“ಎಕ್ಸ್” ಖಾತೆ ದಿಢೀರ್ ಸ್ತಬ್ಧ: ವಿಶ್ವದಾದ್ಯಂತ ಸಾವಿರಾರು ಬಳಕೆದಾರರ ಪರದಾಟ

Date:

ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ‘ಎಕ್ಸ್’ ಇಂದು (ಜೂನ್ 22) ದಿಢೀರ್ ಸ್ಥಗಿತಗೊಂಡಿದ್ದು, ಅಮೆರಿಕ, ಭಾರತ ಸೇರಿದಂತೆ ವಿಶ್ವದಾದ್ಯಂತ ಸಾವಿರಾರು ಬಳಕೆದಾರರು ತಾಂತ್ರಿಕ ದೋಷವನ್ನು ಎದುರಿಸಿದ್ದಾರೆ. ಆ್ಯಪ್ ಮತ್ತು ವೆಬ್‌ಸೈಟ್‌ ಎರಡರಲ್ಲೂ ಪೋಸ್ಟ್‌ಗಳು ಲೋಡ್ ಆಗದೆ ಬಳಕೆದಾರರು ಕೆಲ ಕಾಲ ಪರದಾಡುವಂತಾಯಿತು.

- Advertisement -

ವೆಬ್‌ಸೈಟ್‌ಗಳ ವ್ಯತ್ಯಯವನ್ನು ಟ್ರ್ಯಾಕ್ ಮಾಡುವ ‘ಡೌನ್‌ಡಿಟೆಕ್ಟರ್’ ವರದಿಯ ಪ್ರಕಾರ, ಸೋಮವಾರ ಭಾರತೀಯ ಕಾಲಮಾನ ಸಂಜೆ ವೇಳೆಗೆ (ಅಮೆರಿಕ ಕಾಲಮಾನ ಬೆಳಿಗ್ಗೆ 9:45ರ ಸುಮಾರಿಗೆ) ಏಕಾಏಕಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಅಮೆರಿಕವೊಂದರಲ್ಲೇ 35,600ಕ್ಕೂ ಹೆಚ್ಚು ಬಳಕೆದಾರರು ದೂರು ದಾಖಲಿಸಿದ್ದಾರೆ. ಭಾರತ, ಬ್ರಿಟನ್ ಮತ್ತು ಸಿಂಗಾಪುರ ಸೇರಿದಂತೆ ಇತರ ರಾಷ್ಟ್ರಗಳಲ್ಲೂ ಸಾವಿರಾರು ದೂರುಗಳು ದಾಖಲಾಗಿವೆ. ಜಾಲತಾಣದಲ್ಲಿ “ಏನೋ ತಪ್ಪಾಗಿದೆ. ಮತ್ತೆ ಲೋಡ್ ಮಾಡಿ ಪ್ರಯತ್ನಿಸಿ
“(Something went wrong. Try reloading) ಎಂಬ ದೋಷದ ಸಂದೇಶ ಪರದೆಯ ಮೇಲೆ ಮೂಡುತ್ತಿರುವುದಾಗಿ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಡೌನ್‌ಡಿಟೆಕ್ಟರ್ ಅಂಕಿಅಂಶಗಳ ಮೂಲಗಳನ್ನು ಪರಾಮರ್ಶಿಸಿದಾಗ, ಒಟ್ಟಾರೆ ದೂರುಗಳಲ್ಲಿ ಅರ್ಧದಷ್ಟು (ಶೇ. 46-50ರಷ್ಟು) ಬಳಕೆದಾರರು ‘ಎಕ್ಸ್’ ಮೊಬೈಲ್ ಆ್ಯಪ್‌ನಲ್ಲಿ ಸಮಸ್ಯೆ ಎದುರಿಸಿದ್ದಾರೆ. ಶೇ. 30ರಷ್ಟು ಮಂದಿಗೆ ಫೀಡ್ ಮತ್ತು ಟೈಮ್‌ಲೈನ್ ವೀಕ್ಷಿಸಲು ಸಾಧ್ಯವಾಗಿಲ್ಲ ಹಾಗೂ ಶೇ. 15ರಷ್ಟು ಮಂದಿ ಡೆಸ್ಕ್‌ಟಾಪ್ ವೆಬ್‌ಸೈಟ್ ಲಾಗಿನ್ ಸಮಸ್ಯೆ ಎದುರಿಸಿದ್ದಾರೆ. ‘ಫಾರ್ ಯು’ (For You) ಮತ್ತು ‘ಫಾಲೋಯಿಂಗ್’ (Following) ಟ್ರೆಂಡಿಂಗ್ ಫೀಡ್‌ಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದವು.

ಇದನ್ನು ಓದಿದ್ದೀರಾ? ಸಾರ್ವಜನಿಕರಿಂದ ಆಕ್ಷೇಪಣೆ: ಬೆಂಗಳೂರಿನ 27 ವಾರ್ಡ್‌ಗಳ ಮತದಾರರ ಪಟ್ಟಿ ‘SIR’ಗೆ ಆದೇಶ

ಈ ತಾಂತ್ರಿಕ ದೋಷಕ್ಕೆ ನಿಖರವಾದ ಕಾರಣವನ್ನು ‘ಎಕ್ಸ್’ ಸಂಸ್ಥೆ ಈವರೆಗೆ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಎಕ್ಸ್ ಮತ್ತು ಇತರ ಪ್ರಮುಖ ಕಂಪನಿಗಳಿಗೆ ವೆಬ್ ಮೂಲಸೌಕರ್ಯ ಮತ್ತು ಸೈಬರ್ ಭದ್ರತೆ ಒದಗಿಸುವ ‘ಕ್ಲೌಡ್‌ಫ್ಲೇರ್’ (Cloudflare) ತಂತ್ರಾಂಶದಲ್ಲೂ ಇದೇ ಸಮಯದಲ್ಲಿ ದೋಷ ಕಾಣಿಸಿಕೊಂಡಿತ್ತು. ಇದೇ ವೇಳೆ ಮೈಕ್ರೋಸಾಫ್ಟ್ ಟೀಮ್ಸ್ (Microsoft Teams), ಝೂಮ್ (Zoom) ಮತ್ತು ರೆಡ್ಡಿಟ್‌ನಂತಹ (Reddit) ಇತರ ವೇದಿಕೆಗಳಲ್ಲೂ ಸಣ್ಣ ಪ್ರಮಾಣದ ವ್ಯತ್ಯಯಗಳು ವರದಿಯಾಗಿವೆ ಎಂದು ಮೂಲಗಳು ವರದಿ ಮಾಡಿವೆ.

ಎಕ್ಸ್ ಜಾಲತಾಣ ಸ್ಥಗಿತಗೊಳ್ಳುತ್ತಿದ್ದಂತೆ, ಬಳಕೆದಾರರು ಪ್ರತಿಸ್ಪರ್ಧಿ ಮೆಟಾ ಒಡೆತನದ ‘ಥ್ರೆಡ್ಸ್’ (Threads) ಸೇರಿದಂತೆ ಇತರ ಜಾಲತಾಣಗಳ ಮೊರೆಹೋಗಿ “ಟ್ವಿಟರ್ ಮತ್ತೆ ಡೌನ್ ಆಗಿದೆ” ಎಂದು ಪೋಸ್ಟ್ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಘಟನೆ ನಡೆದು ಸುಮಾರು ಒಂದು ಗಂಟೆಯ ಬಳಿಕ ಸೇವೆಗಳು ಯಥಾಸ್ಥಿತಿಗೆ ಮರಳಿದ್ದು, ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಇಂತಹ ಭಾರಿ ಪ್ರಮಾಣದ ದೋಷಗಳು ಕಂಡುಬಂದಾಗ ಎಲಾನ್ ಮಸ್ಕ್ ಸೈಬರ್ ದಾಳಿಯತ್ತ ಬೊಟ್ಟು ಮಾಡಿದ್ದರು. ಆದರೆ ಈ ಬಾರಿಯ ವ್ಯತ್ಯಯದ ಕುರಿತು ಕಂಪನಿಯಿಂದ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಶ್ರೀಲಂಕಾ ಮಣಿಸಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಭಾರತದ ವನಿತೆಯರು

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್...

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಅಕ್ರಮಗಳು ಮತ್ತು ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚಾಗುತ್ತಿರುವ...

33 ಲಕ್ಷ ಮತದಾರರಿಗೆ ನೋಟಿಸ್: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ...