ಕೊಲಂಬಿಯಾದಲ್ಲಿ ಭಾರಿ ಭೂಕಂಪ: 7.4 ತೀವ್ರತೆ ದಾಖಲು, ನೆರೆರಾಷ್ಟ್ರಗಳಲ್ಲೂ ಪ್ರಬಲ ಕಂಪನ, 20 ಸಾವು

Date:

ದಕ್ಷಿಣ ಅಮೆರಿಕದ ರಾಷ್ಟ್ರವಾದ ಕೊಲಂಬಿಯಾದಲ್ಲಿ ಸೋಮವಾರ ಬೆಳಿಗ್ಗೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಪ್ರಮುಖ ನಗರಗಳು ನಡುಗಿಹೋಗಿವೆ. ನೆರೆರಾಷ್ಟ್ರಗಳಾದ ಈಕ್ವೆಡಾರ್, ಪನಾಮಾ ಮತ್ತು ವೆನೆಜುವೆಲಾಗಳಲ್ಲೂ ಕಂಪನ ಅನುಭವಪಟ್ಟಿದೆ. ಭೂಕಂಪದಿಂದ ಕೊಲಂಬಿಯಾದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

- Advertisement -

​ ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ 7:34ಕ್ಕೆ ಭೂಕಂಪ ಸಂಭವಿಸಿದೆ. ಕೊಲಂಬಿಯಾದ ರಾಜಧಾನಿ ಬೊಗೋಟಾದಿಂದ ಪಶ್ಚಿಮಕ್ಕೆ ಸುಮಾರು 400 ಕಿ.ಮೀ ದೂರದಲ್ಲಿರುವ ‘ಚೊಕೊ’ ಪ್ರಾಂತ್ಯದ ‘ಸಾನ್ ಜೋಸ್ ಡೆಲ್ ಪಾಲ್ಮಾರ್’ ಪ್ರದೇಶವನ್ನು ಭೂಕಂಪದ ಕೇಂದ್ರಬಿಂದು ಎಂದು ಗುರುತಿಸಲಾಗಿದೆ. ಭೂಮಿಯ ಆಳದಲ್ಲಿ ಸುಮಾರು 79 ಕಿ.ಮೀ ಆಳದಲ್ಲಿ ಈ ಕಂಪನ ಉಂಟಾಗಿದೆ ಎಂದು ಅಮೆರಿಕದ ಭೂಸರ್ವೇಕ್ಷಣಾ ಸಂಸ್ಥೆ (USGS) ಹಾಗೂ ಕೊಲಂಬಿಯಾದ ಭೂವಿಜ್ಞಾನ ಇಲಾಖೆ ಖಚಿತಪಡಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಭೂಕಂಪದ ಆಘಾತಕ್ಕೆ ರಾಜಧಾನಿ ಬೊಗೋಟಾ, ಕಾಲಿ, ಮೆಡೆಲಿನ್, ಮನಿಜೇಲ್ಸ್, ಪೆರೇರಾ, ಆರ್ಮೇನಿಯಾ ಸೇರಿದಂತೆ ಹಲವು ನಗರಗಳ ಜನರು ಭಯಭೀತರಾಗಿ ಮನೆ, ವಾಣಿಜ್ಯ ಸಂಕೀರ್ಣಗಳಿಂದ ಬೀದಿಗೆ ಓಡಿಬಂದರು.

​ಕೊಲಂಬಿಯಾದ ಮೂರನೇ ಅತಿದೊಡ್ಡ ನಗರವಾದ ಕಾಲಿಯಲ್ಲಿ ಹಲವು ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಮುಂಭಾಗದ ಗೋಡೆಗಳು ಕುಸಿದುಬಿದ್ದಿದ್ದು, ‘ಪ್ರಮುಖ ಹಾನಿ’ ಸಂಭವಿಸಿದೆ ಎಂದು ನಗರದ ಮೇಯರ್ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ದೃಶ್ಯಗಳಲ್ಲಿ ಮನಿಜೇಲ್ಸ್ ಹಾಗೂ ಸಾನ್ ಜೋಸ್ ಡೆಲ್ ಪಾಲ್ಮಾರ್‌ ನಗರಗಳ ರಸ್ತೆ ಮತ್ತು ಕಟ್ಟಡಗಳಲ್ಲಿ ದೊಡ್ಡ ಬಿರುಕುಗಳು ಕಂಡುಬಂದಿವೆ.

ಚೊಕೊ ಪ್ರಾಂತ್ಯದ ರಾಜ್ಯಪಾಲರಾದ ನೂಬಿಯಾ ಕೆರೊಲಿನಾ ಕಾರ್ಡೋಬಾ-ಕುರಿ ಪ್ರತಿಕ್ರಿಯಿಸಿ, “ಪ್ರಾಂತ್ಯದ ರಾಜಧಾನಿ ಕ್ವಿಬ್ಡೋದಲ್ಲಿ ಹಲವರು ಗಾಯಗೊಂಡಿದ್ದು, ಹಲವು ಕಟ್ಟಡಗಳು ಹಾನಿಗೊಳಗಾಗಿವೆ. ಸರಣಿ ಕಂಪನಗಳ (ಆಫ್ಟರ್‌ಶಾಕ್ಸ್) ಭೀತಿ ಎದುರಾಗಿದ್ದು, ನಷ್ಟದ ಅಂದಾಜು ನಡೆಸಲಾಗುತ್ತಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

​ರಾಜಧಾನಿ ಬೊಗೋಟಾ ಹಾಗೂ ಎರಡನೇ ಅತಿದೊಡ್ಡ ನಗರವಾದ ಮೆಡೆಲಿನ್‌ನಲ್ಲಿ ತಕ್ಷಣದ ಭಾರಿ ಪ್ರಾಣಹಾನಿ ಅಥವಾ ಅನಾಹುತಗಳ ವರದಿಯಾಗಿಲ್ಲ ಎಂದು ಸ್ಥಳೀಯ ಆಡಳಿತಗಳು ಸ್ಪಷ್ಟಪಡಿಸಿವೆ.

ಕಳೆದ ಜೂನ್ ಕೊನೆಯಲ್ಲಿ ನೆರೆಯ ವೆನೆಜುವೆಲಾದಲ್ಲಿ 7.2 ಹಾಗೂ 7.5 ತೀವ್ರತೆಯ ಸರಣಿ ಭೂಕಂಪಗಳು ಸಂಭವಿಸಿ 5,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು ನೂರಾರು ಕಟ್ಟಡಗಳು ನೆಲಸಮಗೊಂಡಿದ್ದವು. ಆ ದುರಂತದ ಆತಂಕ ಮಾಸುವ ಮುನ್ನವೇ ಇದೀಗ ಕೊಲಂಬಿಯಾದಲ್ಲಿ ಮತ್ತೊಂದು ಪ್ರಬಲ ಕಂಪನ ಸಂಭವಿಸಿರುವುದು ಪ್ರಾಂತ್ಯದ ಜನರಲ್ಲಿ ತೀವ್ರ ಭೀತಿ ಹುಟ್ಟಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...