ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಯುವಕ ಆತ್ಮಹತ್ಯೆ

Date:

  • ಬೀದರ್‌ ಮೂಲಕ ಅಭಿಷೇಕ್ (19) ಮೃತ ದುರ್ದೈವಿ
  • ಎರಡು ದಿನಗಳಿಂದ ಅಭಿಷೇಕ್ ಮೊಬೈಲ್ ಬಳಸಿಲ್ಲ

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ದತೆ ನಡೆಸುತ್ತಿದ್ದ ಯುವಕನೊಬ್ಬ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಬಲಿಯಾಗಿರುವ ಘಟನೆ ಶನಿವಾರ ನಡೆದಿದೆ.

ಬೀದರ್‌ ಮೂಲಕ ಅಭಿಷೇಕ್ (19) ಮೃತ ದುರ್ದೈವಿ. ಅಭಿಷೇಕ್ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸಲೆಂದು ಬೆಂಗಳೂರಿಗೆ ಬಂದಿದ್ದರು. ವಿಜಯನಗರದ ಪೇಯಿಂಗ್ ಗೆಸ್ಟ್‌ವೊಂದರಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ.

ಅಭಿಷೇಕ್ ನಿತ್ಯವೂ ತರಬೇತಿ ಸಂಸ್ಥೆ ಮತ್ತು ಗ್ರಂಥಾಲಯದಲ್ಲಿ ಓದಿಕೊಳ್ಳುತ್ತಿದ್ದರು. ಶನಿವಾರ ಬೆಳಿಗ್ಗೆ ಸ್ನೇಹಿತರ ಜೊತೆ ಉಪಾಹಾರ ಸೇವಿಸಿದ್ದ ಅಭಿಷೇಕ್, ತನ್ನ ಕೊಠಡಿಗೆ ತೆರಳಿದ್ದರು.

ಕೆಲಹೊತ್ತಿನ ಬಳಿಕ ಸ್ನೇಹಿತರು ಅತನ ಕೊಠಡಿ ಬಳಿ ಬಂದಾಗ, ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ರಯಾಣಿಕರಿಂದ ₹2000 ನೋಟು ಪಡೆಯಿರಿ ಎಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ

ಎರಡು ದಿನಗಳಿಂದ ಅಭಿಷೇಕ್ ಮೊಬೈಲ್ ಬಳಸಿಲ್ಲ. ಆತ್ಮಹತ್ಯೆಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆತನ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಯುವಕನ ಮೇಲೆ ‘ಲವ್ ಜಿಹಾದ್’ ಆರೋಪ ಸುಳ್ಳು; ಪ್ರಕರಣ ಭೇದಿಸಿದ ಪೊಲೀಸರು

ನಾನು ‘ಲವ್‌ ಜಿಹಾದ್‌'ಗೆ ಒಳಗಾಗಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು...

ಬೆಂಗಳೂರು | ಗಾಳಿ-ಮಳೆಗೆ ತಾಯಿ-ಮಗನ ಮೇಲೆ ಬಿದ್ದ ಮರದ ಕೊಂಬೆ; ಗಂಭೀರ ಗಾಯ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಜೋರು ಮಳೆ ಸುರಿದಿದೆ. ಈ...

ಮಾಜಿ ಸಿಎಂ ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ನಿಧನ

ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ಅವರು...

ಬೆಂ.ಗ್ರಾ | ಸಂಘಪರಿವಾರದ ನಾಲ್ವರ ವಿರುದ್ಧ ಡಕಾಯಿತಿ ಪ್ರಕರಣ ದಾಖಲು

ಬೆಂಗಳೂರು ಗ್ರಾಮಾಂತರ ಬಳಿ ದೊಡ್ಡಬಳ್ಳಾಪುರ ಬಳಿ ದನದ ಮಾಂಸ ಸಾಗಿಸುತ್ತಿದ್ದ ವಾಹನ...