ಅದಾನಿ-ಅಂಬಾನಿ, ದೋವಲ್, ಭಾಗವತ್ ಹೈಜಾಕ್ ಮಾಡಿದ ವ್ಯವಸ್ಥೆ: ಫೋಟೋ ಪ್ರದರ್ಶಿಸಿ ಹೇಗೆಂದು ವಿವರಿಸಿದ ರಾಹುಲ್ ಗಾಂಧಿ

Date:

“ದೇಶವನ್ನು ನಿರ್ಮಿಸಬೇಕಾದ ವಿದ್ಯಾರ್ಥಿಗಳ ಭವಿಷ್ಯವನ್ನು ಇಂದಿನ ವ್ಯವಸ್ಥೆಯು ಧಮನ ಮಾಡುತ್ತಿದ್ದು, ಇಡೀ ದೇಶವನ್ನು ಕೆಲವೇ ವ್ಯಕ್ತಿಗಳು ಹೈಜಾಕ್ ಮಾಡಿದ್ದಾರೆ. ಅದಾನಿ-ಅಂಬಾನಿ, ದೋವಲ್, ಭಾಗವತ್ ಹೈಜಾಕ್ ಮಾಡಿದ ವ್ಯವಸ್ಥೆ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿದ್ದಾರೆ.

- Advertisement -

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕೀ ಗೂಂಜ್’ ಕಾರ್ಯಕ್ರಮದಲ್ಲಿ ವ್ಯವಸ್ಥೆ vs ವಿದ್ಯಾರ್ಥಿಗಳ ವಿಚಾರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಈ ‘ವ್ಯವಸ್ಥೆ’ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ವಿವರವಾಗಿ ಬಿಚ್ಚಿಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಇದನ್ನೂ ಓದಿ: ಜೆನ್ ಝೀ ಜತೆ ನಿಂತ ರಾಹುಲ್ ಗಾಂಧಿ: 800 ನಗರಗಳಲ್ಲಿ ‘ಛಾತ್ರೋಂ ಕೀ ಗೂಂಜ್’ ಬೃಹತ್ ಅಭಿಯಾನಕ್ಕೆ ನಿರ್ಧಾರ

“ವಿದ್ಯಾರ್ಥಿಗಳನ್ನು ವ್ಯವಸ್ಥೆ ಹೇಗೆ ಧಮನ ಮಾಡುತ್ತಿದೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಸವಾಲೊಡ್ಡುತ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡಲಿದ್ದೇವೆ. ವಿದ್ಯಾರ್ಥಿಗಳು ದೇಶದ ಭವಿಷ್ಯ, ಅವರಿಲ್ಲದೆ ಯಾವ ದೇಶವು ಪ್ರಬಲವಾಗದು. ವಿದ್ಯಾರ್ಥಿಗಳಲ್ಲಿರುವ ಪ್ರಮುಖ ಗುಣಲಕ್ಷಣ ಪ್ರಶ್ನೆ ಕೇಳುವುದು. ವಿದ್ಯಾರ್ಥಿಗಳ ಎರಡನೆ ಗುಣಲಕ್ಷಣ ಪ್ರೀತಿ. ವಿದ್ಯಾರ್ಥಿಗಳು ಎಂದಿಗೂ ದ್ವೇಷಿಸಲ್ಲ, ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಯಿಂದ, ಗೌರವದಿಂದ ಮಾತನಾಡುತ್ತಾರೆ. ಮೂರನೆಯದಾಗಿ ವಿನಮ್ರರಾಗಿರುತ್ತಾರೆ. ತಮ್ಮ ಸವಾಲಿಗೆ ಉತ್ತರವನ್ನು ಹುಡುಕುವವರು ವಿದ್ಯಾರ್ಥಿಗಳು. ಯಾರನ್ನೂ ಹೆದರಿಸಲ್ಲ, ಬೆದರಿಸಲ್ಲ. ನಾಲ್ಕನೆಯದಾಗಿ ಪ್ರಾಮಾಣಿಕರು ಆಗಿರುತ್ತಾರೆ. ಈ ಗುಣಲಕ್ಷಣಗಳಿಂದಲೇ ದೇಶ ನಿರ್ಮಾಣವಾಗುತ್ತದೆ” ಎಂದು ತಿಳಿಸಿದರು.

“ಕೆಲವರು ಹೆಚ್ಚು ಕುತೂಹಲ ಹೊಂದಿರುತ್ತಾರೆ, ಕೆಲವರು ಕಡಿಮೆ. ಹೆಚ್ಚು ಕಡಿಮೆ ಆದರೂ ಹಿಂದೂಸ್ತಾನದ ಎಲ್ಲ ವಿದ್ಯಾರ್ಥಿಗಳ ಹೃದಯದಲ್ಲಿದೆ. ಈ ಗುಣಲಕ್ಷಣಗಳನ್ನು ನಾವು ರಕ್ಷಿಸಬೇಕಿದೆ. ಯಾಕೆಂದರೆ ಇದರಿಂದಲೇ ದೇಶ ನಿರ್ಮಾಣವಾಗುತ್ತದೆ. ಆದರೆ ಇಂದು ಏನಾಗುತ್ತಿದೆ? ವಿದ್ಯಾರ್ಥಿಗಳು ಸಂತೋಷವಾಗಿಲ್ಲ, ಅವರಿಗೆ ಭವಿಷ್ಯ ಕಾಣುತ್ತಿಲ್ಲ, ಒತ್ತಡದಲ್ಲಿದ್ದಾರೆ” ಎಂದರು.

rahul1 1

ಈ ಸಂದರ್ಭದಲ್ಲೇ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ಆರಂಭದಲ್ಲಿ ಮೂವರು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಇದಾದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, “ಈ ಮೂವರು ವಿದ್ಯಾರ್ಥಿಗಳು ವ್ಯವಸ್ಥೆಯ ವಿರುದ್ಧವಾಗಿ ಮಾತನಾಡಿದರು. ಹಾಗಾದರೆ ಈ ವ್ಯವಸ್ಥೆ ಯಾವುದು” ಎಂದು ಪ್ರಶ್ನಿಸುತ್ತಾ ಅದಾನಿ ಅಂಬಾನಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್‌ ಮುಖಂಡ ಮೋಹನ್ ಭಾಗವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಚಿತ್ರವನ್ನು ಪ್ರದರ್ಶಿಸಿದರು.

“ಭಾರತವನ್ನು ನಿಯಂತ್ರಿಸಬೇಕಾದರೆ 500 ಕೋಟಿ ಭಾರತೀಯರನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಸಾಕಾಗುತ್ತದೆ. ಈ ಅಜಿತ್ ದೋವಲ್ ಅವರು ನಮ್ಮ ಟೆಲಿಫೋನ್ ಸಂವಹನವನ್ನು ತಮ್ಮ ಕಣ್ಗಾವಲಿನಲ್ಲಿ ಇಟ್ಟುಕೊಂಡಿದ್ದಾರೆ. ಫೋನ್ ಟ್ಯಾಪಿಂಗ್ ಮಾಡಿ, ಅಮಿತ್‌ ಶಾ, ಮೋದಿ ಅವರಿಗೆ ಮಾಹಿತಿ ನೀಡುತ್ತಾರೆ. ನನ್ನ ಫೋನ್‌ನಲ್ಲಿ, ನಿಮ್ಮ ಫೋನ್‌ನಲ್ಲೂ ದೋವಲ್‌ ಅವರ ಕಣ್ಗಾವಲಿದೆ” ಎಂದು ಆರೋಪಿಸಿದರು.

ಇದನ್ನೂ ಓದಿ: ರಾಹುಲ್ ‘ಇಮೇಜ್’ ಎದುರು ಮಂಕಾದ ಮೋದಿ!

“ಮೋಹನ್ ಭಾಗವತ್ ಅವರು ಸಿದ್ಧಾಂತದ ಬಗ್ಗೆ ಮಾತನಾಡುವವರು. ಇವರ ಶಾಲಾ-ಕಾಲೇಜುಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ. ಇನ್ನೊಂದು ಬದಿ ಅದಾನಿ, ಅಂಬಾನಿ ಅವರು ನಿಮ್ಮ ಹಣ ಲೂಟಿ ಮಾಡಿ ಮೋದಿ ಅವರ ಪ್ರಚಾರಕ್ಕಾಗಿ ನೀಡುತ್ತಾರೆ” ಎಂದು ದೂರಿದರು.

“ರಾಜಕೀಯ, ಉದ್ಯಮ, ನ್ಯಾಯಾಂಗ, ಶಿಕ್ಷಣ, ಮಾಧ್ಯಮ, ಮನರಂಜನಾ ಕ್ಷೇತ್ರ, ಕ್ರೀಡೆ ಹೀಗೆ ಎಲ್ಲೇ ಆದರೂ ಮೋದಿ-ಶಾ ಅವರು ತಮ್ಮ ಜನರನ್ನು ಅಲ್ಲಿಟ್ಟುಕೊಂಡಿದ್ದಾರೆ. ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್‌, ಕಪಿಲ್ ದೇವ್ ಇದ್ದಾರೆ. ಆದರೆ ವ್ಯವಸ್ಥೆ ಅಮಿತ್ ಶಾ ಅವರ ಮಗನ ಕೈಗೆ ಕ್ರಿಕೆಟ್ ಸಂಸ್ಥೆ ನೀಡಿದೆ. ಇದೇ ರೀತಿ ತಮ್ಮ ತಮ್ಮವರಿಗೆ ಎಲ್ಲ ಸಂಸ್ಥೆಗಳನ್ನು ಈ ಸರ್ಕಾರ ಹಂಚಿಕೊಂಡಿದೆ” ಎಂದರು. “ಈ ಚಿತ್ರದಲ್ಲಿರುವ ಮಕ್ಕಳು ಇಂದೋರ್‌ನಲ್ಲಿ ಕಲಿಯುತ್ತಾರಾ ಅಥವಾ ವಿದೇಶದಲ್ಲಾ” ಎಂದು ಪ್ರಶ್ನಿಸಿದರು.

“ಈ ವ್ಯವಸ್ಥೆಗೆ ವಿದ್ಯಾರ್ಥಿಗಳೆಂದರೆ ಭಯ. ಯಾಕೆಂದರೆ ವಿದ್ಯಾರ್ಥಿಗಳು ಪ್ರಶ್ನೆ ಕೇಳುತ್ತಾರೆ. ಅಮಿತ್ ಶಾ ಅವರ ಮಗ ಕ್ರಿಕೆಟ್‌ ಸಂಸ್ಥೆ ಯಾಕೆ ನಿರ್ವಹಿಸುತ್ತಿದ್ದಾರೆ? ಇಡೀ ಉದ್ಯಮವನ್ನು ಅದಾನಿ-ಅಂಬಾನಿ ಇಬ್ಬರೇ ಹೇಗೆ ಕಬಳಿಸಿದ್ದಾರೆ? ನ್ಯಾಯಾಂಗ, ಚುನಾವಣಾ ಆಯೋಗ ತಮ್ನ ಕೆಲಸ ಯಾಕೆ ಮಾಡುತ್ತಿಲ್ಲ? – ಹೀಗೆ ಹಲವು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳುತ್ತಾರೆ. ಆದ್ದರಿಂದ ಈ ವ್ಯವಸ್ಥೆಗೆ ವಿದ್ಯಾರ್ಥಿಗಳು ಬೇಡ, ಅಂಧಭಕ್ತರು ಬೇಕಾಗಿದ್ದಾರೆ. ಅಂಧಭಕ್ತರು ವಿದ್ಯಾರ್ಥಿ ವಿರೋಧಿಗಳು. ಈ ಅಂಧಭಕ್ತರು ಪ್ರೀತಿ ಇರುವಲ್ಲಿ ದ್ವೇಷ ಬಿತ್ತುತ್ತಾರೆ. ವಿದ್ಯಾರ್ಥಿಗಳು ಭಯ ಪಡದೆ ಇರುವಲ್ಲಿ ಈ ಅಂಧಭಕ್ತರು ಹೆದರುತ್ತಾರೆ. ಪುರುಷಪ್ರಧಾನಿಗಳು ಈ ಅಂಧಭಕ್ತರು. ಮಹಿಳೆಯರ ಮೇಲೆ ದಾಳಿ ಮಾಡುತ್ತಾರೆ” ಎಂದು ಹೇಳಿದರು.

ಹಾಗೆಯೇ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ 2014ರಲ್ಲಿ ನಮಗೆ ಸ್ವಾತಂತ್ರ್ಯ ಬಂದಿದ್ದು ಎಂದು ಹೇಳುವ ವಿಡಿಯೋ, ನಮಗೆ ಅಭಿವೃದ್ಧಿ ಬೇಕಾಗಿಲ್ಲ ಎಂದು ಕೆಲವರು ಹೇಳುವ ವಿಡಿಯೋ, ತಟೆ ಬಡಿದು ‘ಗೋ ಕೊರೊನಾ ಗೋ’ ಎಂದು ಕೂಗುವ ವಿಡಿಯೋಗಳನ್ನು ಪ್ರದರ್ಶಿಸಿ ಇವರುಗಳು ಅಂಧಭಕ್ತರು ಎಂದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ: ಕೇವಲ 8,000 ರೂ. ಆಸೆಗೆ ಬಿದ್ದು ಶೂಗಳಲ್ಲಿ ಅಡಗಿಸಿ ಪಶ್ನೆಪತ್ರಿಕೆ ಕಳವು!

ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ ಭಾರತ

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್...

ವಿಜಯಪುರ | ರೇಬಿಸ್ ತಡೆಗೆ ಜಾಗೃತಿ ಮುಖ್ಯ; ಬೀದಿ ನಾಯಿ ಕಡಿತದ ಬಗ್ಗೆ ಜನರಲ್ಲಿ ಅರಿವು

ರೇಬಿಸ್ ವೈರಾಣು ಹರಡುವಿಕೆ, ನಾಯಿ ಕಡಿತದಿಂದ ಉಂಟಾಗಬಹುದಾದ ಅಪಾಯ ಹಾಗೂ ಮುನ್ನೆಚ್ಚರಿಕಾ...

ಲಡಾಖ್‌ ಹೋರಾಟಕ್ಕೆ ವರ್ಷ: ಸೆ. 23ರಂದು ಸೋನಮ್ ವಾಂಗ್‌ಚುಕ್ ನೇತೃತ್ವದಲ್ಲಿ 20 ಕಿ.ಮೀ ಪಾದಯಾತ್ರೆ

ಲಡಾಖ್‌ಗೆ ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ವಿಶೇಷ ರಕ್ಷಣೆ ಹಾಗೂ ಪೂರ್ಣ...