ಸುದೀಪ್‌ ಹಾಗೂ ನನ್ನದು ರಾಜಕೀಯ ಮೀರಿದ ಸಂಬಂಧ; ನನ್ನ ಪರ ಪ್ರಚಾರ ಮಾಡುತ್ತಾರೆ : ಸಿಎಂ

Date:

  • ಸುದೀಪ್ ಹಾಗೂ ನನ್ನದು ರಾಜಕೀಯ-ಪಕ್ಷ ಮೀರಿದ ಗೆಳೆತನ
  • ಬೊಮ್ಮಾಯಿ ಮಾಮ ಹಾಗೂ ನನ್ನ ಕೆಲ ಸ್ನೇಹಿತರ ಪರ ಪ್ರಚಾರ

ನಟ ಸುದೀಪ್‌ ಹಾಗೂ ನನ್ನದು ರಾಜಕೀಯವನ್ನೂ ಮೀರಿದ ಸಂಬಂಧ. ಆ ಹಿನ್ನೆಲೆಯಲ್ಲಿ ಅವರು ನನ್ನ ಪರ ಈ ಬಾರಿ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಮೀರಿದ ಗೆಳೆತನ ಸಂಬಂಧವೂ ಇರುತ್ತದೆ. ಇಂತಹದ್ದೇ ಬಾಂಧವ್ಯ ಕಿಚ್ಚ ಸುದೀಪ್‌ ಹಾಗೂ ನನ್ನ ನಡುವೆ ಇದೆ ಎಂದರು.

ನಾನು ಯಾರ ಪರ ಪ್ರಚಾರ ಮಾಡಲು ಹೇಳುತ್ತೇನೆಯೋ ಅವರ ಪರ ಪ್ರಚಾರ ಮಾಡುತ್ತಾರೆ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಪೂರ್ಣ ಗೆಳೆತನದ ವಿಚಾರ ಎಂದು ಹೇಳಿದರು.

ನಟ ಸುದೀಪ್‌ ನಮ್ಮ ಪರ ಪ್ರಚಾರಕ್ಕೆ ಬಂದಿರುವುದು ಪಕ್ಷಕ್ಕೆ ಬಲ ತಂದಿದೆ. ಇದು ನಮಗೆ ಹೆಚ್ಚಿನ ಶಕ್ತಿ ನೀಡಿದೆ ಎಂದು ಬೊಮ್ಮಾಯಿ ತಿಳಿಸಿದರು.

ಬಳಿಕ ಮಾತನಾಡಿದ ನಟ ಸುದೀಪ್‌ ನಾನು ಬಿಜೆಪಿ ಸೇರುವುದಿಲ್ಲ, ಆದರೆ ಪಕ್ಷದಲ್ಲಿ ಗೆಳೆಯರಾಗಿರುವ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ ಎಂದರು.

ನಾನು ಚಿತ್ರರಂಗಕ್ಕೆ ಅಡಿ ಇಡುವ ವೇಳೆ ಹಲವರ ಸಹಕಾರ ಪಡೆದಿರುವೆ. ಅವರೆಲ್ಲರ ಋಣ ತೀರಿಸುವ ಕಾರ್ಯ ಮಾಡುವೆ. ಅದಕ್ಕಾಗಿ ಈ ಬಾರಿ ಚುನಾವಣೆಯಲ್ಲಿ ನಾನು ನನ್ನ ಆತ್ಮೀಯರ ಪರ ಮತಯಾಚನೆ ಮಾಡುವೆ ಎಂದು ನಟ ಸುದೀಪ್ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ಮಾರ್ಗದರ್ಶಕರು. ಹೀಗಾಗಿ ನಾನು ನನ್ನ ಬೊಮ್ಮಾಯಿ ಮಾಮನನ್ನೂ ಒಳಗೊಂಡಂತೆ ಕೆಲ ಸ್ನೇಹಿತರ ಪರ ನಾನು ಪ್ರಚಾರ ಕೈಗೊಳ್ಳುವೆ ಎಂದು ಕಿಚ್ಚ ಸುದೀಪ್ ಹೇಳಿದರು.

ಸುದೀಪ್

ಈ ಸುದ್ದಿ ಓದಿದ್ದೀರಾ? : ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ: ಪ್ರಕಾಶ್‌ ರಾಜ್‌

ಬಳಿಕ ಮಾತನಾಡಿದ ಸಚಿವ ಸುಧಾಕರ್, ಸುದೀಪ್‌ ನಮ್ಮ ಗೆಳೆಯರು, ಅವರದ್ದೇ ವಿಚಾರ ಧಾರೆ ಮೇಲೆ ನಮ್ಮ ಪರ ಪ್ರಚಾರ ಮಾಡಲು ಬರುತ್ತಿದ್ದಾರೆ. ನಮಗದು ಖುಷಿಯ ವಿಚಾರ ಎಂದರು.

ನಟ ಸುದೀಪ್ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಬೊಮ್ಮಾಯಿ, ಸಚಿವ ಆರ್ ಅಶೋಕ್, ಡಾ.ಸುಧಾಕರ್ ಉಪಸ್ಥಿತರಿದ್ದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ; ತಮ್ಮದೇ ಸರ್ಕಾರದ ವಿರುದ್ಧ ಬಿ.ಆರ್ ಪಾಟೀಲ್ ಕಿಡಿ

ಕಳೆದ ಸದನದಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ...

ಕಲಬುರಗಿ | ಸಕಾಲ ಅರ್ಜಿ ವಿಲೇವಾರಿ : ಕಲಬುರಗಿಗೆ ರಾಜ್ಯದಲ್ಲೇ ನಂಬರ್‌ 1 ಸ್ಥಾನ

ಕಾಲಮಿತಿಯಲ್ಲಿ ಸರ್ಕಾರಿ ಸೇವೆ ನೀಡುವ ಸಕಾಲ ಯೋಜನೆಯಡಿ ನವೆಂಬರ್ ತಿಂಗಳ ಅರ್ಜಿ...

3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲ: ಸಿ ಟಿ ರವಿ ಆರೋಪ

ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನದಲ್ಲಿ ...