ಭಾರತದ ಜಿಡಿಪಿ ಬೆಳವಣಿಗೆ: ಹೊಸ ಆರಂಭಕ್ಕಾಗಿ ಹೊಸ ಸಾಕ್ಷ್ಯಾಧಾರಗಳು

Date:

ಪ್ರಜಾಪ್ರಭುತ್ವದಲ್ಲಿ ಕಾಲಕಾಲಕ್ಕೆ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿರುತ್ತವೆ. ಭರ್ಜರಿ ಜನಾದೇಶದೊಂದಿಗೆ ಮರುಚುನಾಯಿತವಾದ ಸರ್ಕಾರವು ತನ್ನ ಆರ್ಥಿಕ ನೀತಿಗಳ ಯಶಸ್ವಿ ಅಂಶಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಶೌಚಾಲಯಗಳು, ವಸತಿ, ವಿದ್ಯುತ್, ಅಡುಗೆ ಅನಿಲ, ಬ್ಯಾಂಕ್ ಖಾತೆಗಳು, ತುರ್ತು ವೈದ್ಯಕೀಯ ನೆರವು ಮತ್ತು ಈಗ ಎಲ್ಲಾ ರೈತರಿಗೆ ಒಂದು ಕನಿಷ್ಠ ಆದಾಯ. ಅಗತ್ಯ ಖಾಸಗಿ ಸರಕು ಮತ್ತು ಸೇವೆಗಳ ಸಾರ್ವಜನಿಕ ಪೂರೈಕೆಯ ಮೂಲಕ ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಇವೆಲ್ಲಾ ಅತ್ಯಂತ ಗಮನಾರ್ಹವಾದದ್ದು.

- Advertisement -
a8ebbc89 8c5e 4db3 8a25 bf3461a8352

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ಆದರೆ, ದೊರೆತಿರುವ ಈ ದೊಡ್ಡ ಜನಬೆಂಬಲವನ್ನು ಬಳಸಿಕೊಂಡು, ಹೊಸ ಸಾಕ್ಷ್ಯಾಧಾರಗಳು ಮತ್ತು ಹೊಸ ಅರಿವಿನ ಆಧಾರದ ಮೇಲೆ ಹೊಸ ಹೊಸ ಬದಲಾವಣೆಗಳನ್ನು ತರಲು ಸರ್ಕಾರ ಧೈರ್ಯ ತೋರಬೇಕು. ಭಾರತವು ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ಸಂಖ್ಯಾಶಾಸ್ತ್ರಜ್ಞರು ಇವರೆಗೂ ನಮ್ಮನ್ನು ನಂಬಿಸಿದ್ದಾರೆ. ಆದರೆ ನನ್ನ ಹೊಸ ಸಂಶೋಧನೆಯ ಪ್ರಕಾರ, ಆರ್ಥಿಕತೆಯು ಗಟ್ಟಿಯಾಗಿದೆಯಾದರೂ ಅದು ನಾವು ಅಂದುಕೊಂಡಷ್ಟು ವೇಗವಾಗಿ ಬೆಳೆಯುತ್ತಿಲ್ಲ. ಈ ವಾಸ್ತವವನ್ನು ನಾವು ಈಗಲಾದರೂ ಒಪ್ಪಿಕೊಳ್ಳಬೇಕು.

ನನ್ನ ಅಧ್ಯಯನದ ಪ್ರಕಾರ, ಜಿಡಿಪಿ ಲೆಕ್ಕಾಚಾರದ ಕ್ರಮದಲ್ಲಿ ಆದ ಬದಲಾವಣೆಯಿಂದಾಗಿ 2011-12 ಮತ್ತು 2016-17ರ ನಡುವೆ ಜಿಡಿಪಿ ಬೆಳವಣಿಗೆಯನ್ನು ವರ್ಷಕ್ಕೆ ಸುಮಾರು ಶೇಕಡ 2.5 ರಷ್ಟು ಹೆಚ್ಚಿಸಿ ಅಂದಾಜಿಸಲಾಗಿದೆ. ಆ ಅವಧಿಯಲ್ಲಿ ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳೆರಡೂ ಆಡಳಿತ ನಡೆಸಿದ್ದವು. ಅಧಿಕೃತ ಅಂದಾಜುಗಳು ಈ ಅವಧಿಯ ವಾರ್ಷಿಕ ಸರಾಸರಿ ಬೆಳವಣಿಗೆಯನ್ನು ಶೇ. 7 ರಷ್ಟು ಎಂದು ಹೇಳುತ್ತವೆ. ಆದರೆ ಅದು ವಾಸ್ತವದಲ್ಲಿ ಸುಮಾರು ಶೇ. 4.5ರಷ್ಟಿರಬಹುದು. ಇದು ಶೇ. 3.5 ರಿಂದ 5.5ರ ನಡುವೆ ಇರುವ ಸಾಧ್ಯತೆ ಹೆಚ್ಚು.

ಇಲ್ಲಿ ಕೆಲವು ಮುಖ್ಯ ವಿಷಯಗಳನ್ನು ಸ್ಪಷ್ಟಪಡಿಸಬೇಕಿದೆ. ಜಿಡಿಪಿ ಲೆಕ್ಕಾಚಾರದ ಬದಲಾವಣೆಗಳನ್ನು ಎನ್‌ಡಿಎ ಸರ್ಕಾರ ಬಂದ ಮೇಲೆ (2014ರ ಕೊನೆಯಲ್ಲಿ) ಘೋಷಿಸಲಾಯಿತು. ಇತ್ತೀಚೆಗೆ ಹಿಂದಿನ ವರ್ಷಗಳ ಮರು ಅಂದಾಜುಗಳನ್ನು (Back-casting) ಪ್ರಕಟಿಸಲಾಗಿದೆ. ಇದರಲ್ಲಿ ಹಿಂದಿನ ಅಂದಾಜಿಗೆ ಹೋಲಿಸಿದರೆ ಜಿಡಿಪಿ ಸಂಖ್ಯೆಯಲ್ಲಿ ಏರಿಕೆಯನ್ನು ನೋಡಬಹುದು. ಇದು ಸಹಜವಾಗಿಯೇ ವಿವಾದಕ್ಕೆ ಕಾರಣವಾಗಿದೆ. ಜನರು ಇವುಗಳನ್ನು ‘ರಾಜಕೀಯ ನಿರ್ಧಾರಗಳು’ ಎಂದು ಭಾವಿಸುತ್ತಿದ್ದಾರೆ. ಆದರೆ ಜಿಡಿಪಿ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಮಾಡಿರುವ ಬದಲಾವಣೆಗಳು ರಾಜಕಾರಣಿಗಳ ಆಲೋಚನೆಗಳಲ್ಲ. ಈ ಬದಲಾವಣೆಗಳು ಆರ್ಥಿಕ ತಜ್ಞರ ಚಿಂತನೆಗಳೇ ಆಗಿವೆ ಮತ್ತು ಇದು ಹೆಚ್ಚಾಗಿ ಯುಪಿಎ-2 ಸರ್ಕಾರದ ಕಾಲದಲ್ಲೇ ನಡೆದಿತ್ತು.

ಅಷ್ಟೇ ಅಲ್ಲ. ಇದು ಅವಶ್ಯಕವಾಗಿ ಆಗಬೇಕಾಗಿದ್ದ ಬದಲಾವಣೆ. ಜಿಡಿಪಿ ಅಂದಾಜು  ಮಾಡುವುದಕ್ಕಾಗಿ ದತ್ತಾಂಶದ ವ್ಯಾಪ್ತಿಯನ್ನು ವಿಸ್ತರಿಸುವ ಕೆಲಸ ಒಳ್ಳೆಯದು. ಹಾಗೆಯೇ ತಾಂತ್ರಿಕವಾಗಿ ಮುಂದುವರಿಯುತ್ತಿರುವ ಆರ್ಥಿಕತೆಗೆ ಹೊಂದಿಕೆಯಾಗುವ ವಿಧಾನವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಕೂಡ ನಿಜಕ್ಕೂ ಅಪೇಕ್ಷಣೀಯವಾದದ್ದು. ಈ ಬದಲಾವಣೆಗಳು ರಾಜಕೀಯ ಪ್ರೇರಿತವಲ್ಲ. ಹೊಸ ಅಂದಾಜುಗಳನ್ನು ಗಮನಿಸಿದರೆ

Screenshot 2026 04 16 183148
image 117 2

ಯುಪಿಎ-2 ಸರ್ಕಾರದ ಅಂತಿಮ ವರ್ಷದ (2013-14) ಬೆಳವಣಿಗೆಯ ದರದಲ್ಲಿ ಹೆಚ್ಚಳವಾಗಿರುವುದು ಕಾಣುತ್ತದೆ. ಇದರಿಂದಲೇ ಇದು ರಾಜಕೀಯ ಪ್ರೇರಿತವಲ್ಲ ಎನ್ನುವುದನ್ನು ತಿಳಿಯಬಹುದು.

ಜಿಡಿಪಿ ಅಂದಾಜಿನಲ್ಲಿ ತಪ್ಪಾಗಿದೆ ಅನ್ನುವುದಕ್ಕೆ ನನ್ನ ಸಂಶೋಧನಾ ಪ್ರಬಂಧವು ವಿಭಿನ್ನ ಪುರಾವೆಗಳನ್ನು ಒದಗಿಸುತ್ತದೆ. ಮೊದಲನೆಯದಾಗಿ, 김 2001-02 0 2017-180 ರ ಅವಧಿಗೆ ಜಿಡಿಪಿ ಬೆಳವಣಿಗೆಯೊಂದಿಗೆ ನಿಕಟ ಸಂಬಂಧ ಹೊಂದಿರುವ 17 ಪ್ರಮುಖ ಸೂಚಕಗಳನ್ನು ಸಂಕಲಿಸಿದ್ದೇನೆ: ವಿದ್ಯುತ್ ಬಳಕೆ, ದ್ವಿಚಕ್ರ ಮತ್ತು ವಾಣಿಜ್ಯ ವಾಹನಗಳ ಮಾರಾಟ, ಟ್ರಾಕ್ಟರ್ ಮಾರಾಟ, ವಿಮಾನ ಪ್ರಯಾಣಿಕರ ಸಂಚಾರ, ವಿದೇಶಿ ಪ್ರವಾಸಿಗರ ಆಗಮನ, ರೈಲ್ವೆ ಸರಕು ಸಾಗಣೆ, ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP), IIP (ತಯಾರಿಕೆ), IIP (ಬಳಕೆದಾರರ ಸರಕುಗಳು), ಪೆಟ್ರೋಲಿಯಂ, ಸಿಮೆಂಟ್, ಉಕ್ಕು. ಒಟ್ಟು ನೈಜ ಸಾಲ, ಕೈಗಾರಿಕಾ ನೈಜ ಸಾಲ ಮತ್ತು ಸರಕು-ಸೇವೆಗಳ ರಫ್ತು ಮತ್ತು ಆಮದು. ಈ ಸೂಚಕಗಳನ್ನು ಆರಿಸಿಕೊಳ್ಳುವುದಕ್ಕೆ ಇವುಗಳನ್ನು ಸಿಎಸ್‌ಒ (CSO ಕೇಂದ್ರ ಸಾಂಖ್ಯಿಕ ಕಛೇರಿ) ನಿಯಂತ್ರಿಸುವುದಿಲ್ಲ ಅನ್ನುವುದೂ ಒಂದು ಪ್ರಮುಖ ಕಾರಣ.

ಎರಡನೆಯದಾಗಿ, ನಾನು ಭಾರತದ ಪರಿಸ್ಥಿತಿಯನ್ನು ಜಗತ್ತಿನ ಇತರ ದೇಶಗಳೊಂದಿಗೆ ಹೋಲಿಸಿ ನೋಡುತ್ತೇನೆ. ಇದಕ್ಕಾಗಿ ನಾನು ಮಧ್ಯಮ ಮತ್ತು ಹೆಚ್ಚಿನ ಆದಾಯ ಹೊಂದಿರುವ ಸುಮಾರು 71 ದೇಶಗಳನ್ನು ಆರಿಸಿಕೊಂಡಿದ್ದೇನೆ. 2011ಕ್ಕೆ ಮೊದಲು ಈ ದೇಶಗಳ ಆರ್ಥಿಕತೆ ಹೇಗಿತ್ತು ಮತ್ತು 2011ರ ನಂತರ ಏನಾಯಿತು ಎಂಬುದನ್ನು ನಾನು ಗಮನಿಸಿದ್ದೇನೆ. ಈ ಹೋಲಿಕೆಗಾಗಿ ಆರ್ಥಿಕತೆಯ ನಾಲ್ಕು ಪ್ರಮುಖ ಅಂಶಗಳನ್ನು ಬಳಸಿದ್ದೇನೆ: 1. ಬ್ಯಾಂಕ್ ನೀಡುವ ಸಾಲ, 2. ರಫ್ತು, 3. ಆಮದು, 4. ವಿದ್ಯುತ್ ಬಳಕೆ. ಈ ಸೂಚಿಗಳು ತುಂಬಾ ಸರಳ ಮತ್ತು ವಿಶ್ವಾಸಾರ್ಹವಾದವು. ಜಿಡಿಪಿಯನ್ನು ಅಂದಾಜು ಮಾಡುವ ಏಜೆನ್ಸಿಗಳು ಇವುಗಳನ್ನು ಲೆಕ್ಕಹಾಕುವುದಿಲ್ಲ.

ಈ ಸಂಬಂಧವನ್ನು ಚಿತ್ರ 2ರಲ್ಲಿರುವ ಮೇಲ್ಮುಖವಾಗಿ ಚಲಿಸುವ ರೇಖೆಯು (Upward-sloping line) ಸ್ಪಷ್ಟಪಡಿಸುತ್ತದೆ. ಅಡ್ಡ ಸಾಲು (Horizontal Axis): ನಮ್ಮ ಆರ್ಥಿಕ ಸೂಚಿಗಳ ಆಧಾರದ ಮೇಲೆ ಜಿಡಿಪಿ ಎಷ್ಟಿರಬೇಕು ಎಂಬ ಅಂದಾಜನ್ನು ಸೂಚಿಸುತ್ತದೆ. ಲಂಬ ರೇಖೆಯು (Vertical Axis): ಸರ್ಕಾರವು ಅಧಿಕೃತವಾಗಿ ವರದಿ ಮಾಡಿದ ಜಿಡಿಪಿ ಅಂಕಿ-ಅಂಶಗಳನ್ನು ಸೂಚಿಸುತ್ತದೆ.

ಮೊದಲ ಅವಧಿಯಲ್ಲಿ ಭಾರತದ ದತ್ತಾಂಶವು (ಕೆಂಪು ಚುಕ್ಕಿ) ಸಾಧಾರಣವಾಗಿತ್ತು ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಹೊಂದಿಕೆಯಾಗುತ್ತಿತ್ತು. ಆದರೆ ಎರಡನೇ ಅವಧಿಯಲ್ಲಿ ಭಾರತದ ದತ್ತಾಂಶವು (ನೀಲಿ ಚುಕ್ಕಿ) ರೇಖೆಗಿಂತ ಬಹಳ ಮೇಲೆ ಇದೆ. ಅಂದರೆ ಅದರ ಜಿಡಿಪಿ ಬೆಳವಣಿಗೆಯು ಇತರ ದೇಶಗಳ ಸೂಚಕಗಳಿಗಿಂತ ವಾರ್ಷಿಕವಾಗಿ ಶೇ. 2.5 ಕ್ಕಿಂತ ಹೆಚ್ಚಾಗಿ ಕಂಡುಬರುತ್ತದೆ. ಇದು ಯಾವುದೇ ಸ್ಯಾಂಪಲುಗಳನ್ನಾಗಲಿ ಅಥವಾ ಅಂದಾಜು ಪ್ರಕ್ರಿಯೆಯನ್ನಾಗಲಿ ಆಧರಿಸಿರದ ಒಂದು ಪ್ರಬಲ ಫಲಿತಾಂಶವಾಗಿದೆ.

ಹೊರಗಿನ ಸಂಶೋಧಕರಿಗೆ ಜಿಡಿಪಿ ಅಂದಾಜನ್ನು ಮಾಡಲು ಬಳಸಿರುವ ವಿವರವಾದ ಕ್ರಮವನ್ನು ಮರುಸೃಷ್ಟಿಸುವುದು ಅಸಾಧ್ಯ. ಆದ್ದರಿಂದ ಸಮಸ್ಯೆಯ ಮೂಲವನ್ನು ಪತ್ತೆಹಚ್ಚುವುದು ಕಷ್ಟ. ಆದರೆ ಒಂದು ವಲಯದಲ್ಲಿ ತೀವ್ರವಾದ ತಪ್ಪಾಗಿರುವುದು ಕಾಣುತ್ತದೆ. ಅದುವೇ ಔಪಚಾರಿಕ ಉತ್ಪಾದನಾ ವಲಯ (Formal Manufacturing). 2011 ಕ್ಕಿಂತ ಮೊದಲು ಈ ವಲಯದ ಮೌಲ್ಯವರ್ಧನೆಯು IIP ಮತ್ತು ರಫ್ತುಗಳೊಂದಿಗೆ ನಿಕಟವಾಗಿ ಸಾಗುತ್ತಿತ್ತು. ಆದರೆ ನಂತರದ ಅವಧಿಯಲ್ಲಿ ಈ ಸಂಬಂಧವು ವಿಲಕ್ಷಣವಾಗಿ ಋಣಾತ್ಮಕವಾಯಿತು. ಕೈಗಾರಿಕಾ ಉತ್ಪಾದನೆ ಮತ್ತು ರಫ್ತುಗಳು ಕುಸಿದಿದ್ದರೂ, ಜಿಡಿಪಿ ಅಂಕಿ-ಅಂಶಗಳು ಮಾತ್ರ ಉತ್ಪಾದನಾ ವಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯನ್ನು ತೋರಿಸುತ್ತಿದೆ.

ಈ ಸಂಶೋಧನೆಗಳ ಪರಿಣಾಮಗಳೇನು? ಬೆಳವಣಿಗೆಯ ಅಂದಾಜುಗಳು ಕೇವಲ ದೇಶದ ಪ್ರತಿಷ್ಠೆಯ ವಿಷಯವಲ್ಲ, ಇದು ಆರ್ಥಿಕ ನೀತಿಗಳನ್ನು ರೂಪಿಸುವುದಕ್ಕೆ ಬಹುಮುಖ್ಯ ಸಾಧನ. ಜಿಡಿಪಿಯ ಬೆಳವಣಿಗೆಯ ದರ ಕಡಿಮೆಯಾಗಿದೆ ಅನ್ನುವುದನ್ನು ಒಪ್ಪಿಕೊಂಡರೆ, ಕಳೆದ ವರ್ಷಗಳಲ್ಲಿ ಹಣಕಾಸು ಮತ್ತು ವಿತ್ತೀಯ ನೀತಿಗಳೆರಡೂ ಅತಿಯಾಗಿ ಬಿಗಿಯಾಗಿದ್ದವು ಎನಿಸುತ್ತದೆ. ಉದಾಹರಣೆಗೆ, ಬಡ್ಡಿ ದರಗಳು ಸುಮಾರು 150 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿರಬಹುದು. ಭಾರತೀಯ ನೀತಿ ನಿರೂಪಣೆಯ ವಾಹನವನ್ನು ದೋಷಪೂರಿತ, ಬಹುಶಃ ಕೆಟ್ಟುಹೋದ ಸ್ಪೀಡೋಮೀಟರ್‌ನೊಂದಿಗೆ ನಡೆಸಲಾಗುತ್ತಿದೆ.

[ಅನುವಾದಕರ ಟಿಪ್ಪಣಿ: ದೇಶದ ಆರ್ಥಿಕತೆ ಮಂದಗತಿಯಲ್ಲಿದ್ದರೂ, ಜಿಡಿಪಿ ಸಂಖ್ಯೆಗಳು ಅದು ವೇಗವಾಗಿ ಬೆಳೆಯುತ್ತಿದೆ ಎಂದು ತೋರಿಸಿದ್ದರಿಂದ ಆರ್.ಬಿ.ಐ ಬಡ್ಡಿ ದರವನ್ನು ಇಳಿಸಲಿಲ್ಲ. ವಾಸ್ತವ ಅರಿವಿದ್ದರೆ ಬಡ್ಡಿ ದರವನ್ನು ಶೇ. 1.5 ರಷ್ಟು (150 ಪಾಯಿಂಟ್ಗಳಷ್ಟು) ಕಡಿಮೆ ಮಾಡಿ ಜನರಿಗೆ ಸಾಲ ಸುಲಭವಾಗಿ ಸಿಗುವಂತೆ ಮಾಡಬಹುದಿತ್ತು.]

ಜೊತೆಗೆ, ಆರ್ಥಿಕತೆಯ ಸ್ಥಿತಿಗೆ ಸಂಬಂಧಿಸಿದಂತೆ ಅಂಕಿಅಂಶಗಳಲ್ಲಿ ನ್ಯೂನತೆಗಳಿದ್ದರೆ, ಸುಧಾರಣೆಗಳು ನಿರೀಕ್ಷಿತ ಫಲ ನೀಡುವುದಿಲ್ಲ. ಸುಧಾರಣೆಯ ವೇಗ ಕುಗ್ಗುತ್ತದೆ. ಜಿಡಿಪಿ ಬೆಳವಣಿಗೆಯ ದರ ಶೇಕಡ 7 ಅಲ್ಲ ಅದು ವಾಸ್ತವವಾಗಿ ಶೇ. 4.5 ಎಂದು ತಿಳಿದಿದ್ದರೆ, ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಸುಧಾರಿಸುವ ಅಥವಾ ಕೃಷಿ ಸವಾಲುಗಳನ್ನು ಎದುರಿಸುವ ಕಡೆ ತುರ್ತಾಗಿ ಗಮನಕೊಡಲಾಗುತ್ತಿತ್ತು. ಉದ್ಯೋಗರಹಿತ ಬೆಳವಣಿಗೆಗೆ ಮತ್ತು ಹಣಕಾಸು ವಲಯದ ತೀವ್ರ ಒತ್ತಡಕ್ಕೆ ಬಹುಶಃ ಜಿಡಿಪಿಯ ಮಂದಗತಿಯ ಬೆಳವಣಿಗೆಯೇ ಕಾರಣವಿರಬಹುದು. ನಮ್ಮ ದೇಶದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿಲ್ಲ, ಬದಲಿಗೆ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ಸತ್ಯ ನಮಗೆ ಈಗ ತಿಳಿದಿದೆ. ಈ ಸ್ಥಿತಿಯಲ್ಲಿ ಉಚಿತ ಗ್ಯಾಸ್, ಮನೆ ಅಥವಾ ರೈತರ ಆದಾಯದಂತಹ ಉತ್ತಮ ಯೋಜನೆಗಳನ್ನು ದೀರ್ಘಕಾಲ ಮುಂದುವರಿಸಿಕೊಂಡು ಹೋಗುವುದು ಕಷ್ಟವಾಗುತ್ತದೆ.

ಜಿಡಿಪಿ ಅಂದಾಜನ್ನು ಸಂಪೂರ್ಣವಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರನ್ನೊಳಗೊಂಡ ಸ್ವತಂತ್ರ ಕಾರ್ಯಪಡೆಯು ಮರುಪರಿಶೀಲಿಸಬೇಕು. ಹಾಗೆಯೇ ಜಿಎಸ್‌ಟಿ ದತ್ತಾಂಶವನ್ನು ಬಳಸಿ ಭಾರತದಲ್ಲಿ ವೆಚ್ಚ ಆಧಾರಿತ ಜಿಡಿಪಿ ಅಂದಾಜುಗಳನ್ನು ಮಾಡಬಹುದು. ಇದು ಆ ನಿಟ್ಟಿನಲ್ಲಿ ಮೊತ್ತ ಮೊದಲ ಪ್ರಯತ್ನವಾಗುತ್ತದೆ.

ಅಂತಿಮವಾಗಿ, ನಾನು ಮುಖ್ಯ ಆರ್ಥಿಕ ಸಲಹೆಗಾರ (CEA) ಆಗಿದ್ದಾಗ ಈ ಬಗ್ಗೆ ಏನು ಮಾಡಿದೆ ಎಂಬ ಪ್ರಶ್ನೆ ಏಳಬಹುದು. ನನ್ನ ಅಧಿಕಾರಾವಧಿಯಲ್ಲಿ, ನನ್ನ ತಂಡವು ಆರ್ಥಿಕ ದತ್ತಾಂಶಗಳೊಂದಿಗೆ  ಸೆಣಸಾಡಬೇಕಾಯಿತು. ನಾವು ಈ ಎಲ್ಲಾ ಅನುಮಾನಗಳನ್ನು ಸರ್ಕಾರದೊಳಗೆ ಆಗಾಗ್ಗೆ ಎತ್ತಿದ್ದೇವೆ ಮತ್ತು ಜುಲೈ 2017ರ ಆರ್ಥಿಕ ಸಮೀಕ್ಷೆಯಲ್ಲಿ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದೇವೆ. ಆದರೆ ಸರ್ಕಾರದಿಂದ ಹೊರಬಂದ ಮೇಲೆ ಸಿಕ್ಕ ಸಮಯ ಮತ್ತು ಮುಕ್ತ ವಾತಾವರಣದಿಂದ ಈ ರೀತಿಯ ಆಳವಾದ ಸಂಶೋಧನೆ ಮಾಡಲು ನನಗೆ ಸಾಧ್ಯವಾಯಿತು. ನಾವು ಈಗ ಈ ಹೊಸ ಸಾಕ್ಷ್ಯಗಳ ಕಡೆಗೆ ಸಾಮೂಹಿಕವಾಗಿ ಹಾಗೂ ರಚನಾತ್ಮಕವಾಗಿ ಹೊರಳಬೇಕಾಗಿದೆ.

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

ಕೃಪೆ: The Indian express

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್ಥಿಕ ಬೆಳವಣಿಗೆ: ಟ್ರಂಪೋನಾಮಿಕ್ಸ್‌ ವೈಫಲ್ಯ

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು...

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...