ಡಿ.17ರಿಂದ ಬೆಂಗಳೂರಿನಲ್ಲಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ: ಸಂಪೂರ್ಣ ವಿವರ

Date:

ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಡೆಯಲಿರುವ ಕಾರಣದಿಂದಾಗಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ನಿಡವಂದ ಮತ್ತು ಹಿರೇಹಳ್ಳಿನ ನಡುವಿನ ಲೆವೆಲ್ ಕ್ರಾಸಿಂಗ್-28ರಲ್ಲಿ ಕಾಮಗಾರಿ ನಡೆಯಲಿದೆ.

- Advertisement -

ಇದನ್ನು ಹೊರತುಪಡಿಸಿ ಭೀಮಸಂದ್ರ ನಿಲ್ದಾಣದಲ್ಲಿ ಹೈಟ್‌ ಸಬ್ ವೇನಲ್ಲಿ ಗರ್ಡರ್ ಬದಲಾವಣೆ, ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಆದ್ದರಿಂದಾಗಿ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಇದನ್ನು ಓದಿದ್ದೀರಾ? ರೈಲು ಅಪಘಾತ | ಬೆಂಗಳೂರಿನಿಂದ ಹೊರಡುವ ಹಲವು ರೈಲುಗಳ ಮಾರ್ಗ ಬದಲು

ಯಾವೆಲ್ಲ ರೈಲುಗಳ ಸೇವೆಯಲ್ಲಿ ವ್ಯತ್ಯಯ?

ಡಿಸೆಂಬರ್ 17 ಮತ್ತು 24ರಂದು 16239 ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್, 16240 ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್‌ಪ್ರೆಸ್ ಮತ್ತು 12614 ಕೆಎಸ್‌ಆರ್ ಬೆಂಗಳೂರು-ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದಾಗಲಿದೆ.

ಡಿಸೆಂಬರ್ 17, 20, 21 ಮತ್ತು 24ರಂದು ತುಮಕೂರಿನ ಬದಲು ದೊಡ್ಬೆಲೆಯಲ್ಲಿ ರೈಲು ಸಂಖ್ಯೆ 66567 ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ಕೊನೆಯಾಗಲಿದೆ.

ಡಿಸೆಂಬರ್ 17, 20 ಮತ್ತು 24ರಂದು ತುಮಕೂರಿನ ಬದಲು ದೊಡ್ಬೆಲೆಯಿಂದ ರೈಲು ಸಂಖ್ಯೆ 66572 ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ಆರಂಭವಾಗಲಿದೆ.

ಡಿಸೆಂಬರ್‌ 17, 21 ಮತ್ತು 24ರಂದು ರೈಲು ಸಂಖ್ಯೆ 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರಿನ ಬದಲು ಅರಸೀಕೆರೆಯಲ್ಲಿ ಕೊನೆಗೊಳ್ಳಲಿದೆ.

ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ಡಿಸೆಂಬರ್ 17, 20, 21 ಮತ್ತು 24ರಂದು ಕೆಎಸ್ಆರ್ ಬೆಂಗಳೂರಿನ ಬದಲಿಗೆ ಅರಸೀಕೆರೆಯಿಂದ ಹೊರಡಲಿದೆ.

ಇದನ್ನು ಓದಿದ್ದೀರಾ? ಮಂಗಳೂರು-ಬೆಂಗಳೂರು ನಡುವೆ ಆರು ತಿಂಗಳು ರೈಲು ಸಂಚಾರ ರದ್ದು

ರೈಲು ಸಂಖ್ಯೆ 12726 ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಡಿಸೆಂಬರ್ 17 ಮತ್ತು 24ರಂದು ಕೆಎಸ್ಆರ್ ಬೆಂಗಳೂರಿನ ಬದಲಿಗೆ ಅರಸೀಕೆರೆಯಲ್ಲಿ ಕೊನೆಗೊಳ್ಳಲಿದೆ.

ರೈಲು ಸಂಖ್ಯೆ 66571 ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ಡಿಸೆಂಬರ್ 17 ಮತ್ತು 24ರಂದು ತುಮಕೂರಿನ ಬದಲಿಗೆ ದೊಡ್ಬೆಲೆಯಲ್ಲಿ ಕೊನೆಗೊಳ್ಳಲಿದೆ.

ರೈಲು ಸಂಖ್ಯೆ 66568 ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ಡಿಸೆಂಬರ್ 17 ಮತ್ತು 24ರಂದು ತುಮಕೂರಿನ ಬದಲಿಗೆ ದೊಡ್ಬೆಲೆಯಿಂದ ಹೊರಡಲಿದೆ.

ರೈಲು ಸಂಖ್ಯೆ 56281 ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ಡಿಸೆಂಬರ್ 17 ಮತ್ತು 24ರಂದು ತುಮಕೂರಿನ ಬದಲಿಗೆ ಚಿಕ್ಕಬಾಣಾವರದಲ್ಲಿ ಕೊನೆಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಮು ಸೌಹಾರ್ದತೆಗೆ ಕನ್ನಡಿ: ಕಗ್ಗಲೀಪುರದಲ್ಲಿ ಮಹಿಳೆಯರಿಗೆ ಬಾಗಿನ ಅರ್ಪಿಸಿದ ಮುಸ್ಲಿಂ ದಂಪತಿ

ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರದಲ್ಲಿ ಮುಸ್ಲಿಂ...

ಬಿಜೆಪಿಯಲ್ಲಿ ಆಂತರಿಕ ಕುಸ್ತಿ; ಪ್ರತಾಪ್ ಸಿಂಹ – ನಾಗೇಂದ್ರ‌ ಬೀದಿ ಕಾಳಗ

ಮೈಸೂರು ಜಿಲ್ಲೆಯ ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ವಿಚಾರವಾಗಿ ಇನ್ಸ್‌ಪೆಕ್ಟರ್ ಧನಂಜಯ್‌...

ಮುಸ್ಲಿಂ ಮಹಿಳೆಯ ಸೌಹಾರ್ದತೆ: 18 ವರ್ಷಗಳಿಂದ ಗಣೇಶ ಸಮಿತಿ ಮುನ್ನಡೆಸುತ್ತಿರುವ ಜುಬೇದಾ

ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಒಡಕು ಮೂಡಿಸಲು ಹಿಂದುತ್ವ ಕೋಮುವಾದಿ...

ಕರ್ನಾಟಕ ಕಾಂಗ್ರೆಸ್‌ ವಾರ್‌ ರೂಂ ಅಧ್ಯಕ್ಷರಾಗಿ ತಿಪಟೂರು ಟುಡಾ ಶಶಿಧರ್‌ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಮುಂಬರುವ ಪಕ್ಷದ ಸಂಘಟನಾತ್ಮಕ ಹಾಗೂ...