ಮಧ್ಯಮ ವರ್ಗಕ್ಕೆ ಬಿಡಿಎ ಸೈಟುಗಳೂ ಗಗನ ಕುಸುಮ!

Date:

ಬೆಂಗಳೂರು ನಗರ ಬೆಳೆಯುತ್ತಿರುವ ವೇಗಕ್ಕೂ, ನಗರದಲ್ಲಿನ ಜನಸಾಮಾನ್ಯದ ಬದುಕಿಗೂ ಭಾರೀ ಅಂತವಿದೆ. ಬಹುಸಂಖ್ಯಾತರಿಗೆ ಬೆಂಗಳೂರು ದುಡಿದು ಜೀವನ ದೂಡುವುದಕ್ಕಷ್ಟೇ ಸೀಮಿತಗೊಂಡಿದ್ದು, ಅದರಾಚೆಗೆ ಸುಭದ್ರವಾದ ಬದುಕು ಕಟ್ಟಿಕೊಳ್ಳುವ ಕನಸುಗಳು ಕಸನಾಗಿಯೇ ಉಳಿಯುವಂತ ಪರಿಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ. ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಸೀಮೆಯಲ್ಲಿ ಪುಟ್ಟದೊಂದು ನಿವೇಶನ ಅಥವಾ ಸ್ವಂತ ಮನೆ ಮಾಡಿಕೊಳ್ಳಬೇಕೆಂಬ ಸಾಮಾನ್ಯ ಜನರಿಗೆ ಬೆಂಗಳೂರು ಅಕ್ಷರಶಃ ಕೈಗೆಟುಕದ ಗಗನ ಕುಸುಮವಾಗಿ ಮಾರ್ಪಟ್ಟಿದೆ.

- Advertisement -

ಒಂದು ಕಾಲದಲ್ಲಿ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಗಳ ಅತಿಯಾದ ಬೆಲೆಗಳಿಂದ ತಪ್ಪಿಸಿಕೊಳ್ಳಲು ಮಧ್ಯಮವರ್ಗದ ಕುಟುಂಬಗಳು ಬೆಂಗಳೂರು ಅಧಿವೃದ್ಧಿ ಪ್ರಾಧಿಕಾರ (ಬಿಡಿಎ)ಯನ್ನು ಆಶ್ರಯಿಸುತ್ತಿದ್ದವು. ಬಿಡಿಎಯಲ್ಲಿ ಕನಿಷ್ಠ ನ್ಯಾಯಯುತ ಬೆಲೆಯಲ್ಲಿ ನಿವೇಶನ ಖರೀದಿಸಬಹುದು, ಸ್ವಂತ ಜಾಗ ಮಾಡಿಕೊಳ್ಳಬಹುದು ಸಿಗುತ್ತದೆ ಎಂಬ ನಂಬಿಕೆ ಸಾವಿರಾರು ಕುಟುಂಬಗಳಲ್ಲಿತ್ತು. ಅಂತಹ ಕುಟುಂಬಗಳು ಬಿಡಿಎ ಸೈಟುಗಳನ್ನು ಖರೀದಿಸಿ, ಮನೆ ಮಾಡಿಕೊಳ್ಳುತ್ತಿದ್ದವು. ಆದರೆ, ಈಗ, ಬಿಡಿಎ ಮೇಲಿನ ನಂಬಿಕೆಯೂ ಕುಸಿಯುತ್ತಿದೆ. ಬಿಡಿಎ ಸೈಟುಗಳಿಗೂ ಭಾರೀ ಬೆಲೆ ನಿಗದಿಯಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನಗಳ ದರವನ್ನು ಪ್ರತಿ ಚದರ ಅಡಿಗೆ 6,000 ರೂ. ಎಂದು ಬಿಡಿಎ ನಿಗದಿಪಡಿಸಿದೆ. ಸುಮಾರು 3 ವರ್ಷಗಳ ಹಿಂದೆ, ಬಿಡಿಎ ನಿವೇಶನಗಳ ದರವು ಪ್ರತಿ ಚದರ ಅಡಿಗೆ 4,900 ರೂ. ಇತ್ತು. ಅದನ್ನು ಈಗ ಬರೋಬ್ಬರಿ 6,000 ರೂ.ಗೆ ಏರಿಸಲಾಗಿದೆ. ಅಂದರೆ, ಸಾಮಾನ್ಯ 30×40 ಅಡಿ ಸೈಟಿನ ಬೆಲೆ ಸುಮಾರು 72 ಲಕ್ಷ ರೂ.ಗೆ ತಲುಪಿದೆ. 2023-24ರಲ್ಲಿ 59 ಲಕ್ಷ ರೂ. ಇರುತ್ತಿದ್ದ ನಿವೇಶನದ ಬೆಲೆ 72 ಲಕ್ಷ ರೂ.ಗೆ ಜಿಗಿದಿದೆ ಎಂದು ‘ಡೆಕ್ಕನ್ ಹೆರಾಲ್ಡ್‌’ ವರದಿ ಮಾಡಿದೆ.

ನಿವೇಶನಗಳ ಬೆಲೆ ಏರಿಕೆಯಿಂದಾಗಿ, ಕುಟುಂಬವೊಂದು ಪುಟ್ಟ ನಿವೇಶನ ಖರೀದಿಸಲು ಸುಮಾರು 13 ಲಕ್ಷ ರೂ. ಹೆಚ್ಚುವರಿ ಹೊರೆ ಹೊರಬೇಕಾಗುತ್ತದೆ. ಇದು ಕೇವಲ ಬೆಲೆ ಪರಿಷ್ಕರಣೆಯ ವಿಷಯವಲ್ಲ; ಬಿಡಿಎ ತನ್ನ ಸಾಮಾಜಿಕ ಪಾತ್ರದಿಂದ ಎಷ್ಟು ದೂರ ಸಾಗುತ್ತಿದೆ ಎಂಬುದರ ನಿದರ್ಶನವೂ ಆಗಿದೆ.  

ಆದಾಗ್ಯೂ, ಒಂದು ನಿವೇಶನವನ್ನು 72 ಲಕ್ಷ ರೂ.ಗಳಿಗೆ ಖರೀದಿ ಮಾಡಿದರೆ, ಅಲ್ಲಿಗೆ ಖರೀದಿ ಮುಗಿಯುವುದೂ ಇಲ್ಲ. ಮುಂದುವರೆದು, ನೋಂದಣಿ ಶುಲ್ಕ, ಸ್ಟ್ಯಾಂಪ್ ಡ್ಯೂಟಿ, ಅಭಿವೃದ್ಧಿ ಶುಲ್ಕ, ಮನೆ ನಿರ್ಮಾಣ ವೆಚ್ಚ, ಬ್ಯಾಂಕ್ ಸಾಲದ ಬಡ್ಡಿ—ಇವೆಲ್ಲವನ್ನು ಸೇರಿಸಿದರೆ, ಒಂದು ಮಧ್ಯಮ ವರ್ಗದ ಕುಟುಂಬವು ನಿವೇಶನ ಖರೀದಿ, ಮನೆ ಕಟ್ಟಲು ಕನಿಷ್ಠ ಒಂದೂವರೆ ಕೋಟಿಯಿಂದ ಎರಡು ಕೋಟಿಯವರೆಗೆ ವೆಚ್ಚ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ, ತಿಂಗಳ ವೇತನಕ್ಕೆ ದುಡಿಮೆ ಮಾಡುವ ಸಾಮಾನ್ಯ ಉದ್ಯೋಗಿಗಳ ಕುಟುಂಬಗಳಿಗೆ ಬಿಡಿಎ ಸೈಟು ಖರೀದಿಸುವುದೂ ತ್ರಾಸದಾಯಕವೇ ಆಗಲಿದೆ.

ಅಂದಹಾಗೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳಂತೆ ಲಾಭ ಗಳಿಸುವ ಉದ್ದೇಶದಿಂದ ಸ್ಥಾಪಿಸಿದ್ದಲ್ಲ. ಯೋಜಿತ ನಗರಾಭಿವೃದ್ಧಿಯ ಜೊತೆಗೆ ಸಾಮಾನ್ಯ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ನಿವೇಶನ ಒದಗಿಸುವುದು ಅದರ ಸಾಮಾಜಿಕ ಹೊಣೆಗಾರಿಕೆ ಆಗಿತ್ತು. ಖಾಸಗಿ ಡೆವಲಪರ್‌ಗಳು ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ನಿವೇಶನ ಮಾರುವುದು ಸಹಜ. ಆದರೆ, ಸಾರ್ವಜನಿಕ ಸಂಸ್ಥೆಯೂ ಅದೇ ತರ್ಕವನ್ನು ಅನುಸರಿಸಲು ಆರಂಭಿಸಿದರೆ, ಮಧ್ಯಮವರ್ಗದ ಜನರು ಬೆಂಗಳೂರಿನಲ್ಲಿ ಸ್ವಂತ ಸೂರು ಮಾಡಿಕೊಳ್ಳುವುದು ಎಂದಿಗಾದರೂ ಸಾಧ್ಯವೇ?

ಈ ಲೇಖನ ಓದಿದ್ದೀರಾ?: ವಿಜಯನಗರ ವಿವಿ ಶುಲ್ಕ ಏರಿಕೆ: ಹಣ ತುಂಬಲಾಗದ ಬಡ ಮಕ್ಕಳ ಅಳಲು ಕೇಳುವರಾರು?

ಬೆಂಗಳೂರಿನಲ್ಲಿ ಈಗಾಗಲೇ ಅಪಾರ್ಟ್‌ಮೆಂಟ್‌ಗಳ ಬೆಲೆಗಳು ಸಾಮಾನ್ಯ ಕುಟುಂಬಗಳಿಗೆ ಕೈಗೆಟುಕದ ಹಂತಕ್ಕೆ ತಲುಪಿವೆ. ಖಾಸಗಿ ಲೇಔಟ್‌ಗಳಲ್ಲಿ ನಿವೇಶನ ಖರೀದಿಸುವುದು ಬಹುತೇಕರಿಗೆ ಅಸಾಧ್ಯದ ಮಾತೂ ಆಗಿದೆ. ಈ ಪರಿಸ್ಥಿತಿಯಲ್ಲಿ ಬಿಡಿಎಯಂತಹ ಸಾರ್ವಜನಿಕ ಸಂಸ್ಥೆಯೇ ಮಧ್ಯಮ ವರ್ಗಕ್ಕೆ ಕೊನೆಯ ಆಶಾಕಿರಣವಾಗಿತ್ತು. ಆದರೆ ಅದೂ ಮಾರುಕಟ್ಟೆಯ ಬೆಲೆ ತರ್ಕವನ್ನು ಅಳವಡಿಸಿಕೊಂಡರೆ, ಸ್ವಂತ ಜಾಗ ಮತ್ತು ಸ್ವಂತ ಮನೆ ಎನ್ನುವ ಕನಸು ಮುಂದಿನ ಪೀಳಿಗೆಯ ಮಧ್ಯಮ ವರ್ಗಕ್ಕೆ ಕೇವಲ ಕನಸಾಗಿಯೇ ಉಳಿಯಲಿದೆ.

ನಗರಾಭಿವೃದ್ಧಿ ಎಂದರೆ ಕೇವಲ ರಸ್ತೆಗಳು, ಬಡಾವಣೆಗಳು ಹಾಗೂ ಮೂಲಸೌಕರ್ಯ ನಿರ್ಮಿಸುವುದಲ್ಲ. ನಗರದಲ್ಲಿ ದುಡಿಯುವ ಶಿಕ್ಷಕ, ನರ್ಸ್, ಪೊಲೀಸ್ ಸಿಬ್ಬಂದಿ, ಬ್ಯಾಂಕ್ ಉದ್ಯೋಗಿ, ಸಾಫ್ಟ್‌ವೇರ್ ಇಂಜಿನಿಯರ್, ಸಣ್ಣ ವ್ಯಾಪಾರಿ, ಖಾಸಗಿ ನೌಕರ -ಇವರಿಗೂ ಆ ನಗರದಲ್ಲಿ ಗೌರವಯುತವಾಗಿ ಬದುಕುವ ಅವಕಾಶ ಕಲ್ಪಿಸುವುದು ಅಭಿವೃದ್ಧಿಯ ನಿಜವಾದ ಮಾನದಂಡ. ನಗರವನ್ನು ಕಟ್ಟುವ ಜನರಿಗೇ ಆ ನಗರದಲ್ಲಿ ನೆಲೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದರೆ, ಅದು ಕೇವಲ ವಸತಿ ಸಮಸ್ಯೆಯಲ್ಲ; ಅದು ಸಾಮಾಜಿಕ ಅಸಮಾನತೆಯ ಸಂಕೇತವೂ ಆಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...