ಲೇಖಕ ಚಿನ್ನೇನಹಳ್ಳಿ ಸ್ವಾಮಿಯವರ ‘ಕಾಲಳತೆಯ ದುಃಖ’ ಕೃತಿ ಬಿಡುಗಡೆ ಕಾರ್ಯಕ್ರಮವು ಜುಲೈ 26ರ ಭಾನುವಾರ ಬೆಳಿಗ್ಗೆ 10-30ಕ್ಕೆ ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಜರುಗಲಿದೆ.
ಈ ಕೃತಿಯು ಹಾಸನದ ಹಳ್ಳಿ ಸಾಹಿತ್ಯ ಪ್ರಕಾಶನದಲ್ಲಿ ಮುದ್ರಣಗೊಂಡಿದ್ದು, ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಕಾರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್ ಎನ್ ಮುಕುಂದರಾಜ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಹಿರಿಯ ಸಾಹಿತಿ, ಲೇಖಕಿ ಡಾ. ಹೆಚ್ ಎಲ್ ಪುಷ್ಪ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಲೇಖಕ ರಘುನಾಥ್ ಚ ಹ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಹಾಡ್ಲಳ್ಳಿ ನಾಗರಾಜ್, ಹಿರಿಯ ಮನೋವೈದ್ಯ ಹಾಗೂ ಸಾಹಿತಿ ಡಾ. ಎ ಎಂ ನಾಗೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲೇಖಕ ಚಿನ್ನೇನಹಳ್ಳಿ ಸ್ವಾಮಿಯವರು ಕೃತಿಕಾರರ ನುಡಿಯನ್ನು ಪ್ರಸ್ತುತಪಡಿಸಲಿದ್ದಾರೆ.
ಇದನ್ನೂ ಓದಿದ್ದೀರಾ? ಮಂಗಳೂರು | ತುಳುನಾಡು ಮಾತೃಮೂಲ ಸಂಸ್ಕೃತಿಯ ನಾಡು : ಅತ್ರಾಡಿ ಅಮೃತ ಶೆಟ್ಟಿ
ಸಮಾರಂಭದಲ್ಲಿ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.







