ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಭಾರತ- ಪಾಕ್ ಯುದ್ಧನೌಕೆಗಳ ಢಿಕ್ಕಿ ಹೊಡೆದ ಕತೆಯೇನು?

Date:

ಅರಬ್ಬಿ ಸಮುದ್ರದ ಉತ್ತರ ಭಾಗದ ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಯುದ್ಧನೌಕೆಗಳು ಮುಖಾಮುಖಿಯಾಗಿ, ಅಪರೂಪದ ಹಾಗೂ ಅಪಾಯಕಾರಿ ರೀತಿಯಲ್ಲಿ ಢಿಕ್ಕಿ ಹೊಡೆದುಕೊಂಡ ಘಟನೆ ಸೆಪ್ಟೆಂಬರ್ 15ರಂದು ಸಂಭವಿಸಿದೆ. ಈ ಘಟನೆಯು ಉಭಯ ದೇಶಗಳ ನಡುವೆ ತೀವ್ರ ರಾಜತಾಂತ್ರಿಕ ಘರ್ಷಣೆಗೆ ಕಾರಣವಾಗಿದೆ.

- Advertisement -

ಸೆಪ್ಟೆಂಬರ್ 15ರ ಸಾಯಂಕಾಲ, ಭಾರತೀಯ ನೌಪಡೆಯ ಮುಂಚೂಣಿ ಯುದ್ಧನೌಕೆಯೊಂದು ಉತ್ತರ ಅರಬ್ಬಿ ಸಮುದ್ರದ ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ನಿಯಮಿತ ಕಣ್ಗಾವಲು ನಡೆಸುತ್ತಿತ್ತು. ಈ ವೇಳೆ ಪಾಕಿಸ್ತಾನ ನೌಪಡೆಯ ‘ಪಿಎನ್‌ಎಸ್ ಹುನೈನ್’ ಎಂಬ ಗಸ್ತು ನೌಕೆಯು ಅತೀವ ವೇಗದಲ್ಲಿ ಭಾರತೀಯ ನೌಕೆಯತ್ತ ಧಾವಿಸಿ ಬಂದಿದೆ. ಅತ್ಯಂತ ಅಪಾಯಕಾರಿ ಹಾಗೂ ನಿಯಮಬಾಹಿರವಾಗಿ ಕಡಲ ಸಾಹಸ ಪ್ರದರ್ಶಿಸಲು ಯತ್ನಿಸಿದ ಪಾಕ್ ನೌಕೆ, ಕೊನೆಗೆ ಭಾರತೀಯ ಯುದ್ಧನೌಕೆಗೆ ಢಿಕ್ಕಿ ಹೊಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಇದನ್ನೂ ಓದಿ: ಯುದ್ಧನೌಕೆಯ ಮೇಲೆ ಮುನ್ಸೂಚನೆ ಇಲ್ಲದೆ ಮಾಡಿದ ದಾಳಿಗೆ ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಈ ಬಗ್ಗೆ ಭಾರತ ಹೇಳಿದ್ದೇನು?

ಪಾಕಿಸ್ತಾನದ ನೌಕೆಯು ಕನಿಷ್ಠ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಕೆಟ್ಟ ಮತ್ತು ವೃತ್ತಿಪರವಲ್ಲದ ರೀತಿಯಲ್ಲಿ ನೌಕೆಯನ್ನು ಚಲಾಯಿಸಿದೆ. ಪಾಕ್ ನೌಕೆಯ ತೀವ್ರ ಪ್ರಚೋದನೆಯ ಹೊರತಾಗಿಯೂ, ಭಾರತೀಯ ನೌಕೆಯ ಕ್ಯಾಪ್ಟನ್ ತಕ್ಷಣ ಸಮಯಪ್ರಜ್ಞೆ ಮೆರೆದು ನೌಕೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಜೀವಹಾನಿ ಮತ್ತು ಭಾರಿ ಅನಾಹುತ ತಪ್ಪಿದೆ ಎಂದು ಭಾರತ ಹೇಳಿದೆ.

ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ನ ಪ್ರಭಾರಿ ಅಧಿಕಾರಿ ಸಾಹದ್ ವರೈಚ್ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ (MEA) ಕರೆಸಿಕೊಂಡು ಭಾರತ ಕಠಿಣ ಪ್ರತಿಭಟನೆ ದಾಖಲಿಸಿದೆ. 1991ರ ಭಾರತ-ಪಾಕ್ ದ್ವಿಪಕ್ಷೀಯ ಮಿಲಿಟರಿ ಒಪ್ಪಂದದ ‘ಆರ್ಟಿಕಲ್ 10’ ರ ಪ್ರಕಾರ, ಅಂತಾರಾಷ್ಟ್ರೀಯ ಜಲಸೀಮೆಯಲ್ಲಿ ಉಭಯ ದೇಶಗಳ ನೌಕೆಗಳು ಪರಸ್ಪರ ಕನಿಷ್ಠ 3 ನಾಟಿಕಲ್ ಮೈಲಿ (ಸುಮಾರು 5.5 ಕಿ.ಮೀ) ಅಂತರವನ್ನು ಕಾಯ್ದುಕೊಳ್ಳಬೇಕು. ಪಾಕಿಸ್ತಾನ ಇದನ್ನು ನೇರವಾಗಿ ಉಲ್ಲಂಘಿಸಿದೆ ಎಂದು ಭಾರತ ಕಿಡಿಕಾರಿದೆ.

ಇನ್ನು ಭಾರತೀಯ ನೌಕೆಗೆ ಯಾವುದೇ ಪ್ರಮುಖ ಹಾನಿಯಾಗಿಲ್ಲ ಹಾಗೂ ಅದು ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಆದರೆ, ಭಾರತೀಯ ನೌಕೆಗೆ ಢಿಕ್ಕಿ ಹೊಡೆದ ಪಾಕಿಸ್ತಾನದ ‘ಪಿಎನ್‌ಎಸ್ ಹುನೈನ್’ ನೌಕೆಯು ತೀವ್ರ ಜಖಂಗೊಂಡು ಬಂದರಿಗೆ ಮರಳಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಭಾರತ-ಪಾಕ್ ನೌಕಾಪಡೆ ನೌಕೆಗಳ ಡಿಕ್ಕಿ: ಪಾಕಿಸ್ತಾನ ನಡವಳಿಕೆಗೆ ವಿದೇಶಾಂಗ ಸಚಿವಾಲಯ ಆಕ್ಷೇಪ

ಆದರೆ ಪಾಕಿಸ್ತಾನದ ವಾದವೇನು?

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ತನ್ನ ಆರೋಪಗಳಿಗೆ ಪ್ರತಿಯಾಗಿ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ. ಪಾಕಿಸ್ತಾನ ವಿದೇಶಾಂಗ ಇಲಾಖೆಯ ಪ್ರಕಾರ, ತನ್ನ ಅಭ್ಯಾಸ ಕವಾಯಿತು ‘SEASPARK-26’ ನಡೆಯುತ್ತಿದ್ದ ವೇಳೆ, ತನ್ನ ‘ವಿಶೇಷ ಆರ್ಥಿಕ ವಲಯ’ದ (EEZ) ವ್ಯಾಪ್ತಿಯಲ್ಲಿ ಭಾರತೀಯ ಯುದ್ಧನೌಕೆಯೇ ಆಕ್ರಮಣಕಾರಿಯಾಗಿ ತನ್ನ ನೌಕೆಯ ಹತ್ತಿರಕ್ಕೆ ಬಂದು ಪ್ರಚೋದನೆ ನೀಡಿದೆ ಎಂದು ಆರೋಪಿಸಿದೆ. ಭಾರತವು ಜಾಗತಿಕ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನ ಪ್ರತ್ಯಾರೋಪ ಮಾಡಿದೆ.

ಈ ಹಿಂದೆಯೂ ನಡೆದಿತ್ತು ಇಂತಹ ಘಟನೆ!

ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಭಾರತ ಮತ್ತು ಪಾಕಿಸ್ತಾನದ ನೌಕೆಗಳು ಮುಖಾಮುಖಿಯಾಗುವುದು ಇದೇ ಮೊದಲೇನಲ್ಲ. 2011ರ ಜೂನ್‌ನಲ್ಲಿ ಏಡನ್ ಕೊಲ್ಲಿಯಲ್ಲಿ ಕಡಲ್ಗಳ್ಳರ ವಿರುದ್ಧದ ಕಾರ್ಯಾಚರಣೆ ವೇಳೆ, ಪಾಕಿಸ್ತಾನ ನೌಪಡೆಯ ‘ಪಿಎನ್‌ಎಸ್ ಬಾಬರ್’ ನೌಕೆಯು ಭಾರತದ ‘ಐಎನ್‌ಎಸ್ ಗೋದಾವರಿ’ ಯುದ್ಧನೌಕೆಯ ಹಿಂಭಾಗದಿಂದ ವೇಗವಾಗಿ ಬಂದು ಉಜ್ಜಿಕೊಂಡು ಹೋಗಿತ್ತು. ಆ ವೇಳೆ ಭಾರತೀಯ ನೌಕೆಯ ಹೆಲಿಕಾಪ್ಟರ್ ಸುರಕ್ಷತಾ ಜಾಲಕ್ಕೆ ಹಾನಿಯಾಗಿತ್ತು. ಅಂದೂ ಕೂಡ ಭಾರತ ರಾಜತಾಂತ್ರಿಕ ಮಟ್ಟದಲ್ಲಿ ಪ್ರಬಲ ಪ್ರತಿಭಟನೆ ವ್ಯಕ್ತಪಡಿಸಿತ್ತು.

ಸದ್ಯ ಅರಬ್ಬಿ ಸಮುದ್ರದಲ್ಲಿ ಸೇನಾ ಉದ್ವಿಗ್ನತೆ ಹೆಚ್ಚಾಗದಂತೆ ತಡೆಯಲು ಜಾಗತಿಕ ಮಟ್ಟದಲ್ಲಿ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ರಾಜತಾಂತ್ರಿಕ ಮಟ್ಟದ ಮಾತುಕತೆಗಳು ಮುಂದುವರಿದಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಳಿ ಮೂವತ್ತರಲ್ಲೇ ಮಹಿಳೆಯರ ಹೃದಯಕ್ಕೆ ಮುಪ್ಪು; ಪುರುಷರಿಗಿಂತ 10 ವರ್ಷ ಮುನ್ನವೇ ಆರಂಭ!

ಮಹಿಳೆಯರ ಹೃದಯದ ಆರೋಗ್ಯದ ಕುರಿತಂತೆ ಇದುವರೆಗೆ ಇದ್ದ ಸಾಮಾನ್ಯ ನಂಬಿಕೆಗಳನ್ನು ಸಂಪೂರ್ಣವಾಗಿ...

ಸ್ತ್ರೀ ಸಬಲೀಕರಣಕ್ಕೆ ರಾಣಿ ಚನ್ನಮ್ಮನ ಜೀವನ, ಹೋರಾಟವೇ ಪ್ರೇರಣೆ: ಪ್ರೊ. ಸಿ.ಎಂ ತ್ಯಾಗರಾಜ

ರಾಣಿ ಚನ್ನಮ್ಮನ ಚರಿತ್ರೆ ಹಾಗೂ ಅವರು ಪ್ರತಿಪಾದಿಸಿದ ಸ್ವಾತಂತ್ರ್ಯ, ಸ್ವಾಭಿಮಾನ, ಧೈರ್ಯ...

ಹವಾಮಾನ ವೈಪರೀತ್ಯ: ತೀವ್ರ ಶಾಖದ ಅಪಾಯಕ್ಕೆ ತುತ್ತಾಗುತ್ತಿರುವವರಲ್ಲಿ ಭಾರತೀಯರೇ ಹೆಚ್ಚು

ಮಾನವ ಕೃತ್ಯಗಳಿಂದಾಗಿ ಭಾರೀ ಹವಾಮಾನ ವೈಪರೀತ್ಯ‌ ಎದುರಾಗಿದೆ. ಉಳ್ಳವರ ಕೃತ್ಯಕ್ಕೆ ಇಡೀ...

ಬಾಗಲಕೋಟೆ | ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ: ರಾಷ್ಟ್ರಮಟ್ಟದ ಸಾಧನೆಗೆ ಸಚಿವ ಕಾಶಪ್ಪನವರ ಕರೆ

ಶಿಕ್ಷಣದ ಜತೆಗೆ ಕ್ರೀಡೆಗೂ ಸಮಾನ ಮಹತ್ವ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ...