ಬೆಂಗಳೂರು | ಪ್ರಸ್ತುತ ಸಾಹಿತಿಗಳು ಸಾಮಾಜಿಕ ವರ್ತಮಾನಗಳಿಗೆ ವಿಮುಖರಾಗುತ್ತಿದ್ದಾರೆ: ಕುಂವೀ

Date:

ಸಾಹಿತ್ಯ ಪ್ರಸ್ತುತ ಕಾಲದಲ್ಲಿ ಚಳವಳಿಗೆ ಕಾಣ್ಕೆಯನ್ನು ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಬರಹಗಾರರು ಕೆಲಸ ಮಾಡಬೇಕು ಎಂದು ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಕರೆ ನೀಡಿದರು.

- Advertisement -

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಿನ್ನೇನಹಳ್ಳಿ ಸ್ವಾಮಿಯವರ ʼಕಾಲೆಳತೆಯ ದುಃಖʼ ಕಾದಂಬರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಜಾಪ್ರಭುತ್ವದ ಕಗ್ಗೊಲೆ: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

“ಪ್ರಸ್ತುತ ಸಾಹಿತಿಗಳು ಸಾಮಾಜಿಕ ವರ್ತಮಾನಗಳಿಗೆ ವಿಮುಖರಾಗುತ್ತಿದ್ದು, ವ್ಯವಸ್ಥಗೆ, ಅನಿಷ್ಟಗಳಿಗೆ ಹೊಂದಿಕೊಂಡು ಬರೆಯುತ್ತಿದ್ದಾರೆ. ಹಿಂದಿನ ಚಳವಳಿಗಳಿಗೆ ಸಾಹಿತ್ಯಿಕವಾದ ಕೊಡುಗೆ ಬಹಳಷ್ಟಿತ್ತು. ಆದರೆ ಈಗ ಅದು ಕಾಣೆಯಾಗಿರುವುದನ್ನು ನೋಡುತ್ತಿದ್ದೇವೆ. ಆದಾಗ್ಯೂ ಚಿನ್ನೇನಹಳ್ಳಿ ಸ್ವಾಮಿಯವರ ಕಾದಂಬರಿ ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತದೆ. ತಮಗೆ ಅನುಕೂಲವಿಲ್ಲದಿದ್ದರೂ ಯಾರೋ ಕುಡಿಯುವ ನೀರಿಗಾಗಿ ರೈತ ತನ್ನ ತಲೆತಲಾಂತರದಿಂದ ಬಂದಂಥ ಕೃಷಿ ಭೂಮಿಯನ್ನು ಕೈ ಬಿಡುತ್ತಿದ್ದಾನೆ. ಸರ್ಕಾರಗಳು ರೈತನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ” ಎಂದು ಹೇಳಿದರು.

Advertisements

“ಈಗಾಗಲೇ ಯುವಸಮುದಾಯ ರಾಷ್ಟ್ರಮಟ್ಟದಲ್ಲಿ ದೊಡ್ಡ ಚಳವಳಿಯನ್ನು ಹುಟ್ಟುಹಾಕಿದೆ. ಆದರೆ ಅದಕ್ಕೆ ಪೂರಕವಾಗಿ ಸಾಹಿತಿಗಳು ಕೈಜೋಡಿಸುತ್ತಿಲ್ಲ. ಮಾತ್ರವಲ್ಲದೇ ಕರ್ನಾಟಕದ ಬಿಡದಿಯಲ್ಲಿ ವಶಪಡಿಸಿಕೊಳ್ಳುತ್ತಿರುವ ಕೃಷಿ ಭೂಮಿಯ ವಿರುದ್ದ ರೈತರು ದನಿಯೆತ್ತಿದ್ದಾರೆ. ಹಾಗಾಗಿ ಎಲ್ಲ ರೈತರೂ ಇದಕ್ಕೆ ದನಿಗೂಡಿಸಬೇಕು” ಎಂದರು.

“ಯಗಚಿ ಜಲಾಶಯದ ಸುಂದರ ಪ್ರತಿಕೃತಿಯನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ. ಎನ್‌ ಎಲ್‌ ಮುಕುಂದರಾಜ್‌ ಮಾತನಾಡಿ, “ಈಗಿನ ಸಾಹಿತಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಕಾದಂಬರಿ ಪ್ರಕಾರಕ್ಕೆ ಕನ್ನಡದಲ್ಲಿ ಕೇವಲ ನೂರು ವರ್ಷಗಳ ಇತಿಹಾಸವಿದೆ. ಆದರೂ ಈಗ ವಿಫುಲವಾಗಿ ಕತೆ ಹಾಗೂ ಕಾದಂಬರಿ ಪ್ರಕಾರ ಬೆಳೆಯುತ್ತಿರುವುದು ಗಮನಾರ್ಹ” ಎಂದು ಹೇಳಿದರು.

ಕಾಲಳತೆಯ ದುಃಖ ಕಾದಂಬರಿಯನ್ನು ಬಿಡುಗಡೆ ಮಾಡಿದ ಡಾ ಹೆಚ್‌ ಎಲ್‌ ಪುಷ್ಪ ಅವರು ಮಾತನಾಡಿ, “ಚಿನ್ನೇನಹಳ್ಳಿ ಸ್ವಾಮಿಯವರು ಯಗಚಿ ಜಲಾಶಯಕ್ಕಾಗಿ ಮುಳುಗಿದ ಊರಾದ ಯಮಸಂದಿ ಎಂಬ ಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಕಾದಂಬರಿ ರಚಿಸಿದ್ದಾರೆ. ಅಲ್ಲಿನ ಜನರ, ಯುವಜನತೆಯ ದುಃಖದುಮ್ಮಾನಗಳಿಗೆ ದನಿಯಾಗಿದ್ದಾರೆ” ಎಂದರು.

ಪತ್ರಕರ್ತ ರಘುನಾಥ ಚ ಹ ಕೃತಿ ಕುರಿತು ಮಾತಾಡಿ, “ಚಿನ್ನೇನಹಳ್ಳಿ ಸ್ವಾಮಿಯವರು ಒಂದು ಪುಟ್ಟ ಕಾದಂಬರಿಯ ಮೂಲಕ ಸಾಹಿತ್ಯ ಕ್ಷೇತ್ರದ ಗಮನ ಸೆಳೆದಿದ್ದಾರೆ. ಮುಳುಗಡೆಯಾಗುವುದು ಭೂಮಿ ಮಾತ್ರವಲ್ಲ, ಜನರ ಸಂಬಂಧಗಳು, ವಾಣಿಜ್ಯ ವ್ಯವಹಾರಗಳೂ ಕೂಡ ನಿಗೂಢ ರೀತಿಯಲ್ಲಿ ಕಣ್ಮರೆಯಾಗುತ್ತವೆ. ಈ ಕಾದಂಬರಿಯಲ್ಲಿ ಇಂದಿನ ಸಂಬಂಧಗಳು ಕೂಡ ವ್ಯವಹಾರಗಳಾಗಿರುವುದನ್ನು ಅನಾವರಣ ಮಾಡಿದ್ದಾರೆ. ಒಂದು ಶಕ್ತವಾದ ಗದ್ಯಶೈಲಿಯ ಮೂಲಕ ಗಮನ ಸೆಳೆಯಲಾಗಿದೆ” ಎಂದು ಹೇಳಿದರು.

ಸಾಹಿತಿ ದಯಾ ಗಂಗನಘಟ್ಟ ಮಾತನಾಡಿ, “ಮುಳುಗಡೆ ಪ್ರದೇಶದಲ್ಲಿ ಭೂಮಿ ಮುಳುಗಡೆಯಾದಾಗ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ. ಆದರೆ ಆ ಹಣದ ಮೇಲೆ ಆ ಭಾಗದ ಮಹಿಳೆಯರಿಗೆ ಯಾವುದೇ ಒಡೆತನ ಇರುವುದಿಲ್ಲ. ಅಷ್ಟೇ ಅಲ್ಲದೇ ಆ ಭಾಗದಲ್ಲಿ ಎಲ್ಲರೂ ಭೂಮಿ ಹೊಂದಿಯೇ ಜೀವನ ನಡೆಸುತ್ತಿರುವುದಿಲ್ಲ. ಆದರೆ ಅಂತಹ ಭೂರಹಿತರನ್ನು ಕಡೆಗಣಿಸಲಾಗುತ್ತಿದೆ” ಎಂದರು.

ಇದನ್ನೂ ಓದಿದ್ದೀರಾ? ಆಂಧ್ರ ಪ್ರದೇಶದಲ್ಲಿ ಮಳೆ ಕೊರತೆ, ತೀವ್ರ ಒಣಹವೆ: ಮುಗಿಲಿನತ್ತ ದಿಟ್ಟಿಸಿರುವ ರೈತರು

ಕೃತಿಕಾರ ಚಿನ್ನೇನಹಳ್ಳಿ ಸ್ವಾಮಿ ಮಾತನಾಡಿ, “ಸಾಹಿತ್ಯ ಕ್ಷೇತ್ರದಲ್ಲಿ ಬಡ ಸಾಹಿತಿಗಳಿಗೆ ಪ್ರೋತ್ಸಾಹ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಚಿಂತಕರು ಯೋಚಿಸಬೇಕಿದೆ” ಎಂದು ಮನವಿ ಮಾಡಿದರು.

ಸಾಹಿತಿ ಚಲಂ ಹಾಡ್ಲಹಳ್ಳಿ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ ಎ ಎಂ ನಾಗೇಶ್‌ ಇದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜಾಪ್ರಭುತ್ವದ ಕಗ್ಗೊಲೆ: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು ಹೊರಟ ಕೇಂದ್ರದ ಕರಾಳ ಶಾಸನ

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ...

ಬ್ರೆಜಿಲ್ ಗಡಿ ದಾಟಿದ ಗೆಲುವು: ಜನತಂತ್ರಕ್ಕೆ ಆಶಾಕಿರಣವಾದ ಲುಲಾ, ಆದರೆ ಅಳಿಸಿಲ್ಲ ಬಲಪಂಥದ ಹೆಜ್ಜೆಗುರುತು

ಲ್ಯಾಟಿನ್ ಅಮೆರಿಕದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಬ್ರೆಜಿಲ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯೇ?

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ...