ಚಿಂತಾಮಣಿ ತಾಲ್ಲೂಕಿನ ವಿರೂಪಾಕ್ಷಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಸಂಘದ ಆವರಣದಲ್ಲಿ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಆರ್ ಮುನಿರಾಜು ವಹಿಸಿದರು.ಸಭೆಯನ್ನು ಉದ್ದೇಶಿಸಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರಾದ ಕೆಎನ್ ಆವಲಪ್ಪ ಮಾತನಾಡಿ ಹಾಲು ಉತ್ಪಾದಕ ರೈತರ ಹಿತ ಕಾಯುವುದು ಮತ್ತು ಒಕ್ಕೂಟವನ್ನು ಬಲಪಡಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ”ಎಂದು ತಿಳಿಸಿದರು.
ನಾವೆಲ್ಲರೂ ಒಂದಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ.ರೈತರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ ಎಂದು ಹೇಳಿದರು.
ಇದನ್ನು ಓದಿದ್ದೀರಾ..?ಚಿಂತಾಮಣಿಯಲ್ಲಿ ತಡರಾತ್ರಿ ಭಾರಿ ಗಾಳಿ-ಮಳೆಗೆ ಧರೆಗುರುಳಿದ ಶತಮಾನದ ಆಲದ ಮರ: ತಪ್ಪಿದ ಭಾರಿ ಅನಾಹುತ!
ಈ ಸಂದರ್ಭದಲ್ಲಿ ವಿಸ್ತೀರ್ಣಾಧಿಕಾರಿ ಗುಲಾಬ್ ಜಾನ್,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ ನಾರಾಯಣಸ್ವಾಮಿ,ಉಪಾಧ್ಯಕ್ಷರಾದ ಚಿಕ್ಕನಾರಾಯಣಸ್ವಾಮಿ,ನಿರ್ದೇಶಕರಾದ ಎಂ ಮಂಜುನಾಥ್, ವಿ ಎಂ ಮಂಜುನಾಥ್,ವಿ ಆರ್ ಮಂಜುನಾಥ್,ವಿ ಎಂ ನಾರಾಯಣಸ್ವಾಮಿ,ಎಂ ನಾರಾಯಣಸ್ವಾಮಿ,ಭೀಮಣ್ಣ,ಕೆ ರಮೇಶ್,ಅನುಸೂಯಮ್ಮ,ಮುನಿರತ್ನಮ್ಮ,ಸುಶೀಲಮ್ಮ ಸೇರಿದಂತೆ ಮತ್ತಿತರರು ಇದ್ದರು.
ಚಿಂತಾಮಣಿ | ರೈತರ ನಂಬಿಕೆ ಎಂದಿಗೂ ಹುಸಿಗೊಳಿಸುವುದಿಲ್ಲ: ವಿರೂಪಾಕ್ಷಪುರದಲ್ಲಿ ಚಿಮುಲ್ ನಿರ್ದೇಶಕ ಆವಲಪ್ಪ ಅಭಯ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




