ಬೆಂಗಳೂರು | ₹70 ಸಾವಿರ ಸ್ಕೂಟಿ ಮೇಲೆ ಬರೋಬ್ಬರಿ ₹3.22 ಲಕ್ಷ ದಂಡ

Date:

ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ಇದನ್ನು ತಡೆಗಟ್ಟಲು ಬೆಂಗಳೂರು ಸಂಚಾರ ಪೊಲೀಸ್‌ ಹಲವಾರು ಕ್ರಮ ಕೈಗೊಂಡಿದೆ. ನೂತನ ತಂತ್ರಜ್ಞಾನ ಬಳಸಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರ ವಿರುದ್ಧ ಸಂಪರ್ಕ ರಹಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಇದೀಗ, ನಗರದಲ್ಲಿ ನಮ್ಮನ್ನು ಯಾರು ನೋಡುವುದಿಲ್ಲ. ನಾವು ಯಾರ ಕೈಗೂ ಸಿಗುವುದಿಲ್ಲ ಎಂದು ಟಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೇ ರೀತಿಯ ಸಂಚಾರ ನಿಯಮ ಉಲ್ಲಂಘಿಸಿದ ಘಟನೆಯೊಂದು ನಡೆದಿದ್ದು, ಈತ ಬರೋಬ್ಬರಿ 643 ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು, ಬರೊಬ್ಬರಿ ₹3.22 ಲಕ್ಷ ದಂಡ ಬಿದ್ದಿದೆ.

ಹೌದು, ಸ್ಕೂಟಿ ಪೆಪ್​ ಬೆಲೆ ₹70 ಸಾವಿರ ಇದ್ದು, 643 ಸಂಚಾರ ನಿಯಮ ಉಲ್ಲಂಘನೆಗಳಿಂದ ಸ್ಕೂಟಿ ಮೇಲೆ ಬರೋಬ್ಬರಿ ₹3.22 ಲಕ್ಷ ದಂಡ ಬಿದ್ದಿದೆ.

ಮಾಲಾ ಎಂಬುವರಿಗೆ ಸೇರಿದ ಸ್ಕೂಟಿ ಇದಾಗಿದ್ದು, ಹೆಲ್ಮೆಟ್ ರಹಿತ ವಾಹನ ಚಾಲನೆ, ಸಿಗ್ನಲ್ ಜಂಪ್ ಸೇರಿದಂತೆ ಒಟ್ಟು 643 ಬಾರಿ ನಿಯಮಗಳ ಉಲ್ಲಂಘನೆ ಆಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸ್ಕೂಟಿ ನಂಬರ್ KA 04, KF 9072 ಎಂದಾಗಿದೆ. ಬೆಂಗಳೂರಿನ ಆರ್‌ಟಿ ನಗರ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಕೂಟಿ ಮಾಲೀಕರು ಮತ್ತು ಸವಾರನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಮೂರಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ

ಆರ್.ಟಿ.ನಗರದ ಗಂಗಾನಗರ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಮೇಲೆ ದಂಡ ಬಿದ್ದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಸ್ತಿ ತೆರಿಗೆ | ಓಟಿಎಸ್ ಸೌಲಭ್ಯವನ್ನು ಆನ್‌ಲೈನ್ ಮೂಲಕ ಪಡೆದು ಪಾವತಿಸಲು ಅವಕಾಶ

ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಮಾಲೀಕರಿಗಾಗಿ 'ಒನ್ ಟೈಮ್ ಸೆಟ್ಲ್ ಮೆಂಟ್'(OTS)...

ಕಾಂಗ್ರೆಸ್‌ ಸರ್ಕಾರಕ್ಕೆ ಪ್ರತಿಯಾಗಿ ಅಧಿವೇಶನದಲ್ಲಿ ನಿರ್ಣಯ ಮಂಡಿಸಿದ ಬಿಜೆಪಿ

ತೆರಿಗೆ ಅನ್ಯಾಯ ವಿಚಾರವಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಖಂಡನಾ...

ಇಂಡಿಯಾ ಒಕ್ಕೂಟಕ್ಕೆ ಹೆದರಿ ಅರವಿಂದ್ ಕೇಜ್ರಿವಾಲ್‌ ಬಂಧಿಸಲು ಕೇಂದ್ರದಿಂದ ಸಂಚು: ಮೋಹನ್ ದಾಸರಿ

"ಇಂಡಿಯಾ ಒಕ್ಕೂಟದಲ್ಲಿ ಎಎಪಿ-ಕಾಂಗ್ರೆಸ್ ನಡುವೆ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ...

ಮಂಡ್ಯ | ನನಗೆ ಬೇರೆಡೆ ಟಿಕೆಟ್​ ಪಡೆಯುವುದು ಕಷ್ಟವಲ್ಲ: ಸುಮಲತಾ ಅಂಬರೀಶ್

ನಿನ್ನೆ(ಫೆ.22) ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ...