ಬೆಂಗಳೂರು | ಆರೋಗ್ಯ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ಹೆಚ್ಚು ಹುಡುಕಾಟ ನಡೆಸುತ್ತಿರುವ ಯುವಕರು : ನಿಮ್ಹಾನ್ಸ್ ಅಧ್ಯಯನ

Date:

  • ಸೈಬರ್ ಕಾಂಡ್ರಿಯಾಸಿಸ್ ಎಂದರೆ ‘ಆರೋಗ್ಯ ಸಂಬಂಧ ಮಾಹಿತಿ ಹುಡುಕುವ ಅಸಹಜ ನಡವಳಿಕೆ’
  • ಅಧ್ಯಯನದಲ್ಲಿ ಭಾಗವಹಿಸಿದವರೆಲ್ಲರೂ 18 ರಿಂದ 25 ವರ್ಷ ವಯಸ್ಸಿನ ವಿದ್ಯಾರ್ಥಿಗಳು

ಬೆಂಗಳೂರಿನ ಯುವಜನರು ಆನ್‌ಲೈನ್‌ನಲ್ಲಿ ಹೆಚ್ಚಾಗಿ ಆರೋಗ್ಯದ ಮಾಹಿತಿಯನ್ನು ಹುಡುಕುತ್ತಿದ್ದಾರೆ. ಇದನ್ನು ‘ಸೈಬರ್ ಕಾಂಡ್ರಿಯಾಸಿಸ್’ ಎಂದು ಕರೆಯಲಾಗುತ್ತದೆ ಎಂದು ಬೆಂಗಳೂರಿನ ನಿಮ್ಹಾನ್ಸ್ ಹೇಳಿದೆ.

ನಿಮ್ಹಾನ್ಸ್ ಅಧ್ಯಯನವೊಂದನ್ನು ನಡೆಸಿದೆ. ಈ ಅಧ್ಯಯನದಲ್ಲಿ ಬೆಂಗಳೂರಿನ 356 ಕಾಲೇಜು ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ಈ ಪೈಕಿ, 48.6% ವಿದ್ಯಾರ್ಥಿಗಳಲ್ಲಿ ಸೈಬರ್ ಕಾಂಡ್ರಿಯಾಸಿಸ್ ಕಾಣಿಸಿಕೊಂಡಿದೆ.

ಸೈಬರ್ ಕಾಂಡ್ರಿಯಾಸಿಸ್ ಎಂದರೆ ‘ಆರೋಗ್ಯ ಸಂಬಂಧ ಮಾಹಿತಿ ಹುಡುಕುವ ಅಸಹಜ ನಡವಳಿಕೆ’. ಇದು ಆರೋಗ್ಯದ ಬಗ್ಗೆ ವ್ಯಕ್ತಿಯ ಆತಂಕವನ್ನು ಸೂಚಿಸುತ್ತದೆ. ಆದರೆ, ಈ ನಡವಳಿಕೆಯು ಆರೋಗ್ಯದ ಬಗೆಗಿನ ಆತಂಕವನ್ನು ಕಡಿಮೆ ಮಾಡುವ ಬದಲು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದೆ.

“ಅಲ್ಲದೆ, ವ್ಯಕ್ತಿಗೆ ನಿಜವಾದ ಆರೋಗ್ಯ ಸಮಸ್ಯೆ ಇಲ್ಲದಿರಬಹುದು. ಆದರೂ, ಅವರೆಲ್ಲರೂ ಆರೋಗ್ಯ ಮಾಹಿತಿಯನ್ನು ಹುಡುಕುತ್ತಾರೆ. ಬಳಿಕ ವೈದ್ಯರನ್ನು ಸಂಪರ್ಕಿಸುತ್ತಾರೆ. ಅವರಲ್ಲಿ ಕೇವಲ 4.8% ರಷ್ಟು ಜನರಲ್ಲಿ ಮಾತ್ರ ಆರೋಗ್ಯ ಸಮಸ್ಯೆ ಕಂಡುಬಂದಿದೆ” ಎಂದು ಅಧ್ಯಯನ ವಿವರಿಸಿದೆ.

ಅಧ್ಯಯನವು ನಾಲ್ಕು ಅಂಶಗಳೊಂದಿಗೆ ಸೈಬರ್ ಕಾಂಡ್ರಿಯಾಸಿಸ್ ತೀವ್ರತೆಯನ್ನು ಅಳೆಯಲು ಮುಂದಾಗಿತ್ತು. ಅದಕ್ಕಾಗಿ, ತನ್ನದೇ ಆದ ಕಟ್-ಆಫ್ ಪಾಯಿಂಟ್ ಅನ್ನು ಗುರುತಿಸಿತ್ತು. 1) ಮಿತಿಮೀರಿ ಆನ್‌ಲೈನ್‌ನಲ್ಲಿ ಕುಡುಕಾಟ ನಡೆಸುವುದು. 2) ಆನ್‌ಲೈನ್‌ನಲ್ಲಿ ಕಂಡುಬರುವ ಮಾಹಿತಿಯ ಬಗ್ಗೆ ಅಪನಂಬಿಕೆ ಇಡುವುದು 3) ಭರವಸೆಗಾಗಿ ಮತ್ತಷ್ಟು ಹುಡುಕಾಟ ನಡೆಸುವುದು 4) ಮಾಹಿತಿಯನ್ನು ಹಠಾತ್ತನೆ ಪರಿಶೀಲಿಸಲು ಮುಂದಾಗುವುದು. ಇದು ಯುವಜನರಲ್ಲಿ ವಿಪರೀತವಾಗಿ ಕಂಡುಬಂದಿದೆ ಎನ್ನುತ್ತಾರೆ ಅಧ್ಯಯನ ನಡೆಸಿದ ನೀರಜ್ ಎಂ.ಎಸ್.

“ಅಧ್ಯಯನದಲ್ಲಿ ಭಾಗವಹಿಸಿದವರೆಲ್ಲರೂ 18 ರಿಂದ 25 ವರ್ಷ ವಯಸ್ಸಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು. ಸೈಬರ್ ಕಾಂಡ್ರಿಯಾಸಿಸ್ ಹರಡುವಿಕೆಯ ಕುರಿತು ಬೆಂಗಳೂರಿನಲ್ಲಿ ಇದು ಮೊದಲ ಅಧ್ಯಯನವಾಗಿದೆ” ಎಂದು ಅಧ್ಯಯನಕ್ಕೆ ಮಾರ್ಗದರ್ಶನ ನೀಡಿದ ನಿಮ್ಹಾನ್ಸ್‌ ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ ನಿರ್ಮಲಾ ಹೇಳುತ್ತಾರೆ.

ಅಧ್ಯಯನವು ಸ್ಮಾರ್ಟ್ ಫೋನ್ ಚಟ ಮತ್ತು ಭಾಗವಹಿಸುವವರಲ್ಲಿ ಆರೋಗ್ಯದ ಆತಂಕದ ಬಗ್ಗೆ ಕೇಂದ್ರೀಕರಿಸಿದೆ. ಈ ಪರಿಸ್ಥಿತಿಗಳಿರುವ ಜನರು ಸೈಬರ್ ಕಾಂಡ್ರಿಯಾಸಿಸ್ ಅನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ.

“ಆನ್‌ಲೈನ್‌ನಲ್ಲಿ ಆರೋಗ್ಯ ಮಾಹಿತಿಯನ್ನು ಪರಿಶೀಲಿಸಿದ ಎಲ್ಲರಿಗೂ ಸೈಬರ್ ಕಾಂಡ್ರಿಯಾಸಿಸ್ ಇರಲಿಲ್ಲ ಎಂದು ನೀರಜ್ ಸ್ಪಷ್ಟಪಡಿಸಿದ್ದಾರೆ. ಭಾಗವಹಿಸುವವರಲ್ಲಿ, 14% ಜನರು ಆರೋಗ್ಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಿಯಮಿತವಾಗಿ ಪರಿಶೀಲಿಸುತ್ತಿದ್ದಾರೆ. ಆದರೆ, ಅವರಲ್ಲಿಯೂ ಆರೋಗ್ಯ ತೊಂದರೆಗಳಂತ ಲಕ್ಷಣಗಳಿಲ್ಲ” ಎಂದು ಅವರು ತೀಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಇನ್ನೂ ಮೂರು ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ

“ಸೈಬರ್ ಕಾಂಡ್ರಿಯಾಸಿಸ್ ಈಗ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ತೊಂದರೆ ಅನುಭವಿಸುವುದರ ಜೊತೆಗೆ, ವ್ಯಕ್ತಿಯು ಆಗಾಗ್ಗೆ ವೈದ್ಯರನ್ನು ಬದಲಾಯಿಸಬಹುದು ಅಥವಾ ವೈದ್ಯರೊಂದಿಗಿನ ಅವರ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಅವರು ಸ್ವಯಂ-ರೋಗನಿರ್ಣಯ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದು”ಎಂದು ಡಾ ಮನೋಜ್ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಬ್ರ್ಯಾಂಡ್‌ ಹೆಸರು ಬಳಸಿ ನಕಲಿ ಬಟ್ಟೆ ತಯಾರು: ಸಿಸಿಬಿ ದಾಳಿ

ಅರ್ಮಾನಿ, ಲಿವೈಸ್, ಅಲ್ಲೆನ್ ಸೊಲ್ಲಿ, ಬುರ್ಬೆರಿ ಲೆದರ್ ಟ್ಯಾಗ್ಸ್, ಪೋಲೊ, ಎಲ್​ಪಿ...

ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನೀಡದ ನಿಮ್ಹಾನ್ಸ್‌; ಸಾವು

ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಒಂದು ವರ್ಷದ ಪುಟ್ಟ ಕಂದಮ್ಮನಿಗೆ...

ಬೆಂಗಳೂರು | ಪ್ರಿಯಕರನ ಮೊಬೈಲ್‌ನಲ್ಲಿತ್ತು 13 ಸಾವಿರ ನಗ್ನ ಫೋಟೋ: ದೂರು ದಾಖಲಿಸಿದ ಪ್ರಿಯತಮೆ

ಸಹೋದ್ಯೋಗಿ, ಪ್ರಿಯತಮೆ ಸೇರಿದಂತೆ ಮಹಿಳೆಯರ 13,000ಕ್ಕೂ ಹೆಚ್ಚು ನಗ್ನ ಫೋಟೋಗಳನ್ನು ಮೊಬೈಲ್‌ನಲ್ಲಿ...

ಭಾರತದ ಅಭಿವೃದ್ಧಿಗೆ ಬಂಡವಾಳಶಾಹಿ ಮಾತ್ರವೇ ಏಕೈಕ ಪರಿಹಾರ: ಇಸ್ಫೋಸಿಸ್ ನಾರಾಯಣ ಮೂರ್ತಿ

ಭಾರತದಂತಹ ಬಡ ದೇಶವು ಅಭಿವೃದ್ಧಿ ರಾಷ್ಟ್ರವಾಗಲು ಸಹಾನುಭೂತಿಯುಳ್ಳ ಬಂಡವಾಳಶಾಹಿಯ ಅಗತ್ಯವಿದೆ. ಅದೊಂದೇ...