ಕೈಕೊಟ್ಟ ಮುಂಗಾರು: ಮಳೆಗಾಗಿ ಜಾನಪದ ಸಂಪ್ರದಾಯಗಳಿಗೆ ಜೀವ ತುಂಬುತ್ತಿರುವ ರೈತರು

Date:

ಮಳೆಯ ನಿರೀಕ್ಷೆಯಲ್ಲಿ ರೈತರು ನಡೆಸುವ ಗುರ್ಜಿ, ಜೋಕುಮಾರ ಹಾಗೂ ಇತರೆ ಆಚರಣೆಗಳು ಕೇವಲ ನಂಬಿಕೆಗಳಲ್ಲ; ಅವು ಗ್ರಾಮೀಣ ಸಂಸ್ಕೃತಿ, ಸಮುದಾಯದ ಒಗ್ಗಟ್ಟು ಮತ್ತು ಪ್ರಕೃತಿಯೊಂದಿಗಿನ ಸಂಬಂಧಗಳಾಗಿವೆ. ಗ್ರಾಮೀಣ ಸಂಪ್ರದಾಯಗಳು ಇಂದಿಗೂ ಜೀವಂತವಾಗಿರುವುದಕ್ಕೆ ಗ್ರಾಮೀಣ ಜನರು ಭೂಮಿಯ ಮೇಲೆ ಹೊಂದಿರುವ ಗೌರವವೇ ಇದಕ್ಕೆ ಮೂಲ ಕಾರಣವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಆರಂಭದಲ್ಲಿ ಉತ್ತಮವಾಗಿ ಮಳೆ ಸುರಿದಿದ್ದರೂ, ಬಿತ್ತನೆ ಬಳಿಕ ಮಳೆಯ ಕೊರತೆ ಉಂಟಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಹೆಸರು, ಉದ್ದು, ತೊಗರಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳಿಗೆ ಈ ಹಂತದಲ್ಲಿ ಮಳೆ ಅತ್ಯಗತ್ಯವಾಗಿದ್ದು, ರೈತರು ಗ್ರಾಮೀಣ ಸಂಪ್ರದಾಯಗಳಾದ ಗುರ್ಜಿ ಮೊರೆ ಹೋಗಿದ್ದಾರೆ. ಇದು ಮೌಢ್ಯವಲ್ಲ; ಬದಲಿಗೆ ನಿಸರ್ಗದೊಂದಿಗೆ ಗ್ರಾಮೀಣ ಜನರು ಹೊಂದಿರುವ ಸಂಬಂಧದ ಸಂಕೇತವಾಗಿದೆ.

- Advertisement -

ಮಳೆಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ವಿಶೇಷ ಜಾನಪದ ಆಚರಣೆಗಳು ಜೀವಂತವಾಗಿವೆ. ಅವುಗಳಲ್ಲಿ ಪ್ರಮುಖವಾದುದು ಗುರ್ಜಿ ಪೂಜೆ. ರೊಟ್ಟಿಯ ಹಂಚಿನ ಮೇಲೆ ಮಣ್ಣಿನಿಂದ ಗುರ್ಜಿಯನ್ನು ತಯಾರಿಸಿ ತಲೆಯ ಮೇಲೆ ಹೊತ್ತು ಮಕ್ಕಳು ಹಾಗೂ ಗ್ರಾಮಸ್ಥರು ಮನೆ ಮನೆಗೆ ತೆರಳುತ್ತಾರೆ. ಮನೆಯ ಮುಂದೆ ನಿಂತಾಗ ಗುರ್ಜಿಯ ಮೇಲೆ ನೀರು ಸುರಿಯಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಈ ವೇಳೆ ಗ್ರಾಮಸ್ಥರು, ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ ಕೊಳ್ಳ ತಿರುಗಾಡಿ ಬಂದೆ, ಕಾರ ಮಳೆಯೋ ಕಪಾಟ ಮಳೆಯೋ, ಸುರಿ ಮಳೆಯೋ ಮಳೆರಾಯ…. ಎಂದು ಹಾಡುತ್ತ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಮನೆಯವರು ಗುರ್ಜಿ ಹೊತ್ತ ಬಾಲಕನಿಗೆ ಜೋಳ, ಅಕ್ಕಿ ಅಥವಾ ಹಣ ನೀಡಿ ಮಳೆ ಚೆನ್ನಾಗಿ ಸುರಿಯಲೆಂದು ಆಶಿಸುತ್ತಾರೆ. ಗುರ್ಜಿಯನ್ನು ಪೂಜಿಸಿ ಅದರ ಮೇಲೆ ನೀರು ಸುರಿದು ಮನೆ ಮನೆಗೆ ತಿರುಗಿದರೆ ಮಳೆ ಬರುತ್ತದೆ ಎಂಬುದು ಗ್ರಾಮೀಣ ಜನರ ನಂಬಿಕೆಯಾಗಿದೆ.

ಇದಷ್ಟೇ ಅಲ್ಲದೆ, ಮಳೆಗಾಗಿ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಮಾಡಿಸುವ ಸಂಪ್ರದಾಯವೂ ಹಲವೆಡೆ ಕಂಡುಬರುತ್ತದೆ. ಹಿಂದೆ ಮಳೆಗಾಗಿ ತೊಗಲು ಬೊಂಬೆಯಾಟ ಪ್ರದರ್ಶಿಸುವ ರೂಢಿಯೂ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯ ನಿಧಾನವಾಗಿ ಮರೆಯಾಗುತ್ತಿದ್ದು, ತೊಗಲುಬೊಂಬೆಯಾಟ ಕಲಾವಿದರ ಸಂಖ್ಯೆಯೂ ಕಡಿಮೆಯಾಗಿದೆ.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಜೋಕುಮಾರನನ್ನು ತಯಾರಿಸಿ ಗ್ರಾಮದಲ್ಲಿ ಹೊತ್ತು ತಿರುಗಿಸಿ ಪೂಜಿಸುವ ಪದ್ದತಿಯೂ ಅನಾದಿ ಕಾಲದಿಂದ ನಡೆದುಬಂದಿದೆ.

1001975018

ಅಡ್ಡಡ್ಡ ಮಳೆ ಬಂದು, ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡುಗಳೆಲ್ಲ ಹೈರಾಣಾಗಿ, ಜೋಕುಮಾರ ಎಂದು ಹಾಡುತ್ತ ಮಳೆಗಾಗಿ ಜೋಕುಮಾರನನ್ನು ಪ್ರಾರ್ಥಿಸುತ್ತಾರೆ. ಜೋಕುಮಾರನ ಬಾಯಿಗೆ ಬೆಣ್ಣೆ ಹಚ್ಚುತ್ತಾರೆ ಹಾಗೂ ಜೋಳ, ದವಸ-ಧಾನ್ಯಗಳನ್ನು ನೀಡುತ್ತಾರೆ.

ದಕ್ಷಿಣ ಕರ್ನಾಟಕ ಭಾಗದಲ್ಲಿಯೂ ಎತ್ತಿನ ಶಾಸ್ತ್ರ, ಮಳೆದೇವರ ಪೂಜೆ ಸೇರಿದಂತೆ ವಿವಿಧ ಸಂಪ್ರದಾಯಗಳ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸುವ ಆಚರಣೆಗಳು ಇಂದಿಗೂ ಕಂಡುಬರುತ್ತವೆ.

ಈ ಕುರಿತು ರೈತ ಮಹಿಳೆ ರತ್ನವ್ವ ಮಾತನಾಡಿ, “ನಮ್ಮ ಹಿರಿಯರು ಮಳೆಗಾಗಿ ಈ ರೀತಿಯ ಆಚರಣೆಗಳನ್ನು ಮಾಡುತ್ತಿದ್ದರು. ಅವರ ಸಂಪ್ರದಾಯವನ್ನು ನಾವು ಮುಂದುವರೆಸುತ್ತಿದ್ದೇವೆ. ಹೆಸರು, ತೊಗರಿ, ಈರುಳ್ಳಿ ಬೆಳೆಗಳಿಗೆ ಈಗ ಮಳೆ ಅತ್ಯಗತ್ಯವಾಗಿದೆ. ಆದ್ದರಿಂದ ಗುರ್ಜಿಯನ್ನು ಹೊತ್ತು ಮನೆ ಮನೆಗೆ ತೆರಳಿ ಹಾಡು ಹಾಡುತ್ತ ಮಳೆಗಾಗಿ ಪ್ರಾರ್ಥಿಸುತ್ತೇವೆ. ಇದರಿಂದ ಮಳೆಯಾಗುತ್ತದೆಂಬ ನಂಬಿಕೆ ನಮ್ಮದು” ಎಂದು ಹೇಳಿದರು.

ಇದನ್ನೂ ಓದಿದ್ದೀರಾ? ಬೆಳಗಾವಿ | ಮುಂಗಾರು ವಿಳಂಬದಿಂದ ಬೆಳೆ ಒಣಗುವ ಭೀತಿ: ಆಕಾಶದತ್ತ ಮುಖಮಾಡಿದ ರೈತರು

“ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿಯೂ ಪ್ರಕೃತಿಯ ಮೇಲಿನ ಭರವಸೆ, ಜಾನಪದ ನಂಬಿಕೆಗಳು ಹಾಗೂ ಸಾಂಸ್ಕೃತಿಕ ಆಚರಣೆಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿವೆ. ಮಳೆಯ ನಿರೀಕ್ಷೆಯಲ್ಲಿ ರೈತರು ನಡೆಸುವ ಗುರ್ಜಿ, ಜೋಕುಮಾರ ಹಾಗೂ ಇತರೆ ಆಚರಣೆಗಳು ಕೇವಲ ನಂಬಿಕೆಗಳಲ್ಲ; ಅವು ಗ್ರಾಮೀಣ ಸಂಸ್ಕೃತಿ, ಸಮುದಾಯದ ಒಗ್ಗಟ್ಟು ಮತ್ತು ಪ್ರಕೃತಿಯೊಂದಿಗಿನ ಸಂಬಂಧಗಳಾಗಿವೆ. ಗ್ರಾಮೀಣ ಸಂಪ್ರದಾಯಗಳು ಇಂದಿಗೂ ಜೀವಂತವಾಗಿರುವುದಕ್ಕೆ ಗ್ರಾಮೀಣ ಜನರು ಭೂಮಿಯ ಮೇಲೆ ಹೊಂದಿರುವ ಗೌರವವೇ ಇದಕ್ಕೆ ಮೂಲ ಕಾರಣವಾಗಿದೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ವಿದ್ಯುತ್ ಸ್ಪರ್ಶಿಸಿ ವಿಬಿ-ಜಿ ರಾಮ್ ಜಿ ಕಾರ್ಮಿಕ ಮಹಿಳೆ ಸಾವು

ಮನೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ...

ಕೋಲಾರ | ವಿದ್ಯಾರ್ಥಿನಿಯ ನಾಲ್ಕು ವರ್ಷದ ವಿದ್ಯಾಭ್ಯಾಸಕ್ಕೆ ಎಲ್.ಜಿ. ಫೌಂಡೇಶನ್ ನೆರವು

ವಕ್ಕಲೇರಿ ಗ್ರಾಮದ ಕೂಲಿ ಕಾರ್ಮಿಕ ನಾಗರಾಜ್ ಅವರ ಪುತ್ರಿಯ ನಾಲ್ಕು ವರ್ಷದ...

ಬಾಗೇಪಲ್ಲಿ | ದ್ವಿಭಾಷಾ ನೀತಿ ಕೈಬಿಟ್ಟು ತ್ರಿಭಾಷಾ ಸೂತ್ರವನ್ನುಮುಂದುವರಿಸಬೇಕು ಎಂದು ಬೆಂಗಳೂರು ಛಲೋ

ರಾಜ್ಯದಲ್ಲಿ 15 ಸಾವಿರ ಹಿಂದಿ ಶಿಕ್ಷಕರು ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ ಹೊಸ ಭರವಸೆ!

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ,...