ಮೋದಿ ರೋಡ್‌ ಶೋಗಾಗಿ ನೂರಾರು ಮರಗಳ ಮಾರಣಹೋಮ; ಸಾರ್ವಜನಿಕರ ಆಕ್ರೋಶ

Date:

  • ರಣ ಬಿಸಿಲಿನಿಂದ ಬಳಲುತ್ತಿರುವ ಬಡ ಬೆಂಗಳೂರಿಗರ ಗತಿ ಏನು?
  • ರೋಡ್‌ ಶೋ ನಡೆಯುವ ರಸ್ತೆ ಉದ್ದಕ್ಕೂ ಮರಗಳ ಮಾರಣಹೋಮ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯ ಧಗೆಗೆ ಕಂಗೆಟ್ಟದ್ದ ಜನಕ್ಕೆ ಕಳೆದ ಎರಡು ದಿನಗಳಿನಿಂದ ಮಳೆಯಾಗಿ ತಂಪೆರೆದಿದೆ. ಜನರಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಆಸರೆಯಾಗಿದ್ದು, ನಗರದಲ್ಲಿರುವ ಮರಗಳು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋಗಾಗಿ ನೂರಾರು ಮರಗಳನ್ನು ಕಡಿದುರುಳಿಸಲಾಗಿದೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಡಿ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಒಟ್ಟು 36 ಕಿ.ಮೀ ರೋಡ್‌ ಶೋ ನಡೆಸುತ್ತಿದ್ದಾರೆ. ರೋಡ್‌ ಶೋ ನಡೆಯುವ ರಸ್ತೆ ಉದ್ದಕ್ಕೂ ಮರಗಳನ್ನು ಕಡಿಯಲಾಗಿದೆ. ಕೇವಲ ರೋಡ್‌ ಶೋಗಾಗಿ ಮರಗಳನ್ನು ಕಡಿಯುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಈ ಬಗ್ಗೆ ಪರಿಸರ ಪ್ರೇಮಿ ವಿಜಯ್ ನಿಶಾಂತ್, “ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿರುವ ಮರಗಳ ನೆರಳಿನಲ್ಲಿ ಬರಬೇಕೆಂದು ಬಯಸಿದ್ದೆವು. ಅದನ್ನು ತೆಗೆಯುವ ಮೂಲಕ ಅಲ್ಲ” ಎಂದು ಟ್ವೀಟ್‌ ಮಾಡಿದ್ದಾರೆ.

“ಇಂದಿರಾನಗರ, ಬಸವನಗುಡಿ, ಬಸವೇಶ್ವರನಗರ ಸೇರಿದಂತೆ ನಗರದೆಲ್ಲೆಡೆ ಪ್ರಧಾನಿಯವರ ರೋಡ್‌ ಶೋಗೆ ಸ್ಥಳಾವಕಾಶಕ್ಕಾಗಿ ಮರಗಳ ಮಾರಣಹೋಮ ಮಾಡುತ್ತಿದ್ದಾರೆ. ಬೆಂಗಳೂರಿನ ಜನರು ಮರಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಮುಖ್ಯಮಂತ್ರಿಯವರು ಪ್ರಧಾನಮಂತ್ರಿ ಅವರಿಗೆ ತಿಳಿಸಬೇಕು” ಎಂದು ಕಿಮ್ಸುಕಾ ಎಂಬುವವರು ಮನವಿ ಮಾಡಿದ್ದಾರೆ.

“ಇದು ನ್ಯಾಯವೇ? ಮರಗಳು ಏನು ಮಾಡಿದ್ದವು. 30 ಕಿ.ಮೀ ರಸ್ತೆಯುದ್ದಕ್ಕೂ ರೋಡ್ ಶೋ ನಡೆಯುವ ಎಲ್ಲ ರಸ್ತೆಗಳಲ್ಲಿ ಮರಗಳನ್ನು ಕಡಿಯುತ್ತಿದ್ದಾರೆ. ಪರಿಸರ ಕಾಳಜಿ ಬಗ್ಗೆ ಉದ್ದುದ್ದ ಡೈಲಾಗ್ ಹೊಡೆದು ಪ್ರಯೋಜನವೇನು ಒಂದು ದಿನದ ರೋಡ್ ಶೋಗಾಗಿ ನೂರಾರು ಮರಗಳ ಮಾರಣಹೋಮ ಮಾಡುತ್ತಿದ್ದಾರೆ” ಎಂದು ರೂಪೇಶ್ ರಾಜಣ್ಣ ಅವರು ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೋದಿ ರೋಡ್‌ ಶೋ ವೇಳೆ ಸಾರ್ವಜನಿಕರು ಮನೆಯ ಬಾಲ್ಕನಿ/ಟೆರೇಸ್ ಮೇಲೆ ನಿಂತು ನೋಡುವುದನ್ನು ನಿಷೇಧಿಸಲಾಗಿದೆ

“ಪ್ರಧಾನಿ ಮೋದಿ ಅವರು ಬರುತ್ತಾರೆ ಮತ್ತೆ ಹೋಗುತ್ತಾರೆ. ಆದರೆ, ಈ ರಣ ಬಿಸಿಲಿನಿಂದ ಬಳಲುತ್ತಿರುವ ಬಡ ಬೆಂಗಳೂರಿಗರ ಗತಿ ಏನು? ನಗರದಲ್ಲಿ ಮರ ಕಡಿಯಲು ಟ್ರೀ ಆಫೀಸರ್ ಅನುಮತಿ ನೀಡಿದ್ದಾರೆಯೇ?” ಎಂದು ವಿನಯ್ ಎಂಬುವವರು ಪ್ರಶ್ನಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ ‘ಜನತಾ ನ್ಯಾಯಾಲಯ’ – ಎಸ್‌ಐಆರ್ ಅನ್ಯಾಯಗಳ ವಿರುದ್ಧ ಪ್ರತಿಭಟನೆಯ ಕಹಳೆ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಕ್ರಮಗಳು, ಮುಖ್ಯ ಚುನಾವಣಾ...

ಜಾಗತಿಕ ಕೌಶಲ್ಯ ರಾಜಧಾನಿಯಾಗುವತ್ತ ಕರ್ನಾಟಕದ ದಿಟ್ಟ ಹೆಜ್ಜೆ: ನ. 3ರಿಂದ ‘ಬೆಂಗಳೂರು ಕೌಶಲ್ಯ ಶೃಂಗಸಭೆ’

"ಕೃತಕ ಬುದ್ಧಿಮತ್ತೆ (AI) ಹಾಗೂ ಹೊಸ ತಂತ್ರಜ್ಞಾನಗಳಿಂದ ಕೌಶಲ್ಯ ಕ್ಷೇತ್ರವು ಅತಿವೇಗವಾಗಿ...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...

ಬೆಂಗಳೂರು | ಅಕ್ರಮವಾಗಿ ಮನೆ ನೆಲಸಮ: 5 ಲಕ್ಷ ನಗದು, ಆಭರಣ ಕಳವು; ಇಬ್ಬರ ವಿರುದ್ಧ ಎಫ್‌ಐಆರ್

67 ವರ್ಷದ ವೃದ್ಧ ವ್ಯಾಪಾರಿಯೊಬ್ಬರ ಮನೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ, ರೂ. 5...