ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಹಾಕಿಸಿಕೊಂಡ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ 50% ರಿಯಾಯಿತಿ ಆಫರ್ ಘೋಷಿಸಿದೆ. ಜೂನ್ 21ರಿಂದ ತಮ್ಮ ಒಟ್ಟು ದಂಡ ಶುಲ್ಕದ ಅರ್ಧದಷ್ಟು ಪಾವತಿಸಲು ಅವಕಾಶವಿರುತ್ತದೆ.
ದಂಡ ಪಾವತಿಸಲು ಒಟ್ಟು 20 ದಿನಗಳ ಕಾಲಾವಧಿ ಇದ್ದು, ಜೂನ್ 21ರಿಂದ ಜಲೈ 10ರವೆಗು ಈ ರಿಯಾಯಿತಿ ಜಾರಿಯಿರಲಿದ್ದು, 1991ರಿಂದ 2022ರ ಅವಧಿಯ ದಂಡ ಪಾವತಿ ಪ್ರಕರಣಗಳಿಗೆ ಈ 50% ರಿಯಾಯಿತಿ ಲಭ್ಯವಾಗಲಿದ್ದು ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇ 2026ರ ನಂತರ ಸಂಚಾರ ನಿಯಮ ಉಲ್ಲಂಘನ ಪ್ರಕರಣಗಳಿಗೆ ಮುಂದಿನ ವರ್ಷ ರಿಯಾಯಿತಿ ದೊರೆಯುವ ಸಾಧ್ಯತೆಗಳಿದೆ.
ರಾಜ್ಯ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಐದು ಬಾರಿ ಬಾಕಿ ಇರುವ ಸಂಚಾರ ದಂಡಗಳ ಮೇಲೆ ಶೇ. 50 ರಷ್ಟು ರಿಯಾಯಿತಿಯನ್ನು ಘೋಷಿಸಿದೆ – 2023 ರಲ್ಲಿ ಮೂರು ಬಾರಿ ಮತ್ತು 2025 ರಲ್ಲಿ ಎರಡು ಬಾರಿ ಘೋಷಿಸಿತ್ತು. ಕಳೆದ ವರ್ಷ ದಂಡ ರಿಯಾಯಿತಿ ಘೋಷಿಸುವ ಮೂಲಕ ಸಾಕಷ್ಟು ಪ್ರಕರಣಗಳ ಇತ್ಯರ್ಥ ಮಾಡಲಾಗಿತ್ತು.
ಬೆಂಗಳೂರು ನಗರವು 3,37,79,608 ಲಕ್ಷ ಸಂಚಾರ ಉಲ್ಲಂಘನೆ ಪ್ರಕರಣಗಳು ಬಾಕಿ ಉಳಿದಿದ್ದು, 1,843 ಕೋಟಿ ರೂ. ದಂಡ ಬಾಕಿ ಇದ್ದು, ಮೈಸೂರು ನಗರ ಮತ್ತು ಬೆಳಗಾವಿ ನಗರ ನಂತರದ ಸ್ಥಾನದಲ್ಲಿವೆ.
ಸರ್ಕಾರದ ಅಧಿಕೃತ ಕರ್ನಾಟಕ ಒನ್ ಅಥವಾ ಇ-ಚಲನ್ ಪೋರ್ಟಲ್ ವೆಬ್‌ಸೈಟ್‌ಗಳ ಮೂಲಕ ವಾಹನದ ಟ್ರಾಫಿಕ್ ದಂಡವನ್ನು ಪರಿಶೀಲನೆಮಾಡಬಹುದು. ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿದರೆ ವಾಹನದ ಮೇಲೆ ಬಾಕಿ ಇರುವ ದಂಡದ ಮೊತ್ತ ಕಾಣಬಹುದು.
ವಾಹನದ ಮೇಲಿನ ದಂಡದ ಮೊತ್ತ ಮತ್ತಿತರ ಮಾಹಿತಿ ಪರಿಶೀಲಿಸಲು https://kspapp.ksp.gov.in/ksp/api/traffic-challan/home ವೆಬ್‌ತಾಣಕ್ಕೆ ಭೇಟಿ ನೀಡಬಹುದಾಗಿದೆ.
ಟ್ರಾಫಿಕ್ ಫೈನ್ ಪಾವತಿಗೆ ಜುಲೈ 10 ಕಡೆ ದಿನಾಂಕ: ಶೇ.50 ರಿಯಾಯಿತಿ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




