ಬೆಂಗಳೂರು | ಮೊದಲ 100 ದಿನಗಳಲ್ಲಿ 11 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಿದ ‘ಕೆಐಎ’ ಟರ್ಮಿನಲ್ 2

Date:

  • ಹೊಸ ಟರ್ಮಿನಲ್‌ನಿಂದ ಹಾರಾಟ ಪ್ರಾರಂಭಿಸಿದ ಮೊದಲ ವಿಮಾನಯಾನ ಸಂಸ್ಥೆ ‘ಸ್ಟಾರ್ ಏರ್’
  • ಎರಡು ಟರ್ಮಿನಲ್‌ಗಳ ನಡುವೆ ಇಲ್ಲಿಯವರೆಗೆ 28,040 ಶಟಲ್ ಟ್ರಿಪ್‌ಗಳನ್ನು ಕೈಗೊಳ್ಳಲಾಗಿದೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್-2 ಕಾರ್ಯಾಚರಣೆ ಆರಂಭವಾಗಿ 100 ದಿನಗಳು ಕಳೆದಿದ್ದು, ಇದುವರೆಗೂ 11 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ.

- Advertisement -

ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಟರ್ಮಿನಲ್ 2 ಅನ್ನು ಉದ್ಘಾಟಿಸಿದ್ದರು. ಜನವರಿ 15 ರಂದು ವಿಮಾನ ಹಾರಾಟ ಆರಂಭವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ 11,33,645 ಪ್ರಯಾಣಿಕರು ಈ ಟರ್ಮಿನಲ್‌ ಅನ್ನು ಬಳಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕೆವಿಎನ್- ನಿಜ ಅರ್ಥದ ಕನ್ನಡದ...

ಡಾ. ಕೆ.ವಿ. ನಾರಾಯಣ ಅವರು ವಿಮರ್ಶಕರಾಗಿ, ಭಾಷಾವಿಜ್ಞಾನಿಯಾಗಿ, ವಿಚಾರವಾದಿಯಾಗಿ ಕನ್ನಡ ನಾಡಿಗೆ ಪರಿಚಿತರು. ಅವರ ಇತ್ತೀಚಿನ ಪ್ರತಿಯೊಂದು ಮಾತು ಮತ್ತು ಬರಹಗಳಲ್ಲೂ ವೈಚಾರಿಕತೆ ಇದ್ದೆ ಇರುತ್ತಿತ್ತು. ಅವರು ಇಷ್ಟು ಬೇಗ ಅಗಲಿ ಹೋಗುತ್ತಾರೆ...

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್‌) ಪ್ರಕಾರ, 76% ರಷ್ಟು ಸಮಯಕ್ಕೆ ಸರಿಯಾಗಿ 7,501 ವಿಮಾನ ಚಲನೆಗಳನ್ನು ಟರ್ಮಿನಲ್-2 ಕಂಡಿದೆ.

ಪ್ರಸ್ತುತ, ಟರ್ಮಿನಲ್-2 ದೇಶೀಯ ಸೇವೆಗಳನ್ನು ಮಾತ್ರ ನಿರ್ವಹಿಸುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಮೂರು ದೇಶೀಯ ವಿಮಾನ ಸಂಸ್ಥೆಗಳಾದ ಸ್ಟಾರ್ ಏರ್, ಏರ್ ಏಷ್ಯಾ ಇಂಡಿಯಾ ಮತ್ತು ವಿಸ್ತಾರಾ ಹೊಸ ಟರ್ಮಿನಲ್‌ನಿಂದ ಕಾರ್ಯನಿರ್ವಹಿಸುತ್ತಿವೆ.

ಸ್ಟಾರ್ ಏರ್ ಜನವರಿ 15 ರಂದು ಹೊಸ ಟರ್ಮಿನಲ್‌ನಿಂದ ಹಾರಾಟವನ್ನು ಪ್ರಾರಂಭಿಸಿದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ. ಅದಾದ ಒಂದು ತಿಂಗಳ ನಂತರ, ಏರ್‌ ಏಷ್ಯಾ ಇಂಡಿಯಾ ತನ್ನ ವಿಮಾನ ಸೇವೆಗಳನ್ನು ಪ್ರಾರಂಭಿಸಿತು.

ಈ ಸುದ್ದಿ ಓದಿದ್ದೀರಾ? ಲೇವಾದೇವಿದಾರರ ಕಾಟಕ್ಕೆ ಬೇಸತ್ತು ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ

ಬೆಂಗಳೂರು ಏರ್‌ ಏಷಿಯಾ ಇಂಡಿಯಾಕ್ಕೆ ಹೋಮ್ ಬೇಸ್ ಮತ್ತು ಅತಿ ದೊಡ್ಡ ಕೇಂದ್ರವಾಗಿದ್ದು, ನಾನಾ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ 43 ದೈನಂದಿನ ನಿರ್ಗಮನಗಳನ್ನು ನಿರ್ವಹಿಸುತ್ತಿದೆ. ಏರ್‌ಲೈನ್ ತನ್ನ ಸಂಪೂರ್ಣ ದೇಶೀಯ ಕಾರ್ಯಾಚರಣೆಗಳನ್ನು ಟರ್ಮಿನಲ್-2 ಗೆ ಸ್ಥಳಾಂತರಿಸಿದೆ.

ಮೊದಲ 100 ದಿನಗಳಲ್ಲಿ ಸುಮಾರು 7,71,650 ಬ್ಯಾಗ್‌ಗಳನ್ನು ಹೊಸ ಟರ್ಮಿನಲ್‌ನಲ್ಲಿ ನಿರ್ವಹಿಸಲಾಗಿದೆ.

ಹಳೆಯ ಟರ್ಮಿನಲ್ ಮತ್ತು ಹೊಸ ಟರ್ಮಿನಲ್ ನಡುವೆ ನಿಯಮಿತ ಸಮಯದಲ್ಲಿ ಉಚಿತ ವಿಮಾನ ನಿಲ್ದಾಣ ಶಟಲ್ ಬಸ್ ಸೇವೆಗಳನ್ನು ಒದಗಿಸಲಾಗುತ್ತದೆ. ಎರಡು ಟರ್ಮಿನಲ್‌ಗಳ ನಡುವೆ ಇಲ್ಲಿಯವರೆಗೆ 28,040 ಶಟಲ್ ಟ್ರಿಪ್‌ಗಳನ್ನು ಕೈಗೊಳ್ಳಲಾಗಿದೆ.

ಟರ್ಮಿನಲ್ ಅನೇಕ ಆಹಾರ ಮತ್ತು ಪಾನೀಯ ಮಳಿಗೆಗಳನ್ನು ಹೊಂದಿದೆ. ಇಲ್ಲಿ ಪೊಡಿ ಮಸಾಲಾ ದೋಸೆಯು ಹೆಚ್ಚು ಮಾರಾಟವಾಗುವ ಖಾದ್ಯವಾಗಿದೆ. ಮೊದಲ 100 ದಿನಗಳಲ್ಲಿ 4,100 ಪೊಡಿ ಮಸಾಲೆ ದೋಸೆಯನ್ನು ಪ್ರಯಾಣಿಕರು ಆರ್ಡರ್ ಮಾಡಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಕ್ರಮ ಕಟ್ಟಡಗಳ ವಿರುದ್ಧ ಬೆಂಗಳೂರು ಉತ್ತರ ಪಾಲಿಕೆ ಕ್ರಮ: ಯಲಹಂಕದಲ್ಲಿ ಕಟ್ಟಡ ತೆರವು

ಸೆಟ್‌ಬ್ಯಾಕ್ ನಿಯಮಗಳನ್ನು ಉಲ್ಲಂಘಿಸಿ ಮತ್ತು ಪಾಲಿಕೆಯಿಂದ ಯಾವುದೇ ರೀತಿಯ ಪ್ಲಾನ್ ಮಂಜೂರಾತಿ...

ದೊಡ್ಡಬಳ್ಳಾಪುರ |ಧರ್ಮಸ್ಥಳದ ಶ್ರೀಮುಡಿ ಭವನದದಲ್ಲಿ ದಲಿತ ಮುಖಂಡ ಗುರುರಾಜಪ್ಪ ರವರ ಶವ ಪತ್ತೆ !

ದಲಿತರ ಮುಖಂಡ, ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರಾದ ಸಿ.ಗುರುರಾಜಪ್ಪ...

ಕಬ್ಬು ಬೆಳೆಗಾರರ ರಕ್ಷಣೆಗೆ ಪ್ರತ್ಯೇಕ ವಿಮೆ, ನ್ಯಾಯಯುತ ಬೆಲೆ ಸೇರಿದಂತೆ 12 ಬೇಡಿಕೆ

ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹6,000 ಕನಿಷ್ಠ...

ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಗೆಲುವು

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ದ್ವೈವಾರ್ಷಿಕ ಚುನಾವಣೆ-2026ರ ಬೆಂಗಳೂರು...