ಕೋಮು ಸೌಹಾರ್ದತೆಗೆ ಕನ್ನಡಿ: ಕಗ್ಗಲೀಪುರದಲ್ಲಿ ಮಹಿಳೆಯರಿಗೆ ಬಾಗಿನ ಅರ್ಪಿಸಿದ ಮುಸ್ಲಿಂ ದಂಪತಿ

Date:

ಗೌರಿ-ಗಣೇಶ ಹಬ್ಬದ ಸಂಭ್ರಮದ ನಡುವೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರದಲ್ಲಿ ಮುಸ್ಲಿಂ ದಂಪತಿಯೊಬ್ಬರು ನೂರಾರು ಮಹಿಳೆಯರಿಗೆ ಸಾಂಪ್ರದಾಯಿಕ ‘ಬಾಗಿನ’ ಹಾಗೂ ಪೂಜಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಯ ವಿಶಿಷ್ಟ ಸಂದೇಶ ಸಾರಿದ್ದಾರೆ. ಜಬೀನಾ ತಾಜ್ ಹಾಗೂ ಕೆ.ಎಸ್. ಪರ್ವೀಜ್ ದಂಪತಿ ತಮ್ಮ ಈ ಅರ್ಥಪೂರ್ಣ ಕಾರ್ಯದ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

- Advertisement -

​ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ನೂರಾರು ಮಹಿಳೆಯರನ್ನು ಹಬ್ಬದ ಪ್ರಯುಕ್ತ ವಿಶೇಷವಾಗಿ ಆಹ್ವಾನಿಸಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಅರಿಶಿನ, ಕುಂಕುಮ, ಹೂವು, ಬಳೆ, ಕೊಬ್ಬರಿ, ಗಂಧದಕಡ್ಡಿ, ಕರ್ಪೂರ, ದಾರದ ಉಂಡೆ, ಸೀರೆ, ರವಿಕೆ ಕಣ, ಹಣ್ಣು ಹಾಗೂ ತಾಂಬೂಲ ಒಳಗೊಂಡ ಮಂಗಲಕರ ಬಾಗಿನವನ್ನು ನೀಡಿ ದಂಪತಿ ಶುಭಾಶಯ ಕೋರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

​ಬಾಗಿನ ಸ್ವೀಕರಿಸಿದ ಬಳಿಕ ಸ್ಥಳೀಯರಾದ ಲಕ್ಷ್ಮಿ, ನೇತ್ರಾವತಿ ಹಾಗೂ ಭಾರತಿ ಹರ್ಷ ವ್ಯಕ್ತಪಡಿಸಿದರು. “ಹಲವು ಹೆಣ್ಣುಮಕ್ಕಳಿಗೆ ಹಬ್ಬದ ಸಂದರ್ಭದಲ್ಲಿ ತವರು ಮನೆಯಿಂದ ಉಡುಗೊರೆ ಅಥವಾ ಸತ್ಕಾರ ಸಿಗುವ ಸೌಭಾಗ್ಯವಿರುವುದಿಲ್ಲ. ಅಂತಹ ಮಹಿಳೆಯರ ಪಾಲಿಗೆ ಈ ದಂಪತಿ ತವರಾಗಿ ನಿಂತು ಆ ಕೊರಗನ್ನು ನೀಗಿಸಿದ್ದಾರೆ. ಮಾನವೀಯತೆ ಹಾಗೂ ಸೌಹಾರ್ದತೆಯನ್ನು ಬೆಸೆಯುವ ಇವರ ಈ ಕಾರ್ಯ ಸಮಾಜಕ್ಕೆ ಅತ್ಯುತ್ತಮ ಮಾದರಿಯಾಗಿದೆ” ಎಂದು ಶ್ಲಾಘಿಸಿದರು.

​ಈ ಸಾರ್ಥಕತೆಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಜಬೀನಾ ತಾಜ್, “ನಾವೆಲ್ಲರೂ ಮನುಷ್ಯರು; ಜಾತಿ, ಧರ್ಮಗಳನ್ನು ಮೀರಿ ಅಕ್ಕ-ತಂಗಿಯರಂತೆ ಬದುಕುತ್ತಿದ್ದೇವೆ. ಪ್ರತಿ ವರ್ಷವೂ ಗೌರಿ-ಗಣೇಶ ಹಬ್ಬದಂದು ಈ ರೀತಿ ಪೂಜಾ ಸಾಮಗ್ರಿ ಹಾಗೂ ಬಾಗಿನ ನೀಡುವುದು ನಮಗೆ ಅತೀವ ನೆಮ್ಮದಿ ಮತ್ತು ಧನ್ಯತಾಭಾವವನ್ನು ತರುತ್ತದೆ” ಎಂದರು.

​ಹಬ್ಬಗಳ ಆಶಯದ ಬಗ್ಗೆ ಮಾತನಾಡಿದ ಕೆ.ಎಸ್. ಪರ್ವೀಜ್, “ಗೌರಿ-ಗಣೇಶ, ಯುಗಾದಿ, ರಂಜಾನ್ ಅಥವಾ ಬಕ್ರೀದ್ ಹೀಗೆ ಯಾವುದೇ ಹಬ್ಬವಿರಲಿ, ಅವೆಲ್ಲವೂ ಶಾಂತಿ ಮತ್ತು ಸೌಹಾರ್ದತೆಯನ್ನೇ ಸಾರುತ್ತವೆ. ಮೈತ್ರಿ ಬೆಳೆಸುವ ಇಂತಹ ಕಾರ್ಯಗಳ ಜೊತೆಗೆ, ಸ್ಥಳೀಯ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ನಿರ್ಮಾಣ ಕಾರ್ಯಗಳಲ್ಲೂ ಭಾಗಿಯಾದ ತೃಪ್ತಿ ನಮಗಿದೆ” ಎಂದು ತಮ್ಮ ಅನುಭವ ಹಂಚಿಕೊಂಡರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಶಿಕ್ಷಕರು ಬದುಕಿನ ಭವಿಷ್ಯ ರೂಪಿಸಿದ ಶಿಲ್ಪಿಗಳು: ಪತ್ರಕರ್ತ ಗೌರೀಶ ಅಕ್ಕಿ

ಶಿಕ್ಷಕರು ನಮಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಿ, ಬದುಕಿನ ಭವಿಷ್ಯವನ್ನು ರೂಪಿಸಿದ...

ವಿಜಯಪುರ | ಯುವಜನರು ಜವಾಬ್ದಾರಿಯುತ ನೀತಿ ನಿರೂಪಕರಾಗಲಿ: ಡಿಸಿ ಆನಂದ ಕೆ

ಯುವಜನರು ಸಂವಿಧಾನದ ಆಶಯಗಳು, ಸಂಸದೀಯ ಕಾರ್ಯಕಲಾಪಗಳು ಹಾಗೂ ಕಾನೂನು ರಚನೆಯ ಪ್ರಕ್ರಿಯೆಯ...

ರಾಜ್ಯ ಸಚಿವ ಸಂಪುಟ ಸಭೆ: 12 ಮಹತ್ವದ ಯೋಜನೆಗಳಿಗೆ ಅನುಮೋದನೆ

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು (ಅ.29) ನಡೆದ ಕರ್ನಾಟಕ...

ನಂದಿನಿ ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳ: ನವೆಂಬರ್ 1ರಿಂದಲೇ ಜಾರಿ

ರಾಜ್ಯದ ಹಾಲು ಗ್ರಾಹಕರಿಗೆ ರಾಜ್ಯ ಸರ್ಕಾರವು ಬೆಲೆ ಏರಿಕೆಯ ಹೊರ ಹೇರಿದೆ....