ಬೆಂಗಳೂರು | ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ ಕಳ್ಳರು; 20 ಲಕ್ಷ ರೂ. ಹಣ, ಅರ್ಧ ಕೆ.ಜಿ ಚಿನ್ನ ದರೋಡೆ

Date:

ಪೊಲೀಸ್‌ ಅಧಿಕಾರಿಗಳ ಸೋಗಿನಲ್ಲಿ ನಾಲ್ವರು ಆರೋಪಿಗಳು ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ, ಬಂದೂಕು ತೋರಿಸಿ 20 ಲಕ್ಷ ರೂ. ಹಣ ಮತ್ತು ಅರ್ಧ ಕೆ.ಜಿ ಚಿನ್ನಾಭರಣೆಗಳನ್ನು ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತಾದರೂ, ಆರೋಪಿಗಳು ಸಿಸಿಟಿವಿಯ ವಿಡಿಆರ್‌ಅನ್ನು ಹೊತ್ತೊಯ್ದಿದ್ದಾರೆ.

- Advertisement -

ಘಟನೆಯು ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಕ್ರೈಂ ಸೀನ್ ಅಧಿಕಾರಿಗಳ ಸಮವಸ್ತ್ರ ಧರಿಸಿ ರಿಯಲ್ ಎಸ್ಟೇಟ್ ಉದ್ಯಮಿ ಹೊಂಬಾಳೇಗೌಡ ಎಂಬವರ ಮನೆಗೆ ನುಗ್ಗಿದ್ದಾರೆ. ಚಾಕು ಮತ್ತು ಬಂದೂಕು ತೋರಿಸಿ, ಹೊಂಬಾಳೇಗೌಡ ಮತ್ತು ಅವರ ಪತ್ನಿಯನ್ನು ಕಟ್ಟಿಹಾಕಿದ್ದಾರೆ. ಮೊಬೈಲ್‌ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ, ಹಣ-ಚಿನ್ನಾಭರಣವನ್ನು ದೋಚಿದ್ದಾರೆ. ಮಾತ್ರವಲ್ಲದೆ, ಸಿಸಿಟಿವಿ ಡಿವಿಆರ್‌ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಈ ಘಟನೆಯು ಹಾಡಹಗಲೇ ನಡೆದಿದ್ದು, ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ. ಆರೋಪಿಗಳು ಪೊಲೀಸ್‌ ಸಮವಸ್ತ್ರ ಧರಿಸಿ ಬಂದು ದರೋಡೆ ಮಾಡಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಸದ್ಯ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ಮನೆಯ ಸುತ್ತಮುತ್ತಲಿನ ಸಿಸಿಟಿವಿ ವಿಡಿಯೋಗಳನ್ನು ವಿಶ್ಲೇಷಿಸಿ ಆರೋಪಿಗಳನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಆರೋಪಿಗಳು ವಾಹನದಲ್ಲಿ ಪರಾರಿಯಾಗಿರುವ ಸಾಧ್ಯತೆ ಇದ್ದು, ಸಂಬಂಧಿತ ವಾಹನಗಳನ್ನು ಹುಡುಕಲಾಗುತ್ತಿದೆ. ಇದು ಯೋಜಿತ ದರೋಡೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಂಗಳೂರಿನಲ್ಲಿ ಪೊಲೀಸರ ಸೋಗಿನ ಇತ್ತೀಚೆಗೆ ದರೋಡೆಗಳು ಹೆಚ್ಚಾಗುವೆ. ಈ ಹಿಂದೆ, RBI ಅಧಿಕಾರಿಗಳ ಸೋಗಿನಲ್ಲಿ ಕ್ಯಾಶ್ ವ್ಯಾನ್ ದರೋಡೆ ಮಾಡಲಾಗಿತ್ತು. ಅಂತೆಯೇ, ED ಅಧಿಕಾರಿಗಳ ಸೋಗಿನಲ್ಲಿ ಚಿನ್ನಾಭರಣವನ್ನು ದರೋಡೆ ಮಾಡಲಲಾಗಿತ್ತು. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಗರದ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಮನೆಗೆ ಬರುವ ಯಾವುದೇ ಅಧಿಕಾರಿಗಳನ್ನು ಗುರುತಿನ ಚೀಟಿ, ಐಡಿ ಕಾರ್ಡ್ ಹಾಗೂ ಅಧಿಕೃತ ವಾಹನಗಳನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...

ಸರ್ಕಾರ ಬೀಳಿಸಲು ಬಂದಿಲ್ಲ, ಅಕ್ರಮ ಪ್ರಶ್ನಿಸಲು ಬಂದಿದ್ದೇನೆ: ಖ್ಯಾತ ಯೂಟ್ಯೂಬರ್ ಧೃವ್ ರಾಠಿ

"ನಾನು ಯಾವುದೇ ಸರ್ಕಾರವನ್ನು ಕೆಡವಲು ಅಥವಾ ಬದಲಾಯಿಸಲು ಇಲ್ಲಿಗೆ ಬಂದಿಲ್ಲ. ನನಗೆ...

ಪ್ರಜಾಪ್ರಭುತ್ವದ ಹಕ್ಕು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ, ಜೆನ್-ಝೀಗಳು ಸಹಿಸುವುದಿಲ್ಲ: ಐಶೀ ಘೋಷ್

"ನಾವು ಪ್ರಸ್ತುತ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ...

ಮತ ಕಳೆದುಹೋದರೆ ಪ್ರಜಾಪ್ರಭುತ್ವ ಕಳೆದುಹೋಗುತ್ತದೆ: ಅಭಿಜೀತ್ ದೀಪ್ಕೆ

ದೇಶದಲ್ಲಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಂಡು...