ಜಗತ್ತಿನಲ್ಲೇ ಮೊದಲು: ಹಂದಿ ಮೂತ್ರಪಿಂಡದಿಂದ 9 ತಿಂಗಳು ಜೀವಿಸಿದ ವ್ಯಕ್ತಿ

Date:

ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯೊಂದು ನಡೆದಿದೆ. ತಳಿವಿಜ್ಞಾನದ (ಜೆನೆಟಿಕ್ಸ್‌) ಮೂಲಕ ವ್ಯಕ್ತಿಯೊಬ್ಬರಿಗೆ ಹಂದಿ ಮೂತ್ರಪಿಂಡವನ್ನು ಅಳವಡಿಸಲಾಗಿದ್ದು, ಆತ ಆ ಮೂತ್ರಪಿಂಡದ ಸಹಾಯದಿಂದ 9 ತಿಂಗಳ ಕಾಲ ಜೀವಿಸಿದ್ದಾರೆ. ಈ ಅಪರೂಪದ ವಿದ್ಯಮಾನವು ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ನಡೆದಿದೆ.

- Advertisement -

ಮ್ಯಾಸಚೂಸೆಟ್ಸ್‌ನ ನಿವಾಸಿ ರಿಕ್ ಸ್ಲೆಮನ್ ಅವರು ಹಂದಿಯ ಮೂತ್ರಿಪಿಂಡದಿಂದ ಬದುಕಿದ ಜಗತ್ತಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಜೀನೋಟ್ರಟ್ರಾನ್ಸ್‌ಪ್ಲಾಂಟೇಷನ್ (ಪ್ರಾಣಿಗಳ ಅಂಗಾಂಗಗಳನ್ನು ಮಾನವನಿಗೆ ಕಸಿ ಮಾಡುವ ಪ್ರಕ್ರಿಯೆ) ಪ್ರಯೋಗವು ಅಂಗಾಂಗ ಕಸಿ ರಂಗದಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಹೇಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

62 ವರ್ಷದ ರಿಕ್ ಸ್ಲೆಮನ್ ಅವರು ಹಲವು ವರ್ಷಗಳಿಂದ ತೀವ್ರ ಮೂತ್ರಪಿಂಡ ವೈಫಲ್ಯ ಮತ್ತು ಟೈಪ್-2 ಮಧುಮೇಹದಿಂದ ಬಳಲುತ್ತಿದ್ದರು. ಅವರಿಗೆ ಈ ಹಿಂದೆ ಮಾನವನ ಮೂತ್ರಪಿಂಡವನ್ನು ಕಸಿ ಮಾಡಲಾಗಿತ್ತಾದರೂ, ಕೆಲವು ವರ್ಷಗಳ ನಂತರ ಅದು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು. ಇದರಿಂದಾಗಿ ಅವರು ನಿರಂತರ ಡಯಾಲಿಸಿಸ್ ಚಿಕಿತ್ಸೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಡಯಾಲಿಸಿಸ್‌ನಿಂದ ಉಂಟಾಗುತ್ತಿದ್ದ ಗಂಭೀರ ಅಡ್ಡಪರಿಣಾಮಗಳು ಮತ್ತು ಆರೋಗ್ಯದ ಕ್ಷೀಣಿಸುವಿಕೆಯನ್ನು ಗಮನಿಸಿದ ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಹಾಸ್ಪಿಟಲ್ (MGH) ವೈದ್ಯರ ತಂಡ, ಅವರ ಜೀವ ಉಳಿಸಲು ಹಂದಿಯ ಮೂತ್ರಪಿಂಡವನ್ನು ಕಸಿ ಮಾಡುವ ಸಾಹಸಕ್ಕೆ ಮುಂದಾಗಿತ್ತು.

ವೈದ್ಯರು ‘ಇ-ಜೆನೆಸಿಸ್’ ಎಂಬ ಬ್ರೇನ್‌ಟ್ರೀ ಸಂಸ್ಥೆಯ ಸಹಾಯದಿಂದ ತಳಿವಿಜ್ಞಾನ ತಂತ್ರಜ್ಞಾನದ ಮೂಲಕ ರೂಪಾಂತರಿಸಲ್ಪಟ್ಟ ಹಂದಿಯ ಮೂತ್ರಪಿಂಡವನ್ನು ಸ್ಲೆಮನ್‌ ಅವರಿಗೆ 2024ರ ಮಾರ್ಚ್‌ನಲ್ಲಿ ಅಳವಡಿಸಿದ್ದರು. ಅದಕ್ಕೂ ಮುನ್ನ, ಮಾನವನ ದೇಹವು ಪ್ರಾಣಿಯ ಅಂಗಾಂಗವನ್ನು ತಿರಸ್ಕರಿಸದಂತೆ ಮಾಡಲು ಮತ್ತು ಹಂದಿಯಲ್ಲಿರುವ ಸುಪ್ತ ವೈರಸ್‌ಗಳು ಮಾನವನಿಗೆ ಹರಡದಂತೆ ತಡೆಯಲು ಈ ಹಂದಿಯ ಡಿಎನ್‌ಎಯಲ್ಲಿ ಒಟ್ಟು 69 ತಳೀಯ ಮಾರ್ಪಾಡುಗಳನ್ನು (Genetic Edits) ಮಾಡಲಾಗಿತ್ತು. ಈ ಮೂತ್ರಪಿಂಡವು ಸ್ಲೆಮನ್ ಅವರ ದೇಹದಲ್ಲಿ ತಕ್ಷಣವೇ ರಕ್ತವನ್ನು ಸೋಸುವ ಮತ್ತು ಮೂತ್ರವನ್ನು ಉತ್ಪಾದಿಸುವ ಕಾರ್ಯವನ್ನು ಯಶಸ್ವಿಯಾಗಿ ಆರಂಭಿಸಿತ್ತು.

ಶಸ್ತ್ರಚಿಕಿ ಯಶಸ್ವಿಯಾದ ನಂತರ ಸ್ಲೆಮನ್ ಅವರು ಚೇತರಿಸಿಕೊಂಡು ತಮ್ಮ ದೈನಂದಿನ ಜೀವನಕ್ಕೆ ಮರಳಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಅವರು, “ತಮಗೆ ನೀಡಲಾದ ಈ ಹೊಸ ಜೀವನವು ಡಯಾಲಿಸಿಸ್ ಯಾತನೆಯಿಂದ ಮುಕ್ತಿ ನೀಡಿದ್ದಲ್ಲದೆ, ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಲಕ್ಷಾಂತರ ರೋಗಿಗಳಿಗೆ ಹೊಸ ಭರವಸೆ ಮೂಡಿಸಿದೆ” ಎಂದು ಸಂತಸ ವ್ಯಕ್ತಪಡಿಸಿದ್ದರು.

ಕಸಿ ಮಾಡಿದ ಅಂಗಾಂಗವನ್ನು ದೇಹವು ನಿರಾಕರಿಸದಂತೆ ವೈದ್ಯರು ಅತ್ಯಾಧುನಿಕ ರೋಗನಿರೋಧಕ ನಿಗ್ರಹ ಔಷಧಿಗಳನ್ನು ನೀಡಿ ಅವರ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು.

ಈ ಲೇಖನ ಓದಿದ್ದೀರಾ?: ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಸ್ಲೆಮನ್ ಅವರು ಒಂಬತ್ತು ತಿಂಗಳುಗಳ ಕಾಲ ಈ ಕೃತಕವಾಗಿ ಬದಲಾಯಿಸಿದ ಹಂದಿಯ ಮೂತ್ರಪಿಂಡದೊಂದಿಗೆ ಯಶಸ್ವಿಯಾಗಿ ಜೀವಿಸಿದರು. ಆದರೆ, ದುರದೃಷ್ಟವಶಾತ್ ನಂತರದ ದಿನಗಳಲ್ಲಿ ಅವರು ಹೃದಯಸಂಬಂಧಿ ಸಮಸ್ಯೆಯಿಂದಾಗಿ ನಿಧನರಾದರು. ಆದಾಗ್ಯೂ, ಅವರ ಸಾವು ಕಸಿ ಮಾಡಿದ ಮೂತ್ರಪಿಂಡದ ವೈಫಲ್ಯದಿಂದ ಸಂಭವಿಸಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ಸಂಶೋಧನೆಯ ಇತಿಹಾಸದಲ್ಲಿ ಮಾನವನ ದೇಹವು ಪ್ರಾಣಿಯ ಅಂಗಾಂಗದೊಂದಿಗೆ ಇಷ್ಟೊಂದು ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ್ದು ಇದೇ ಮೊದಲು ಎಂದು ಹೇಳಲಾಗಿದೆ.

“ಪ್ರಪಂಚದಾದ್ಯಂತ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಕೋಟ್ಯಂತರ ರೋಗಿಗಳಿಗೆ ಸೂಕ್ತ ಮಾನವ ದಾನಿಗಳ ಮೂತ್ರಪಿಂಡ ಸಿಗದೆ ವರ್ಷಗಟ್ಟಲೆ ಕಾಯಬೇಕಾದ ಮತ್ತು ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿಯಿದೆ. ಈ ಕ್ರಾಂತಿಕಾರಿ ಪ್ರಯೋಗವು ಅಂಗಾಂಗ ಕೊರತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೈತ್ಯ ಹೆಜ್ಜೆಯಾಗಿದೆ. ಜೀನೋಟ್ರಟ್ರಾನ್ಸ್‌ಪ್ಲಾಂಟೇಷನ್ ತಂತ್ರಜ್ಞಾನವು ಭವಿಷ್ಯದಲ್ಲಿ ಮೂತ್ರಪಿಂಡ ಮಾತ್ರವಲ್ಲದೆ, ಹೃದಯ, ಪಿತ್ತಜನಕಾಂಗ ಸೇರಿದಂತೆ ಇತರ ಪ್ರಮುಖ ಅಂಗಾಂಗಗಳ ಕೊರತೆಯನ್ನು ನೀಗಿಸಲು ಮಹತ್ವದ ದಾರಿದೀಪವಾಗಲಿದೆ” ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

33 ಲಕ್ಷ ಮತದಾರರಿಗೆ ನೋಟಿಸ್: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ...

ಕಲಬುರಗಿ | ಬರಗಾಲ ಪ್ಯಾಕೇಜ್ 1000 ಕೋಟಿ ರೂ. ಘೋಷಣೆ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಕೆಪಿಆರ್‌ಎಸ್‌ ಆಗ್ರಹ

ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ಕಲಬುರಗಿ ಸಂಪೂರ್ಣ ಬರ ಪೀಡಿತ ಪ್ರದೇಶವೆಂದು...

ಮರಾಠಾ ಸಮುದಾಯದ ಸಮಗ್ರ ಸಮೀಕ್ಷೆಗೆ ಡಿಜಿಟಲ್ ಆ್ಯಪ್

ಕರ್ನಾಟಕದಲ್ಲಿರುವ ಮರಾಠಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು...

ಬಿಡದಿ ಟೌನ್‌ಶಿಪ್ ವಿರುದ್ಧ ಹೋರಾಟ: ಉಪವಾಸನಿರತ ಮೂವರು ರೈತರು ತೀವ್ರ ಅಸ್ವಸ್ಥ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ – ಬಿಡದಿ ಟೌನ್‌ಶಿಪ್‌) ಯೋಜನೆ...