ಆಂಧ್ರ ಪ್ರದೇಶದಲ್ಲಿ ಮಳೆ ಕೊರತೆ, ತೀವ್ರ ಒಣಹವೆ: ಮುಗಿಲಿನತ್ತ ದಿಟ್ಟಿಸಿರುವ ರೈತರು

Date:

ರೈತರು ಆರ್ಥಿಕ, ಸಾಮಾಜಿಕ ಮತ್ತು ಹವಾಮಾನದ ಸವಾಲುಗಳನ್ನು ಎದುರಿಸಿ ತಮ್ಮ ಜೀವನೋಪಾಯವನ್ನು ಕಾಪಾಡಿಕೊಳ್ಳುವುದು ದುಸ್ತರವಾಗಿದೆ. ಆದರೆ ಸರ್ಕಾರದ ತುರ್ತು ಕ್ರಮಗಳು ಮತ್ತು ರೈತರ ಸಕಾಲಿಕ ಕ್ರಿಯಾಶೀಲತೆಯಿಂದ ನಷ್ಟವನ್ನು ಕಡಿಮೆಗೊಳಿಸಬಹುದು. ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಸ್ಥಳೀಯ ಸಲಹೆ ಪಡೆಯುವುದು ಅತ್ಯಗತ್ಯವಾಗಿದೆ. ಅಲ್ಲದೆ ಮಳೆ ಬಂದ ಬಳಿಕವೇ ರೈತರು ಎಚ್ಚರಿಕೆಯಿಂದ ಕೃಷಿ ಚಟುವಟಿಕೆಗಳನ್ನು ಮುಂದುವರಿಸಿದರೆ ಸಂಕಷ್ಟದಿಂದ ತಪ್ಪಿಸಿಕೊಂಡು ತುಸು ನಿರಾಳವಾಗಬಹುದು.  

ಜುಲೈ 30ರವರೆಗೆ ಆಂಧ್ರ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಒಟ್ಟಾರೆಯಾಗಿ ಶೇ.53.3ರಷ್ಟು ಮಳೆ ಕೊರತೆ ಉಂಟಾಗಿರುವುದು ರೈತರು ಮತ್ತು ಕೃಷಿ ಇಲಾಖೆಯ ಆತಂಕವನ್ನು ಹೆಚ್ಚಿಸಿದೆ. ಜೂನ್ 1ರಿಂದ ಜುಲೈ ಕೊನೆಯ ವಾರದವರೆಗೆ ಶೇ. 51ರಷ್ಟು ಮಳೆ ಕೊರತೆ ದಾಖಲಾಗಿದ್ದು, ಸುಮಾರು ಶೇ.49ರಷ್ಟು ಮಳೆ ಕೊರತೆಯಾಗಿದೆ. 28 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಲ್ಲಿ ಈಗಾಗಲೇ ತೀವ್ರ ಮಳೆ ಕೊರತೆ ಉಂಟಾಗಿದೆ. ಇದು ಎಲ್ ನಿನೋ ಪರಿಣಾಮದಿಂದಾಗಿ ಉಂಟಾಗಿದ್ದು, ರಾಯಲಸೀಮ ಪ್ರದೇಶಗಳಾದ ಅನಂತಪುರ, ಕರ್ನೂಲು, ಕಡಪ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಭಾವ ಬೀರಿದೆ.

- Advertisement -

ಆಂಧ್ರದ ಕರಾವಳಿಯ ಕೆಲವು ಭಾಗಗಳಲ್ಲಿ ನೀರಾವರಿ ಸೌಲಭ್ಯಗಳಿಂದಾಗಿ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದ್ದರೂ, ಒಟ್ಟಾರೆಯಾಗಿ ಮುಂಗಾರು ಬೆಳೆಗಳ ಬಿತ್ತನೆ ಮತ್ತು ಇಳುವರಿಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಆಂಧ್ರ ಪ್ರದೇಶದ ಕೃಷಿ ವ್ಯವಸ್ಥೆಯು ವೈವಿಧ್ಯಮಯವಾಗಿದ್ದು, ಪ್ರಮುಖ ಬೆಳೆಗಳಲ್ಲಿ ಭತ್ತವು ಪ್ರಮುಖ ಬೆಳೆಯಾಗಿದೆ. ವಿಶೇಷವಾಗಿ ಗೋದಾವರಿ ಮತ್ತು ಕೃಷ್ಣಾ ನದಿಯ ತಪ್ಪಲು ಪ್ರದೇಶಗಳಲ್ಲಿ ಭತ್ತದ ಬಿತ್ತನೆ ವ್ಯಾಪಕವಾಗಿದೆ. ಇತರೆ ಪ್ರಮುಖ ಮುಂಗಾರು ಬೆಳೆಗಳಲ್ಲಿ ಮೆಕ್ಕೆಜೋಳ, ಜೋಳ, ರಾಗಿ, ಬಜ್ರಾ(ಸಜ್ಜೆ), ದ್ವಿದಳ ಧಾನ್ಯಗಳಾದ ತೊಗರಿ, ಕಪ್ಪು ಬೇಳೆ, ಹಸಿರು ಬೇಳೆಯಂತಹ ಕಾಳುಗಳು, ನೆಲಗಡಲೆ, ಸೂರ್ಯಕಾಂತಿ, ಹರಳು ಬೆಳೆಯಂತಹ ಮುಂತಾದ ಎಣ್ಣೆ ಬೀಜಗಳ ಬೆಳೆಗಳು, ಹತ್ತಿ, ಕಬ್ಬು ಮತ್ತು ತಂಬಾಕು ಬೆಳಗಳನ್ನೂ ಬೆಳೆಯಲಾಗುತ್ತದೆ. ತೋಟಗಾರಿಕೆಯಲ್ಲಿ ಅಡುಗೆ ಮೆಣಸು(ಗುಂತೂರು ಪ್ರದೇಶ), ಮಾವು, ಕಿತ್ತಳೆ, ಟೊಮ್ಯಾಟೊ ಮತ್ತು ಈರುಳ್ಳಿ ಪ್ರಮುಖವಾಗಿವೆ. ರಾಯಲಸೀಮ ಪ್ರದೇಶಗಳಲ್ಲಿ ಮಳೆ ಅವಲಂಬಿ ಬೆಳೆಗಳಾದ ನೆಲಗಡಲೆ ಮತ್ತು ಹತ್ತಿ ಹೆಚ್ಚು ಕೃಷಿ ಮಾಡಲಾಗುತ್ತದೆ. ಆದರೆ ಕರಾವಳಿ ಪ್ರದೇಶಗಳಲ್ಲಿ ನೀರಾವರಿ ಅವಲಂಬಿ ಭತ್ತ ಮತ್ತು ತರಕಾರಿ ಬೆಳೆಗಳು ಪ್ರಧಾನವಾಗಿವೆ. ಈ ಬೆಳೆಗಳಲ್ಲಿ ಹೆಚ್ಚಿನವು ಮಳೆಯ ಮೇಲೆ ಅವಲಂಬಿತವಾಗಿರುವುದರಿಂದ ಇವುಗಳ ಮೇಲೆ ಒಣಹವೆಯು ತೀವ್ರ ಪರಿಣಾಮ ಬೀರಲಿದೆ.

ಮಳೆ ಕೊರತೆಯಿಂದಾಗಿ 2026ರ ಮುಂಗಾರು ಬಿತ್ತನೆ ಪ್ರಗತಿಯು ನಿಧಾನಗತಿಯಲ್ಲಿದೆ. ಜುಲೈ ಮಧ್ಯದ ಸುಮಾರಿಗೆ ರಾಜ್ಯದಲ್ಲಿ ಸುಮಾರು ಶೇ.52ರಷ್ಟು ಬಿತ್ತನೆ ಪೂರ್ಣಗೊಂಡಿದ್ದು, ಗುರಿಯ ಸುಮಾರು 31 ಲಕ್ಷ ಹೆಕ್ಟೇರ್‌ಗಳ ಪೈಕಿ 16 ಲಕ್ಷಕ್ಕೂ ಅಧಿಕ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಭತ್ತದ ಬಿತ್ತನೆ ಗುರಿಯ ಸುಮಾರು ಶೇ.55ರಷ್ಟು ತಲುಪಿದ್ದು, ಮೆಕ್ಕೆಜೋಳ, ರಾಗಿ ಮತ್ತು ಬಜ್ರಾ(ಸಜ್ಜೆ) ಬೆಳೆಗಳು ಬಿತ್ತನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿವೆ. ಆದರೆ ನೆಲಗಡಲೆಯಂತಹ ಎಣ್ಣೆ ಬೀಜಗಳ ಬಿತ್ತನೆ ಕೇವಲ ಶೇ.30ರಿಂದ 44ರಷ್ಟು ಮಾತ್ರ ಬಿತ್ತನೆಯಾಗಿದ್ದು, ರಾಯಲಸೀಮ ಪ್ರದೇಶಗಳಲ್ಲಿ ಇದು ತೀವ್ರ ಆತಂಕವನ್ನುಂಟು ಮಾಡಿದೆ. ಹತ್ತಿ ಬೆಳೆಯ ಬಿತ್ತನೆ ಸುಮಾರು ಶೇ.58ರಷ್ಟು ತಲುಪಿದೆ. ಜಿಲ್ಲಾ ಮಟ್ಟದಲ್ಲಿ ಚಿತ್ತೂರು ಮತ್ತು ಶ್ರೀ ಸತ್ಯ ಸಾಯಿ ಜಿಲ್ಲೆಗಳು ಉತ್ತಮ ಪ್ರಗತಿ ತೋರಿಸಿದ್ದರೆ, ಕರ್ನೂಲು ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿ ಬಿತ್ತನೆ ಪ್ರಮಾಣ ಕಳಪೆಯಾಗಿದೆ. ತಡವಾದ ಮಳೆಯಿಂದಾಗಿ ಬಿತ್ತನೆ ಮುಂದುವರೆದರೂ ಇಳುವರಿ ಕುಸಿಯುವ ಅಪಾಯವಿದೆ.

ಮಳೆ ಕೈಕೊಟ್ಟರೆ ರೈತರ ಮೇಲೆ ಹಲವು ರೀತಿಯಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ರೈತರ ಆದಾಯ ಕುಸಿಯುತ್ತದೆ. ಅಲ್ಲದೆ ಜಾನುವಾರುಗಳಿಗೆ ಮೇವು ಕೊರತೆ, ಆಹಾರ ಭದ್ರತಾ ಸಮಸ್ಯೆ ಹಾಗೂ ಗ್ರಾಮೀಣ ಉದ್ಯೋಗ ನಷ್ಟದಂತಹ ಪ್ರಮುಖ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ರಾಯಲಸೀಮ ಪ್ರದೇಶದಲ್ಲಿ ನೆಲಗಡಲೆ ಮತ್ತು ಹತ್ತಿ ಬೆಳೆಗಳು ಹೆಚ್ಚು ಪ್ರಭಾವಿತವಾಗುವ ಸಾಧ್ಯತೆಯಿದ್ದು, ಇದು ರೈತರ ಜೀವನಾಧಾರಕ್ಕೆ ದೊಡ್ಡ ತೊಂದರೆಯಾಗಬಹುದು. ನೀರಾವರಿ ಪ್ರದೇಶಗಳಲ್ಲಿ ಜಲಾಶಯ ಮಟ್ಟ ಕುಸಿಯುವುದರಿಂದ ಹಿಂಗಾರು ಬೆಳೆಗಳ ಮೇಲೂ ಪರಿಣಾಮ ಬೀರಬಹುದು.

ಪಶುಸಂಗೋಪನೆಯಲ್ಲಿ ಮೇವು ಮತ್ತು ನೀರಿನ ಕೊರತೆಯಿಂದಾಗಿ ಪ್ರಾಣಿ ಸಾಕಾಣಿಕೆದಾರರು ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ಜಲಾಶಯಗಳಲ್ಲಿ ನೀರು ಕಡಿಮೆಯಾಗುವುದರಿಂದ ಮೀನುಗಾರಿಕೆಯ ಉತ್ಪಾದನೆ ಕುಸಿಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ರಾಜ್ಯದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ, ರೈತರು ಕಡಿಮೆ ಪ್ರಮಾಣದ ನೀರಿನ ಅಗತ್ಯವಿರುವ ಬೆಳೆಗಳನ್ನು ಬೆಳೆಯುವಂತೆ ಸಲಹೆಗಳನ್ನು ನೀಡುತ್ತಿದ್ದು, ರಾಜ್ಯದಲ್ಲಿ ಆಹಾರ ಧಾನ್ಯಗಳ ಕೊರತೆ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಯೋಜನೆ ರೂಪಿಸಲಾಗುವುದೆಂದು ಹಿರಿಯ ಕೃಷಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸಂಕಷ್ಟವನ್ನು ಎದುರಿಸಲು ಸರ್ಕಾರವು ಜಿಲ್ಲಾವಾರು ತುರ್ತು ಯೋಜನೆಗಳನ್ನು ರೂಪಿಸಿದ್ದು, ಬೆಳೆ ಬದಲಾವಣೆಯು ಪ್ರಮುಖ ಪರ್ಯಾಯವಾಗಿದೆ. ಹಾಗಾಗಿ ಕಡಿಮೆ ಅವಧಿಯ ಮತ್ತು ಒಣಹವೆಗೆ ಒಗ್ಗುವ ಬೆಳೆಗಳಾದ ಜೋಳ, ಹುರುಳಿಕಾಳು, ನವಣೆ, ತೊಗರಿ ಮತ್ತು ಇತರ ಬೇಳೆಕಾಳುಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಲಾಗುತ್ತಿರುವುದಾಗಿ ವರದಿಯಾಗಿದೆ.

ನೆಲಗಡಲೆ ಬದಲು ಇತರ ಎಣ್ಣೆ ಬೀಜಗಳು ಅಥವಾ ಮಿಶ್ರ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಿದ್ದು, ನೀರಾವರಿ ಸುಧಾರಣೆಗೆ ಡ್ರಿಪ್ ಮತ್ತು ಸ್ಪ್ರಿಂಕ್ಲರ್ ವ್ಯವಸ್ಥೆಗಳ ವಿಸ್ತರಣೆ, ಬದು ನಿರ್ಮಾಣ, ಹನಿ ನೀರಾವರಿ, ಮಲ್ಚಿಂಗ್ ಮತ್ತು ಶೇಡ್‌ ನೆಟ್ಸ್ ಬಳಸುವಂತೆ ರೈತರನ್ನು ಉತ್ತೇಜಿಸಲಾಗುತ್ತಿದೆ. ಬೀಜ ಸಂಗ್ರಹ, ರಸಗೊಬ್ಬರ ಸರಬರಾಜು ಮತ್ತು ಬೆಳೆಗಳ ರಕ್ಷಣೆಗೆ ಪೋಷಕಾಂಶಗಳನ್ನು ವಿತರಿಸುತ್ತಿರುವುದಾಗಿ ಸರ್ಕಾರ ಖಚಿತಪಡಿಸಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ರೈತ ಸೇವಾ ಕೇಂದ್ರಗಳು ಮತ್ತು WhatsApp ಗುಂಪುಗಳ ಮೂಲಕ ನಿರಂತರ ಸಲಹೆ ನೀಡಲಾಗುತ್ತಿದೆ. ಪಶುಸಂಗೋಪನೆಗಾಗಿ ಮೇವು ಬ್ಯಾಂಕ್‌ಗಳು ಮತ್ತು ಕ್ಯಾಟಲ್ ಕ್ಯಾಂಪ್‌ಗಳು, ಮೀನುಗಾರಿಕೆಗೆ ವೈಜ್ಞಾನಿಕ ಮಾರ್ಗದರ್ಶನ ಒದಗಿಸಲಾಗುತ್ತಿದೆ. ದೀರ್ಘಕಾಲೀನವಾಗಿ ನೈಸರ್ಗಿಕ ತೋಟಗಾರಿಕೆ, ಸಣ್ಣ ನೀರಾವರಿ ಹಾಗೂ ಜಲ ಸಂರಕ್ಷಣೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಬರ ಹಾಗೂ ಸರ್ಕಾರದ ಕ್ರಮಗಳಿಗೆ ಸಂಬಂಧಿಸಿದಂತೆ ಈ ದಿನ.ಕಾಮ್‌ ಅನಂತಪುರಂ ಜಿಲ್ಲೆಯ ಕಾದಲೂರು ಗ್ರಾಮದ ರೈತರನ್ನು ಸಂಪರ್ಕಿಸಿದಾಗ ರೈತ ಮಹಿಳೆ ರೇಣುಕಾ ಎಂಬುವವರು ಮಾತನಾಡಿ, “ನಾವು ತೊಗರಿ ಬೆಳೆಯನ್ನು ಬಿತ್ತನೆ ಮಾಡಿದ್ದೇವೆ. ಮಳೆ ಹೋಗಿ ಅಟ್ಟ ಸೇರಿದೆ. ನಾವು ಕಣ್ಣು ಬಾಯಿ ಬಿಡುವಂತಾಗಿದೆ. ಮಳೆಯಾಧಾರಿತ ಬೆಳೆಗಾಳಾಗಿರುವುದರಿಂದ ಮಳೆ ಹೋದರೆ, ಬೆಳೆಯೂ ಹಾನಿಯಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

ಹುಲ್ಲಂಗಪ್ಪ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಳೆ ಕೈಕೊಟ್ಟಿದೆ. ಬೆಳಗಳೆಲ್ಲವೂ ಮಣ್ಣು ಪಾಲಾಗಿವೆ. ಆದರೆ ಬೆಳೆ ಉಳಿಸಿಕೊಳ್ಳುವಂತೆ ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡಿಲ್ಲ. ಮಳೆ ಬಂದರಷ್ಟೇ ಬೆಳೆ, ಇಲ್ಲದಿದ್ದರೆ ಇಲ್ಲ. ಕಳೆದ ವರ್ಷ ₹15,000 ಪರಿಹಾರ ನೀಡಿದ್ದರು. ಈಗ ಏನು ಮಾಡುತ್ತಾರೋ ಗೊತ್ತಿಲ್ಲ. ನಮ್ಮ ಕೃಷಿ ಭೂಮಿಗಳ ಬಳಿ ಯಾವುದೇ ಅಧಿಕಾರಿಗಳು ಬಂದಿಲ್ಲ. ಇದರ ಮಾಹಿತಿಯೂ ನಮಗಿಲ್ಲ” ಎಂದು ಹೇಳಿದರು.

ವಿಜಯವಾಡದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಂಧ್ರಪ್ರದೇಶ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ಕೆ. ನರಸಿಂಹಮೂರ್ತಿ, “ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿದ್ದು, ಸಾಮಾನ್ಯಕ್ಕಿಂತ ಶೇ. 49ರಷ್ಟು ಕಡಿಮೆ ಮಳೆಯಾಗಿದೆ. ಇದರಿಂದಾಗಿ ಕೃಷ್ಣಾ ನದಿಯ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಆಲಮಟ್ಟಿ, ನಾರಾಯಣಪುರ ಮತ್ತು ತುಂಗಭದ್ರಾ ಸೇರಿದಂತೆ ಮೇಲ್ದಂಡೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದರೆ, ಈ ಜಲಾಶಯಗಳು ಸಮರ್ಪಕವಾಗಿ ತುಂಬಿದ ಬಳಿಕವೇ ನೀರು ಶ್ರೀಶೈಲಂ ತಲುಪುತ್ತದೆ” ಎಂದು ಹೇಳಿದ್ದಾರೆ.

ಸರ್ಕಾರವು ಕುಡಿಯುವ ನೀರಿನ ಅಗತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜೂನ್ 2027 ರವರೆಗೆ ಹಳ್ಳಿಗಳು, ಪಟ್ಟಣಗಳು ​​ಮತ್ತು ಪುರಸಭೆಗಳಿಗೆ ನೀರು ಸರಬರಾಜು ಮಾಡುವುದಕ್ಕೆ ಸಾಕಷ್ಟು ನೀರು ಲಭ್ಯವಿರುವಂತೆ ಕ್ರಮವಹಿಸುತ್ತಿದೆ. ಬೆಳೆಗಳಿಗೆ ಪೂರ್ಣ ಪ್ರಮಾಣದ ನೀರನ್ನು ಒದಗಿಸದಿರುವ ಕಾರಣ ಭಾರೀ ನಷ್ಟಕ್ಕೆ ಕಾರಣವಾಗಬಹುದೆಂಬ ಕಾರಣಕ್ಕೆ ಪ್ರಸ್ತುತ ಪರಿಸ್ಥಿತಿಯಲ್ಲಿ ಭತ್ತವನ್ನು ಬೆಳೆಯದಂತೆ ರೈತರಿಗೆ ಮನವಿ ಮಾಡಲಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಪರ್ಯಾಯ ಬೆಳೆ ಬಿತ್ತನೆಗೆ ಸಲಹೆ ನೀಡಿದ್ದು, ಶ್ರೀಶೈಲಂ ಮತ್ತು ನಾಗಾರ್ಜುನ ಸಾಗರಕ್ಕೆ ಒಳಹರಿವು ಸುಧಾರಿಸಿದರೆ ಸರ್ಕಾರವು ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಘೋಷಿಸುವುದಾಗಿ ಎಂದು ಮುಖ್ಯ ಎಂಜಿನಿಯರ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿದ್ದೀರಾ? ರಾಜ್ಯದಲ್ಲಿ ಜುಲೈನಲ್ಲೂ ಮುಂಗಾರು ಮಾಯ; ಕರೆ, ಕಟ್ಟೆಗಳು ಖಾಲಿ: ರೈತರ ಸ್ಥಿತಿ ಹೇಗಿದೆ?

ರೈತರು ಆರ್ಥಿಕ, ಸಾಮಾಜಿಕ ಮತ್ತು ಹವಾಮಾನದ ಸವಾಲುಗಳನ್ನು ಎದುರಿಸಿ ತಮ್ಮ ಜೀವನೋಪಾಯವನ್ನು ಕಾಪಾಡಿಕೊಳ್ಳುವುದು ದುಸ್ತರವಾಗಿದೆ. ಆದರೆ ಸರ್ಕಾರದ ತುರ್ತು ಕ್ರಮಗಳು ಮತ್ತು ರೈತರ ಸಕಾಲಿಕ ಕ್ರಿಯಾಶೀಲತೆಯಿಂದ ನಷ್ಟವನ್ನು ಕಡಿಮೆಗೊಳಿಸಬಹುದು. ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಸ್ಥಳೀಯ ಸಲಹೆ ಪಡೆಯುವುದು ಅತ್ಯಗತ್ಯವಾಗಿದೆ. ಅಲ್ಲದೆ ಮಳೆ ಬಂದ ಬಳಿಕವೇ ರೈತರು ಎಚ್ಚರಿಕೆಯಿಂದ ಕೃಷಿ ಚಟುವಟಿಕೆಗಳನ್ನು ಮುಂದುವರಿಸಿದರೆ ಸಂಕಷ್ಟದಿಂದ ತಪ್ಪಿಸಿಕೊಂಡು ತುಸು ನಿರಾಳವಾಗಬಹುದು.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ ಭವಿಷ್ಯ

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ...

ರಾಹುಲ್ ಗಾಂಧಿ ಅಕ್ರಮ ಆಸ್ತಿ ಆರೋಪ: ‘ಮಾಧ್ಯಮಗಳ ಗಮನ ಸೆಳೆಯಲು ಹೀಗೆ ಮಾಡ್ತೀರಾ’; ವಕೀಲರಿಗೆ ಸಿಜೆಐ ತರಾಟೆ

ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ, ವಕೀಲರೊಬ್ಬರು ಯಾವುದೇ ಆಧಾರವಿಲ್ಲದಯೇ ರಾಹುಲ್ ಗಾಂಧಿ...

ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ: ಡಿಪಿಡಿಪಿ ಕಾಯ್ದೆ ಪ್ರಶ್ನಿಸಿ ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ (ಡಿಪಿಡಿಪಿ) ಕಾಯ್ದೆ ಮತ್ತು ನಿಯಮಗಳು ಮಾಧ್ಯಮ...

ಮತದಾರರ ಪಟ್ಟಿಯ ಯಡವಟ್ಟು; ಉತ್ತರ ಪ್ರದೇಶ ಚುನಾವಣಾ ಆಯೋಗದಿಂದ ಕ್ಷಮೆಯಾಚನೆ

ಮತದಾರರ ಪಟ್ಟಿಯಲ್ಲಿ ಕಂಡುಬಂದ ವಿಚಿತ್ರ ದೋಷಗಳ ಕುರಿತು ವ್ಯಕ್ತವಾದ ಟೀಕೆಗಳಿಗೆ ಸಾಮಾಜಿಕ...