ರೈಲ್ವೇ ಇಲಾಖೆಯಲ್ಲಿ ಇನ್ನು ಮುಂದೆ ಕಾಯ್ದಿರಿಸಿದ ಟಿಕೆಟ್ ಹೊಂದಿದವರಿಗೆ ಹಾಗೂ ಕನ್ಫರ್ಮ್ ಟಿಕೆಟ್ ಹೊಂದಿದವರಿಗೆ ಮಾತ್ರ ಪ್ಲಾಟ್‌ಫಾರ್ಮ್ ಪ್ರವೇಶಕ್ಕೆ ಅನುಮತಿಸಲಾಗುತ್ತದೆ. ಕಾಯುವಿಕೆಯ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ನೇರವಾಗಿ ಪ್ಲಾಟ್‌ಫಾರ್ಮ್ ಪ್ರವೇಶ ಮಾಡುವುದನ್ನು ನಿರಾಕರಣೆ ಮಾಡಲಾಗುತ್ತದೆ ಎಂದು ರೈಲ್ವೇ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಕೋವಿಡ್ ಹಾಗೂ ಕುಂಭ ಮೇಳದ ಸಂದರ್ಭದಲ್ಲಿ ಅತಿಯಾದ ಜನದಟ್ಟಣೆಯಿಂದಾಗಿ ಸಂಭವಿಸಿದ ಕಾಲ್ತುಳಿತದಿಂದ ಹಲವರು ಮೃತಪಟ್ಟಿದ್ದರು. ಆದರಿಂದ ಈ ಹೊಸ ನಿಯಮವನ್ನು ರೂಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನು ಓದಿ>>ಉದ್ಯೋಗ ಮಾಹಿತಿ | 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಸ್ತುತ 76 ರೈಲು ನಿಲ್ದಾಣಗಳಲ್ಲಿ ಈ ನಿಯಮ ಅನ್ವಯವಾಗಲಿದ್ದು. ಅತಿ ಜನದಟ್ಟಣೆ ಸಂಭವಿಸುವ ಪ್ರಮುಖ ನಿಲ್ದಾಣಗಳಲ್ಲಿ ಮೊದಲು ಈ ನಿಯಮವನ್ನು ಜಾರಿಗೆ ತರಲಾಗಿದೆ. ಜನರಿಗೆ ಸುರಕ್ಷ ಹಾಗೂ ಆರಾಮದಾಯಕ ಪ್ರಯಾಣ ಒದಗಿಸಲು ಹೊಸ ನಿಯಮ ಜಾರಿತರಲಾಗಿದೆ ಎಂದು ಹೇಳಲಾಗುತ್ತಿದೆ.

ವೈಟಿಂಗ್‌ಲಿಸ್ಟ್‌ನ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ಗೆ ಬರುವಂತಿಲ್ಲ, ಆದರೆ ಅವರಿಗೆ ವಿಶ್ರಮಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯು ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಇನ್ನು ಧೃಡೀಕೃತ ಟಿಕೆಟ್ ಹಾಗೂ ಕಾಯ್ದಿರಿಸುವಿಕೆಯ ಟಿಕೆಟ್ ಹೊಂದಿದವರು ನೇರವಾಗಿ ಪ್ಲಾಟ್‌ಫಾರ್ಮ್ ಪ್ರವೇಶಿಸಲು ಅನುಮತಿ ಇದೆ.
ರೈಲ್ವೇ ಸಿಬ್ಬಂದಿಗಳಿಗೆ ಹಾಗೂ ಸೇವಾ ಪ್ರತಿನಿಧಿಗಳಿಗೆ ಹೊಸ ಗುರುತಿನ ಚೀಟಿಯನ್ನು ನೀಡಲಿದ್ದು ಕ್ಯುಆರ್ ಹೊಂದಿದ ಐಡಿ ಕಾರ್ಡ್ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ. ಜೊತೆಗೆ ಸಿಬ್ಬಂದಿಗಳ ಸಮವಸ್ತ್ರದಲ್ಲಿಯೂ ಬದಲಾವಣೆ ಆಗಲಿದ್ದು ತುರ್ತು ಸಂದರ್ಭಗಳಲ್ಲಿ ಅವರನ್ನು ಬೇಗ ಗುರುತು ಹಿಡಿಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ರೈಲ್ವೇ ಸಚಿವರ ಹೇಳಿಕೆಯಂತೆ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲೂ ಹಿರಿಯ ಅಧಿಕಾರಿ ಒಬ್ಬರನ್ನು ನೇಮಿಸಲಾಗುವುದು. ಇವರು ಆ ನಿಲ್ದಾಣದ ನಿರ್ದೇಶಕರಾಗಿದ್ದು, ಸ್ಥಳದಲ್ಲಿಯೇ ರೈಲ್ವೇ ಸೇವೆಯನ್ನು ಸುಧಾರಿಸಬಲ್ಲ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಇವರಿಗೆ ಇರುತ್ತದೆ ಎನ್ನಲಾಗಿದೆ. ಇನ್ನಿತರೆ ವಿಭಾಗದ ಎಲ್ಲಾ ಸಮಸ್ಯೆ ಹಾಗೂ ಕಳಕಳಿಯನ್ನು ನೇರವಾಗಿ ನಿಲ್ದಾಣದ ನಿರ್ವಾಹಕರ ಗಮನಕ್ಕೆ ತರಬಹುದು ಎಂದು ಸಚಿವರು ತಿಳಿಸಿದ್ದಾರೆ.
ಮುಂಬೈ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಂತಹ ಜನಜಂಗುಳಿ ಹೆಚ್ಚಿರುವ ನಿಲ್ದಾಣಗಳಲ್ಲಿ ಮೊದಲು ಈ ನಿಯಮವನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ನಂತರ ಉಳಿದ ಇತರ ನಿಲ್ದಾಣಗಳಿಗೆ ವಿಸ್ತರಿಸಲಾಗುವುದು ಎನ್ನಲಾಗಿದೆ.




