ಇರಾನ್ ಸಮರದ ನಡುವೆಯೇ ಅಮೆರಿಕ ಸೇನಾ ಮುಖ್ಯಸ್ಥರಿಗೆ ತಕ್ಷಣವೇ ನಿವೃತ್ತರಾಗಲು ರಕ್ಷಣಾ ಕಾರ್ಯದರ್ಶಿ ಸೂಚನೆ

Date:

ಇರಾನ್ ವಿರುದ್ಧ ಅಮೆರಿಕದ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕದ ಸೇನಾ ಮುಖ್ಯಸ್ಥ (ಚೀಫ್ ಆಫ್ ಸ್ಟಾಫ್) ಜನರಲ್ ರ‍್ಯಾಂಡಿ ಜಾರ್ಜ್ ಅವರಿಗೆ ಹುದ್ದೆಯಿಂದ ಕೆಳಗಿಳಿಯಲು ಹಾಗೂ ತಕ್ಷಣವೇ ನಿವೃತ್ತಿ ಪಡೆಯಲು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಶುಕ್ರವಾರ ಸೂಚಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

- Advertisement -

​ಅಮೆರಿಕ-ಇರಾನ್ ಸಮರದ ನಡುವೆ ಸೇನೆಯ ಅತ್ಯುನ್ನತ ಅಧಿಕಾರಿಗೆ ಹುದ್ದೆ ತ್ಯಜಿಸಲು ಹೆಗ್ಸೆತ್ ಸೂಚಿಸಿರುವುದನ್ನು ಪೆಂಟಗನ್ ಖಚಿತಪಡಿಸಿದೆ. ಇದರ ಬೆನ್ನಲ್ಲೇ, ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್, ಸೇನಾ ಕಾರ್ಯದರ್ಶಿ ಡೇನಿಯಲ್ ಡ್ರಿಸ್ಕಾಲ್ ಮತ್ತು ಕಾರ್ಮಿಕ ಕಾರ್ಯದರ್ಶಿ ಲೋರಿ ಚಾವೆಜ್-ಡಿರೆಮರ್ ಅವರು ಸಹ ಡೊನಾಲ್ಡ್ ಟ್ರಂಪ್ ಆಡಳಿತದಿಂದ ಹೊರನಡೆಯುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಶ್ವೇತಭವನದ ಮೂಲಗಳನ್ನು ಉಲ್ಲೇಖಿಸಿ ‘ದಿ ಅಟ್ಲಾಂಟಿಕ್’ ಗುರುವಾರ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

​ಆದರೆ, ಈ ನಿರ್ಗಮನದ ಸಮಯ ಇನ್ನು ಅನಿಶ್ಚಿತವಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ​ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಭದ್ರತಾ ಅಜೆಂಡಾವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ, ಪೀಟ್ ಹೆಗ್ಸೆತ್ ಅವರು ರಕ್ಷಣಾ ಇಲಾಖೆಯನ್ನು ತ್ವರಿತವಾಗಿ ಪುನರ್‌ರಚಿಸುತ್ತಿದ್ದಾರೆ. ಕಳೆದ ವರ್ಷ ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೆ ಹನ್ನೆರಡಕ್ಕೂ ಹೆಚ್ಚು ಉನ್ನತ ಜನರಲ್‌ಗಳು ಮತ್ತು ಅಡ್ಮಿರಲ್‌ಗಳನ್ನು ಹೆಗ್ಸೆತ್ ವಜಾಗೊಳಿಸಿದ್ದು, ರ‍್ಯಾಂಡಿ ಜಾರ್ಜ್ ಅವರ ಉಚ್ಚಾಟನೆಯು ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.

​ಪೆಂಟಗನ್ ನಾಯಕತ್ವದಲ್ಲಿ ನಡೆಯುತ್ತಿರುವ ಇತ್ತೀಚಿನ ಅಲ್ಲೋಲಕಲ್ಲೋಲಗಳಿಗೆ ಜಾರ್ಜ್ ಅವರ ನಿರ್ಗಮನ ಮತ್ತಷ್ಟು ಪುಷ್ಟಿ ನೀಡಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಮೊದಲ ಸುತ್ತಿನ ವಜಾ ಪ್ರಕ್ರಿಯೆಯಿಂದ ಜಾರ್ಜ್ ಪಾರಾಗಿದ್ದರು. ಆ ವೇಳೆ, ನೌಕಾಪಡೆಯ ಉನ್ನತ ಅಧಿಕಾರಿ ಅಡ್ಮಿರಲ್ ಲಿಸಾ ಫ್ರಾಂಚೆಟ್ಟಿ ಮತ್ತು ವಾಯುಪಡೆಯ ಎರಡನೇ ಅತ್ಯುನ್ನತ ನಾಯಕ ಜನರಲ್ ಜಿಮ್ ಸಿಲ್ಫ್ ಸೇರಿದಂತೆ ಹಲವು ಉನ್ನತ ಸೇನಾ ನಾಯಕರನ್ನು ಹೆಗ್ಸೆತ್ ವಜಾಗೊಳಿಸಿದ್ದರು. ಅದೇ ಸಮಯದಲ್ಲಿ, ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಅಧ್ಯಕ್ಷರಾಗಿದ್ದ ಜನರಲ್ ಚಾರ್ಲ್ಸ್ “ಸಿಕ್ಯೂ” ಬ್ರೌನ್ ಅವರನ್ನು ಅಧ್ಯಕ್ಷ ಟ್ರಂಪ್ ವಜಾಗೊಳಿಸಿದ್ದರು.

​ಅಂದಿನಿಂದ, ಹನ್ನೆರಡಕ್ಕೂ ಹೆಚ್ಚು ಉನ್ನತ ಸೇನಾ ಜನರಲ್‌ಗಳು ಮತ್ತು ಅಡ್ಮಿರಲ್‌ಗಳು ಮುಂಚಿತವಾಗಿ ನಿವೃತ್ತಿ ಹೊಂದಿದ್ದಾರೆ ಅಥವಾ ತಮ್ಮ ಹುದ್ದೆಗಳಿಂದ ವಜಾಗೊಂಡಿದ್ದಾರೆ.

ಇದನ್ನು ಓದಿದ್ದೀರಾ? ಅಧಿಕಾರಕ್ಕಾಗಿ ಹಲವು ಅವತಾರಗಳು: ವೋಟಿಗಾಗಿ ನಾಯಕರು ಹಾಕುವ ‘ಹಗಲುವೇಷ’ಗಳೆಷ್ಟು?

​ಈ ರೀತಿ ನಿರ್ಗಮಿಸಿದವರಲ್ಲಿ ರ‍್ಯಾಂಡಿ ಜಾರ್ಜ್ ಅವರ ಉಪಾಧಿಕಾರಿಯಾಗಿದ್ದ ಸೇನಾ ಉಪ ಮುಖ್ಯಸ್ಥ ಜನರಲ್ ಜೇಮ್ಸ್ ಮಿಂಗಸ್ ಕೂಡ ಸೇರಿದ್ದಾರೆ. ಅವರು ಈ ಹುದ್ದೆಯಲ್ಲಿ ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ ಕಾರ್ಯನಿರ್ವಹಿಸಿದ್ದರು. ಅವರ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಕ್ರಿಸ್ಟೋಫರ್ ಲಾನೆವ್ ಅವರನ್ನು ಅಧ್ಯಕ್ಷ ಟ್ರಂಪ್ ದಿಢೀರ್ ಆಗಿ ನಾಮನಿರ್ದೇಶನ ಮಾಡಿದರು. ದಕ್ಷಿಣ ಕೊರಿಯಾದಲ್ಲಿ ಎಂಟನೇ ಸೇನಾಪಡೆಯ ಕಮಾಂಡಿಂಗ್ ಆಗಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದ್ದ ಲಾನೆವ್, ಬಳಿಕ ಹೆಗ್ಸೆತ್ ಅವರ ಉನ್ನತ ಸೇನಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪದಾತಿ ದಳದ (Infantry) ಅಧಿಕಾರಿಯಾಗಿರುವ ರ‍್ಯಾಂಡಿ ಜಾರ್ಜ್ ಅವರು, ಪ್ರತಿಷ್ಠಿತ ವೆಸ್ಟ್ ಪಾಯಿಂಟ್ ಮಿಲಿಟರಿ ಅಕಾಡೆಮಿಯ ಪದವೀಧರರಾಗಿದ್ದಾರೆ. ಇವರು ಮೊದಲ ಕೊಲ್ಲಿ ಯುದ್ಧದ ಜೊತೆಗೆ ಇರಾಕ್ ಮತ್ತು ಅಫ್ಘಾನಿಸ್ತಾನ ಯುದ್ಧಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ನಾಲ್ಕು ವರ್ಷಗಳ ಅಧಿಕಾರಾವಧಿ ಹೊಂದಿರುವ ಸೇನಾ ಮುಖ್ಯಸ್ಥರ ಹುದ್ದೆಗೆ 2023ರಲ್ಲಿ ಜಾರ್ಜ್ ನೇಮಕಗೊಂಡಿದ್ದರು.

​ಈ ಅತ್ಯುನ್ನತ ಹುದ್ದೆಗೇರುವ ಮುನ್ನ, ಜಾರ್ಜ್ ಅವರು ಸೇನೆಯ ಉಪ ಮುಖ್ಯಸ್ಥರಾಗಿ ಮತ್ತು ಅಂದಿನ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರ ಹಿರಿಯ ಸೇನಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಸೇನೆಯ ಹಿರಿಯ ನಾಯಕತ್ವದ ಪಾತ್ರಗಳನ್ನು ವಹಿಸಿಕೊಳ್ಳುವ ಮೊದಲು, ಬೈಡೆನ್ ಆಡಳಿತಾವಧಿಯಲ್ಲಿ (2021 ರಿಂದ 2022 ರವರೆಗೆ) ಲಾಯ್ಡ್ ಆಸ್ಟಿನ್ ಅವರ ಉನ್ನತ ಸೇನಾ ಸಹಾಯಕರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ ಹಿಂಸಾಚಾರ | ಹತ್ಯೆಯಾಗಿ ಆರು ತಿಂಗಳ ಬಳಿಕ ಆರು ನಾಗಾ ಯುವಕರ ಅಂತ್ಯಕ್ರಿಯೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಲೈಲಾನ್ ವೈಫೇಯ್ ಗ್ರಾಮದಿಂದ ಕಳೆದ ಮೇ 13...

ಅಂಕಿತಾ ಭಂಡಾರಿ ಹತ್ಯೆ: ಸಂತ್ರಸ್ತೆಯ ಖಾಸಗಿ ಚಾಟ್ ಬಹಿರಂಗಪಡಿಸಿದ ಹಂತಕನ ತಂದೆ, ಬಿಜೆಪಿ ಮಾಜಿ ಮುಖಂಡ ವಿರುದ್ಧ ದೂರು

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಉತ್ತರಾಖಂಡದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ...

ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ : ಔರಾದ್‌ ಬಂದ್‌ ಹಿಂಪಡೆಯಲು ಸಚಿವ ಈಶ್ವರ ಖಂಡ್ರೆ ಮನವಿ

ಔರಾದ್ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹಲವು ತುರ್ತು ಕ್ರಮಗಳನ್ನು...

ನಾನು ಜೀವಂತವಾಗಿ ಮರಳದೇ ಇರಬಹುದು: ಜೈಲಿನಿಂದಲೇ ಪಾಕ್ ಸುಪ್ರೀಂ ನ್ಯಾಯಮೂರ್ತಿಗಳಿಗೆ ಇಮ್ರಾನ್ ಖಾನ್ ಪತ್ರ!

ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್...