊದಲಿಗರಾಗಿದ್ದರೆ ಅಚ್ಚರಿ ಪಡಬೇಕಿಲ್ಲ. ‘ಎಚ್‌ಡಿಕೆ ಹೊಸ ಬಾಂಬ್’ ಎಂದು ವರದಿಯಾಗುವುದು, ಆಮೇಲೆ ಅದು ಬಾಂಬ್‌ ಆಗಿರದೆ, ‘ಠುಸ್ ಪಟಾಕಿ’ ಆಗಿತ್ತು ಎಂದು ಗೇಲಿಗೆ ಒಳಗಾಗುವುದು ರಾಜಕಾರಣದಲ್ಲಿ ಸಾಮಾನ್ಯವಾಗಿಬಿಟ್ಟಿದೆ.

- Advertisement -

ರಾಜಕೀಯವಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಹೇಳಿಕೆಗಳನ್ನು ರಾಜಕಾರಣಿಗಳು ನೀಡಿದಾಗ ಸಾಮಾನ್ಯವಾಗಿ ‘ಸ್ಟೋಟಕ’, ‘ಹೊಸ ಬಾಂಬ್’- ಇತ್ಯಾದಿ ಪದಗಳನ್ನು ಬಳಸುವುದು ರೂಢಿಯಲ್ಲಿದೆ. ಆದರೆ ಕುಮಾರಸ್ವಾಮಿಯವರ ಹೇಳಿಕೆಗಳಿಗೆ ಈ ‘ಸ್ಟೋಟಕ, ಹೊಸ ಬಾಂಬ್’ ಇತ್ಯಾದಿ ವಿಶೇಷಣಗಳನ್ನು ಸೇರಿದಾಗ- ಅವು ಗಂಭೀರವಾಗಿ ಕಂಡಿದ್ದಕ್ಕಿಂತ, ಅಪಹಾಸ್ಯದ ಸರಕಾಗಿ ಹೊಮ್ಮಿದ್ದೇ ಹೆಚ್ಚು. ಕೆಲವೊಮ್ಮೆ ನಿಜದ ಅರ್ಥದಲ್ಲಿ ‘ಸ್ಫೋಟಕ’ ಎನಿಸುವ ಹೇಳಿಕೆಗಳನ್ನೂ ಕೊಟ್ಟರೂ, ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯದೆ ನಿಂತುಬಿಡುವುದು ಕುಮಾರಸ್ವಾಮಿಯವರ ಸೋಲು. ಹೀಗಾಗಿಯೇ ಎಚ್‌ಡಿಕೆಯವರ ಆರೋಪಗಳ ಜೊತೆಗೆ ‘ಹಿಟ್ ಅಂಡ್ ರನ್’ ಅಪವಾದವೂ ಅಂಟಿಕೊಂಡುಬಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

“ಅಕ್ಕ ಸಮ್ಮೇಳನದ ಹಿನ್ನೆಲೆಯಲ್ಲಿ ಅಮೆರಿಕಗೆ ತೆರಳುತ್ತಿದ್ದು, ಅಲ್ಲಿಂದ ಬಂದ ಬಳಿಕ ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯ ಹೇಳುತ್ತೇನೆ. ಪ್ರಾಮಾಣಿಕವಾಗಿ ಜನರ ಮುಂದೆ ಹಲವು ದಾಖಲೆ ಇಡ್ತೇ‌ನೆ. ನಿಮಗೆ ದಿನಕ್ಕೊಂದು ಸುದ್ದಿ ಕೊಡುತ್ತೇನೆ. ಆಗ ಹೆಚ್.ಡಿ.ಕುಮಾರಸ್ವಾಮಿ ಏನು ಎಂದು ಗೊತ್ತಾಗುತ್ತೆ” ಎಂದಿದ್ದರು ಕುಮಾರಸ್ವಾಮಿ.

ಕುಮಾರಸ್ವಾಮಿಯವರು ವಾಪಸ್ ಬರುವ ವೇಳೆಗೆ ಅಪರಾಧಿ ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದ ಸುದ್ದಿಗಳು ಮಾಧ್ಯಮಗಳಲ್ಲಿ ಸದ್ದು ಮಾಡಿದ್ದವು. ಪ್ರಜ್ವಲ್ ಜೈಲಿನಲ್ಲೂ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಿಕೊಂಡಿದ್ದ ಮತ್ತು ಆತನ ಬಳಿ ಪತ್ತೆಯಾಗಿದ್ದ ಪೆನ್ ಡ್ರೈವ್ ನಲ್ಲಿ 170ಕ್ಕೂ ಹೆಚ್ಚು ಅಶ್ಲೀಲ ದೃಶ್ಯಗಳು ಸಿಕ್ಕಿವೆ ಎಂಬ ಸುದ್ದಿ ವರದಿ ಹೊರಬಿತ್ತು. “ಕುಮಾರಸ್ವಾಮಿಯವರು ಹೇಳುತ್ತಿದ್ದ ಸ್ಫೋಟಕ ಸುದ್ದಿ ಇದುವೆ?” ಎಂದು ನೆಟ್ಟಿಗರು ವ್ಯಂಗ್ಯವಾಡಿದರು.

ಇದನ್ನೂ ಓದಿರಿ: ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ ಯಾರಿಗೆ?

ಅಮೆರಿಕದಿಂದ ಹಿಂದಿರುಗಿದ ಅವರು, ಹಾಸನಕ್ಕೆ ಆಗಮಿಸಿ ತಾಯಿ ಚೆನ್ನಮ್ಮ ಅವರ ಸಮಾಧಿಗೆ ಭೇಟಿ ಕೊಟ್ಟರು.  ಅಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, “ನನ್ನ ಹೇಳಿಕೆ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ, ಯಾವಾಗ ಬರ್ತಾನೆ? ನನ್ನದು ಏನಿರಬಹುದು ಎಂದು ರಾತ್ರಿ ನಿದ್ರೆಯಲ್ಲೂ ಕೂಡ ಕನವರಿಸಿದ್ದಾರೆ. ನಾನು ಮಾಧ್ಯಮ ಸ್ನೇಹಿತರಿಗೆ ನಿರಾಸೆ ಮಾಡೋದಿಲ್ಲ. ನಿಮಗೆ ಒಳ್ಳೆಯ ರೀತಿ ಆಹಾರವನ್ನ ಕೊಡುತ್ತೇನೆ. ವಿಜಯದಶಮಿ, ಅದು ಯುದ್ಧಕ್ಕೆ ಒಳ್ಳೆ ಕಾಲ, ಆದ್ದರಿಂದ ಪ್ರಾರಂಭ ಮಾಡುತ್ತೇನೆ” ಎಂದಿದ್ದಾರೆ. ಜೊತೆಗೆ ಪ್ರಜ್ವಲ್‌ಗೆ ಸಂಬಂಧಿಸಿದ ಸುದ್ದಿಯನ್ನು ವಿಷಯಾಂತರದ ಸರಕಾಗಿ ಬಳಸುತ್ತಿದ್ದಾರೆ ಎಂಬ ಪ್ರತಿಪಾದನೆಯನ್ನೂ ಮಾಡಿದ್ದಾರೆ. “ಬಿಡದಿ, ನೈಸ್, KPSC ವಿಚಾರದ ಬಗ್ಗೆ ಮಾತನಾಡಿದ ಕೂಡಲೇ, ಪರಪ್ಪನ ಅಗ್ರಹಾರ, ಪೆನ್‌ಡ್ರೈವ್ ವಿಚಾರ ಮುನ್ನಲೆಗೆ ಬಂದಿದೆ. ಎರಡು ವರ್ಷದಿಂದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಇದ್ದಾನೆ, ಇಷ್ಟು ದಿನ ಇಲ್ಲದೇ ಇದ್ದದ್ದು ಈಗ ಯಾಕೆ ಮುನ್ನಲೆಗೆ ಬರುತ್ತಿದೆ. ಪ್ರಜ್ವಲ್ ಕೈಯಲ್ಲಿ ಫೋನ್ ಇದೆ, ಅದರಲ್ಲಿ ಅಶ್ಲೀಲ ದೃಶ್ಯ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಎರಡು ವರ್ಷ ಬೇಕಾಯಿತಾ, ಈ ಡ್ರಾಮಾ ನಡೆಸುತ್ತಿರುವವರು ಯಾರು?” ಎಂದು ಪ್ರಶ್ನಿಸಿದ್ದಾರೆ.

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ. ಈಗಿರುವ ಸರ್ಕಾರದ ಮಂತ್ರಿಗಳ ಅಡಿಯೇ ಕೆಪಿಎಸ್​​ಸಿ, ಎಇಇ ಹಗರಣಗಳು ನಡೆದಿವೆ. ಲಕ್ಷಾಂತರ ಯುವಕರ ಭಾವನೆಗಳನ್ನು ಮಾರಾಟಕ್ಕಿಟ್ಟು ವಸೂಲಿ ಮಾಡಲಾಗಿದೆ. ಇದ್ಯಾವುದನ್ನೂ ನಾನು ಹೇಳುತ್ತಿಲ್ಲ. ದಾಖಲೆಗಳು ಹೇಳುತ್ತಿವೆ. ಅಕ್ರಮಗಳನ್ನ ಜನರ ಮುಂದಿಡುವುದು ನನ್ನ ಜವಾಬ್ದಾರಿ. ತೀರ್ಮಾನ ಜನರದ್ದು. ನಾನು ಯಾವುದೇ ದಾಖಲೆ ಇಲ್ಲದೇ ಯಾರ ಬಗ್ಗೆಯೂ ಮಾತನಾಡಲು ಹೋಗುವುದಿಲ್ಲ, ಅಮೆರಿಕಗೆ ಹೋಗುವ ಮುನ್ನ ಏನು ಹೇಳಿಕೆ ನೀಡಿದ್ದೆ, ಅದಕ್ಕೆ ಬದ್ದನಾಗಿದ್ದೇನೆ” ಎಂದಿದ್ದಾರೆ. ಆದರೆ, ವಿಜಯದಶಮಿಯವರೆಗೆ ಕಾಲವನ್ನು ಮುಂದೂಡಿದ್ದು, ನಿಜಕ್ಕೂ ‘ಅಲ್ಲೋಲ ಕಲ್ಲೋಲ’ ಸೃಷ್ಟಿಸುವ ಸುದ್ದಿ ಕೊಡುತ್ತಾರೋ ಅಥವಾ ನಿರಾಸೆ ಮಾಡುತ್ತಾರೋ ಗೊತ್ತಿಲ್ಲ.

“ಸ್ಟೋಟಕ ಸುದ್ದಿ ರಿವೀಲ್ ಮಾಡುತ್ತೇನೆ” ಎಂದು ಹೇಳಿಕೆ ನೀಡುವುದು ಕುಮಾರಸ್ವಾಮಿಯವರ ‘ಸ್ಟೈಲ್ ಆಫ್ ಪೊಲಿಟಿಕ್ಸ್’. 2023ರ ಜುಲೈ ತಿಂಗಳಿನಲ್ಲಿ  ಅಕ್ರಮ ವರ್ಗಾವಣೆ ದಂಧೆಯ ಆರೋಪ ಮಾಡಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ದಾಖಲೆ ಇದ್ದರೆ ತೋರಿಸಿ” ಎಂದು ಸವಾಲು ಹಾಕಿದ್ದರು.  ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಎಚ್‌ಡಿಕೆಯವರು ತಮ್ಮ ಜೇಬಿನಲ್ಲಿದ್ದ ಪೆನ್‌ ಡ್ರೈವ್ ಒಂದನ್ನು ತೆಗೆದು, “ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ನನ್ನ ಬಳಿ ಸಾಕ್ಷಿಯಿದೆ.  ಕಾಂಗ್ರೆಸ್ ವರ್ಗಾವಣೆಗೆ ಸಂಬಂಧಿಸಿದ ಆಡಿಯೋ ಇದೆ” ಎಂದು ಹೇಳಿದ್ದರು.

ಇದಾದ ವಾರದ ಬಳಿಕ, “ಪೆನ್ ಡ್ರೈವ್ ವಿವರಗಳನ್ನು ಬಿಡುಗಡೆ ಮಾಡಲು ನನ್ನ ಕಡೆಯಿಂದ ಯಾವುದೇ ತುರ್ತು ಇಲ್ಲ. ಕಾಂಗ್ರೆಸ್ ನಾಯಕರೇ ಅದನ್ನು ಬಿಡುಗಡೆ ಮಾಡದಂತೆ ತಡೆಯುತ್ತಿದ್ದಾರೆ. ಚಿಂತಿಸಬೇಡಿ, ನಾನು ಇನ್ನೂ ಅನೇಕ ವಿಷಯಗಳನ್ನು ಪಡೆದುಕೊಳ್ಳಲಿದ್ದೇನೆ. ಕಾಂಗ್ರೆಸ್ ನಾಯಕರ ಒಂದು ವರ್ಗವು ತಮ್ಮ ಪಕ್ಷದಿಂದ ಹೊರಬರಲು ಒಂದು ವಿಕೆಟ್ ಬೀಳುವುದಕ್ಕಾಗಿ ಕಾಯುತ್ತಿದೆ” ಎಂದಿದ್ದರು. ಆದರೆ ಇದಾಗಿ, ಮೂರು ವರ್ಷಗಳೇ ಕಳೆದಿವೆ. ಪೆನ್ ಡ್ರೈವ್ ಮಾತ್ರ ಹೊರಗೆ ಬೀಳಲಿಲ್ಲ. ಈ ಘಟನಾವಳಿಗಳು ನಡೆಯುತ್ತಿದ್ದಾಗ, ಲೋಕಸಭಾ ಚುನಾವಣೆಯ ಹೊತ್ತಿಗೆ ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದ ಪೆನ್‌ಡ್ರೈವ್‌ಗಳು ಹಾಸನದ ಗಲ್ಲಿಗಲ್ಲಿಗಳಲ್ಲಿ ಪತ್ತೆಯಾಗಿ, ರಾಜಕೀಯ ತಿರುವುಗಳಿಗೆ ಕಾರಣವಾದವು. ಪ್ರಜ್ವಲ್ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸಾಬೀತಾಗಿ, ಈಗ ಜೈಲು ಶಿಕ್ಷೆಯನ್ನೂ ಅನುಭವಿಸುತ್ತಿದ್ದಾನೆ. ಕುಮಾರಸ್ವಾಮಿಯವರ ರಾಜಕೀಯ ವಿರೋಧಿಗಳು ಆ ಸಂದರ್ಭದಲ್ಲಿ, ಕುಮಾರಣ್ಣನವರ ಪೆನ್‌ ಡ್ರೈವ್ ಅನ್ನು ಪ್ರಜ್ವಲ್ ಪ್ರಕರಣಕ್ಕೆ ಥಳುಕು ಹಾಕಿ ವ್ಯಂಗ್ಯವಾಡಿದ್ದರು.

2025ರ ನವೆಂಬರ್‌ನಲ್ಲಿ ನಡೆದ ಜೆಡಿಎಸ್‌ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ಕುಮಾರಸ್ವಾಮಿಯವರು, “ಕೆಲವೇ ತಿಂಗಳುಗಳಲ್ಲಿ ರಾಜ್ಯ ರಾಜಕಾರಣವು ಸ್ಫೋಟಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಆ ರಾಜಕೀಯ ಬೆಳವಣಿಗೆಗೆ ಜೆಡಿಎಸ್‌ ಕಾರ್ಯಕರ್ತರು ಸಿದ್ಧರಾಗಿರಬೇಕು. ರಾಜ್ಯದಲ್ಲಿ ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವೇ ತಿಂಗಳಲ್ಲಿ ರಾಜಕೀಯ ಕ್ರಾಂತಿ ಆಗುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕರ್ತರು ಮತ್ತು ಮುಖಂಡರು ಜನರ ಬಳಿಯೇ ಇರಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿರಬೇಕು” ಎಂದಿದ್ದರು. ಆದರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಬೆಳವಣಿಗೆಗಳು ನಡೆಯಲಿಲ್ಲ. ಕಾಂಗ್ರೆಸ್ ನಾಯಕರ ನಡುವೆ ಆಂತರಿಕವಾಗಿ ಆಗಿದೆ ಎನ್ನಲಾದ ಒಡಂಬಡಿಕೆಯ ಆಧಾರದಲ್ಲಿ ಸಿದ್ದರಾಮಯ್ಯನವರು ಸಿಎಂ ಕುರ್ಚಿಯಿಂದ ಇಳಿದರು. ಘನತೆಯಿಂದ ನಿರ್ಗಮಿಸಿದರು. ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಯಾದರು. ಪಕ್ಷದೊಳಗೂ ಹೆಚ್ಚಿನ ಕಗ್ಗಂಟು ಉಂಟಾಗಲಿಲ್ಲ. ಶಿಸ್ತುಬದ್ಧವಾಗಿ ನಾಯಕತ್ವ ಬದಲಾವಣೆಯನ್ನು ಕಾಂಗ್ರೆಸ್ ಮಾಡಿತ್ತು. ಕುಮಾರಸ್ವಾಮಿಯವರು ಹೇಳಿದ್ದು ನೋಡಿದರೆ, “ದೊಡ್ಡ ಮಟ್ಟದ ಆಪರೇಷನ್ ಕಮಲ ನಡೆಯುತ್ತದೆಯೋ, ಕಾಂಗ್ರೆಸ್ ಛಿದ್ರವಾಗಿ ವಿಧಾನಸಭೆ ವಿಸರ್ಜನೆಯಾಗುತ್ತದೆಯೋ ಅಥವಾ ಸಿದ್ದರಾಮಯ್ಯನವರು ಸಿಡಿದೆದ್ದು ನಿಲ್ಲುತ್ತಾರೆಯೋ” ಎನ್ನುವ ಮಟ್ಟಿಗೆ ಇತ್ತು. ಆದರೆ ಯಾವುದೂ ಸಂಭವಿಸಲಿಲ್ಲ!

ಇದನ್ನೂ ಓದಿರಿ: ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು ಬೆಸೆಯಲಿ

ಒಕ್ಕಲಿಗ ನಾಯಕತ್ವಕ್ಕಾಗಿ ಡಿ.ಕೆ. ಶಿವಕುಮಾರ್ ಮತ್ತು ಎಚ್. ಡಿ. ಕುಮಾರಸ್ವಾಮಿಯವರ ನಡುವೆ ನಡೆಯುವ ರಾಜಕೀಯ ಕಾಳಗ, ವಾಕ್ಸಮಕ್ಕೆ ದೊಡ್ಡ ಇತಿಹಾಸವೇ ಇದೆ. ರಾಜಕೀಯವಾಗಿ ಒಬ್ಬರನ್ನೊಬ್ಬರು ಮೆಟ್ಟಿ ನಿಲ್ಲಬೇಕಾದ ಸನ್ನಿವೇಶದಲ್ಲಿ ಕುಮಾರಸ್ವಾಮಿಯವರು ಆರೋಪಗಳನ್ನು ಮಾಡುವುದು, ಡಿಕೆ ಶಿಕುಮಾರ್‌ ಅವರು, “ಇವೆಲ್ಲ ಹಿಟ್ ಅಂಡ್ ರನ್” ಎನ್ನುವುದು ಸಾಮಾನ್ಯ. ಆದರೆ ಈ ಬಾರಿಯಾದರೂ ಕುಮಾರಸ್ವಾಮಿಯವರು ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆಯೇ? ವಿಜಯದಶಮಿಯ ಬಳಿಕ ಮಾಧ್ಯಮಗಳಿಗೆ ನಿರಾಶೆ ಉಂಟು ಮಾಡುವುದಿಲ್ಲವೇ?- ಅದು ಕುಮಾರಸ್ವಾಮಿಯವರಿಗೆ ಮಾತ್ರ ಗೊತ್ತು!

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಹ್ಯಾಕಾಶದಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ...

ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು ಬೆಸೆಯಲಿ

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ...